ಬೆಂಗಳೂರು:- ಈಗಾಗಲೇ ರಶ್ಮಿಕಾ ಮಂದಣ್ಣ, ಕಾಜಲ್ ಸೇರಿದಂತೆ ಅನೇಕ ಸಲಬ್ರೇಟಿಗಳ ಡೀಪ್ ಫೇಕ್ ವಿಡಿಯೋ ಗಳು ವೈರಲ್ ಆಗಿದೆ.
ಇದು ದೇಶಕ್ಕೆ ಎದುರಾಗಲಿರುವ ಬಹುದೊಡ್ಡ ಬೆದರಿಕೆ ಅಂತಾ ಪ್ರಧಾನಿ ಮೋದಿ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಇದ್ರ ಬೆನ್ನಲ್ಲೆ ಈಗ ಬೆಂಗಳೂರಿನಲ್ಲಿಯೂ ಪೊಲೀಸರು ಅಲರ್ಟ್ ಆಗಿದ್ದಾರೆ. ಡೀಪ್ ಫೇಕ್ ವಿಡಿಯೋ ಸಮಸ್ಯೆಯಾಗಿದ್ದಲ್ಲಿ ಹೆಲ್ಪ್ ಲೈನ್ ಗೆ ಕರೆ ಮಾಡಿ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ. 1930 ಗೆ ಕರೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಡೀಪ್ ಫೇಕ್ ವಿಡಿಯೋ ಸಮಸ್ಯೆಯ ಬಗ್ಗೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.