Author: AIN Author

ಬೆಂಗಳೂರು:- ಎಷ್ಟು ಕೊಟ್ಟು ವಿಪಕ್ಷ ನಾಯಕರಾಗಿ ಬಂದ್ರಿ ಎಂಬ ಸಚಿವ ಪ್ರಿಯಾಂಕ್ ಖರ್ಗೆ‌ ಹೇಳಿಕೆಗೆ ವಿಪಕ್ಷ ನಾಯಕ ಆರ್​​ ಅಶೋಕ್​ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೊಟ್ಟು ಅಧಿಕಾರ ಪಡೆಯೋದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ. ಕೊಟ್ಟು ಹೋಗುವ ಸಂಸ್ಕೃತಿ ಬಿಜೆಪಿಯದ್ದಲ್ಲ ಎಂದು ಹೇಳಿದ್ದಾರೆ. ಸಿಎಂ ಆಗಲು ಸಿದ್ದರಾಮಯ್ಯ ಎಷ್ಟು ಹಣ ಕೊಟ್ಟಿದ್ದಾರೆ? ರಾಜ್ಯದಲ್ಲಿ ಕಡಿಮೆ ಅಂದ್ರೆ, ದೆಹಲಿ ಮಟ್ಟಕ್ಕೆ ಎಷ್ಟು ಕೊಟ್ಟು ಹೋಗಿದ್ದಾರೆ? ಪ್ರಿಯಾಂಕ್‌ ಅವರ ಅಪ್ಪ ಸಾವಿರಾರು ಕೋಟಿ ರೂ. ಕೊಟ್ಟು ಹೋಗಿರಬಹುದು ಎಂದು ವಾಗ್ದಾಳಿ ಮಾಡಿದ್ದಾರೆ. ಜನ ನಮ್ಮನ್ನು ಗೆಲ್ಲಿಸಿರುವುದು ಸರ್ಕಾರದ ಕಿವಿ ಹಿಂಡಲು. ನಾವು ಕಿವಿ ಹಿಂಡುತ್ತೇವೆ, ಕಿವಿ ಹಿಂಡಿದ್ರೂ ಸರ್ಕಾರ ಕೆಲಸ ಮಾಡಿಲ್ಲ ಅಂದರೆ ಸರ್ಕಾರ ತೆಗೆಯಲು ಯೋಚನೆ ಮಾಡುತ್ತೇವೆ. ನಂತರ ಸರ್ಕಾರ ಬೀಳಿಸುವ ವ್ಯವಸ್ಥೆ ಅವರೇ ಮಾಡಿಕೊಳ್ಳುತ್ತಾರೆ ಎಂದು ಕಿಡಿಕಾರಿದ್ದಾರೆ. ಕನಕಪುರದಲ್ಲಿ ಸೋತವರಿಗೆ ವಿಪಕ್ಷ ಸ್ಥಾನ ಎಂದು ಕಾಂಗ್ರೆಸ್​ ಟ್ವೀಟ್​ಗೆ ವಿಪಕ್ಷ ನಾಯಕ ಆರ್​.ಅಶೋಕ್​ ತಿರುಗೇಟು ನೀಡಿದ್ದು, ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ…

Read More

ಚಿಕ್ಕೋಡಿ: ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ (Zameer Ahmed) ಒಬ್ಬ ಮತಾಂಧ ಎಂದು ಶ್ರೀರಾಮ ಸೇನಾ (Sri Ram Sena) ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಕಿಡಿಕಾರಿದ್ದಾರೆ. ಸಭಾಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ವ್ಯಕ್ತಿ ನೇಮಕ ಮಾಡಿದ್ದಕ್ಕೆ ಬಿಜೆಪಿ (BJP) ಶಾಸಕರು ಕೈ ಮುಗಿಯುತ್ತಾರೆ ಎನ್ನುವ ಜಮೀರ್ ಹೇಳಿಕೆಗೆ ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ (Chikkodi) ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಜಮೀರ್ ಅಹ್ಮದ್ ವಿರುದ್ಧ ಪ್ರಕರಣ ದಾಖಲಿಸಬೇಕು. ಜಮೀರ್ ಅಹ್ಮದ್ ಅವರ ಹೇಳಿಕೆ ನಾನು ವಿರೋಧಿಸುತ್ತೇನೆ. ಸಭಾಧ್ಯಕ್ಷ ಸ್ಥಾನ ಅತ್ಯಂತ ಪವಿತ್ರವಾದದ್ದು. ಆ ಸ್ಥಾನದಲ್ಲಿ ಕೂತವರು ವ್ಯಕ್ತಿಯಲ್ಲ, ಅದೊಂದು ಶಕ್ತಿ. ಜಾತಿ, ಪಕ್ಷ, ಧರ್ಮ, ಭಾಷೆ ಬೇಧವಿಲ್ಲದೇ ಕುಳಿತಿರುವ ವ್ಯಕ್ತಿಯನ್ನು ಮುಸ್ಲಿಂ ಎಂದು ಗುರುತಿಸಿದ್ದು ಸಂವಿಧಾನ ವಿರೋಧಿ ಎಂದು ಹರಿಹಾಯ್ದರು.  https://ainlivenews.com/how-to-make-hotel-style-palak-paneer-antira-here-it-is/ ಜಮೀರ್ ಹೇಳಿಕೆ ಮೇಲೆ ಕ್ರಮ ಕೈಗೊಂಡು ಅವರನ್ನು ಜೈಲಿಗೆ ಹಾಕಬೇಕು. ಮತಾಂಧತೆಯ ಪ್ರವೃತ್ತಿ ಅತಿಯಾಗಿ ಜಮೀರ್ ಅಹ್ಮದ್‌ಗೆ ಮುಸ್ಲಿಂ ಭೂತ ಹಿಡಿದಿದೆ. ಈ ಭೂತ ಸರಿಯಲ್ಲ. ಭಾರತದಲ್ಲಿ…

