ಗದಗ: ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಹೆಸರಲ್ಲಿ ಆನ್‌ಲೈನ್ ವಂಚನೆ ನಡೆದಿದೆ. ಹೌದು ಗದಗದಲ್ಲಿ ಪೊಲೀಸ್ ಅಧಿಕಾರಿಗಳ ಹೆಸರನ್ನೇ ದುರ್ಬಳಕೆ ಮಾಡಿಕೊಂಡು ಆನ್‌ಲೈನ್ ವಂಚನೆ ಮಾಡಲಾಗಿದೆ. ಅದರಲ್ಲೂ, ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರ ಹೆಸರು ಬಳಸಿ ವ್ಯಕ್ತಿಯೊಬ್ಬರಿಗೆ 55 ಸಾವಿರ ರೂ. ವಂಚನೆ ಮಾಡಲಾಗಿದೆ. ಗದಗ ಜಿಲ್ಲೆಯ ರಮೇಶ್ ಹತ್ತಿಕಾಳ ಅವರಿಗೆ 55 ಸಾವಿರ ರೂ. ವಂಚನೆ ಮಾಡಲಾಗಿದೆ. ರವಿ ಡಿ. ಚನ್ನಣ್ಣನವರ್ ಹಾಗೂ ಸಿಆರ್‌ಪಿಎಫ್ ಯೋಧನ ಹೆಸರು ಹೇಳಿಕೊಂಡು ಇವರಿಗೆ ಆನ್‌ಲೈನ್ ಮೂಲಕ ವಂಚನೆ ಮಾಡಲಾಗಿದೆ. ಫೇಸ್‌ಬುಕ್‌ನಲ್ಲಿ ರವಿ ಡಿ. ಚನ್ನಣ್ಣನವರ್ ಹಾಗೂ ಸಿಆರ್‌ಪಿಎಫ್ ಯೋಧ ಸಂತೋಷ್ ಕುಮಾರ್ ಎಂಬ ಹೆಸರಿನಲ್ಲಿ ನಕಲಿ ಖಾತೆ ಕ್ರಿಯೇಟ್ ಮಾಡಿ, ನಂಬಿಸಿ, 55 ಸಾವಿರ ರೂ. ವಂಚಿಸಲಾಗಿದೆ. ವಾಟ್ಸ್‌ಆ್ಯಪ್‌ನಲ್ಲೂ ರಮೇಶ್ ಅವರ ಜತೆ ದುಷ್ಕರ್ಮಿಗಳು ಚಾಟ್ ಮಾಡಿದ್ದಾರೆ. ಐಪಿಎಸ್ ಅಧಿಕಾರಿ ಹಾಗೂ ಯೋಧ ಎಂಬುದಾಗಿ ಮೆಸೇಜ್‌ನಲ್ಲಿ ನಂಬಿಸಿದ್ದಾರೆ. ಕೊನೆಗೂ ಮೋಸದ ಅರಿವಾಗಿ ರಮೇಶ್ ಅವರು ಗದಗ ಸೈಬರ್ ಕ್ರೈಂ…
Author: AIN Author
ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಹಿನ್ನಲೆ ಬಾಯಿ ಬಡಿದುಕೊಂಡು ಕನ್ನಡಪರ ಸಂಘಟನೆಗಳ ಪ್ರತಿಭಟನೆ ನಡೆಸುತ್ತಿದ್ದಾರೆ. ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಸತತವಾಗಿ ನಡೆಯುತ್ತಿರುವ ಪ್ರತಿಭಟನೆಯಾಗಿದ್ದು, ಕನ್ನಡ ಪರ ಸಂಘಟನೆ ಹೋರಾಟಗಾರರಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಭುವನೇಶ್ವರಿ ವೃತ್ತದ ಬಳಿ ಬಾಯಿಬಡಿದುಕೊಂಡು ವಿನೂತನವಾಗಿ ಹೋರಾಟ ನಡೆಸಿದ ಕನ್ನಡ ಪರ ಸಂಘಟನೆ ಹೋರಾಟಗಾರರು. ಕನ್ನಡಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಚಾರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಬೆಂಗಳೂರು: ಶೀಘ್ರದಲ್ಲೇ ಗೃಹಲಕ್ಷ್ಮೀ ಯೋಜನೆಯ 3ನೇ ಕಂತಿನ ಹಣ ರಾಮನಗರಕ್ಕೆ ಬಿಡುಗಡೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಸನ್ನ ಕುಮಾರ್ ತಿಳಿಸಿದರು. https://ainlivenews.com/the-4-day-krishi-mela-in-gkvk-opens-today/ ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಈ ಬಾರಿ ಕಳೆದೆರಡು ಕಂತಿಗಿಂತಲೂ ಹೆಚ್ಚಿನ ಫಲಾನುಭವಿಗಳು ಇರುವ ನಿರೀಕ್ಷೆ ಇದೆ. ಶೀಘ್ರದಲ್ಲೇ ಜಿಲ್ಲೆಯಲ್ಲಿ 3 ನೇ ಕಂತಿನ ಹಣ ಬಿಡುಗಡೆಯಾಗಲಿದೆ. ಗೃಹಲಕ್ಷಿ ಯೋಜನೆಯಡಿ ಕಳೆದ 2ಕಂತಿನಲ್ಲಿ ಹಣ ಬಾರದ ಫಲಾನುಭವಿಗಳಿಗೆ ಈ ಕಂತಿನಲ್ಲಿ ಹಣ ಬಿಡುಗಡೆಯಾಗಲಿದೆ. ತಾಂತ್ರಿಕ ದೋಷದಿಂದಾಗಿ ಹಣ ಸಂದಾಯವಾಗಿರಲಿಲ್ಲ ಇದೀಗ ತಾಂತ್ರಿಕ ಸಮಸ್ಯೆ ಬಗೆಹರಿದಿದೆ ಎಂದು ಹೇಳಿದ್ದಾರೆ.
ಮೈಸೂರು: ಪಕ್ಷ ಸಂಘಟನೆಗೆ ನನ್ನ ಮೊದಲ ಆದ್ಯತೆ. ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ರಾಜ್ಯದಲ್ಲಿ 28 ಕ್ಷೇತ್ರಗಳನ್ನೂ ಗೆದ್ದು ಮೋದಿ ಕೈಬಲಪಡಿಸಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದೆ. https://ainlivenews.com/geo-scientist-statue-murder-case-explosive-issue-comes-to-light-during-investigation/ ಯಾವಾಗ ಚುನಾವಣೆ ಬಂದರೂ ಅಧಿಕಾರಕ್ಕೆ ತರುವ ಗುರಿ ಹೊಂದಿದ್ದೇವೆ. ಮೈಸೂರು ನನಗೆ ಅವಿನಾಭಾವ ಸಂಬಂಧ ಹೊಂದಿರುವ ಜಿಲ್ಲೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಮೊದಲ ಆದ್ಯತೆ ಎಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಬೆಂಗಳೂರು: ಸ್ಯಾಂಡಲ್‌ವುಡ್ ಖ್ಯಾತ ನಟ ದರ್ಶನ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಇತ್ತೀಚೆಗಷ್ಟೇ ನಟನ ಮನೆಯ ನಾಯಿ ಎದುರುಗಡೆ ಮನೆಯ ಮಹಿಳೆಗೆ ಕಚ್ಚಿದ್ದ ಆರೋಪ ಎದುರಾಗಿದ್ದು, ಹಾಗೆ ಈಗ ಸಾರ್ವಜನಿಕ ಸ್ಥಳದಲ್ಲಿ ಲಾಂಗ್ ಹಿಡಿದು ವಿವಾದಕ್ಕೆ ಒಳಗಾಗಿದ್ದಾರೆ. 