Author: AIN Author

ಬ್ಯಾಂಕಾಕ್: ಮೃಗಾಲಯದ ನೌಕರರೊಬ್ಬರು ಮೊಸಳೆ ಬಾಯಲ್ಲಿ ತಲೆ ಇಟ್ಟು ಸಾಹಸ ಪ್ರದರ್ಶನ ಮಾಡಲು ಹೋಗಿ ಅವಾಂತರ ಸೃಷ್ಟಿಸಿಕೊಂಡ ಘಟನೆ ಥೈಲ್ಯಾಂಡ್‍ನಲ್ಲಿ ನಡೆದಿದೆ. ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯು ಮೊಸಳೆಯ ಬಾಯಲ್ಲಿ ಎರಡು ಕಡ್ಡಿಗಳನ್ನ ಇಟ್ಟು ಟ್ರಿಕ್ಸ್ ಮಾಡೋದನ್ನ ನೋಡಬಹುದು. ಈ ವೇಳೆ ಬಾಯಿ ತೆರೆದುಕೊಂಡಿದ್ದ ಮೊಸಳೆ ಏನೂ ಮಾಡದೆ ಸುಮ್ಮನೆ ಇತ್ತು.  ನಂತರ ಮೊಸಳೆ ಬಾಯೊಳಗೆ ಆ ವ್ಯಕ್ತಿ ತನ್ನ ತಲೆಯನ್ನು ಇಟ್ಟಿದ್ದಾರೆ. ಕೆಲವು ಸಕೆಂಡ್‍ಗಳ ಕಾಲ ಮೊಸಳೆ ಬಾಯಿ ತೆರೆದುಕೊಂಡೇ ಇತ್ತು. ಆದ್ರೆ ಇದ್ದಕ್ಕಿದ್ದಂತೆ ಬಾಯಿ ಮುಚ್ಚಿ ತಲೆ ಹಿಡಿದು ಎಳೆದಾಡಿದೆ. ನಂತರ ಆ ವ್ಯಕ್ತಿಯನ್ನ ಬಿಟ್ಟು ಪಕ್ಕದಲ್ಲಿದ್ದ ನೀರಿನ ಕೊಳದೊಳಗೆ ಹೋಗಿದೆ. ಮೊಸಳೆ ಬಾಯಿಗೆ ತಲೆ ಕೊಟ್ಟ ವ್ಯಕ್ತಿ ನೋವಿನಿಂದ ನರಳಾಡಿದ್ದಾರೆ.‌ https://www.youtube.com/watch?v=vkid6ojyc8c&t=10s&ab_channel=LoudandBeach ಇಲ್ಲಿನ ಕೊಹ್ ಸಮುಯ್‍ನಲ್ಲಿ ಕಳೆದ ಭಾನುವಾರ ಈ ಘಟನೆ ನಡೆದಿದ್ದು, ಪ್ರವಾಸಿಗರೊಬ್ಬರು ಇದನ್ನ ವಿಡಿಯೋ ಮಾಡಿದ್ದಾರೆ. ಆಂಗ್ಲ ಪತ್ರಿಕೆಯೊಂದರ ವರದಿಯ ಪ್ರಕಾರ ಈ ವ್ಯಕ್ತಿ ಇದಕ್ಕೂ ಮೊದಲು ಮೊಸಳೆಗಳಿಂದಾಗಿ ಆಗಿದ್ದ ಗಾಯ, ಕಟ್…

Read More

ಬೆಂಗಳೂರು:- ಸಂಸ್ಕೃತಿ ಹಾಗೂ ಸಾಹಸದ ಸಂಕೇತವೇ ತುಳುವರು ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. ಕಂಬಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,ತುಳುವರು ಸಂಸ್ಕೃತಿ, ಸಾಹಸದ ಸಂಕೇತವಾಗಿದ್ದು, ಕಂಬಳ ಮುಂದಿನ ವರ್ಷಗಳಲ್ಲಿ ರಾಜಧಾನಿಯಲ್ಲಿ ಇನ್ನಷ್ಟು ವಿಜೃಂಭಣೆಯಿಂದ ನಡೆಯಲಿದೆ ಎಂದರು. ತುಳುವರು ಎಂದರೆ ಸಾಂಸ್ಕೃತಿಕ ಸಂಕೇತ, ಸಾಹಸದ ಸಂಕೇತ, ಧಾರ್ಮಿಕ ಶೃದ್ಧೆಯ ಸಂಕೇತ. ವಿಶ್ವಮಟ್ಟದಲ್ಲಿ ಸ್ನೇಹದ ಸಾಮ್ರಾಜ್ಯ ಸ್ಥಾಪಿಸಿದ ಕೀರ್ತಿ ತುಳುವರಿಗೆ ಸಲ್ಲುತ್ತದೆ ಎಂದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕರಾವಳಿ ಭಾಗಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದರು. ಕರಾವಳಿಯ ಸಂಸ್ಕೃತಿ ಉಳಿಸುವ ಕೆಲಸ ಮಾಡಿದ್ದರು. ನಮಗೆ ಕರಾವಳಿಯ ಬಗೆಗೆ ವಿಶೇಷ ಗೌರವ, ಅಭಿಮಾನವಿದೆ. ಎಂದಿಗೂ ನಿಮ್ಮ ಜೊತೆಗೆ ನಿಲ್ಲುತ್ತೇವೆ ಎಂದು ಹೇಳಿದರು

Read More

ಬೆಳಗಾವಿ:- ಇಲಾಖೆಗಳ ವಿಲೀನಕ್ಕೂ, ಗ್ಯಾರಂಟಿ ಯೋಜನೆಗೂ ನಂಟಿಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಳಗೆ ವಿಲೀನ ಮಾಡುವುದಕ್ಕೂ, ಗ್ಯಾರಂಟಿ ಯೋಜನೆಗೂ ಯಾವುದೇ ಸಂಬಂಧವಿಲ್ಲ. ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಳಗೆ ವಿಲೀನ ಮಾಡುವ ಪ್ರಕ್ರಿಯೆ 10 ವರ್ಷಗಳ ಹಿಂದಯೇ ನಡೆದಿದೆ ಎಂದರು ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಅನುದಾನ ಕೊರತೆಯಾಗಿದ್ದಕ್ಕೆ ಕೃಷಿ ಇಲಾಖೆಯಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳನ್ನು ವಿಲೀನಗೊಳಿಸಲು ಸರ್ಕಾರ ಮುಂದಾಗಿದೆಯೇ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೆಲವು ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಅವಶ್ಯಕತೆ ಇಲ್ಲ. ಹಾಗಾಗಿ ಈ ಇಲಾಖೆಗಳನ್ನು ವಿಲೀನಗೊಳಿಸುವ ಬಗ್ಗೆ 10 ವರ್ಷಗಳ ಹಿಂದೆಯೇ ವರದಿ ಕೊಟ್ಟಿದ್ದಾರೆ. ಈ ರೀತಿ ಹಿಂದಿನ ಸರ್ಕಾರಗಳಲ್ಲೂ ವಿಲೀನ ಪ್ರಕ್ರಿಯೆ ನಡೆದಿವೆ. ಗ್ಯಾರಂಟಿ ಯೋಜನೆಗಳಿಗೂ ಮತ್ತು ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು. ಕಾಂತರಾಜ್‌ ಆಯೋಗದ ವರದಿ ಜಾರಿಯಾದರೆ ಕಾಂಗ್ರೆಸ್ ಸರ್ಕಾರಕ್ಕೆ ತೊಂದರೆಯಾಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆಯೋಗದವರು ನಮಗೆ ಇನ್ನೂ ವರದಿಯನ್ನೇ…

Read More

ಬೆಂಗಳೂರು:- ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂದು ಜನತಾ ದರ್ಶನ ನಡೆಸಲಿದ್ದಾರೆ. ಸಾರ್ವಜನಿಕರ ಅಹವಾಲುಗಳಿಗೆ ತ್ವರಿತ ಪರಿಹಾರ ಒದಗಿಸುವ ಆಶಯದೊಂದಿಗೆ ಈ ಜನತಾ ದರ್ಶನ ನಡೆಸಲಿದ್ದಾರೆ. ಅಹವಾಲುಗಳನ್ನು ಸ್ವೀಕರಿಸಲು ಒಟ್ಟು 20 ಕೌಂಟರ್​ಗಳನ್ನು ಸ್ಥಾಪಿಸಲಾಗಿದ್ದು, ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರಿಗೆ ಎರಡು ಕೌಂಟರ್​ಗಳನ್ನು ಮೀಸಲಿರಿಸಲಾಗಿದೆ. ಸ್ವೀಕರಿಸಿದ ಅಹವಾಲುಗಳನ್ನು ಇಲಾಖಾವಾರು ವಿಂಗಡಿಸಿ ತಂತ್ರಾಂಶದಲ್ಲಿ ದಾಖಲಿಸಿ, ಅರ್ಜಿದಾರರಿಗೆ ಸ್ವೀಕೃತಿ ಪತ್ರ ನೀಡಿದ ನಂತರ ಮುಖ್ಯಮಂತ್ರಿಯವರು ಅವರ ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸಲಿದ್ದಾರೆ. ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಯವರು ಈಗಾಗಲೇ ಸುತ್ತೋಲೆ ಹೊರಡಿಸಿ, ಸರ್ಕಾರದ ಎಲ್ಲ ಕಾರ್ಯದರ್ಶಿಗಳು / ಇಲಾಖಾ ಮುಖ್ಯಸ್ಥರು ಖುದ್ದು ಹಾಜರಿರುವಂತೆ ಹಾಗೂ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಎಲ್ಲಾ ಜಿಲ್ಲಾ/ ಉಪವಿಭಾಗ/ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಹಾಜರಿರುವಂತೆ ಸೂಚಿಸಿದ್ದಾರೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಅಹವಾಲು ಸಲ್ಲಿಸಲು ಆಗಮಿಸುವ ನಾಗರಿಕರು ತಮ್ಮ ಗುರುತಿಗಾಗಿ ಆಧಾರ್ ಕಾರ್ಡ್…

