ಬೆಳಗಾವಿ:- ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ತಂದೆ-ಮಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜರುಗಿದೆ.
ಮೃತ ದುರ್ದೈವಿಗಳನ್ನು ಮಲ್ಲಿಕಾರ್ಜುನ ಪೂಜಾರಿ(32), ಮಗ ಪ್ರೀತಮ್(7) ಎಂದು ಹೇಳಲಾಗಿದೆ. ಪ್ರೀತಮ್ನನ್ನು ತಂದೆ ಮಲ್ಲಿಕಾರ್ಜುನ ತೋಟಕ್ಕೆ ಕರೆದುಕೊಂಡುಹೋಗಿದ್ದ. ಈ ವೇಳೆ ಮೋಟಾರ್ ಆನ್ ಮಾಡಿ ವಾಟರ್ವಾಲ್ ಟರ್ನ್ ಮಾಡುವಾಗ ಮಲ್ಲಿಕಾರ್ಜುನ್ಗೆ ವಿದ್ಯುತ್ ಶಾಕ್ ಹೊಡೆದಿದೆ. ಇದನ್ನು ನೋಡಿದ ಮಗ, ತಂದೆಯನ್ನು ರಕ್ಷಿಸಲು ಕೈ ಹಿಡಿದಾಗ ಈ ದುರ್ಘಟನೆ ಸಂಭವಿಸಿದೆ.