ಸ್ಟಾರ್ ಆಲ್‌ರೌಂಡರ್‌ಗಳನ್ನು ಕೈಬಿಟ್ಟಿರುವ ಆರ್‌ಸಿಬಿಗೆ ಹಿನ್ನಡೆ ಆಗಬಹುದು ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಡಿಸೆಂಬರ್ 19 ರಂದು ನಡೆಯಲಿರುವ 2024ರ ಐಪಿಎಲ್ ಮಿನಿ ಹರಾಜಿನ ಹಿನ್ನೆಲೆಯಲ್ಲಿ ನಮ್ಮ ಆರ್‌ಸಿಬಿ ತಂಡ ಪ್ರಮುಖ ಇಬ್ಬರು ಆಟಗಾರರನ್ನು ಬಿಡುಗಡೆಗೊಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್, ಇದು ಆರ್‌ಸಿಬಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದಿದ್ದಾರೆ. ಹರ್ಷಲ್ ಪಟೇಲ್ ಹಾಗೂ ವನಿಂದು ಹಸರಂಗ ಅವರನ್ನು ಬಿಡುಗಡೆಗೊಳಿಸಿದದ್ದು, ತಂಡಕ್ಕೆ ಭಾರಿ ಹಿನ್ನಡೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆರ್‌ಸಿಬಿ 2022ರ ಮೆಗಾ ಹರಾಜಿನಲ್ಲಿ 10.75 ಕೋಟಿ ಖರ್ಚು ಮಾಡಿ ಹರ್ಷಲ್ ಪಟೇಲ್ ಹಾಗೂ ವನಿಂದು ಹಸರಂಗ ಅವರನ್ನು ಖರೀದಿಸಿತ್ತು. ಹಸರಂಗ 26 ವಿಕೆಟ್ ಪಡೆದು ಉತ್ತಮ ಪ್ರದರ್ಶನ ತೋರಿದರು. 2021ರಲ್ಲಿ ಅಮೋಘ ಬೌಲಿಂಗ್ ಮೂಲಕ ಗಮನ ಸೆಳೆದಿದ್ದ ಪರ್ಪಲ್ ಪಟೇಲ್ ಕಳೆದೆರೆಡು ಆವೃತ್ತಿಯಲ್ಲಿ ನೀರಸ ಪ್ರದರ್ಶನ ತೋರಿದ್ದರು. ಹಾಗಾಗಿ ಇವರನ್ನು 2024ರ ಐಪಿಎಲ್ ಗೂ ಮುನ್ನಾ ಮಿನಿ ಹರಾಜಿನಲ್ಲಿ ಆರ್‌ಸಿಬಿ ತಂಡದಿಂದ ಬಿಡುಗಡೆಗೊಳಿಸಿದೆ. ತಂಡದ ಪರ್ಸ್ ಮೊತ್ತ…
Author: AIN Author
ಸಾಮಾನ್ಯವಾಗಿ ಎಲ್ಲರಿಗೂ ವಾಸ್ತು ಶಾಸ್ತ್ರದ ಮಹತ್ವ ತಿಳಿದಿರುತ್ತದೆ. ವಾಸ್ತು ಸಲಹೆಗಳ ಮೂಲಕ ಮನೆಯ ಋಣಾತ್ಮಕ ಪರಿಣಾಮಗಳನ್ನು ಸುಲಭವಾಗಿ ನಿವಾರಿಸಬಹುದು ಎಂದು ಹೇಳಲಾಗುತ್ತದೆ. ಆದರೆ, ಕೆಲವೊಮ್ಮೆ ನಮ್ಮ ಜೀವನದಲ್ಲಿ ಸಣ್ಣ ತಪ್ಪುಗಳು ದೊಡ್ಡ ವಾಸ್ತು ದೋಷಗಳಿಗೆ ಕಾರಣವಾಗುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಮೇಲೆ ಕುಳಿತು ಆಹಾರವನ್ನು ಸೇವಿಸಬಾರದು. ಆಹಾರವನ್ನು ಯಾವಾಗಲೂ ಡೈನಿಂಗ್ ಟೇಬಲ್ ಅಥವಾ ನೆಲದ ಮೇಲೆ ಕುಳಿತು ತಿನ್ನಬೇಕು. ಮಲಗುವ ಕೋಣೆಯಲ್ಲಿ ಅಥವಾ ಹಾಸಿಗೆಯ ಮೇಲೆ ಕುಳಿತು ಊಟ ಮಾಡಿ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ . ಅಲ್ಲದೆ ನಿದ್ರೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ರಾತ್ರಿ ಮಲಗುವ ಮುನ್ನ ನಿಮ್ಮ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ. ಹಾಗೆಯೇ ಪಾತ್ರೆಗಳನ್ನು ತೊಳೆದಂತೆ ನೋಡಿಕೊಳ್ಳಿ, ಹಾಗೆ ಮಾಡದವರಿಗೆ ತಾಯಿ ಅನ್ನಪೂರ್ಣ ಕೋಪ ಬರುತ್ತಾಳೆ. ಅಲ್ಲದೆ ಇವರ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಿರುವುದಿಲ್ಲ . ವಾಸ್ತು ಶಾಸ್ತ್ರದ ಪ್ರಕಾರ, ಸಂಜೆ ಮಲಗುವುದನ್ನು ಅತ್ಯಂತ ಅಶುಭವೆಂದು ಪರಿಗಣಿಸಲಾಗುತ್ತದೆ. ಇದನ್ನು ಮಾಡುವವರು ಯಾವಾಗಲೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ, ಅವರ ಮನೆಯಲ್ಲಿ…
ಬಿಗ್ ಬಾಸ್ ಕನ್ನಡ 10ನೇ ಸೀಸನ್ 7ನೇ ವಾರದ ಕೊನೆಗೆ ಸಾಗಿಬಂದಿದೆ. ಇಂದು, ಬಿಗ್ ಬಾಸ್ ಮನೆಯಿಂದ ಒಬ್ಬರು ಸ್ಪರ್ಧಿ ಹೊರಬೀಳಲಿದ್ದಾರೆ. ಅವರು ಯಾರೆಂಬುದನ್ನು ಅಧಿಕೃತವಾಗಿ ಹೇಳಲಾಗದಿದ್ದರೂ ಊಹೆ ಮಾಡಿ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡಲಾಗಿದೆ. ಗಾಸಿಪ್ ಆಧರಿಸಿ ಹೇಳುವುದಾದರೆ ಇಂದು ಎಲಿಮಿನೇಟ್ ಆಗಲಿರುವ ಸ್ಪರ್ಧಿ ನೀತು ವನಜಾಕ್ಷಿ. ಹಾಗಂತ ಸೋಷಿಯಲ್ ಮೀಡಿಯಾಗಳು ಹಾಗೂ ಹಲವು ಯೂಟ್ಯೂಬ್ ಜಾಲತಾಣಗಳಲ್ಲಿ ಸುದ್ದಿ ಹರಿಬಿಡಲಾಗಿದೆ. ಆದರೆ ಇದನ್ನು ಗಾಸಿಪ್ ಎನ್ನಬಹುದೇ ಹೊರತೂ ಅಧಿಕೃತ ಸುದ್ದಿ ಎನ್ನಲು ಸಾಧ್ಯವಿಲ್ಲ. ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಯಾಗಿರುವ ನೀತು ವನಜಾಕ್ಷಿ 6 ವಾರಳನ್ನು ಕಳೆದು ಏಳನೆಯ ವಾರದ ಕೊನೆಗೆ ಬಂದು ನಿಂತಿರುವುದು ಸಾಧನೆಯೇ ಸರಿ. ಆದರೆ, ಇಂದು ಈ ಹಂತದಲ್ಲಿ ಎಲಿಮಿನೇಟ್ ಆಗಲಿರುವ ಸ್ಪರ್ಧಿ ಅವರೇ ಎಂದು ಹಲವರು ಕಾಮೆಂಟ್ ಮೂಲಕ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿ ಹಬ್ಬಿಸಿದ್ದಾರೆ. ನಾಮಿನೇಟ್ ಆಗಿದ್ದರೂ ಸಿರಿ ಈ ವಾರ ಹೊರಹೋಗುತ್ತಿಲ್ಲ. ಬದಲಿಗೆ ನೀತು ವನಜಾಕ್ಷಿಯೇ ಇಂದು ಬಿಗ…
ಬೆಳಗಾವಿ:- ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ತಂದೆ-ಮಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜರುಗಿದೆ. ಮೃತ ದುರ್ದೈವಿಗಳನ್ನು ಮಲ್ಲಿಕಾರ್ಜುನ ಪೂಜಾರಿ(32), ಮಗ ಪ್ರೀತಮ್(7) ಎಂದು ಹೇಳಲಾಗಿದೆ. ಪ್ರೀತಮ್ನನ್ನು ತಂದೆ ಮಲ್ಲಿಕಾರ್ಜುನ ತೋಟಕ್ಕೆ ಕರೆದುಕೊಂಡುಹೋಗಿದ್ದ. ಈ ವೇಳೆ ಮೋಟಾರ್ ಆನ್ ಮಾಡಿ ವಾಟರ್‌ವಾಲ್ ಟರ್ನ್ ಮಾಡುವಾಗ ಮಲ್ಲಿಕಾರ್ಜುನ್‌ಗೆ ವಿದ್ಯುತ್ ಶಾಕ್ ಹೊಡೆದಿದೆ. ಇದನ್ನು ನೋಡಿದ ಮಗ, ತಂದೆಯನ್ನು ರಕ್ಷಿಸಲು ಕೈ ಹಿಡಿದಾಗ ಈ ದುರ್ಘಟನೆ ಸಂಭವಿಸಿದೆ.
