ಗದಗ: ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್‌ ಹೆಸರಲ್ಲಿ ಆನ್‌ಲೈನ್‌ ವಂಚನೆ ನಡೆದಿದೆ. ಹೌದು ಗದಗದಲ್ಲಿ ಪೊಲೀಸ್‌ ಅಧಿಕಾರಿಗಳ ಹೆಸರನ್ನೇ ದುರ್ಬಳಕೆ ಮಾಡಿಕೊಂಡು ಆನ್‌ಲೈನ್‌ ವಂಚನೆ ಮಾಡಲಾಗಿದೆ. ಅದರಲ್ಲೂ, ಐಪಿಎಸ್‌ ಅಧಿಕಾರಿ ರವಿ ಡಿ. ಚನ್ನಣ್ಣನವರ್‌ ಅವರ ಹೆಸರು ಬಳಸಿ ವ್ಯಕ್ತಿಯೊಬ್ಬರಿಗೆ 55 ಸಾವಿರ ರೂ. ವಂಚನೆ ಮಾಡಲಾಗಿದೆ. ಗದಗ ಜಿಲ್ಲೆಯ ರಮೇಶ್‌ ಹತ್ತಿಕಾಳ ಅವರಿಗೆ 55 ಸಾವಿರ ರೂ. ವಂಚನೆ ಮಾಡಲಾಗಿದೆ. ರವಿ ಡಿ. ಚನ್ನಣ್ಣನವರ್‌ ಹಾಗೂ ಸಿಆರ್‌ಪಿಎಫ್‌ ಯೋಧನ ಹೆಸರು ಹೇಳಿಕೊಂಡು ಇವರಿಗೆ ಆನ್‌ಲೈನ್‌ ಮೂಲಕ ವಂಚನೆ ಮಾಡಲಾಗಿದೆ.

ಫೇಸ್‌ಬುಕ್‌ನಲ್ಲಿ ರವಿ ಡಿ. ಚನ್ನಣ್ಣನವರ್‌ ಹಾಗೂ ಸಿಆರ್‌ಪಿಎಫ್‌ ಯೋಧ ಸಂತೋಷ್‌ ಕುಮಾರ್‌ ಎಂಬ ಹೆಸರಿನಲ್ಲಿ ನಕಲಿ ಖಾತೆ ಕ್ರಿಯೇಟ್‌ ಮಾಡಿ, ನಂಬಿಸಿ, 55 ಸಾವಿರ ರೂ. ವಂಚಿಸಲಾಗಿದೆ. ವಾಟ್ಸ್‌ಆ್ಯಪ್‌ನಲ್ಲೂ ರಮೇಶ್‌ ಅವರ ಜತೆ ದುಷ್ಕರ್ಮಿಗಳು ಚಾಟ್‌ ಮಾಡಿದ್ದಾರೆ. ಐಪಿಎಸ್‌ ಅಧಿಕಾರಿ ಹಾಗೂ ಯೋಧ ಎಂಬುದಾಗಿ ಮೆಸೇಜ್‌ನಲ್ಲಿ ನಂಬಿಸಿದ್ದಾರೆ. ಕೊನೆಗೂ ಮೋಸದ ಅರಿವಾಗಿ ರಮೇಶ್‌ ಅವರು ಗದಗ ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share.