ಕೋಲಾರ:– ಸರ್ಕಾರ ಡಿಕೆಶಿ ಕೈಗೊಂಬೆಯಾಗಿದೆ ಎಂದು ಮಾಜಿ ಸಚಿವ ಶ್ರೀ ರಾಮುಲು ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಇತಿಹಾಸದಲ್ಲಿ ಯಾವುದೇ ಸರ್ಕಾರಗಳು ಈ ತರಹದ ನಿರ್ಧಾರ ಮಾಡಿಲ್ಲ. ಕಾಂಗ್ರೆಸ್ನ ಈ ನಿರ್ಧಾರದಿಂದ ಕಾನೂನು ಮತ್ತು ರಾಜಕಾರಣಕ್ಕೆ ಸಂಘರ್ಷ ಆಗುವಂತೆ ಮಾಡಿದೆ. ತಪ್ಪು ಮಾಡಿಲ್ಲ ಅನ್ನೋ ವಿಶ್ವಾಸ ಡಿಕೆಶಿ ಗೆ ಇರಬೇಕಾಗಿತ್ತು. ಆದರೆ ಅವರು ತಪ್ಪು ಮಾಡಿದ್ದರಿಂದಲೇ ಇಂಥ ನಿರ್ಧಾರ ಮಾಡಿದ್ದಾರೆ. ಸರ್ಕಾರವನ್ನು ಕೈಗೊಂಬೆಯಂತೆ ಡಿಕೆಶಿ ಆಡಿಸುತ್ತಿದ್ದಾರೆ. ಈ ನಿರ್ಧಾರದಿಂದ ಸರ್ಕಾರಕ್ಕೆ ಘೋರ ಅಪಚಾರವೆಸಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಬೆಳಗಾವಿಯಲ್ಲಿ ಮೈತ್ರಿ ಸರ್ಕಾರ ಪತನ ಎಂದು ಆರ್.ಅಶೋಕ್ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರಕಾರಕ್ಕೆ ಜನರು ಬಹುಮತ ನೀಡಿದ್ದಾರೆ. ಆದರೆ ನೆನಪಿಡಿ ಮುಂದಿನ ದಿನಗಳಲ್ಲಿ ಶಾಸಕರನ್ನು ಜನರೇ ಬೆನ್ನಟ್ಟಿ ಕಲ್ಲಲ್ಲಿ ಓಡಿತ್ತಾರೆ. 5 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರ ನಡೆಸಬೇಕು. ಆಗ ಮಾತ್ರ ಸರ್ಕಾರದ ಬಂಡವಾಳ ಜನರಿಗೆ ತಿಳಿಯಲಿದೆ. ಶೇ.25 ರಷ್ಟು ಜನರಿಗೆ ಆಶ್ವಾಸನೆಗಳು ತಲುಪಿಲ್ಲ. ಅನುದಾನ ಇಲ್ಲದೆ ಶಾಸಕರು ಕ್ಷೇತ್ರದಲ್ಲಿ ಓಡಾಡಲು ಆಗ್ತಿಲ್ಲ ಎಂದರು.