ಬೀದರ್: ಮುಗುಳಖೋಡ ಸಂಸ್ಥಾನ ಶ್ರೇಷ್ಠ ಸಂಸ್ಥಾನವಾಗಿದೆ. ದೇಶದಲ್ಲಿ ದಾಸೋಹ ಸಂಸ್ಕೃತಿ ಯಾವುದಾದರೂ ಇದ್ದರೆ ಅದು ಮುಗಳಖೋಡ ಸಂಸ್ಕೃತಿಯಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಜೆಡಿಎಸ್ ಕೋರ್ ಕಮಿಟಿಯ ಸದಸ್ಯರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬುಧೇರಾ ಗ್ರಾಮದ ಸುಕ್ಷೇತ್ರ ಶ್ರೀ ಬೀರಲಿಂಗೇಶ್ವರ ಮಂದಿರದ ಆವರಣದಲ್ಲಿನಡೆದ ಶ್ರೀ ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಮುಗಳಖೋಡ ಮಠದಲ್ಲಿ ಇಡೀ ದೇಶವೇ ನೋಡುವ ಕಾರ್ಯಕ್ರಮಗಳು ನಡೆಯುತ್ತವೆ ಎಂದರು. ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮಕ್ಕೆ ಮುಗಳಖೋಡ ಜೀಡಗಾ ಮಠದ ಶ್ರೀ ಶ್ರೀ ಶ್ರೀ ಷಡಕ್ಷರಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಬಂದಿರುವುದು ನಮ್ಮ ಪುಣ್ಯವಾಗಿದೆ. ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆಯ ತಯಾರಿ ಸುಮಾರು ಎರಡು ತಿಂಗಳುಗಳಿಂದ ನಡೆದಿತ್ತು. ಬೀರಲಿಂಗೇಶ್ವರ ದೇವರಿಗೆ ಮತ್ತು ಮುಗುಳಖೋಡ ಶ್ರೀಗಳಿಗೆ ಬಹಳಷ್ಟು ಸಂಬಂಧವಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಸುವರ್ಣವಾಕಾಶ..! SBIನಲ್ಲಿ ಖಾಲಿಯಿದೆ 8283 ಹುದ್ದೆಗಳು
ಮುರುಗರಾಜೇಂದ್ರ ಶ್ರೀಗಳು ಕೂಡ ಪರಂಪರೆಯನ್ನು ಮುಂದುವರೆಸಿಕೊಂಡು ಸಾಗುತ್ತಿದ್ದಾರೆ. ಬುದೇರಾದ ಬೀರಲಿಂಗೇಶ್ವರ ದೇವಸ್ಥಾನ ಇರುವ ಆವರಣದಲ್ಲಿ ಮೂರು ಎಕರೆ ಜಮೀನು ಇದೆ. ಅದನ್ನು ಉಳಿಸಿಕೊಂಡು ಹೋಗುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕಾಗಿದೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬುಧೇರಾ ಗ್ರಾಮದಲ್ಲಿ ಎಲ್ಲಾ ಸಮಾಜದವರು ಸೇರಿ ಭವ್ಯವಾದ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಒಂದೇ ಸಮುದಾಯದವರು ಮಾಡುವುದಕ್ಕಿಂತ ಎಲ್ಲರೂ ಸೇರಿ ಮಾಡಿದಾಗ ಯಶಸ್ವಿ ಜಾಸ್ತಿ ಇರುತ್ತದೆ. ಆಗಾಗಿ ಎಲ್ಲರೂ ಸೇರಿ ಒಳ್ಳೆ ಕಾರ್ಯಕ್ರಮ ಮಾಡಿದ್ದಾರೆ. ಇಂತಹ ಸಣ್ಣ ಗ್ರಾಮಕ್ಕೆ ಜಿಡಗಾ ಶ್ರೀಗಳು ಬಂದಿರುವುದು ಪುಣ್ಯ. ನಾವು ಮೊದಲು ಭಾರತೀಯರಾಗೋಣ. ನಂತರ ಜಾತಿ, ಧರ್ಮಗಳನ್ನು ನೋಡೋಣ.
ದೇಶದ ಒಳಿತಿಗಾಗಿ ನಾವೆಲ್ಲರೂ ಸೇರಿ ಕೆಲಸ ಮಾಡೋಣ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆರವರು ಹೇಳಿದರು. ಕನಕದಾಸರು, ಬೋಮಗೊಂಡೇಶ್ವರರು, ಬೀರಲಿಂಗೇಶ್ವರರು ನಮ್ಮ ಗೊಂಡ ಕುರುಬ ಸಮುದಾಯದ ಆರಾಧ್ಯ ದೈವವಾಗಿದ್ದಾರೆ. ಎಸ್ಟಿ ಸಮುದಾಯಕ್ಕಾಗಿ ಪ್ರತಿಯೊಂದು ಊರಿಗೆ ಒಂದೊಂದು ಭವನ ಕಟ್ಟಿಸಿಕೊಡುವ ಕೆಲಸವನ್ನು ನಾನು ವಿಧಾನ ಪರಿಷತ್ ಸದಸ್ಯನಾಗಿ ಮಾಡಿಕೊಂಡು ಬಂದಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯರಾಗಿರುವ ರಘುನಾಥರಾವ್ ಮಲ್ಕಾಪೂರೆರವರು ಹೇಳಿದರು