ಮಂಡ್ಯ;- ವಿಸಿ ನಾಲೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಮಂಡ್ಯದ ಪಾಂಡವಪುರದ ಬನಘಟ್ಟದ ವಿಸಿ ನಾಲೆಯಲ್ಲಿ ಮತ್ತೊಂದು ದುರಂತ ನಡೆದಿದೆ. ಕಾರಿನಲ್ಲಿ ನಾಲ್ವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಶಿಫ್ಟ್ ಕಾರು ಬಿದ್ದಿದೆ. ಇಂದುಸಂಜೆ 4.45ರ ವೇಳೆಯಲ್ಲಿ ದುರಂತ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ವಿಸಿ ನಾಲೆಗೆ ಇಳಿದು ಪರಿಶೀಲನೆ ಮಾಡಿದ್ದಾರೆ. ನಿನ್ನೆಯಷ್ಟೆ ಕೆಆರ್‌ಎಸ್ ಡ್ಯಾಂನಿಂದ ವಿಸಿ ನಾಲೆಗೆ ನೀರು ಬಿಡಲಾಗಿತ್ತು. ಇದೀಗ ತುಂಬಿದ ಕಾಲುವೆಗೆ ಕಾರು ಬಿದ್ದಿದ್ದು, ಅವಘಡ ಸಂಭವಿಸಿದೆ.
Author: AIN Author
ಧಾರವಾಡ;- ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ಹಿನ್ನೆಲೆ ಮಲಪ್ರಭಾ ಜಲಾಶಯದಿಂದ 1 ಟಿಎಂಸಿ ನೀರು ಬಿಡುಗಡೆ ಆಗಿದೆ. ಈ ಸಂಬಂಧ ಮಾತನಾಡಿದ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, ಇಂದಿನಿಂದ 9 ದಿನಗಳ ಕಾಲ ಈ ನೀರು ಹರಿಯಲಿದೆ. ಈಗಾಗಲೇ ಹಿಂದೆ 81 ಕೆರೆ ತುಂಬಿಸಿದ್ದೇವು. ಅದರಲ್ಲಿ ಸುಮಾರು 50 ಕೆರೆಗಳಲ್ಲಿ ಅರ್ಧದಷ್ಟು ನೀರಿದೆ.ಅಲ್ಲಿ ಹೆಚ್ಚಿನ ಸಮಸ್ಯೆ ಇಲ್ಲ. ಆದರೆ 32 ಕೆರೆಗಳು ಅರ್ಧಕ್ಕಿಂತ ಕಡಿಮೆ ನೀರು ಹೊಂದಿವೆ. ಅಂತಹುಗಳಿಗೆ ಈಗ ತುಂಬಿಸಿಕೊಳ್ಳಲು ಆದ್ಯತೆ ನೀಡಲಾಗಿದೆ. ಕುಂದಗೋಳ, ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಗ್ರಾಮೀಣಕ್ಕೆ ನೀರು ಸಮಸ್ಯೆ ಬಗೆಹರೆಯಲಿದೆ. ಇದರಿಂದ ಮುಂದಿನ 5-6 ತಿಂಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಮಲಪ್ರಭಾ ಜಲಾಶಯದಲ್ಲಿ 15 ಟಿಎಂಸಿ ನೀರು ಇದೆ ಅಂತಾ ಮಾಹಿತಿ ಇದೆ. ಈ ಸಲ ಕೃಷಿಗಾಗಿ ನೀರು ಬಿಡಲು ಆಗುವುದಿಲ್ಲ. ಕುಡಿಯುವ ನೀರಿಗಾಗಿ ಮಾತ್ರ 1 ಟಿಎಂಸಿ ನೀರು ಬಿಡುತ್ತಿದ್ದಾರೆ. ಕುಡಿಯುವ ನೀರಿಗೆ ಮಾತ್ರ ಆದ್ಯತೆ ಇದೆ. ಆದರೆ ಕಾಲುವೆ…
