ಬೆಂಗಳೂರು: ನಿಗಮ-ಮಂಡಳಿ ಪಟ್ಟಿ ಫೈನಲ್ ಮಾಡುವ ಸಂಬಂಧ ಮಂಗಳವಾರ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Surjewala) ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. https://ainlivenews.com/what-did-dk-suresh-say-about-the-governments-move-to-withdraw-the-cbi-case/ ,ಮಧ್ಯಾಹ್ನ 2 ಗಂಟೆಗೆ ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಜೊತೆ ನಿಗಮ-ಮಂಡಳಿ ಕುರಿತು ಸಭೆ ನಡೆಸಲಿದ್ದಾರೆ. ಬಹುತೇಕ ನಾಳೆಯೇ ನಿಗಮ-ಮಂಡಳಿ ಪಟ್ಟಿ ಫೈನಲ್ ಆಗುವ ಸಾಧ್ಯತೆ ಇದೆ. ನಾಳೆ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದು, ಶಾಸಕರಿಗೆ ಮೊದಲ ಪಟ್ಟಿಯಲ್ಲಿ ಅವಕಾಶ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶಾಸಕರ ಜೊತೆ ಕಾರ್ಯಕರ್ತರಿಗೂ ನೀಡುವ ಬಗ್ಗೆ ಚರ್ಚೆ ಆಗಲಿದೆ.ಈಗಾಗಲೇ ಮೊದಲ ಹಂತದ ಸಭೆಯನ್ನು ಸಿಎಂ, ಡಿಸಿಎಂ, ಸುರ್ಜೇವಾಲಾ ನಡೆಸಿದ್ದಾರೆ.
Author: AIN Author
ಬೆಂಗಳೂರು: ಅದೊಂದು ಗ್ಯಾಂಗ್ ಸಿಟಿಯಲ್ಲಿ ಫುಲ್ ಆ್ಯಕ್ಟೀವ್ ಆಗಿತ್ತು ಖಾಕಿ ಭಯವೇ ಇಲ್ಲದ ಹಾಗೆ ಸಿಕ್ಕ ಸಿಕ್ಕವರಿಗೆ ಲಾಂಗ್ ತೋರಿಸಿ ಹಣ ವಸೂಲಿ ಮಾಡ್ತಿದ್ರು. ನಟೋರಿಯಸ್ ರೌಡಿಶೀಟರ್ ನ ಆರ್ಭಟ ಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ರು, ಕೊನೆಗೆ ಹಟ್ಟಹಾಸ ಮೆರೆಯುತ್ತಿದ್ದ ಕಿರಾತಕರನ್ನ ಖಾಕಿ ಪಡೆ ಹೆಡೆಮುರಿ ಕಟ್ಟಿದೆ… .ಈ ಫೋಟೊ ನೋಡಿ ಕ್ರೈಂ ಮಾಡೋಕೆ ಅಂತಾನೆ ಹುಟ್ಟಿದವರ ಹಾಗೆಇದ್ದಾರೆ. ನೆಟ್ಟಗೆ ದುಡಿದು ಬದುಕು ನಡೆಸಬೇಕಾದವರು ಲಾಂಗು ಮಚ್ಚು ಹಿಡಿದು ಅಮಾಯಕರನ್ನ ಬೆದರಿಸಿ ಸುಲಿಗೆ ಮಾಡ್ತಿದ್ರು. ಕುಡಿಯೋಕೆ ಎಣ್ಣೆ,ಗಾಂಜ ನಶೆ ಏರಿಸಿಕೊಳ್ಳೋಕೆ ಹಣ ಇಲ್ಲ ಅಂದ್ರೆ ಸಾಕು..ಬೈಕ್ ಹಾಕೊಂಡು ಫೀಲ್ಡಗೆ ಇಳಿತ್ತಿದ್ರು. ಅಮಾಯಕ ಸಾರ್ವಜನಿಕರನ್ನೇ ಟಾರ್ಗೇಟ್ ಮಾಡ್ತಿದ್ದ ಈ ಕಿರಾತಕರು ಬೆದರಿಸಿ ಹಣ ವಸೂಲಿ ಮಾಡುತ್ತಿದ್ರು.