Read More

ನವದೆಹಲಿ:- ಬಿಜೆಪಿಯು ಕಾಂಗ್ರೆಸ್ ಗ್ಯಾರಂಟಿಗಳನ್ನು ನಕಲು ಮಾಡಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ನಕಲು ಮಾಡಿ, ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿದೆ ಎಂದರು. ಬಿಜೆಪಿಗೆ ಯಾವುದೇ ಉದ್ದೇಶಗಳು ಹಾಗೂ ನೀತಿಗಳಿಲ್ಲ. ಕಾಂಗ್ರೆಸ್‌ ಸಾರ್ವಜನಿಕರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳ ರೂಪದಲ್ಲಿ ಬಲವಾದ ಕಾರ್ಯಕ್ರಮಗಳನ್ನು ನೀಡಿದೆ’ ಎಂದು ಹೇಳಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಮೋದಿ ಹಾಗೂ ಬಿಜೆಪಿಯು ಹಲವು ಪ್ರಯತ್ನಗಳನ್ನು ನಡೆಸಿದ ನಂತರ, ಕಾಂಗ್ರೆಸ್‌ ನೀಡಿರುವ ಗ್ಯಾರಂಟಿಗಳನ್ನು ನಕಲು ಮಾಡುವುದು ಉತ್ತಮ ಎಂದು ಭಾವಿಸಿದೆ. ಅಲ್ಲದೆ, ಚುನಾವಣೆಯ ಮೊದಲು ಬಿಜೆಪಿ ತನ್ನ ಕಾರ್ಯಸೂಚಿಗಳನ್ನು ಅವಸರದಲ್ಲಿ ಪೂರೈಸುವ ವಿಫಲ ಪ್ರಯತ್ನಗಳನ್ನು ಮಾಡಿದೆ’ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ‘ರಾಜ್ಯದಲ್ಲಿ ಜನರಿಗಾಗಿ ಕಾಂಗ್ರೆಸ್‌ ಕೆಲಸ ಮಾಡಿದೆ ಮತ್ತು ನೀಡಿರುವ ಏಳು ಗ್ಯಾರಂಟಿಗಳನ್ನು ಪಕ್ಷ ಈಡೇರಿಸುತ್ತದೆ ಎಂದು ರಾಜಸ್ಥಾನದ ಜನರಿಗೆ ತಿಳಿದಿದೆ’ ಎಂದು ಖರ್ಗೆ ತಿಳಿಸಿದ್ದಾರೆ.