ಮಂಡ್ಯ :- ಗೃಹ ಜ್ಯೋತಿ ಯೋಜನೆಯಡಿ ಬರುವ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಯಡಿಯಲ್ಲಿ ಬಿಲ್ ಕಟ್ಟಲಾರದೆ ಬಾಕಿ ಉಳಿಸಿಕೊಂಡಿದ್ದ ಬಡ ಫಲಾನುಭವಿಗಳ 380 ಕೋಟಿ ವಿದ್ಯುತ್ ಬಿಲ್ ಮನ್ನಾ ಮಾಡಿರುವ ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ಕಾರ್ಯದರ್ಶಿ ಕೆ.ಕಬ್ಬಾಳಯ್ಯ ಸ್ವಾಗತಿಸಿದ್ದಾರೆ. 2013-18 ರ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಯಡಿಯಲ್ಲಿ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ವಿದ್ಯುತ್ ಬಿಲ್ ಅನ್ನು ಭರಿಸಲಾಗದೆ ನೈಜ ಬಡ ಕುಟುಂಬಗಳಿಗೆ ಅವರಿಂದ ಕಟ್ಟಲಾರದಷ್ಟು ವಿದ್ಯುತ್ ಬಿಲ್ಲು ಹೊರೆಯಾಗಿತ್ತು. ಅತ್ಯಂತ ಬಡ ಕುಟುಂಬದ ಪ್ರತಿ ಮನೆಗೆ 60 ರಿಂದ 70 ಸಾವಿರ ಅಧಿಕ ಬಿಲ್ಲು ಬಂದಿದ್ದು, ಕೆಲವು ಮನೆಗಳ ಮೀಟರ್ ಅನ್ನು ಕಿತ್ತುಹಾಕಿದ ಪರಿಣಾಮ ಕಗ್ಗತ್ತಲೆಯಲ್ಲಿ ಬದುಕು ಸವೆಸುತ್ತಿದ್ದರು. ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ಪಡೆಯಬೇಕಾದರೆ…
ಕಲಬುರ್ಗಿ;- FDA ಅಕ್ರಮ ಉನ್ನತ ತನಿಖೆ ಗೃಹ ಸಚಿವರೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಹತ್ತು ದಿನಗಳ ಹಿಂದೆ ನಡೆದ ಎಫ್ ಡಿಎ ನೇಮಕಾತಿ ಪರೀಕ್ಷೆ ಅಕ್ರಮ ಕುರಿತಾಗಿ ಸರ್ಕಾರ ಮುಂಜಾಗ್ರತೆ ಕೈಗೊಂಡಿದ್ದರಿಂದಲೇ ಅಕ್ರಮ ನಡೆಯುವಾಗಲೇ ಬಯಲಿಗೆಳೆಯಲಾಗಿದೆ. ಆದರೂ ಪ್ರಕರಣದಲ್ಲಿ ಎಲ್ಲರ ಪಾತ್ರ ಬಯಲಿಗೆ ಬರುವಂತಾಗಲು ಯಾವ ಹಂತದ ತನಿಖೆ ನಡೆಸಬೇಕು ಎಂಬುದನ್ನು ಗೃಹ ಸಚಿವರು ನಿರ್ಧರಿಸುತ್ತಾರೆ. ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 20 ಜನರನ್ನು ಬಂಧಿಸಲಾಗಿದೆ. ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಬಿಜೆಪಿಯವರು ಆರೋಪಿಸಿದಂತೆ ಯಾರನ್ನೂ ರಕ್ಷಿಸುತ್ತಿಲ್ಲ. ಪಿಎಸ್‌ಐ ಹಗರಣದಲ್ಲಿ ಆಗಿನ ಬಿಜೆಪಿ ಸರ್ಕಾರ ನಡೆದುಕೊಂಡ ರೀತಿ ಎಲ್ಲರಿಗೂ ಗೊತ್ತಿದೆ. ಆದರೆ ತಮ್ಮ ಸರ್ಕಾರ ಯಾರನ್ನು ರಕ್ಷಿಸುತ್ತಿಲ್ಲ. ಎಲ್ಲ ಆಯಾಮಗಳಿಂದ ಸಮಗ್ರ ತನಿಖೆ ನಡೆಸಲಾಗುವುದು ಎಂದರು.
ಬೆಂಗಳೂರು;- ರಾಜಧಾನಿ ಬೆಂಗಳೂರಿನಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಮೆಜೆಸ್ಟಿಕ್ ಸೇರಿ ಸುತ್ತಮುತ್ತ ಜೋರು ಮಳೆ ಸುರಿಯುತ್ತಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ. ಹತ್ತು ನಿಮಿಷ ಸುರಿದ ಮಳೆಗೆ ಸ್ವಿಮ್ಮಿಂಗ್ ರಸ್ತೆಗಳೆಲ್ಲಾ ಫುಲ್ ಆಗಿವೆ. ಶೇಷಾದ್ರಿಪುರ ರಸ್ತೆಯಲ್ಲಿ ಮಳೆ ನಿಂತಿದ್ದು, ಮಳೆನೀರಿಗೆ ಸವಾರರು ಚಾಲಕರು ಹೈರಾಣಾಗಿದ್ದಾರೆ.