Read More

ನಿಂಬೆ ನೀರನ್ನು (Lemon water) ಡಿಟಾಕ್ಸ್ ಪಾನೀಯ ಎಂದು ಕರೆಯಲಾಗುತ್ತದೆ. ಇದು ತೂಕವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ನಿಂಬೆ ನೀರು, ಹೆಚ್ಚಿನ ಪ್ರಮಾಣದ ಆಮ್ಲವನ್ನು ಹೊಂದಿರುತ್ತದೆ. ಹೀಗಾಗಿಯೇ ಪ್ರತಿದಿನ ನಿಂಬೆ ಬೆರೆಸಿದ ನೀರನ್ನು ಕುಡಿಯೋದ್ರಿಂದ ಆರೋಗ್ಯದಲ್ಲಿ (Health) ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅವು ಯಾವುವು? ದೇಹದಲ್ಲಿ ನೀರಿನ ಕೊರತೆ ನಿಂಬೆ ರಸವು ದೇಹ (Body)ವನ್ನು ಹೈಡ್ರೇಟ್ ಮಾಡುತ್ತದೆ. ಆದರೆ ನೀವು ಇದನ್ನು ನಿಯಮಿತವಾಗಿ ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ, ಅದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಂಬೆರಸ ಜಾಸ್ತಿ ಕುಡಿದರೆ ಆಗಾಗ ಮೂತ್ರ (Urine) ವಿಸರ್ಜನೆಯಾಗುತ್ತದೆ. ಇದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ.  ಜೀರ್ಣಕಾರಿ ಸಮಸ್ಯೆಗಳು ನಿಂಬೆ ರಸವನ್ನು ಕುಡಿಯುವುದರಿಂದ ಆಹಾರವು (Food) ವೇಗವಾಗಿ ಜೀರ್ಣವಾಗುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ ಹೆಚ್ಚು ನಿಂಬೆ ರಸವನ್ನು ಕುಡಿಯುವುದು ವಾಕರಿಕೆ ಮತ್ತು ವಾಯು ಮುಂತಾದ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.  ಎದೆಯುರಿ ಅಗತ್ಯಕ್ಕಿಂತ ಹೆಚ್ಚು ನಿಂಬೆ ರಸ ಕುಡಿದರೆ ಎದೆಯುರಿ…