ಕೊನೆಗೆ ಅಂತ ರೌಡಿ ಆಸಾಮಿ ಮತ್ತವನ ಗ್ಯಾಂಗನ್ನು ಆರ್ ಟಿ.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲದ ಇಮ್ರಾನ್ ಅಲಿಯಾಸ್ ಬೊಡ್ಕೆ, ಸೈಯದ್ ಮಾಜ್, ಇರ್ಫಾತ್ ಅಹಮದ್, ಮೋಹಿತ್ @ಮೋಹನ್ ಬಂಧಿತ ಆರೋಪಿಗಳು. ನವೆಂಬರ್ 21ರಂದು ರಾತ್ರಿ ಆರ್.ಟಿ.ನಗರ ಪೊಲೀಸ್…
ಬೆಂಗಳೂರು: ಕೇಂದ್ರ ಸರ್ಕಾರ ದೇಶದ ಅನ್ನದಾತರ ಕೆಂಗಣ್ಣಿಗೆ ಗುರಿಯಾಗಿತ್ತು.ಯಾವಾಗ ದೇಶದ ರೈತರ ವಿರೋಧಿ ಮಸೂದೆಯನ್ನ ಜಾರಿಗೆ ತರಲು ಮುಂದಾಯ್ತೋ ಅನ್ನದಾತರೆಲ್ಲರೂ ದೇಶವ್ಯಾಪ್ತಿ ಮುಷ್ಕರ ನಡೆಸಿದ್ರು, ದೆಹಲಿಯಲ್ಲಂತೂ ಇಂದೆಂದು ಕಂಡು ಕೇಳರಿಯದಂತ ಮುಷ್ಕರ ನಡೆದಿತ್ತು. ಅದೆಷ್ಟೋ ರೈತರ ಬಲಿದಾನಗಳಾದ್ವು. ಇದೆಲ್ಲ ಆದ ಬಳಿಕ ಮನಗಂಡ ಕೇಂದ್ರ ಸರ್ಕಾರ ಜಾರಿಗೆ ತರುತಿದ್ದ ಮಸೂದೆಯನ್ನ ವಾಪಸ್ ಪಡೆದುಕೊಳ್ತು. ಇದರ ಬೆನ್ನೆಲೇ ಇದೀಗ ರಾಜ್ಯದಲ್ಲಿ ರೈತರ ಕಹಳೆ ಮೊಳಗಿದೆ. ಮುಂದಿನ ವಾರ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ರಾಜ್ಯದ ಅನ್ನದಾತರ ಕಿಚ್ಚು ಎದ್ದಿದೆ.ಹಾಗಾದ್ರೆ ರೈತರ ಈ ಹೋರಾಟ ಮತ್ಯಾಕೆ ಬನ್ನಿ ಹೇಳ್ತೀವಿ ಬೇಕು ಬೇಕು ನ್ಯಾಯ ಬೇಕು.. ವಾಪಸ್ ಆಗಲಿ ವಾಪಸ್ ಆಗಲಿ… ಕೃಷಿ ಕಾಯಿದೆಗಳು ವಾಪಸ್ ಆಗಲಿ.. ಏನಿದು ರಾಜ್ಯ ಏನಿದು ರಾಜ್ಯ.. ಗುಂಡ ರಾಜ್ಯ.. ಗುಂಡ ರಾಜ್ಯ.. ಸರ್ಕಾರದ ಗುಲಾಮ ಪೊಲೀಸರಿಗೆ ಧಿಕ್ಕಾರ.. ರೈತ ದ್ರೋಹಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಇವೆಲ್ಲ ದೃಶ್ಯಗಳು ಮತ್ತು ಆಕ್ರೋಶ ಕಂಡು ಬಂದಿದ್ದು ಇಂದಿನ ರೈತರ ಧರಣಿ…
ಬೀದರ್: ಮುಗುಳಖೋಡ ಸಂಸ್ಥಾನ ಶ್ರೇಷ್ಠ ಸಂಸ್ಥಾನವಾಗಿದೆ. ದೇಶದಲ್ಲಿ ದಾಸೋಹ ಸಂಸ್ಕೃತಿ ಯಾವುದಾದರೂ ಇದ್ದರೆ ಅದು ಮುಗಳಖೋಡ ಸಂಸ್ಕೃತಿಯಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಜೆಡಿಎಸ್ ಕೋರ್ ಕಮಿಟಿಯ ಸದಸ್ಯರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬುಧೇರಾ ಗ್ರಾಮದ ಸುಕ್ಷೇತ್ರ ಶ್ರೀ ಬೀರಲಿಂಗೇಶ್ವರ ಮಂದಿರದ ಆವರಣದಲ್ಲಿನಡೆದ ಶ್ರೀ ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಗಳಖೋಡ ಮಠದಲ್ಲಿ ಇಡೀ ದೇಶವೇ ನೋಡುವ ಕಾರ್ಯಕ್ರಮಗಳು ನಡೆಯುತ್ತವೆ ಎಂದರು. ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮಕ್ಕೆ ಮುಗಳಖೋಡ ಜೀಡಗಾ ಮಠದ ಶ್ರೀ ಶ್ರೀ ಶ್ರೀ ಷಡಕ್ಷರಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಬಂದಿರುವುದು ನಮ್ಮ ಪುಣ್ಯವಾಗಿದೆ. ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆಯ ತಯಾರಿ ಸುಮಾರು ಎರಡು ತಿಂಗಳುಗಳಿಂದ ನಡೆದಿತ್ತು. ಬೀರಲಿಂಗೇಶ್ವರ ದೇವರಿಗೆ ಮತ್ತು ಮುಗುಳಖೋಡ ಶ್ರೀಗಳಿಗೆ ಬಹಳಷ್ಟು ಸಂಬಂಧವಿದೆ. https://ainlivenews.com/golden-opportunity-to-work-in-banking-sector-there-are-8283-vacancies-in-sbi/ ಮುರುಗರಾಜೇಂದ್ರ ಶ್ರೀಗಳು ಕೂಡ ಪರಂಪರೆಯನ್ನು ಮುಂದುವರೆಸಿಕೊಂಡು ಸಾಗುತ್ತಿದ್ದಾರೆ. ಬುದೇರಾದ ಬೀರಲಿಂಗೇಶ್ವರ…
ಬೆಂಗಳೂರು : ಹಬ್ಬ-ಹರಿದಿನಗಳು ಮುಗಿಯುತ್ತಿದ್ದಂತೆ ಇದೀಗ ಮದುವೆ ಸೀಸನ್ ಜೋರಾಗಿದೆ. ಇದರಿಂದ ಸಿಲಿಕಾನ್ ಸಿಟಿ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ವಹಿವಾಟು ಶುರುವಾಗಿದೆ. ಇತ್ತ ಕಲ್ಯಾಣ ಮಂಟಪಗಳು ಸೋಲ್ಡ್ ಔಟ್ ಆಗಿದ್ದರೆ, ಮದುವೆ ಡೆಕೋರೆಟರ್‌ಗಳು ಫುಲ್ ಬ್ಯುಸಿ ಆಗಿದ್ದಾರೆ. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂದು ಹಿರಿಯರು ಅನುಭವದ ಮಾತನ್ನು ಹೇಳಿರುವುದು ಸುಮ್ಮನೇ ಅಲ್ಲ. ಮದುವೆ ಅನ್ನೋದು ಇಬ್ಬರ ಬಾಳಿನಲ್ಲಿ ಒಂದು ಪ್ರಮುಖ ಘಟ್ಟವಾದರೆ ಅದರಿಂದ ಅದೆಷ್ಟೋ ಜನರ ಹೊಟ್ಟೆ, ಬಟ್ಟೆಗೆ, ಜೀವನ ನಡೆಯುತ್ತದೆ. https://ainlivenews.com/what-did-mp-sumalatha-say-about-the-case-of-discovery-and-murder-of-fetus-in-mandya/ ಕಳೆದ 4 ತಿಂಗಳಿಂದ ಮದುವೆ ಸೀಜನ್ ಶುರುವಾಗಿದ್ದು, ಫ್ಲವರ್ ಡಕೋರೆಟರ್, ವಾದ್ಯ ತಂತುಗಾರರು, ಅಡುಗೆ ಭಟ್ಟರು, ಪುರೋಹಿತರು, ವೆಡ್ಡಿಂಗ್ ಫೋಟೋ ಶೂಟ್ ಮಾಡುವ ಛಾಯಗ್ರಾಹಕರು ಸೇರಿದಂತೆ ಅದೆಷ್ಟೋ ಜನರು ಈ ಸೀಜನಲ್ಲಿ ಹೆಚ್ಚು ಆದಾಯ ಗಳಿಸಿದ್ದು, ಪುಲ್‌ಖುಷ್ ಆಗಿದ್ದಾರೆ. ನವೆಂಬರ್ 23ರಿಂದ ಉತ್ಥಾನ ಏಕಾದಶಿಯಂದು ಮದುವೆ ಸೀಜನ್ ಪ್ರಾರಂಭವಾಗಿದ್ದು, ನವೆಂಬರ್ ಡಿಸೆಂಬರ್‌ನಲ್ಲಿ ಸುಮಾರು ಏಳಕ್ಕಿಂತ ಹೆಚ್ಚು ಶುಭ ಲಗ್ನಗಳಂದು ಎಲ್ಲಾ ಕಲ್ಯಾಣ ಮಂಟಪಗಳು…
ಬೆಂಗಳೂರು : ಮಂಡ್ಯದಲ್ಲಿ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಅವರು, ಮಂಡ್ಯದ ಹುಳ್ಳೇನಹಳ್ಳಿ ಸಮೀಪದ ಆಲೆಮನೆಯಲ್ಲಿ ನಡೆದ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಜಾಲದ ಪ್ರಕರಣ ತೀವ್ರ ಆಘಾತ ಮೂಡಿಸಿದೆ ಎಂದು ಬೇಸರಿಸಿದ್ದಾರೆ. https://ainlivenews.com/bmtc-has-taken-a-new-step-for-the-safety-of-women/ ಸಮಾಜದಲ್ಲಿ ಲಿಂಗ ಅನುಪಾತ ಕುಸಿಯುತ್ತಿದ್ದು, ಮಹಿಳೆಯರ ಸಂಖ್ಯೆ ಗಣನೀಯ ಇಳಿಕೆ ಕಾಣುತ್ತಿದೆ. ಪರಿಣಾಮ ರೈತರೂ ಸೇರಿದಂತೆ ಶ್ರಮಿಕ ವರ್ಗಕ್ಕೆ ಮದುವೆಯಾಗಲು ಹೆಣ್ಣಿನ ಕೊರತೆಯಂತಹ ಗಂಭೀರ ಸಮಸ್ಯೆಯೂ ತಲೆದೂರಿದೆ. ದಿಶಾ ಸಭೆಯಲ್ಲಿ ಈ ಕುರಿತಂತೆ ಚರ್ಚೆ ಮಾಡಿದ್ದರೂ, ಇಂಥದ್ದೊಂದು ಘಟನೆ ನಡೆದಿರುವುದು ಅತ್ಯಂತ ನೋವಿನ ಸಂಗತಿ ಎಂದು ಅಸಮಾಧಾನ ಹೊರಹಾಕಿದ್ದಾರೆ. ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಯಂತಹ ಪ್ರಕರಣಗಳ ಗಂಭೀರತೆಯ ಕುರಿತಂತೆ ಅರಿವು ಮೂಡಿಸಬೇಕಾದವರೆ, ಹೀನ ಕೃತ್ಯಯಲ್ಲಿ ಭಾಗಿಯಾಗಿದ್ದು ಮತ್ತಷ್ಟು ಆತಂಕ ತಂದಿದೆ. ಈ ಪ್ರಕರಣದ ಹಿಂದಿರುವ ಪ್ರತಿಯೊಬ್ಬರಿಗೂ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸುವೆ ಎಂದು ಸುಮಲತಾ ಆಗ್ರಹಿಸದ್ದಾರೆ.