ಬೆಂಗಳೂರು;- ಭಾರೀ ಮಳೆಯಿಂದ ತುಂಬಿದ್ದ ರಾಜಕಾಲುವೆ ನೀರನ್ನು ಯಲಹಂಕ ಸಂಚಾರಿ ಪೊಲೀಸರು ನೀರು ಕ್ಲಿಯರ್ ಮಾಡಿದ್ದಾರೆ. ಯಲಹಂಕ ಸಂಚಾರಿ ಪೊಲೀಸರ ಸಮಯಪ್ರಜ್ಞೆಗೆ ಜನರಿಂದ ಅಭಿನಂಧನೆ ವ್ಯಕ್ತವಾಗಿದೆ. ಕಳೆದ ರಾತ್ರಿ 10ಗಂಟೆಯಿಂದ ಯಲಹಂಕ ಕೆರೆ ಕೋಡಿ ಬಿದ್ದಿದ್ದು, ಯಲಹಂಕ ಕೆರೆ ಕೋಡಿ ಬಿದ್ದ ಪರಿಣಾಮ ತಗ್ಗು ಪ್ರದೇಶ ಕೋಗಿಲು ಸರ್ಕಲ್ ಜಲಾವೃತವಾಗಿದೆ. ಕೋಗಿಲು ಸರ್ಕಲ್ ಜಲಾವೃತ ಹಿನ್ನಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಯಲಹಂಕ ಸಂಚಾರಿ ಪೊಲೀಸರು ಬಿಬಿಎಂಪಿ ಕೆಲಸ ಮಾಡಿದ್ದಾರೆ. ಚರಂಡಿ ಸ್ಲ್ಯಾಬ್ ಗಳ ನ್ನು ತೆಗೆದು ನೀರು ಹರಿದುಕೊಂಡು ಹೋಗಲು ಕ್ರಮ ಕೈಗೊಂಡಿದ್ದಾರೆ. ಬಿಬಿಎಂಪಿ ಸಿಬ್ಬಂದಿ ಜೊತೆ ತಾವೇ ಕುದ್ದು ತಗ್ಗುಪ್ರದೇಶದ ನೀರು ಕ್ಲಿಯರ್ ಅಗಲು ಕ್ರಮ ಕೈಗೊಂಡಿದ್ದಾರೆ.
ಚಿಕ್ಕೋಡಿ: ಚರಂಡಿಯಲ್ಲೂ ದುಡ್ಡು ತಿಂತಾರಾ? ಜನ … ಎಂಥಾ ಕರ್ಮ ನೋಡಿ ಆಶ್ಚರ್ಯ ಅನಿಸಿದರೂ ಇದು ನಿಜ . ಹೌದು,,, ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಚರಂಡಿ ವ್ಯವಸ್ಥೆಯಲ್ಲಿ ಕಳಪೆ ಗುಣಮಟ್ಟತೆ ಕಂಡು ಬಂದಿದೆ. ಗ್ರಾಮದ ಪ್ರಮುಖ ಬೀದಿಯಲ್ಲಿ…. ಇಲಾಖೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚರಂಡಿ ಕಾಮಗಾರಿಯಲ್ಲಿ ಕಳಪೆ ಸಾಮಗ್ರಿ ಹಾಗೂ ಯೋಜನೆ ಆಧಾರದನ್ವಯ ಕಾಮಗಾರಿ ನಡೆಯುತ್ತಿಲ್ಲ ಎಂದು ಸ್ಥಳೀಯರು.. ಇಲಾಖೆ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸ್ಥಳೀಯರೆ ಹೇಳುವ ಹಾಗೆ ದೃಶ್ಯದಲ್ಲಿ ಗಮನಿಸಬಹುದು ಚರಂಡಿಯ ಎರಡು ಬದಿ ಪ್ಲೇಟ್ ಅಳವಡಿಸಿ ಕಾಂಕ್ರಿಟ್ ವೆವಸ್ಥೆ ಕಲ್ಪಿಸುವ ಬದಲು ಮನಸೊ ಇಚ್ಛೆಯಂತೆ ತಾರಾತುರಿಯಲ್ಲಿ ನಡೆಸಿರೊ ಕಾಮಗಾರಿಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ ಕೂಡಲೆ ಸ್ಥಳೀಯ ಅಧಿಕಾರಿಗಳು ಇಂಥಹ ಕಳಪೆ ಕಾಮಗಾರಿ ನಿಲ್ಲಿಸಿ ವೆವಸ್ಥಿತ ಚರಂಡಿಗೆ ವೆವಸ್ಥೆ ನಿರ್ಮಾಣ ಮಾಡಿ ಕೊಡುವಂತೆ ಸ್ಥಳೀಯರು ಅಗ್ರಹಿಸಿದ್ದಾರೆ.