Read More

ಹಾವೇರಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಳೆ ನಡೆಯಲಿರೋ ವಲ್ಡ್ ಕಪ್ ಪಂದ್ಯಾವಳಿಗೆ ಹಾವೇರಿಯಲ್ಲಿ ಕ್ರೀಡಾಭಿಮಾನಿಗಳು ತೇರು ಬೀದಿ ಆಂಜನೇಯ ಸ್ವಾಮೀಗೆ ಪೂಜೆ ಸಲ್ಲಿಸಿದರು. ನಗರದ ಆಂಜನೇಯ ಸ್ವಾಮೀಗೆ ಪೂಜೆ ಸಲ್ಲಿಸಿ, ಭಾರತ ಗೆಲ್ಲುವಂತೆ ಪ್ರಾರ್ಥನೆ ಸಲ್ಲಿಸಿದರು. ಭಾರತ ಪರ ಘೋಷಣೆ ಕೂಗಿ, ಜೈಕಾರ ಹಾಕಿದ್ದಾರೆ. https://ainlivenews.com/how-to-make-hotel-style-palak-paneer-antira-here-it-is/ ಜೊತೆಗೆ ವಿರಾಟ್ ಕೋಹ್ಲಿಯ ಅಭಿಮಾನಿ ಪ್ರವೀಣ ಬೆನ್ನಿನ ಹಿಂಭಾಗದಲ್ಲಿ ಹಚ್ಚೆ ಹಾಕಿಕೊಂಡಿದ್ದಾರೆ. ಈ ಭಾರಿ ನಮ್ಮ ಭಾರತ ತಂಡ ವಲ್ಡ್ ಕಪ್ ಗೆದ್ದೆ ಗೆಲ್ಲುತ್ತೆ, ಎಲ್ಲಾ ವಿಭಾಗದಲ್ಲಿ ಉತ್ತಮವಾದ ಪ್ರದರ್ಶನವನ್ನ ಭಾರತ ನೀಡುತ್ತಿದೆ. ಟೀಂ ಇಂಡೀಯಾ ಈ ಭಾರಿ ವಲ್ಡ್ ಕಪ್ ಗೆಲ್ಲುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Read More

ಕಲಬುರಗಿ: ಕಲಬುರಗಿಯಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್ ಪಿನ್ RD ಪಾಟೀಲ್ ಗೆ ಸಲಾಂ ಹೊಡೆದಿದ್ದ ಪೇದೆಯನ್ನ ಸಸ್ಪೆಂಡ್ ಮಾಡಲಾಗಿದೆ.. ಬ್ರಹ್ಮಪುರ ಠಾಣೆಯ ಮಾಳಪ್ಪ ಸಸ್ಪೆಂಡ್ ಆಗಿರೋ ಪೇದೆ. ನಿನ್ನೆ ಜಿಲ್ಲಾಸ್ಪತ್ರೆ ಬಳಿ RD ಕರೆತಂದಾಗ ಸ್ಥಳದಲ್ಲಿದ್ದ ಪೇದೆ ಮಾಳಪ್ಪ ನಮಸ್ಕಾರ ಅಂತ ಕೈ ಮುಗಿದಿದ್ದ ವಿಡಿಯೋ ವೈರಲ್ ಆಗಿತ್ತು.. https://ainlivenews.com/how-to-make-hotel-style-palak-paneer-antira-here-it-is/

Read More

ವಿಶ್ವ ಕಪ್ ನಲ್ಲಿ ಫೈನಲ್ ಪ್ರವೇಶಿಸಿರುವ ಭಾರತದ ಗೆಲುವಿಗಾಗಿ ಕ್ರಿಕೆಟ್ ಪ್ರೇಮಿಗಳು ವಿಶೇಷ ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ. ಕಾಂಗರೂ ಪಡೆಯನ್ನ ಕಟ್ಟಿ ಹಾಕಲು ಕ್ರಿಕೆಟ್ ಪ್ರೇಮಿಗಳು ದೇವರ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ. ನಾಳಿನ ಹೈ ವೋಲ್ಟೇಜ್ ವಿಶ್ವ ಕಪ್ ಗಾಗಿ ವಿಶೇಷ ಪೂಜೆ ನಡೆದಿದೆ. ಟೀಮ್ ಇಂಡಿಯಾ ಗೆದ್ದು ಬರಲಿ ಅಂತ ಕ್ರಿಕೆಟ್ ಭಕ್ತರಿಂದ ದೇವರ ಮೊರೆ ಹೋಗಿದ್ದಾರೆ. ನಗರದ ಪ್ರಸಿದ್ಧ ನಿಮಿಷಾಂಬ ದೇವಾಲಯದಲ್ಲಿ ಫಿನಾಲೆಗೆ ಸ್ಪೆಷಲ್ ಪೂಜೆ ನಡೆದಿದ್ದು, ವಿಶ್ವ ಕಪ್ ನಲ್ಲಿ ಭಾರತದ ಗೆಲುವಿಗಾಗಿ ವಿಶೇಷ ಹೋಮ ನಡೆದಿದೆ. ನಾಳಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಲಿ ಅಂತಾ ಹೋಮ-ಹವನ ನಡೆದಿದೆ. ರಾಜರಾಜೇಶ್ವರಿನಗರದ ನಿಮಿಷಾಂಭ ದೇಗುಲದಲ್ಲಿ ವಿಶೇಷ ಪೂಜೆ ಹಾಗೂ ಹೋಮ ಮಾಡಿ ಟೀಂ ಇಂಡಿಯಾಗೆ ಅರ್ಚಕರು ಶುಭಕೋರಿದ್ದಾರೆ. ಗೆದ್ದು ಬಾ ಟೀಂ ಇಂಡಿಯಾ ಅಂತಾ ಪ್ರಾರ್ಥನೆ ಸಲ್ಲಿಸಿದ್ದು, ಚಂಡಿಕಾ ಹೋಮ ಮಾಡೋ ಮೂಲಕ ಟೀಂ ಇಂಡಿಯಾಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ.