ಬೆಂಗಳೂರು: ಡಿಕೆಶಿವಕುಮಾರ್ (DK Shivakumar) ವಿರುದ್ಧ ಬಿಜೆಪಿ ಸರ್ಕಾರ ರಾಜಕೀಯವಾಗಿ ತೆಗೆದುಕೊಂಡಿದ್ದ ನಿರ್ಣಯಕ್ಕೆ ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿಯೇ ಉತ್ತರ ಕೊಟ್ಟಿದೆ ಅಂತ ಸಂಸದ ಡಿಕೆ ಸುರೇಶ್ (DK Suresh) ಸಹೋದರನ ಸಿಬಿಐ ಕೇಸ್ ವಾಪಸ್ ತೆಗೆದುಕೊಂಡ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. https://ainlivenews.com/s-there-a-transfer-racket-going-on-in-the-state-explosive-audio-of-the-leader-of-kai-goes-viral/ ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು (BJP) ಇಡೀ ದೇಶದ ಸಂವಿಧಾನವನ್ನ ಬಿಗಿ ಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ. ಕಳೆದ 9 ವರ್ಷದಿಂದ ಸಂವಿಧಾನ ವಿರೋಧಿ ಕೆಲಸ ಮಾಡ್ತಿದ್ದಾರೆ. ಸಾಂವಿಧಾನ ಹುದ್ದೆಯನ್ನ ದುರ್ಬಳಕೆ ಮಾಡ್ತಿದ್ದಾರೆ. ಕೇಸ್ ವಾಪಸ್ ಪಡೆದಿರೋದು ರಾಜ್ಯ ಸರ್ಕಾರದ (Government Of Karnataka) ನಿರ್ಣಯ. ಇಡೀ ಕ್ಯಾಬಿನೆಟ್ ತೀರ್ಮಾನ. ಹಿಂದೆ ಡಿಕೆ ಶಿವಕುಮಾರ್ ಅವರನ್ನ ಸಿಲುಕಿಸಬೇಕು ಅಂತ ಅವರ ಹೈಕಮಾಂಡ್ ಮಾತು ಕೇಳಿ ಕೇಸ್ ಸಿಬಿಐಗೆ ಕೊಟ್ರು. ಡಿಕೆಶಿವಕುಮಾರ್ ಅವರನ್ನ ರಾಜಕೀಯ ದಾಳ ಮಾಡಿಕೊಳ್ಳಲು ಬಿಜೆಪಿ ಅವರು ಆತುರವಾಗಿ ತೀರ್ಮಾನ ಮಾಡಿದ್ದರು. ಬಿಜೆಪಿ ಮಾಡಿದ ಆತುರದ ತೀರ್ಮಾನವನ್ನು ಕ್ಯಾಬಿನೆಟ್ ಹಿಂಪಡೆದಿದೆ ಅಂತ ಸಮರ್ಥನೆ ಮಾಡಿಕೊಂಡರು. ಮೊದಲೇ ಇಡಿ, ಐಟಿ…
ನವದೆಹಲಿ: “ನನ್ನ ವಿರುದ್ಧದ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ನಂತರ ಅನೇಕರು ಮಾತನಾಡುತ್ತಿದ್ದಾರೆ. ಯಾರ್ಯಾರ ಮನಸ್ಸು ಮತ್ತು ನಾಲಿಗೆ ಮೇಲೆ ಏನೇನಿದೆ ಎಂಬುದು ಈಗ ತಿಳಿಯುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯಿಸಿದರು. ಸಿಬಿಐ ತನಿಖೆಗೆ ನೀಡಿದ್ದ ಆದೇಶ ಹಿಂಪಡೆದ ಸರ್ಕಾರದ ನಿರ್ಧಾರದ ಬಗ್ಗೆ ವಿರೋಧ ಪಕ್ಷಗಳ ನಾಯಕರ ಹೇಳಿಕೆ ಕುರಿತು ಕೇಳಿದಾಗ ಅವರು ಈ ರೀತಿ ಉತ್ತರಿಸಿದರು. “ತನಿಖೆಗೆ ಅನುಮತಿ ವಾಪಸ್ ಪಡೆದಿರುವ ಬೆಳವಣಿಗೆಯಿಂದ ಎಲ್ಲರ ಮನಸ್ಥಿತಿಯೂ ಅರ್ಥವಾಗುತ್ತಿದೆ. ಯಾರ್ಯಾರು ಗೆಳೆಯರು, ಅವರ ಭಾವನೆ ಏನಿದೆ ಎಂಬುದು ಈಗ ತಿಳಿಯುತ್ತಿದೆ. ಸಿಬಿಐ ತನಿಖೆಗೆ ಅನುಮತಿ ಹಿಂಪಡೆದಿರುವ ಬಗ್ಗೆ ಈಗ ಮಾತನಾಡಲು ಹೋಗುವುದಿಲ್ಲ. ಮುಂದೆ ಅದರ ಬಗ್ಗೆ ಖಂಡಿತವಾಗಿಯೂ ಮಾತನಾಡುತ್ತೇನೆ. ಎಲ್ಲದಕ್ಕೂ ಉತ್ತರ ಕೊಡುತ್ತೇನೆ” ಎಂದರು. ತೆಲಂಗಾಣದಲ್ಲಿ ಕಾಂಗ್ರೆಸ್ ಪರ ಅಲೆ “ಕರ್ನಾಟಕ ಮಾದರಿಯಂತೆ ತೆಲಂಗಾಣದಲ್ಲಿ 6 ಗ್ಯಾರಂಟಿಗಳನ್ನು ನೀಡಲಾಗಿದೆ. ದಲಿತ ಸಿಎಂ ಸೇರಿದಂತೆ ಕೆಸಿಆರ್…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ಜನಸ್ಪಂದನ ಹೆಸರಿನಲ್ಲಿ ಜನತಾದರ್ಶನ (Janatadarshan) ನಡೆಸುತ್ತಿದ್ದು, ಮೊದಲಿಗೆ ವಿಶೇಷ ಚೇತನರ ಮತ್ತು ಹಿರಿಯ ನಾಗರಿಕರ ಅಹವಾಲನ್ನು (Report) ಸ್ವೀಕರಿಸಿದ್ದಾರೆ. https://ainlivenews.com/good-news-for-those-going-to-sabarimala-ksrtc-bus-system-from-the-state-government/ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಪುಟ್ಟಸ್ವಾಮಿ ಅವರು ಹೃದ್ರೋಗ ಚಿಕಿತ್ಸೆಗಾಗಿ ನೆರವು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಟ್ಟಸ್ವಾಮಿ ಅವರಿಗೆ ನೆರವು ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಸೂಚಿಸಿದರು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾದರ್ಶನವನ್ನು ಆಯೋಜಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ರೈತರು, ಮಹಿಳೆಯರು ಜನತಾ ದರ್ಶನಕ್ಕೆ ಆಗಮಿಸಿದ್ದು, ಸಿಎಂ ಜನತಾದರ್ಶನಕ್ಕೆ ಬಿಗಿ ಪೊಲೀಸ್ ಕಾವಲು ನೇಮಿಸಲಾಗಿದೆ. ಅಹವಾಲು ಸ್ವೀಕಾರ ಮತ್ತು ಪರಿಶೀಲನೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಇತರೇ ಸಹಾಯಕ ಸಿಬ್ಬಂದಿ ಸೇರಿ ಒಟ್ಟು 1,000 ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯದಲ್ಲಿ ಹಾಜರಿದ್ದಾರೆ. ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ…
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಹೋಬಳಿ ವ್ಯಾಪ್ತಿಯ ಚೋಳಶೆಟ್ಟಿಹಳ್ಳಿ ಗ್ರಾಮದ ವಾಸಿಯಾದ ರಾಮಕೃಷ್ಣಪ್ಪ.ಸಿ.ವಿ. (೪೬) ಎಂಬುವವರನ್ನು ವೈಯಕ್ತಿಕ ದ್ವೇಷದ ಹಿನ್ನೆಲೆ ಸಂಬಂಧಿಕರಿಂದ ಕೊಲೆಯಾದ ಘಟನೇ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗೌರಿಬಿದನೂರು ತಾಲ್ಲೂಕಿನ ಜಿ.ಕೊತ್ತೂರು ಗ್ರಾಮ ಪಂಚಾಯಿತಿ ಉಪಾದ್ಯಕ್ಷೆಯಾದ ಗಂಗರತ್ನಮ್ಮ ರವರ ಪತಿ ಮೃತ ದರ್ಯ ದೈವಿಯಾಗಿದ್ದು, ಈತ ಎಂದಿನಂತೆ ಚೋಳಶೆಟ್ಟಿಹಳ್ಳಿ ಗ್ರಾಮದ ಹಾಲು ಡೈರಿಗೆ ಬೆಳಿಗ್ಗೆ ಹಾಲು ಹಾಕಲು ಹೋಗಿದ್ದು, ಈ ಸಮಯದಲ್ಲಿ ಅಣ್ಣನ ಮಗ ನಾಗರಾಜು(ಅಲ್ಲೂರು) ಮಚ್ಚಿನಿಂದ ಏಕಾ ಏಕಿ ದಾಳಿ ಮಾಡಿದ್ದಾನೆ. ತೆಲೆಗೆ ತೀವ್ರವಾಗಿ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆರೋಪಿ ಪರಾರಿಯಾಗಿದ್ದಾನೆ.. https://ainlivenews.com/golden-opportunity-to-work-in-banking-sector-there-are-8283-vacancies-in-sbi/ ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ನಾಗೇಶ್, ಗೌರೀಬಿದನೂರು ಸರ್ಕಲ್ ಇನ್ಸ್ ಪೆಕ್ಟರ್ ಸತ್ಯನಾರಾಯಣ, ಗೌರಿಬಿದನೂರು ಗ್ರಾಮಾಂತರ ಪೊಲೀಸರು ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