ಬೆಂಗಳೂರು;- ನಗರದ ದಕ್ಷಿಣ ವಲಯದ ವ್ಯಾಪ್ತಿಗೆ ಬರುವ ಜಯನಗರ ವಿಭಾಗದ ಜಯನಗರ ವಾಣಿಜ್ಯ ಸಂಕೀರ್ಣದ 9ನೇ ಮುಖ್ಯರಸ್ತೆ, 10ನೇ ಮುಖ್ಯಸ್ತೆ ಹಾಗೂ 27ನೇ ಅಡ್ಡರಸ್ತೆ, 27ನೇ ಎ ಅಡ್ಡರಸ್ತೆ, 30ನೇ ಅಡ್ಡರಸ್ತೆ ಸುತ್ತಮುತ್ತಲಿನ ರಸ್ತೆಗಳ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಚರಣೆಯನ್ನು ನಡೆಸಲಾಯಿತು. ಮಾನ್ಯ ಉಚ್ಛ ನ್ಯಾಯಾಲಯ ಹೊರಡಿಸಿರುವ ಆದೇಶದನುಸಾರ ಮತ್ತು ಮಾನ್ಯ ಮುಖ್ಯ ಆಯುಕ್ತರು ಬಿಬಿಎಂಪಿ ರವರ ಆದೇಶದಂತೆ ಇಂದು ಜಯನಗರ ವಾಣಿಜ್ಯ ಸಂಕೀರ್ಣದ 9ನೇ ಮುಖ್ಯರಸ್ತೆ, 10ನೇ ಮುಖ್ಯಸ್ತೆ ಹಾಗೂ 27ನೇ ಅಡ್ಡರಸ್ತೆ, 27ನೇ ಎ ಅಡ್ಡರಸ್ತೆ, 30ನೇ ಅಡ್ಡರಸ್ತೆ ಸುತ್ತಮುತ್ತಲಿನ ರಸ್ತೆಗಳ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಚರಣೆಯನ್ನು ನಡೆಸಲಾಗಿದ್ದು, ಪಾದಚಾರಿ ಮಾರ್ಗದಲ್ಲಿ ಇಟ್ಟಿರುವ ಅನಧಿಕೃತ ಪೆಟ್ಟಿ ಅಂಗಡಿ, ಅಂಗಡಿ ಮುಂಗಟ್ಟುಗಳು, ಅನುಪಯುಕ್ತ ತಳ್ಳುವ ಗಾಡಿಗಳು, ಹಣ್ಣಿನ ಬಾಕ್ಸ್‌ಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅನುವುಮಾಡಲಾಯಿತು. ಕಾರ್ಯಾಚರಣೆ ನಡೆಯುವ ಮುನ್ನ ವ್ಯಾಪಾರಿಗಳ ಗಮನಕ್ಕೆ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡದಂತೆ ಧ್ವನಿವರ್ಧಕ ಮುಖಾಂತರ ತಿಳಿಸಲಾಗಿದ್ದರೂ…
ಕಲಬುರ್ಗಿ;- ಕೆಇಎ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ಗೆ ಕೈ ಶಾಸಕರು, ಮಂತ್ರಿಗಳು ನೆರವು ನೀಡುತ್ತಿದ್ದಾರೆ ಎಂದು B.Y.ವಿಜಯೇಂದ್ರ ಆರೋಪ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ಸರ್ಕಾರ ಇದ್ದಾಗ ಪಿಎಸ್‌ಐ ಪರೀಕ್ಷೆ ಅಕ್ರಮದ ಬಗ್ಗೆ ಕಾಂಗ್ರೆಸ್ ಸತತವಾಗಿ ಆರೋಪ ಮಾಡಿತ್ತು. ಈಗ ಪ್ರಕರಣದ ಆರೋಪಿ ಆರ್‌ಡಿ ಪಾಟೀಲ್‌ಗೆ ಕಾಂಗ್ರೆಸ್ ಶಾಸಕರು, ಮಂತ್ರಿಗಳೇ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು. ಇನ್ನು ಎಲ್ಲಾ ಗೊತ್ತಿದ್ದರೂ ಪೋಲೀಸರಿಗೆ ಯಾಕೆ ಹಿಡಿಯಲು ಆಗುತ್ತಿಲ್ಲ ಎಂದು ಕಲಬುರಗಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದರು.
