ಬಿಗ್ ಬಾಸ್ ಕನ್ನಡ 10ನೇ ಸೀಸನ್ 7ನೇ ವಾರದ ಕೊನೆಗೆ ಸಾಗಿಬಂದಿದೆ. ಇಂದು, ಬಿಗ್ ಬಾಸ್ ಮನೆಯಿಂದ ಒಬ್ಬರು ಸ್ಪರ್ಧಿ ಹೊರಬೀಳಲಿದ್ದಾರೆ. ಅವರು ಯಾರೆಂಬುದನ್ನು ಅಧಿಕೃತವಾಗಿ ಹೇಳಲಾಗದಿದ್ದರೂ ಊಹೆ ಮಾಡಿ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡಲಾಗಿದೆ. ಗಾಸಿಪ್ ಆಧರಿಸಿ ಹೇಳುವುದಾದರೆ ಇಂದು ಎಲಿಮಿನೇಟ್ ಆಗಲಿರುವ ಸ್ಪರ್ಧಿ ನೀತು ವನಜಾಕ್ಷಿ. ಹಾಗಂತ ಸೋಷಿಯಲ್ ಮೀಡಿಯಾಗಳು ಹಾಗೂ ಹಲವು ಯೂಟ್ಯೂಬ್ ಜಾಲತಾಣಗಳಲ್ಲಿ ಸುದ್ದಿ ಹರಿಬಿಡಲಾಗಿದೆ. ಆದರೆ ಇದನ್ನು ಗಾಸಿಪ್ ಎನ್ನಬಹುದೇ ಹೊರತೂ ಅಧಿಕೃತ ಸುದ್ದಿ ಎನ್ನಲು ಸಾಧ್ಯವಿಲ್ಲ.
ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಯಾಗಿರುವ ನೀತು ವನಜಾಕ್ಷಿ 6 ವಾರಳನ್ನು ಕಳೆದು ಏಳನೆಯ ವಾರದ ಕೊನೆಗೆ ಬಂದು ನಿಂತಿರುವುದು ಸಾಧನೆಯೇ ಸರಿ. ಆದರೆ, ಇಂದು ಈ ಹಂತದಲ್ಲಿ ಎಲಿಮಿನೇಟ್ ಆಗಲಿರುವ ಸ್ಪರ್ಧಿ ಅವರೇ ಎಂದು ಹಲವರು ಕಾಮೆಂಟ್ ಮೂಲಕ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿ ಹಬ್ಬಿಸಿದ್ದಾರೆ. ನಾಮಿನೇಟ್ ಆಗಿದ್ದರೂ ಸಿರಿ ಈ ವಾರ ಹೊರಹೋಗುತ್ತಿಲ್ಲ. ಬದಲಿಗೆ ನೀತು ವನಜಾಕ್ಷಿಯೇ ಇಂದು ಬಿಗ ಬಾಸ್ ಮನೆಯಿಂದ ಹೊರಹೋಗುವ ಸ್ಪರ್ಧಿ ಎನ್ನಲಾಗುತ್ತಿದೆ. ಈ ಸುದ್ದಿಯನ್ನು ಖಚಿತಪಡಿಸಿಕೊಳ್ಳಲು ಕಲರ್ಸ್ ಕನ್ನಡದಲ್ಲಿ ಇಂದು ಪ್ರಸಾರ ಕಾಣಲಿರುವ ‘ಸುಪರ್ ಸಂಡೇ ವಿತ್ ಸುದೀಪ’ ನೋಡಬೇಕು.