Read More

ರಾಂಚಿ: ಭಾರತದ ಮಾಜಿ ಕ್ರಿಕೆಟಿಗ ಹಾಗೂ ಐಪಿಎಲ್‌ನ ಸಿಎಸ್‌ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಬಳಸಿಕೊಂಡು ಮಗುವೊಂದನ್ನು ಅಪಹರಣ ಮಾಡಿ ಆ ಮಗುವಿನ ತಾಯಿಯನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಧೋನಿ ತವರು ಜಿಲ್ಲೆ ಜಾರ್ಖಂಡ್‌ನ ರಾಜಧಾನಿಯಲ್ಲೇ ಈ ಆಘಾತಕಾರಿ ಘಟನೆ ನಡೆದಿದೆ. ಧೋನಿ ಬಡವರಿಗೆ ಹಣ ಮತ್ತು ಮನೆಗಳನ್ನು ಹಂಚುತ್ತಿದ್ದಾರೆ ಎಂದು ಅಪಹರಣಕಾರರು ಮಗುವಿನ ತಾಯಿಯನ್ನು ನಂಬಿಸಿ, ತಮ್ಮ ಬಲೆಗೆ ಬೀಳಿಸಿಕೊಂಡಿದ್ದಾರೆ ಎಂದು ಮಹಿಳೆ ದೂರು ನೀಡಿರುವ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.  ಮೂರು ದಿನಗಳ ಹಿಂದೆ ಮಧುದೇವಿ ತನ್ನ ಇಬ್ಬರು ಮಕ್ಕಳೊಂದಿಗೆ ರಾಂಚಿಯ ಸ್ಟಾಲ್‌ನಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಧೋನಿ ಬಡ ಜನರಿಗೆ ಹಣ ನೀಡುತ್ತಿದ್ದಾರೆ ಎಂದು ಹೇಳಿಕೊಂಡು ಬೈಕ್‌ವೊಂದರಲ್ಲಿ ಬಂದ ಪುರುಷ ಮತ್ತು ಮಹಿಳೆ ಆಕೆಯ ಬಳಿಗೆ ಬಂದರು. ಅದನ್ನು ನಂಬಿದ ಮಹಿಳೆ, ಎಲ್ಲಿ ಈ ಹಣ ವಿತರಣೆ ನಡೆಯುತ್ತಿದೆಯೋ ಅಲ್ಲಿಗೆ ಕರೆದುಕೊಂಡು ಹೋಗಬಹುದೇ ಎಂದು ಕೇಳಿದ್ದಾರೆ. ಇದಕ್ಕೆ ಒಪ್ಪಿದ ದ್ವಿಚಕ್ರ…

Read More

ಗುರು ನಾನಕ ಜಯಂತಿ,ಪೂರ್ಣಿಮಾ ಸೂರ್ಯೋದಯ: 06.24 AM, ಸೂರ್ಯಾಸ್ತ : 05.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಕಾರ್ತೀಕ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಹುಣ್ಣಿಮೆ  02:45 PM ತನಕ ನಂತರ ಪಾಡ್ಯ ನಕ್ಷತ್ರ: ಇವತ್ತು ಕೃತ್ತಿಕ 01:35 PM ತನಕ ನಂತರ ರೋಹಿಣಿ ಯೋಗ: ಇವತ್ತು ಪರಿಘ 01:37 AM ತನಕ ನಂತರ ಶಿವ 11:39 PM ತನಕ ನಂತರ ಸಿದ್ದಿ ಕರಣ: ಇವತ್ತು ವಿಷ್ಟಿ 03:16 AM ತನಕ ನಂತರ ಬವ 02:45 PM ತನಕ ನಂತರ ಬಾಲವ ರಾಹು ಕಾಲ: 07:30 ನಿಂದ 09:00 ವರೆಗೂ ಯಮಗಂಡ: 10:30 ನಿಂದ 12:00 ವರೆಗೂ ಗುಳಿಕ ಕಾಲ:01:30 ನಿಂದ 03:00 ವರೆಗೂ ಅಮೃತಕಾಲ: 11.14 AM to 12.48 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:41 ನಿಂದ ಮ.12:25 ವರೆಗೂ ಮೇಷ ರಾಶಿ: ಕಂಕಣ ಬಲದ ಸಿಹಿ ಸುದ್ದಿ ಹಂಚಿಕೊಳ್ಳುವಿರಿ,…

Read More

ಹುಬ್ಬಳ್ಳಿ:- ಸಿಬಿಐ, ಇಡಿ, ಐಟಿ ಸಂಸ್ಥೆಗಳನ್ನ ರಾಜಕೀಯ ವಿರೋಧಿಗಳನ್ನ ಹಣಿಯಲಿಕ್ಕೆ ಉಪಯೋಗಿಸಲಾಗುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಮೇಲಿನ ಅಕ್ರಮ ಪ್ರಕರಣ ವಾಪಾಸ್ ಪಡೆಯಲು ಸಚಿವ ಸಂಪುಟದ ಒಪ್ಪಿದ್ದು ಸ್ವಾಗತಾರ್ಹ. ಇಂದು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಡಿಕೆ ಶಿವಕುಮಾರ್ ಮೇಲಿ‌ನ ಪ್ರಕರಣವನ್ನ ಸಿಬಿಐಗೆ ಕೊಟ್ಟವರು ಯಾರು?, ಅಂದು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಇದ್ದರು. ಅವರೇ ಈ ಪ್ರಕರಣ ಸಿಬಿಐಗೆ ಕೊಟ್ಟವರು. ಇಂದು ಕಾಂಗ್ರೆಸ್ ಸರ್ಕಾರದ ಬಂದಿದೆ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ ಸಹಜವಾಗಿಯೇ ಡಿಸಿಎಂ ಶಿವಕುಮಾರ್ ಮೇಲಿನ ಪ್ರಕರಣ ವಾಪಾಸ್ ಪಡೆದರೆ ಏನು ತಪ್ಪು?. ಯಾವುದೇ ತಪ್ಪಿಲ್ಲ ಎಂದು ಅವರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಪಾರ್ಲಿಮೆಂಟ್ ನಲ್ಲಿ ಆದಾನಿ ವಿರುದ್ಧ ಮಾತಾಡಿದರೆ ನೋಟಿಸ್ ಕೊಡುತ್ತಾರೆ. ಯಾವ ಆಧಾರದ ಮೇಲೆ ಕೊಡುತ್ತಾರೆ ಯಾವುದೇ ಪ್ರಕರಣ, ದೂರು…