ಬೆಂಗಳೂರು;- ದೀಪಾವಳಿ ಹಬ್ಬದಂದು ದೀಪಗಳನ್ನೇಕೆ ಬೆಳಗಿಸಲಾಗುತ್ತದೆ…? ದೀಪಗಳನ್ನು ಬೆಳಗಿಸುವುದರ ಹಿಂದೆ ಇರುವ ಕಾರಣ ಏನು ಎನ್ನುವುದನ್ನು ಹಿಂದಿನ ಪೌರಾಣಿಕ ಮತ್ತು ವೈಜ್ಞಾನಿಕ ರಹಸ್ಯವೇನು ಎಂಬುದನ್ನು ನೋಡೋಣ… ನೀರು ತುಂಬುವ ಹಬ್ಬ, ನರಕ ಚತುರ್ದಶಿ, ಬಲಿಪಾಡ್ಯಮಿ, ಲಕ್ಷ್ಮೇಪೂಜೆ, ಕುಬೇರ ಪೂಜೆ, ಗೋಪೂಜೆ, ಗೋವರ್ಧನ ಪೂಜೆಗಳನ್ನು ಮಾಡುವ ಸಂಪ್ರದಾಯವಿದೆ. ಎಣ್ಣೆ, ತುಪ್ಪದ ದೀಪಗಳು, ಮದ್ದಿನ ಪಟಾಕಿ, ಬಾಣ-ಬಿರುಸುಗಳು, ದೀಪದಾನ, ಆಕಾಶದೀಪಗಳು ಎಲ್ಲೆಲ್ಲೂ ಬೆಳಗುತ್ತಿರುತ್ತವೆ. ಅಂಧಕಾರವನ್ನು ತೊಡೆದು ಜ್ಞಾನದ ಬೆಳಕನ್ನು ಹಬ್ಬಿಸುವ ಕ್ರಿಯೆಯೂ ಹಬ್ಬವೇ 1) ಮನೆಯ ಒಳಗೆ ಮತ್ತು ಸುತ್ತಮುತ್ತ ಅನೇಕ ದೀಪಗಳನ್ನು ಹಚ್ಚಿದಾಗ ವಾತಾವರಣ ಶುದ್ಧವಾಗುತ್ತದೆ. 2) ದೀಪಾವಳಿಯ ದಿನದಂದು, ಭಗವಾನ್ ರಾಮನು 14 ವರ್ಷಗಳ ವನವಾಸವನ್ನು ಕಳೆದ ನಂತರ ಅಯೋಧ್ಯೆಯ ಗಡಿಯನ್ನು ಪ್ರವೇಶಿಸಿದನು. ಭಗವಾನ್ ಶ್ರೀರಾಮನ ಆಗಮನದ ಸಂದರ್ಭದಲ್ಲಿಯೂ ಸಹ ದೀಪವನ್ನು ಬೆಳಗಿಸುವ ಮೂಲಕ ಸಂತೋಷವನ್ನು ಆಚರಿಸಲಾಯಿತು, ಅದಕ್ಕಾಗಿಯೇ ದೀಪಗಳನ್ನು ಸಹ ಬೆಳಗಿಸಲಾಗುತ್ತದೆ. 3) ದೀಪಗಳ ಸಾಲು ಅರಿಶಿಣ ಬಣ್ಣದ ಬೆಳಕನ್ನು ಸೂಸುತ್ತದೆ. ಇದು ವಾಸ್ತು ದೋಷಗಳನ್ನೂ ನಿವಾರಿಸುತ್ತದೆ. ದೀಪದ ಹೊಗೆ…