ಹುಬ್ಬಳ್ಳಿ:- ಸಿಬಿಐ, ಇಡಿ, ಐಟಿ ಸಂಸ್ಥೆಗಳನ್ನ ರಾಜಕೀಯ ವಿರೋಧಿಗಳನ್ನ ಹಣಿಯಲಿಕ್ಕೆ ಉಪಯೋಗಿಸಲಾಗುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಮೇಲಿನ ಅಕ್ರಮ ಪ್ರಕರಣ ವಾಪಾಸ್ ಪಡೆಯಲು ಸಚಿವ ಸಂಪುಟದ ಒಪ್ಪಿದ್ದು ಸ್ವಾಗತಾರ್ಹ. ಇಂದು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ.
ಡಿಕೆ ಶಿವಕುಮಾರ್ ಮೇಲಿನ ಪ್ರಕರಣವನ್ನ ಸಿಬಿಐಗೆ ಕೊಟ್ಟವರು ಯಾರು?, ಅಂದು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಇದ್ದರು. ಅವರೇ ಈ ಪ್ರಕರಣ ಸಿಬಿಐಗೆ ಕೊಟ್ಟವರು.
ಇಂದು ಕಾಂಗ್ರೆಸ್ ಸರ್ಕಾರದ ಬಂದಿದೆ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ ಸಹಜವಾಗಿಯೇ ಡಿಸಿಎಂ ಶಿವಕುಮಾರ್ ಮೇಲಿನ ಪ್ರಕರಣ ವಾಪಾಸ್ ಪಡೆದರೆ ಏನು ತಪ್ಪು?. ಯಾವುದೇ ತಪ್ಪಿಲ್ಲ ಎಂದು ಅವರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಪಾರ್ಲಿಮೆಂಟ್ ನಲ್ಲಿ ಆದಾನಿ ವಿರುದ್ಧ ಮಾತಾಡಿದರೆ ನೋಟಿಸ್ ಕೊಡುತ್ತಾರೆ. ಯಾವ ಆಧಾರದ ಮೇಲೆ ಕೊಡುತ್ತಾರೆ ಯಾವುದೇ ಪ್ರಕರಣ, ದೂರು ದಾಖಲು ಮಾಡದೇ ನೋಟಿಸ್ ಕೊಡುವುದು ತಪ್ಪು, ಈ ನಿಟ್ಟಿನಲ್ಲಿ ನನಗೆ ಕಾನೂನು ಬಗ್ಗೆ ಮಾಹಿತಿ ಇದೆ. ಮಾತಾನಾಡುವ ವ್ಯಕ್ತಿ ಮೇಲೆ ದೂರು ದಾಖಲು ಮಾಡಿದ ನಂತರ ನೋಟಿಸ್ ಕೊಟ್ಟು ವಿಚಾರಣೆ ಮಾಡಬೇಕು. ಇದು ಸರ್ವಾಧಿಕಾರಿ ಧೋರಣೆ ಎಂದು ಕೇಂದ್ರ ಸರ್ಕಾರದ ವಿರುದ್ಧ ದೂರಿದರು.
ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿದಾಗ ಟೀಕೆ ಮಾಡಿದರು. ಈಗ ಯಾವುದೇ ತುರ್ತು ಪರಿಸ್ಥಿತಿ ಇಲ್ಲ. ಈ ರೀತಿಯಾಗಿ ಮಾಡುವುದು ಸರಿಯೇ ಎಂದ ಅವರು ನವದೆಹಲಿ ಡಿಸಿಎಂ ಸಿಸೋಡಿಯೋ ಅವರನ್ನ ವರ್ಷಗಟ್ಟಲೇ ಒಳಗೆ ಹಾಕಿದ್ದಾರೆ. ಯಾವುದೇ ಗಂಭೀರ ಸ್ವರೂಪದ ದೂರು ಇಲ್ಲ ಎಂದು ಆರೋಪಿಸಿದರು.