2 ದಿನಗಳ ಹಿಂದೆ ರಾಜ್ಯ ರಾಜಧಾನಿಯ ಜಯನಗರದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಟ ದರ್ಶನ್ ಲಾಂಗ್ ಹಿಡಿದಿದ್ದಾರೆ ಆ ಸಂದರ್ಭದಲ್ಲಿ ಲಾಂಗ್ ಜೊತೆ ಫೋಟೋಗೆ ಪೋಸ್ ಕೊಟ್ಟಿರುವ ದರ್ಶನ್.. ಅಭಿಷೇಕ್ ಅಂಬರೀಶ್ ಸೇರಿದಂತೆ ಅನೇಕ ಅಭಿಮಾನಿಗಳು ಭಾಗಿಯಾಗಿದ್ದರು.. ಅಖಿಲ ಕರ್ನಾಟಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆಯರ ಬಳಗ ವತಿಯಿಂದ ಅಯೋಜಿಸಿದ್ದ ಕಾರ್ಯಕ್ರಮ. ಜಯನಗರದ 4ನೇ ಬ್ಲಾಕ್ ನಲ್ಲಿ ನಡೆದಿದ್ದ ಕಾರ್ಯಕ್ರಮ.. ಕನ್ನಡ ರಾಜ್ಯೋತ್ಸವದ ಸಲುವಾಗಿ ನಡೆದ ಕಾರ್ಯಕ್ರಮ.. ರೌಡಿ ಶೀಟರ್‌ಗಳು ತಮ್ಮ ಹುಟ್ಟು ಹಬ್ಬದ ಕಾರ್ಯಕ್ರಮಗಳಲ್ಲಿ ಈ ರೀತಿಯಾಗಿ ಮಾರಕಾಸ್ತ್ರಗಳನ್ನು ಪ್ರದರ್ಶನ ಮಾಡ್ತಾರೆ.. ಲಾಂಗ್ ನಿಂದ ಕೇಕ್ ಕತ್ತರಿಸೋದು, ಲಾಂಗ್ ಹಿಡಿದು ಡ್ಯಾನ್ಸ್ ಮಾಡೋದು ಮಾಡ್ತಾರೆ.. ಇದು ಕಾನೂನಾತ್ಮಕವಾಗಿ ಸರಿಯಲ್ಲ.. ಆರ್ಮ್ಸ್ ಆ್ಯಕ್ಟ್ ಅಡಿಯಲ್ಲಿ…
ಚಿತ್ರದುರ್ಗ: ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ಮುರುಘಾಶ್ರೀಗಳಿಗೆ (Murugha Shree) ಮತ್ತೆ ಬಂಧನದ ಭೀತಿ ಎದುರಾಗಿದೆ. ಪೋಕ್ಸೋ ಕೇಸಿನಲ್ಲಿ ಶ್ರೀಗಳಿಗೆ ಅರೆಸ್ಟ್ ವಾರೆಂಟ್ (Arrest Warrant) ಜಾರಿಯಾಗಿದೆ. ಶ್ರೀಗಳು ಮೊದಲನೇ ಕೇಸಿನಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ಇದೀಗ 2ನೇ ಕೇಸಿನಲ್ಲಿ ಬಂಧಿಸುವಂತೆ ಚಿತ್ರದುರ್ಗ (Chitradurga) ಜಿಲ್ಲಾ ನ್ಯಾಯಾಲಯ ಆದೇಶ ಮಾಡಿದೆ. ಈ ಮೂಲಕ ಕೇವಲ ನಾಲ್ಕೇ ದಿನಕ್ಕೆ ಶ್ರೀಗಳಿಗೆ ಮತ್ತೆ ಬಂಧನದ ಭೀತಿ ಶುರುವಾಗಿದೆ. ಇತ್ತೀಚೆಗೆ ಪ್ರಕರಣವೊಂದಕ್ಕೆ ಹೈಕೋರ್ಟ್ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಶ್ರೀಗಳು ಜೈಲಿನಿಂದ ಹೊರಬಂದಿದ್ದರು. ಆದರೆ ಇದಕ್ಕೆ ಸರ್ಕಾರಿ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. 