ಬೆಳಗಾವಿ:- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರು ಆದ ಆರ್.ವಿ ದೇಶಪಾಂಡೆ ಅವರು ನಿನ್ನೇ ದಾಂಡೇಲಿಯ ಆಡಳಿತ ಸೌಧದಲ್ಲಿ ವಿಧಾನಸಭಾ ಸಭಾ ಕ್ಷೇತ್ರದ ವ್ಯಾಪ್ತಿಯ ಟಾಸ್ಕ್ ಪೋರ್ಸ್ ಸಭೆ ನಡೆಸಿ ಎಲ್ಲಾ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ನಡೆಸಿದ ಸಂದರ್ಶನದಲ್ಲಿ ಮಾತನಾಡಿ, ಕ್ಷೇತ್ರದ ಸಮಸ್ಯೆಗಳು ಹಾಗೂ ಪರಿಹಾರ ಹಾಗೂ ಚಳಿಗಾಲದ ಅಧಿವೇಶನ ಹಾಗೂ ಶಿವರಾಂ ಹೆಬ್ಬಾರ್ ಕಾಂಗ್ರೆಸ್ ಪಕ್ಷಕ್ಕೆ ಬರೋದು ಹಾಗೂ ಡಿ.ಕೆ ಶಿವಕುಮಾರ್ ಮೇಲಿನ ಸಿ.ಬಿ.ಐ ತನಿಖೆ ರಾಜ್ಯ ಸರ್ಕಾರ ವಾಪಸ್ ಪಡೆದಿರುವುದು ಹೀಗೆ ಹಲವು ವಿಷಯಗಳ ಪ್ರಶ್ನೆಗಳಿಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಜಿ ಪ್ಲಸ್ ಟೂ ಬಗ್ಗೆ ವರದಿ ಮಾಡಿ ಸರ್ಕಾರಕ್ಕೆ ಎಚ್ಚರಿಸಿ ಕಾರ್ಯರೂಪಕ್ಕೆ ತೆಗೆದುಕೊಂಡು ಬಂದದಕ್ಕೆ ನಮ್ಮ ನ್ಯೂಸ್ ಸಮೂಹದ ರಾಜ್ಯ ವಿಶೇಷ ಪ್ರತಿನಿಧಿ ಬಸವರಾಜು ಅವರನ್ನು ಆಕ್ರಂ ಖಾನ್ ನೇತೃತ್ವದ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸನ್ಮಾನ ಮಾಡಲಾಯಿತು.
