ಬೆಂಗಳೂರು: ಕೇಂದ್ರ ಸರ್ಕಾರ ದೇಶದ ಅನ್ನದಾತರ ಕೆಂಗಣ್ಣಿಗೆ ಗುರಿಯಾಗಿತ್ತು.ಯಾವಾಗ ದೇಶದ ರೈತರ ವಿರೋಧಿ ಮಸೂದೆಯನ್ನ ಜಾರಿಗೆ ತರಲು ಮುಂದಾಯ್ತೋ ಅನ್ನದಾತರೆಲ್ಲರೂ ದೇಶವ್ಯಾಪ್ತಿ ಮುಷ್ಕರ ನಡೆಸಿದ್ರು, ದೆಹಲಿಯಲ್ಲಂತೂ ಇಂದೆಂದು ಕಂಡು ಕೇಳರಿಯದಂತ ಮುಷ್ಕರ ನಡೆದಿತ್ತು. ಅದೆಷ್ಟೋ ರೈತರ ಬಲಿದಾನಗಳಾದ್ವು. ಇದೆಲ್ಲ ಆದ ಬಳಿಕ ಮನಗಂಡ ಕೇಂದ್ರ ಸರ್ಕಾರ ಜಾರಿಗೆ ತರುತಿದ್ದ ಮಸೂದೆಯನ್ನ ವಾಪಸ್ ಪಡೆದುಕೊಳ್ತು. ಇದರ ಬೆನ್ನೆಲೇ ಇದೀಗ ರಾಜ್ಯದಲ್ಲಿ ರೈತರ ಕಹಳೆ ಮೊಳಗಿದೆ. ಮುಂದಿನ ವಾರ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ರಾಜ್ಯದ ಅನ್ನದಾತರ ಕಿಚ್ಚು ಎದ್ದಿದೆ.ಹಾಗಾದ್ರೆ ರೈತರ ಈ ಹೋರಾಟ ಮತ್ಯಾಕೆ ಬನ್ನಿ ಹೇಳ್ತೀವಿ
ಬೇಕು ಬೇಕು ನ್ಯಾಯ ಬೇಕು.. ವಾಪಸ್ ಆಗಲಿ ವಾಪಸ್ ಆಗಲಿ… ಕೃಷಿ ಕಾಯಿದೆಗಳು ವಾಪಸ್ ಆಗಲಿ.. ಏನಿದು ರಾಜ್ಯ ಏನಿದು ರಾಜ್ಯ.. ಗುಂಡ ರಾಜ್ಯ.. ಗುಂಡ ರಾಜ್ಯ.. ಸರ್ಕಾರದ ಗುಲಾಮ ಪೊಲೀಸರಿಗೆ ಧಿಕ್ಕಾರ.. ರೈತ ದ್ರೋಹಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಇವೆಲ್ಲ ದೃಶ್ಯಗಳು ಮತ್ತು ಆಕ್ರೋಶ ಕಂಡು ಬಂದಿದ್ದು ಇಂದಿನ ರೈತರ ಧರಣಿ ಕಾರ್ಯಕ್ರಮದಲ್ಲಿ
ಹೌದು..ಮುಂದಿನ ವಾರ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದೆ. ಆದ್ರೆ ಅಧಿವೇಶನ ಮುನ್ನವೇ ಸರ್ಕಾರಕ್ಕೆ
ಪ್ರತಿಭಟನೆಯ ಬಿಸಿ ತಟ್ಟುತ್ತಿದೆ. ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಧೋರಣೆಗಳ ವಿರುದ್ದ ಹೋರಾಟಕ್ಕೆ ಧುಮ್ಮಕ್ಕಿದ್ದಾರೆ.2014 ರಿಂದಲ್ಲೂ ಕೇಂದ್ರದಲ್ಲಿ ಅಧಿಕಾರದಲ್ಲಿರೋ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಕ್ರಮಣಕಾರಿಯಾಗಿ ರೂಪಿಸುತ್ತಿರೋ ಕಾರ್ಪೋರೇಟ್ ಬಂಡವಾಳಪರ ನೀತಿಗಳು ದೇಶದ ದುಡಿಯುವ ಜನರನ್ನ ಸಂಕಷ್ಟಕ್ಕೆ ದೂಡಿದೆ. ಸಾಮಾನ್ಯ ಜನತೆಯ ಮೇಲೆ ಇಲ್ಲಸಲ್ಲದ ತೆರಿಗಳನ್ನ ವಿಧಿಸಿ ಹೊರೆ ಮಾಡ್ತಿದೆ. ಇದ್ರ ನಡುವೆಯೂ ಎಂಎಸ್ಪಿ ಕಾಯ್ದೆ ಜಾರಿ ವಿದ್ಯುತ್ ತಿದ್ದುಪಡಿ ವಸೂದೆ ರದ್ದತಿ ಮುಂತಾದ ವಿಷಯಗಳಲ್ಲಿ ರೈತರಿಗೆ ನೀಡಿದ್ದ ಭರವಸೆಗಳನ್ನ ಈಡೇರಿಸುವಲ್ಲಿ ವಿಫಲವಾಗಿದೆ. ಕೇಂದ್ರ ಸರ್ಕಾರ ರೈತ ವಿರೋಧಿ ಮಸೂದೆಗಳನ್ನ ವಾಪಸ್ ಪಡೆದುಕೊಂಡ್ರೂ ರಾಜ್ಯ ಸರ್ಕಾರ ಮಾತ್ರ ಇದುವರೆಗೂ ವಾಪಸ್ ಪಡೆದುಕೊಂಡಿಲ್ಲ ಎಂದು ಆರೋಪಿಸಿ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು…
ಇನ್ನೂ ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಗಳನ್ನು ವಾಪಸಾತಿಗಾಗಿ 550 ರೈತರು ಪ್ರಾಣತ್ಯಾಗ ಮಾಡಿದ್ದಾರೆ. ಆದ್ರೆ ರಾಜ್ಯ ಸರ್ಕಾರ ಮಾತ್ರ ರೈತ ವಿರೋಧಿ ನೀತಿಯ ಮುಂದುವರೆಸಿದೆ. ಕೇಂದ್ರ ಕ್ಯಾನ್ಸಲ್ ಮಾಡಿದ್ರೂ ರಾಜ್ಯ ಸರ್ಕಾರ ಮಾತ್ರ ಮಸೂದೆಗಳನ್ನ ಹಿಂಪಡೆಯುವ ಮನಸ್ಸು ಮಾಡ್ತಿಲ್ಲ. ಹೀಗಾಗಿ ಸರ್ಕಾರದ ಧೋರಣೆ ಖಂಡಿಸಿ ನಾಳೆ ರಾಜಭವನ ಹಾಗೂ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಒಟ್ನಲ್ಲಿ ಕೇಂದ್ರ ಸರ್ಕಾರ ಕೃಷಿ ಮಸೂದೆಗಳನ್ನು ವಾಪಸ್ಸು ಪಡೆದರೂ ರಾಜ್ಯ ಸರ್ಕಾರಗಳು ಕೃಷಿ ಮಸೂದೆ ಮತ್ತು ಎಪಿಎಂಸಿ ಕಾಯ್ದೆಗಳನ್ನು ವಾಪಸ್ ಪಡೆಯುತ್ತಿಲ್ಲ.ಹೀಗಾಗಿ ಇತ್ತ ರೈತರು ಪ್ರತಿಭಟನೆ ದಾರಿ ಹಿಡಿದ್ಡಾರೆ.ಆದ್ರೆ ಇವರ ಹೋರಾಟ ಯಾವ ಸ್ವರೂಪ ಪಡೆಯುತ್ತದೆ ಅನ್ನೋದನ್ನ ಕಾದುನೋಡಬೇಕಿದೆ..