ಬೆಂಗಳೂರು: ಅದೊಂದು ಗ್ಯಾಂಗ್ ಸಿಟಿಯಲ್ಲಿ ಫುಲ್ ಆ್ಯಕ್ಟೀವ್ ಆಗಿತ್ತು ಖಾಕಿ ಭಯವೇ ಇಲ್ಲದ ಹಾಗೆ ಸಿಕ್ಕ ಸಿಕ್ಕವರಿಗೆ ಲಾಂಗ್ ತೋರಿಸಿ ಹಣ ವಸೂಲಿ ಮಾಡ್ತಿದ್ರು. ನಟೋರಿಯಸ್ ರೌಡಿಶೀಟರ್ ನ ಆರ್ಭಟ ಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ರು, ಕೊನೆಗೆ ಹಟ್ಟಹಾಸ ಮೆರೆಯುತ್ತಿದ್ದ ಕಿರಾತಕರನ್ನ ಖಾಕಿ ಪಡೆ ಹೆಡೆಮುರಿ ಕಟ್ಟಿದೆ…
.ಈ ಫೋಟೊ ನೋಡಿ ಕ್ರೈಂ ಮಾಡೋಕೆ ಅಂತಾನೆ ಹುಟ್ಟಿದವರ ಹಾಗೆಇದ್ದಾರೆ. ನೆಟ್ಟಗೆ ದುಡಿದು ಬದುಕು ನಡೆಸಬೇಕಾದವರು ಲಾಂಗು ಮಚ್ಚು ಹಿಡಿದು ಅಮಾಯಕರನ್ನ ಬೆದರಿಸಿ ಸುಲಿಗೆ ಮಾಡ್ತಿದ್ರು. ಕುಡಿಯೋಕೆ ಎಣ್ಣೆ,ಗಾಂಜ ನಶೆ ಏರಿಸಿಕೊಳ್ಳೋಕೆ ಹಣ ಇಲ್ಲ ಅಂದ್ರೆ ಸಾಕು..ಬೈಕ್ ಹಾಕೊಂಡು ಫೀಲ್ಡಗೆ ಇಳಿತ್ತಿದ್ರು. ಅಮಾಯಕ ಸಾರ್ವಜನಿಕರನ್ನೇ ಟಾರ್ಗೇಟ್ ಮಾಡ್ತಿದ್ದ ಈ ಕಿರಾತಕರು ಬೆದರಿಸಿ ಹಣ ವಸೂಲಿ ಮಾಡುತ್ತಿದ್ರು.ಕೊನೆಗೆ ಅಂತ ರೌಡಿ ಆಸಾಮಿ ಮತ್ತವನ ಗ್ಯಾಂಗನ್ನು ಆರ್ ಟಿ.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲದ ಇಮ್ರಾನ್ ಅಲಿಯಾಸ್ ಬೊಡ್ಕೆ, ಸೈಯದ್ ಮಾಜ್, ಇರ್ಫಾತ್ ಅಹಮದ್, ಮೋಹಿತ್ @ಮೋಹನ್ ಬಂಧಿತ ಆರೋಪಿಗಳು.
ನವೆಂಬರ್ 21ರಂದು ರಾತ್ರಿ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದಿಣ್ಣೂರು ಮುಖ್ಯರಸ್ತೆಯಲ್ಲಿರುವ ನೇಚರ್ ಬಾರ್ ಅಂಡ್ ರೆಸ್ಟೋರೆಂಟ್ಗೆ ನುಗ್ಗಿದ್ದ ಈ ಕಿರಾತಕರು ಮಾರಕಾಸ್ತ್ರ ತೋರಿಸಿ ಸುಮಾರು 40 ಸಾವಿರ ರೂಪಾಯಿವರೆಗೂ ಸುಲಿಗೆ ಮಾಡಿದ್ದರು.ಬಳಿಕ ಅದೇ ಮಾರ್ಗದಲ್ಲಿ ಬೀಡಾ ಅಂಗಡಿ ಮಾಲೀಕನೊಬ್ಬನನ್ನ ಬೆದರಿಸಿ ಆತನ ಮೇಲೆ ಹಲ್ಲೆ ಮಾಡಿದ್ದರು. ಅಷ್ಟೇ ಅಲ್ಲದೇ ಮೋದಿ ರಸ್ತೆ, ಹುಸೇನಾ ಮಸೀದಿ, ಪಿ.ಎನ್.ಟಿ ಸರ್ಕಲ್ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರು, ಆಟೋಗಳನ್ನ ಜಖಂಗೊಳಿಸಿದ್ದರು.ಆರೋಪಿ ಮತ್ತವನ ಕಡೆಯವರ ಕೃತ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಆರ್.ಟಿ.ನಗರ ಹಾಗೂ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಸದ್ಯ ಆರ್.ಟಿ.ನಗರ ಠಾಣಾ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಬಂಧಿತ ಇಮ್ರಾನ್, ಆರ್.ಟಿ.ನಗರ ಹಾಗೂ ಜೆ.ಸಿ.ನಗರ ಠಾಣಾ ವ್ಯಾಪ್ತಿಯ ರೌಡಿ ಆಸಾಮಿಯಾಗಿದ್ದು ಕಳೆದ ಆಗಸ್ಟ್ನಲ್ಲಿ ಜೆ.ಸಿ.ನಗರ ಪೊಲೀಸರಿಂದ ಬಂಧಿತನಾಗಿದ್ದ.