Read More

ಜನಪ್ರಿಯ ಕಾಮಿಡಿ ಶೋಗಳಾದ ಗಿಚ್ಚಿ ಗಿಲಿಗಿಲಿ (Gichchi Giligili), ಮಜಾ ಭಾರತ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಭಾಗಿಯಾಗಿದ್ದ ನಟಿ ಸುಷ್ಮಿತಾ (Sushmita) ಮತ್ತು ಜಗ್ಗಪ್ಪ (Jaggappa) ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜೊತೆಯಾಗಿಯೇ ಹಲವಾರು ಶೋಗಳಲ್ಲಿ ಈ ಜೋಡಿ ಭಾಗಿಯಾಗಿದ್ದು, ವೇದಿಕೆಯ ಮೇಲೆ ಅನೇಕ ಬಾರಿ ಗಂಡ ಹೆಂಡತಿಯಾಗಿಯೇ ಪಾತ್ರ ನಿರ್ವಹಿಸಿದ್ದಾರೆ. ಹಲವು ದಿನಗಳಿಂದ ಜಗ್ಗಪ್ಪ ಮತ್ತು ಸುಷ್ಮಿತಾ ಲವ್ ಮಾಡುತ್ತಿದ್ದಾರೆ ಎನ್ನುವ ಗಾಸಿಪ್ ಇತ್ತು. ಆದರೆ, ಈ ಜೋಡಿ ಅದನ್ನು ಅಲ್ಲಗಳೆಯುತ್ತಲೇ ಬಂದರು. ಕಾಮಿಡಿ ಶೋಗಳಲ್ಲಿ ಅನೇಕ ಬಾರಿ ಗಂಡ ಹೆಂಡತಿ ಪಾತ್ರ ಮಾಡುತ್ತಾ ಬಂದಿರುವುದರಿಂದ ಜನರು ಆ ರೀತಿಯಲ್ಲಿ ತಿಳಿದುಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು. ಆದರೆ, ಇದೀಗ ಜಗ್ಗಪ್ಪನ ಜೊತೆಯೇ ಸುಷ್ಮಿತಾ ಹಸೆ ಮಣೆ ಏರುತ್ತಿದ್ದಾರೆ. ನಿನ್ನೆ ಮೆಹಂದಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಆ ಫೋಟೋಗಳನ್ನು ಸುಷ್ಮಿತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  ಇಬ್ಬರು ಒಂದೇ ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ. ಮೆಹಂದಿ ಕಾರ್ಯಕ್ರಮಕ್ಕೆ ಅಚ್ಚುಕಟ್ಟಾಗಿ ನಡೆದಿದ್ದಕ್ಕೆ ಸುಷ್ಮಿತಾ ಧನ್ಯವಾದಗಳನ್ನು ತಿಳಿಸಿದ್ದಾರೆ.

Read More

ರಿಯಲ್ ಸ್ಟಾರ್ ಉಪೇಂದ್ರ ಅವರು, ಇಂದು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಮೂಲಕ ಪ್ರಯಾಣಿಕರ ಗಮನ ಸೆಳೆದಿದ್ದಾರೆ. ಮೆಟ್ರೋ ಪ್ರಯಾಣಗ ಅನುಭವದ ಬಗ್ಗೆ ನಟ ಉಪೇಂದ್ರ ಮಾತನಾಡಿ, ನನ್ನ ಬಹುದಿನಗಳ ಆಸೆ ಈಗ ನೇರವೇರಿದೆ. ಇಂದು ನಾನು‌ ಮೆಟ್ರೋದಲ್ಲೇ ಅಲ್ಪ ಸಮಯದಲ್ಲಿ ವೇಗವಾಗಿ ಬಂದೆ ಎಂದು ತಮ್ಮ ಮೆಟ್ರೋ ಪಯಣದ ಬಗ್ಗೆ ಸಂತೋಷ ವ್ಯಕ್ಯಪಡಿಸಿದ್ರು.. ಮೆಟ್ರೋದಿಂದ ನಮ್ಮ ಪಯಣ ನಿಜವಾಗಿಯು ಸುಲಭವಾಗಿದೆ.ಇದೇ ನಿಮ್ಮ ಸೇವೆ ಮುಂದುವರೆಯಲಿ ಎಂದು ಹೇಳಿದ್ದಾರೆ.