2ನೇ ಪೋಕ್ಸೋ ಕೇಸಲ್ಲಿ ಬಂಧನ ವಾರೆಂಟ್ ಕೋರಿ ಸರ್ಕಾರಿ ವಕೀಲ ಜಗದೀಶ್ ಕೋರ್ಟ್ ಗೆ ಮನವಿ ಮಾಡಿದ್ದರು. ಇದಕ್ಕೆ ಮುರುಘಾ ಶ್ರೀ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 1ನೇ ಪೊಕ್ಸೋ ಕೇಸಲ್ಲಿ ಹೈಕೋರ್ಟ್ ನಿಂದ (HighCourt) ಷರತ್ತುಬದ್ಧ ಜಾಮೀನು ಹಿನ್ನೆಲೆಯಲ್ಲಿ ಮುರುಘಾಶ್ರೀ ಚಿತ್ರದುರ್ಗ ಜಿಲ್ಲೆ ಪ್ರವೇಶಿಸುವಂತಿಲ್ಲ. https://ainlivenews.com/geo-scientist-statue-murder-case-explosive-issue-comes-to-light-during-investigation/ ಮುರುಘಾಶ್ರೀ ಮತ್ತೆ ಬಂಧನದ ಅಗತ್ಯವಿಲ್ಲ.…
ಬೆಂಗಳೂರು: ಜಿಕೆವಿಕೆಯಲ್ಲಿ ನಡೆಯುತ್ತಿರುವ 4 ದಿನಗಳ ಕೃಷಿ ಮೇಳಕ್ಕೆ ಇಂದು ತೆರೆ ಬೀಳಲಿದೆ. ಮಧ್ಯಾಹ್ನ 2 ಗಂಟೆಗೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ಪ್ರಶಸ್ತಿ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ. ಕೃಷಿ ಮೇಳದ ಮೂರನೇ ದಿನವಾದ ಭಾನುವಾರ ಒಟ್ಟಾರೆ ಸುಮಾರು 1.65 ಕೋಟಿಗೂ ಅಧಿಕ ವಹಿವಾಟು ನಡೆಯಿತು. ನಿನ್ನೆ ಒಂದೇ ದಿನ 5.10 ಲಕ್ಷ ಜನರು ಮೇಳಕ್ಕೆ ಭೇಟಿ ನೀಡಿದ್ದರು. ಕೃಷಿ ವಿವಿಯ ರಿಯಾಯಿತಿ ದರದ ಮುದ್ದೆ ಊಟವನ್ನು 9 ಸಾವಿರದ 350 ಜನರು ಸವಿದರು. ಭಾನುವಾರ ಜನ ಸಾಗರವೇ ಹರಿದು ಬಂದಿದ್ದು, ಹೂವು-ಹಣ್ಣಿನ ಸಸಿಗಳ ಖರೀದಿ ಭರ್ಜರಿಯಾಗಿತ್ತು. ಇಂದು ಕೊನೆಯ ದಿನ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವ ಸಾಧ್ಯತೆಯಿದೆ. ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ರಾಜ್ಯಪಾಲ ಗೆಹಲೋತ್ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಬಿಜೆಪಿಯ ಮಾಜಿ ಸಚಿವ ಬಿ.ಶ್ರೀರಾಮುಲು ಭೇಟಿ ನೀಡಿದ್ದು ಪುತ್ರಿ ವಿವಾಹ ಕಾರ್ಯಕ್ರಮದ ಆಮಂತ್ರಣ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ. ನನ್ನ ಮಗಳ ಮದುವೆಯ ಆಮಂತ್ರಣ ಪತ್ರ ಕೊಡಲು ಬಂದಿದ್ದೆ ಡಿಸಿಎಂ ಅವರು ಮದುವೆಗೆ ಬರುವುದಾಗಿ ಹೇಳಿದ್ದಾರೆ ಸಿಎಂ ಅವರನ್ನ ಭೇಟಿ ಮಾಡಿ ಆಮಂತ್ರಣ ಕೊಡುತ್ತೆನೆ ಯಾವುದೇ ರಾಜಕೀಯ ವಿಚಾರ ಚರ್ಚೆ ಆಗಿಲ್ಲ ಇದು ನನ್ನ ವೈಯಕ್ತಿಕ ಭೇಟಿ ಎಂದು