Read More

ತುಮಕೂರು : -ಒಂದೇ ಮನೆಯ ಐವರು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರಿನ ಸದಾಶಿವನಗರದಲ್ಲಿ ಘಟನೆ ಜರುಗಿದೆ. ಪತಿ ಪತ್ನಿ ಮೂವರು ಮಕ್ಕಳು ಆತ್ಮಹತ್ಯೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ..ಸ್ಥಳಕ್ಕೆ ಎಸ್ ಪಿ ಅಶೋಕ್ ಭೇಟಿ ಪರಿಶೀಲನೆ ಮಾಡಿದ್ದಾರೆ. ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ಕೋಲಾರ:- ಸರ್ಕಾರ ಡಿಕೆಶಿ ಕೈಗೊಂಬೆಯಾಗಿದೆ ಎಂದು ಮಾಜಿ ಸಚಿವ ಶ್ರೀ ರಾಮುಲು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಇತಿಹಾಸದಲ್ಲಿ ಯಾವುದೇ ಸರ್ಕಾರಗಳು ಈ ತರಹದ ನಿರ್ಧಾರ ಮಾಡಿಲ್ಲ. ಕಾಂಗ್ರೆಸ್‌ನ ಈ ನಿರ್ಧಾರದಿಂದ ಕಾನೂನು ಮತ್ತು ರಾಜಕಾರಣಕ್ಕೆ ಸಂಘರ್ಷ ಆಗುವಂತೆ ಮಾಡಿದೆ. ತಪ್ಪು ಮಾಡಿಲ್ಲ ಅನ್ನೋ ವಿಶ್ವಾಸ ಡಿಕೆಶಿ ಗೆ ಇರಬೇಕಾಗಿತ್ತು. ಆದರೆ ಅವರು ತಪ್ಪು ಮಾಡಿದ್ದರಿಂದಲೇ ಇಂಥ ನಿರ್ಧಾರ ಮಾಡಿದ್ದಾರೆ. ಸರ್ಕಾರವನ್ನು ಕೈಗೊಂಬೆಯಂತೆ ಡಿಕೆಶಿ ಆಡಿಸುತ್ತಿದ್ದಾರೆ. ಈ ನಿರ್ಧಾರದಿಂದ ಸರ್ಕಾರಕ್ಕೆ ಘೋರ ಅಪಚಾರವೆಸಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇನ್ನು ಬೆಳಗಾವಿಯಲ್ಲಿ ಮೈತ್ರಿ ಸರ್ಕಾರ ಪತನ ಎಂದು ಆರ್.ಅಶೋಕ್ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರಕಾರಕ್ಕೆ ಜನರು ಬಹುಮತ ನೀಡಿದ್ದಾರೆ. ಆದರೆ ನೆನಪಿಡಿ ಮುಂದಿನ ದಿನಗಳಲ್ಲಿ ಶಾಸಕರನ್ನು ಜನರೇ ಬೆನ್ನಟ್ಟಿ ಕಲ್ಲಲ್ಲಿ ಓಡಿತ್ತಾರೆ. 5 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರ ನಡೆಸಬೇಕು. ಆಗ ಮಾತ್ರ ಸರ್ಕಾರದ ಬಂಡವಾಳ ಜನರಿಗೆ ತಿಳಿಯಲಿದೆ. ಶೇ.25 ರಷ್ಟು ಜನರಿಗೆ ಆಶ್ವಾಸನೆಗಳು ತಲುಪಿಲ್ಲ. ಅನುದಾನ ಇಲ್ಲದೆ ಶಾಸಕರು…

Read More