Read More

ನವದೆಹಲಿ: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ನಂತ್ರ ಬಾಲಿವುಡ್‌ ನಟಿಯರ ಡೀಪ್‌ಫೇಕ್‌ ವೀಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನೂ ವೀಡಿಯೋವೊಂದರಲ್ಲಿ ಡೀಫ್‌ ಫೇಕ್‌ ಮಾಡಲಾಗಿದ್ದು, ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ದೀಪಾವಳಿ ಮಿಲನ್‌ ಕಾರ್ಯಕ್ರಮದಲ್ಲಿ (Diwali Milan Programme) ಪತ್ರಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರಸ್ತುತ ನಮ್ಮ ಭಾರತೀಯ ವ್ಯವಸ್ಥೆಯು ಎದುರಿಸುತ್ತಿರುವ ದೊಡ್ಡ ಬೆದರಿಕೆಗಳಲ್ಲಿ ಡೀಪ್‌ಫೇಕ್‌ (Deepfakes Video) ಕೂಡ ಒಂದಾಗಿದೆ. ಇದು ಸಮಾಜದಲ್ಲಿ ಅವ್ಯವಸ್ಥೆಯನ್ನುಂಟುಮಾಡಬಹುದು. ಆದ್ದರಿಂದ ಹೆಚ್ಚುತ್ತಿರುವ ಸಮಸ್ಯೆಗಳ ಬಗ್ಗೆ ಜನರಿಗೆ ತಿಳಿಸಿ ಅವರನ್ನು ಶಿಕ್ಷಿತರನ್ನಾಗಿ ಮಾಡಬೇಕು ಎಂದು ಕರೆ ನೀಡಿದ್ದಾರೆ. https://ainlivenews.com/how-to-make-hotel-style-palak-paneer-antira-here-it-is/ ಡೀಪ್‌ಫೇಕ್‌ಗಳಿಗಾಗಿ ಕೃತಕ ಬುದ್ಧಿಮತ್ತೆಯನ್ನು (Artifical Intelligence) ದುರುಪಯೋಗಪಡಿಸಿಕೊಳ್ಳುವಾಗ ನಾಗರಿಕರು ಮತ್ತು ಮಾಧ್ಯಮಗಳು ಬಹಳ ಜಾಗರೂಕರಾಗಿರಬೇಕು. ಪ್ರಜಾಪ್ರಭುತ್ವದ ಸಮಗ್ರತೆಗೆ ಡೀಪ್‌ಫೇಕ್‌ಗಳು ಹೇಗೆ ಗಣನೀಯ ಸವಾಲುಗಳನ್ನು ಒಡ್ಡುತ್ತಿವೆ? ನಕಲಿ ಮತ್ತು ನೈಜ ಕ್ಲಿಪ್‌ಗಳ ನಡುವೆ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟಕರವಾಗಿದೆ. ಇದು…

Read More

ಬೆಂಗಳೂರು:- ಈಗಾಗಲೇ ರಶ್ಮಿಕಾ ಮಂದಣ್ಣ, ಕಾಜಲ್ ಸೇರಿದಂತೆ ಅನೇಕ ಸಲಬ್ರೇಟಿಗಳ ಡೀಪ್ ಫೇಕ್ ವಿಡಿಯೋ ಗಳು ವೈರಲ್ ಆಗಿದೆ. ಇದು ದೇಶಕ್ಕೆ ಎದುರಾಗಲಿರುವ ಬಹುದೊಡ್ಡ ಬೆದರಿಕೆ ಅಂತಾ ಪ್ರಧಾನಿ ಮೋದಿ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಇದ್ರ ಬೆನ್ನಲ್ಲೆ ಈಗ ಬೆಂಗಳೂರಿನಲ್ಲಿಯೂ ಪೊಲೀಸರು ಅಲರ್ಟ್ ಆಗಿದ್ದಾರೆ. ಡೀಪ್ ಫೇಕ್ ವಿಡಿಯೋ ಸಮಸ್ಯೆಯಾಗಿದ್ದಲ್ಲಿ ಹೆಲ್ಪ್ ಲೈನ್ ಗೆ ಕರೆ ಮಾಡಿ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ. 1930 ಗೆ ಕರೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಡೀಪ್ ಫೇಕ್ ವಿಡಿಯೋ ಸಮಸ್ಯೆಯ ಬಗ್ಗೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.

Read More