ಡಿಕೆಶಿ ಭೇಟಿ ಬಳಿಕ ಮಾಜಿ ಸಚಿವ ರಾಮುಲು ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಬಿಜೆಪಿ ಪಕ್ಷದ ವಿರೋಧ ಪಕ್ಷದ ನಾಯಕನಾಗಿ ಅಶೋಕ್ ಆಯ್ಕೆ ಆಗಿರುವ ಹಿನ್ನೆಲೆಯಲ್ಲಿ ಅವರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರನ್ನು ಭೇಟಿಯಾದರು. ಬೆಂಗಳೂರಿನ ವಿಜಯನಗರದ ಬಿಜಿಎಸ್ ಶಾಖ ಮಠದಲ್ಲಿ ಇಂದು ಬೆಳಿಗ್ಗೆ ಶಾಸಕರಾದ ಕೆ.ಗೋಪಾಲಯ್ಯನವರು ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಯವರ ಆಶೀರ್ವಾದವನ್ನು ಪಡೆದರು. ಹಾಗೆ ಸ್ವಾಮಿಜಿಯವರು ಅಶೀಕ್ ಅವರಿಗೆ ಹೂವಿನಮಾಳೆ ಹಾಕಿ ಸನ್ಮಾನ ಮಾಡಿದರು. ಇದೇ ಸಂದರ್ಭದಲ್ಲಿ ಶಾಸಕರಾದ ಎಸ್. ಮುನಿರಾಜು ಹಾಗೂ ಮುಖಂಡರು ಉಪಸ್ಥಿತರಿದ್ದರು.
‘ಮಜಾಭಾರತ’ (Majabharatha) ಖ್ಯಾತಿಯ ಸುಶ್ಮಿತಾ (Sushmitha) ಮತ್ತು ಜಗಪ್ಪ (Jagappa) ಜೋಡಿ ಇದೀಗ ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಕನ್ನಡ ಕಿರುತೆರೆಯ ಸೆಲೆಬ್ರಿಟಿಗಳ ದಂಡೇ ಸುಶ್ಮಿತಾ, ಜಗಪ್ಪ ಮದುವೆಗೆ ಆಗಮಿಸಿ ಹಾರೈಸಿದ್ದಾರೆ. ನಿನ್ನೆಯಷ್ಟೇ (ನ.18) ಸುಶ್ಮಿತಾ-ಜಗಪ್ಪ ಮೆಹೆಂದಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಇಂದು (ನವೆಂಬರ್ 19) ಸಿಂಧೂರ ಕನ್ವೆಷನ್ ಹಾಲ್ ಜೆ.ಪಿ ನಗರ ಬೆಂಗಳೂರಿನಲ್ಲಿ ಮದುವೆ ಅದ್ದೂರಿಯಾಗಿ ನಡೆದಿದೆ. ಬೆಳಿಗ್ಗೆ 10 ಗಂಟೆಯ ಶುಭ ಮುಹೂರ್ತ ಮದುವೆದಲ್ಲಿ (Wedding) ನೆರವೇರಿದೆ ಮದುವೆಗೆ ರವಿಚಂದ್ರನ್, ಪ್ರಜ್ವಲ್ ದೇವರಾಜ್, ಸಿತಾರಾ, ನಿರಂಜನ್ ದೇಶಪಾಂಡೆ ದಂಪತಿ, ಮಂಜು ಪಾವಗಡ, ಮಜಭಾರತ ರಿಯಾಲಿಟಿ ಶೋ ತಂಡ ಸೇರಿದಂತೆ ಹಲವರು ಭಾಗಿಯಾಗಿ ನವಜೋಡಿಗೆ ಶುಭಹಾರೈಸಿದ್ದಾರೆ. ಅಂದಹಾಗೆ ಇತ್ತೀಚೆಗೆ ಜಗಪ್ಪ ‘ಭರ್ಜರಿ ಬ್ಯಾಚುಲರ್ಸ್’ ಶೋನಲ್ಲಿ ಭಾಗಿಯಾಗಿದ್ದರು. ವೇದಿಕೆಯಲ್ಲಿ ಸುಶ್ಮಿತಾ ಭಿನ್ನವಾಗಿ ಪ್ರಪೋಸ್ ಮಾಡಿ ರಿಂಗ್ ತೊಡಿಸಿದ್ದರು. ಸದ್ಯ ನವ ಜೋಡಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.