‘ಮಜಾಭಾರತ’ (Majabharatha) ಖ್ಯಾತಿಯ ಸುಶ್ಮಿತಾ (Sushmitha) ಮತ್ತು ಜಗಪ್ಪ (Jagappa) ಜೋಡಿ ಇದೀಗ ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಕನ್ನಡ ಕಿರುತೆರೆಯ ಸೆಲೆಬ್ರಿಟಿಗಳ ದಂಡೇ ಸುಶ್ಮಿತಾ, ಜಗಪ್ಪ ಮದುವೆಗೆ ಆಗಮಿಸಿ ಹಾರೈಸಿದ್ದಾರೆ.

ನಿನ್ನೆಯಷ್ಟೇ (ನ.18) ಸುಶ್ಮಿತಾ-ಜಗಪ್ಪ ಮೆಹೆಂದಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಇಂದು (ನವೆಂಬರ್ 19) ಸಿಂಧೂರ ಕನ್ವೆಷನ್ ಹಾಲ್ ಜೆ.ಪಿ ನಗರ ಬೆಂಗಳೂರಿನಲ್ಲಿ ಮದುವೆ ಅದ್ದೂರಿಯಾಗಿ ನಡೆದಿದೆ. ಬೆಳಿಗ್ಗೆ 10 ಗಂಟೆಯ ಶುಭ ಮುಹೂರ್ತ ಮದುವೆದಲ್ಲಿ (Wedding) ನೆರವೇರಿದೆ

ಮದುವೆಗೆ ರವಿಚಂದ್ರನ್, ಪ್ರಜ್ವಲ್ ದೇವರಾಜ್, ಸಿತಾರಾ, ನಿರಂಜನ್ ದೇಶಪಾಂಡೆ ದಂಪತಿ, ಮಂಜು ಪಾವಗಡ, ಮಜಭಾರತ ರಿಯಾಲಿಟಿ ಶೋ ತಂಡ ಸೇರಿದಂತೆ ಹಲವರು ಭಾಗಿಯಾಗಿ ನವಜೋಡಿಗೆ ಶುಭಹಾರೈಸಿದ್ದಾರೆ.

ಅಂದಹಾಗೆ ಇತ್ತೀಚೆಗೆ ಜಗಪ್ಪ ‘ಭರ್ಜರಿ ಬ್ಯಾಚುಲರ್ಸ್‌’ ಶೋನಲ್ಲಿ ಭಾಗಿಯಾಗಿದ್ದರು. ವೇದಿಕೆಯಲ್ಲಿ ಸುಶ್ಮಿತಾ ಭಿನ್ನವಾಗಿ ಪ್ರಪೋಸ್ ಮಾಡಿ ರಿಂಗ್ ತೊಡಿಸಿದ್ದರು. ಸದ್ಯ ನವ ಜೋಡಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.

Share.