ಬೆಂಗಳೂರು:- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆಗೆ ಮತ್ತು ರಾಜಭವನ ಚಲೋಗೆ ಕರೆ ನೀಡಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ನಾಳೆ ವಾಹನಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದ್ದು, ಈ ಕೆಳಗಿನಂತಿದೆ. ಬದಲಿ ಮಾರ್ಗ ಇಲ್ಲಿದೆ ಎಸ್‌ಬಿಎಂ ಸರ್ಕಲ್‌ನಿಂದ ಫ್ರೀಡಂಪಾರ್ಕ್ ಮಾರ್ಗದಲ್ಲಿ ಹೋಗುವವರು, ಮಹಾರಾಣಿ ಕಾಲೇಜು ಅಂಡರ್‌ಪಾಸ್ ಮೂಲಕ ಸಂಚರಿಸಬೇಕು. ಫ್ರೀಡಂಪಾರ್ಕ್‌ನಿಂದ ಕನಕದಾಸ ವೃತ್ತದ ಕಡೆ ಹೋಗಲು ಅವಕಾಶವಿಲ್ಲ. ಇನ್ನು ಕೋಡೆ ಜಂಕ್ಷನ್ ಕಡೆಯಿಂದ ಕೆ.ಆರ್.ಸರ್ಕಲ್‌ಗೆ ಹೋಗುವವರು, ಹಳೇ ಜೆಡಿಎಸ್ ಕಚೇರಿಯ ರಸ್ತೆ ಮೂಲಕ ಸಂಚರಿಸಲು ಸೂಚಿಸಲಾಗಿದೆ. ಸುಬ್ಬಣ್ಣ ಜಂಕ್ಷನ್‌ನಿಂದ ಎಂಟಿಆರ್ ಜಂಕ್ಷನ್ ಕಡೆ ಹೋಗುವವರಿಗೆ ದ್ವಿಮುಖ ಸಂಚಾರಕ್ಕೆ ಸಂಚಾರಿ ಪೊಲೀಸರು ಅವಕಾಶ ನೀಡಲಾಗಿದೆ. ಇನ್ನು ಕೋಡೆ ಜಂಕ್ಷನ್, ಮಹಾರಾಣಿ ಜಂಕ್ಷನ್, ವೈ.ರಾಮಚಂದ್ರ ರಸ್ತೆ, ಕಾಳಿದಾಸ, ಪ್ಯಾಲೆಸ್ ರಸ್ತೆ, ಕೆ.ಜಿ.ರಸ್ತೆಗಳಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಮಂಡ್ಯ:- ಜಾತಿ ಗಣತಿಯಲ್ಲಿ ಸಿಎಂ, ಡಿಸಿಎಂನಿಂದ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಜಾತಿ ಗಣತಿಯಿಂದ ಸರ್ಕಾರ ಯಾರಿಗೂ ಅನ್ಯಾಯ ಮಾಡುವುದಿಲ್ಲ, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಈ ರಾಜ್ಯದಲ್ಲಿ ಎಲ್ಲರಿಗೂ ನ್ಯಾಯಕೊಡಿಸುವ ಕೆಲಸ ಮಾಡುತ್ತಾರೆ ಎಂದರು. ನನಗೆ ಸಿದ್ದರಾಮಯ್ಯ ನವರ ಮೇಲೆ ನಂಬಿಕೆ ಇದೆ. ಸಿದ್ದರಾಮಯ್ಯ ನವರು ಸೂಕ್ತ ರೀತಿಯಲ್ಲಿ ಪರಿಶೀಲನೆ ಮಾಡಿ ಜಾತಿಗಣತಿ ಜಾರಿಗೊಳಿಸುತ್ತಾರೆ. ವರದಿ ಸ್ವೀಕಾರವು ಮುಖ್ಯಮಂತ್ರಿ ಅವರಿಗೆ ಬಿಟ್ಟಿದ್ದು ಎಂದರು. ಮುಖ್ಯಮಂತ್ರಿ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ, ಎಲ್ಲ ಸಮಾಜದ ಅಹವಾಲು ಕೇಳಿದ್ದಾರೆ. ಯಾವ ಸಮಾಜದ ಆತಂಕ ಇದೆ ಅದನ್ನ ಮುಖ್ಯಮಂತ್ರಿ ಮುಂದೆ ಪ್ರಸ್ತಾಪ ಮಾಡಲಾಗಿದೆ. ಇದನ್ನು ಕ್ರೂಢೀಕರಿಸಿ ಸೂಕ್ತ ತೀರ್ಮಾನ ಮಾಡುತ್ತಾರೆ, ವರದಿ ಸಲ್ಲಿಕೆ ಆದ ಮೇಲೆ ಆತಂಕ ಪಡಬೇಕು. ಆತಂಕ ಪಟ್ಟಿರುವುದು ಸೂಕ್ತವಾಗಿದೀಯಾ ಆಮೇಲೆ ಅದನ್ನ ಸರಿ ಮಾಡಬೇಕು. ವರದಿ ಬಂದ ಮೇಲೆ ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾಂಗ್ರೆಸ್ ಪಕ್ಷದವರೇ ಜಾತಿ…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತಬ್ಯಾಂಕ್ ರಾಜಕೀಯವನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಡಾ. ಅಂಬೇಡ್ಕರ್ ಹೆಸರನ್ನು ನುಡಿಮುತ್ತಾಗಿ ಬಳಸುವ ಕಾಂಗ್ರೆಸ್ ಪಕ್ಷವು ಗೌರವಯುತವಾಗಿ ಅವರ ಶವ ಸಂಸ್ಕಾರ ಮಾಡಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು. 26 ನವೆಂಬರ್ ಅನ್ನು ಸಂವಿಧಾನ ಸಮರ್ಪಣಾ ದಿನ ಎಂದು ಘೋಷಿಸುವ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸೂಚಿಸಿದ್ದೇ ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು. ಬಿಜೆಪಿ ಉದ್ದೇಶ ಕಟ್ಟಕಡೆಯ ವ್ಯಕ್ತಿಗೂ ಕೂಡ ನ್ಯಾಯ ನೀಡುವುದು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂದು ಮಹತ್ವದ ದಿನ. 1949 ನವೆಂಬರ್ 26 ರಂದು ಭಾರತೀಯರಿಗೆ ಪವಿತ್ರವಾದ ಸಂವಿಧಾನವನ್ನು ಅಂಗೀಕರಿಸಿದ ದಿನ. ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ಶ್ರಮ ಮತ್ತು ದೂರದೃಷ್ಟಿಯು ಈ ನಮ್ಮ ಸಂವಿಧಾನವನ್ನು ರಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ತಿಳಿಸಿದರು. ಸಿದ್ದರಾಮಯ್ಯನವರು ಮತಬ್ಯಾಂಕ್…
ಶಿರಾ:- ಜಾತಿ ಗಣತಿಗೆ ಬಿಜೆಪಿ ವಿರೋಧ ಇಲ್ಲ ಎಂದು ಮಾಜಿ ಸಚಿವ ಆರ್. ಅಶೋಕ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಜಾತಿ ಗಣತಿಯನ್ನು ಬಿಜೆಪಿ ಎಂದೂ ವಿರೋಧ ಮಾಡುವುದಿಲ್ಲ. ಆದರೆ, ಜಾತಿ ಗಣತಿ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದರು. ವೀರಶೈವ ಎಂದು ಜಾತಿ ಒಡೆಯುವ ಕೆಲಸ ಮಾಡಿದ್ದ ಸಿದ್ದರಾಮಯ್ಯ ಈ ಬಾರಿ ಜಾತಿ, ಜಾತಿಗಳನ್ನು ಎತ್ತಿಕಟ್ಟುವ ಮೂಲಕ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಅವರ ಸಂಪುಟದ ಸದಸ್ಯರೇ ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವರದಿ ಈಗಾಗಲೇ ಸೋರಿಕೆಯಾಗಿದ್ದು, ಅವೈಜ್ಞಾನಿಕವಾಗಿದೆ ಎಂದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪಡೆಯುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಕೆಟ್ಟ ಸಂಪ್ರದಾಯ ಆರಂಭಿಸಿದೆ. ಸಂಪುಟ ಸಭೆಯನ್ನು ದುರುಪಯೋಗ ಮಾಡಿಕೊಂಡಿದೆ ಎಂದು ತರಾಟೆಗೆ ತೆಗೆದುಕೊಂಡರು. ಈ ಹಿಂದೆ ಲೋಕಾಯುಕ್ತ ಸಂಸ್ಥೆ ರದ್ದು ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ತಳಪಾಯ…
ಗದಗ: ಗದಗ ನಗರದ ಕೆ ಎಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಗದಗ ಜಿಲ್ಲಾ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಜರುಗಿತು. ಗದುಗಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ ಹಾಗೂ ಗದಗ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೈ ಅವರು ಕಾರ್ಯವನ್ನು ಉದ್ಘಾಟಿಸಿದ್ರು. ಆಕರ್ಷಕ ಪಥ ಸಂಚಲನ ನೆರವೇರಿತು. ಕ್ರೀಡಾ ಜ್ಯೋತಿ ಆಗಮಿಸಿದ ನಂತರ ಪ್ರತಿಜ್ಞಾ ವಿಧಿ ಸ್ವೀಕರಿಸಿ ಕ್ರೀಡೆಗಳನ್ನ ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಪೊಲೀಸ್ ಕ್ರೀಡಾಪಟುಗಳು ಹಾಜರಿದ್ದರು.