ಸಾಮಾನ್ಯವಾಗಿ ಎಲ್ಲರೂ ‘ಫ್ರೈಡ್ ರೈಸ್’ ತಿನ್ನುತ್ತಿರುತ್ತಾರೆ. ಆದರೆ ‘ಚಿಕನ್ ಫ್ರೈಡ್ ರೈಸ್’ ಎನ್ನುವ ರೆಸಿಪಿ ಇದೆ ಎಂದು ಎಷ್ಟೋ ಜನರಿಗೆ ಗೊತ್ತೇ ಇರುವುದಿಲ್ಲ. ಅದಕ್ಕೆ ಇಂದು ನಿಮ್ಮ ಮನೆಯಲ್ಲಿಯೇ ಸಿಂಪಲ್ ಆಗಿ ಹೇಗೆ ಈ ರೆಸಿಪಿ ಟ್ರೈ ಮಾಡಬಹುದು ಎಂದು ಹೇಳಿಕೊಡುತ್ತಿದ್ದೇವೆ. ಬೇಕಾಗಿರುವ ಪದಾರ್ಥಗಳು: * ಆಲಿವ್ ಎಣ್ಣೆ – 2 ಟೀಸ್ಪೂನ್ * ಕಟ್ ಮಾಡಿದ ಚಿಕನ್ – 2 ಕಪ್ * ಕರಿಮೆಣಸು – 2 ಟೀಸ್ಪೂನ್ * ಎಳ್ಳಿನ ಎಣ್ಣೆ – 2 ಟೀಸ್ಪೂನ್ * ಕಟ್ ಮಾಡಿದ ಈರುಳ್ಳಿ – 1 ಕಪ್ * ಕಟ್ ಮಾಡಿದ ಕ್ಯಾರೆಟ್ – ಅರ್ಧ ಕಪ್ * ಲವಂಗ – 1 ಟೀಸ್ಪೂನ್ * ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್ * ಬೇಯಿಸಿದ ಅಕ್ಕಿ – 3 ಕಪ್ * ನೆನೆಸಿಟ್ಟ ಬಟಾಣಿ – ಅರ್ಧ ಕಪ್ * ಮೊಟ್ಟೆಗಳು – 2 * ಸೋಯಾ…
Author: AIN Author
ಬೆಂಗಳೂರು:- ಲೋಕಸಭಾ ಚುನಾವಣೆ ನಂತರ ವೈಯಕ್ತಿಕ ರಾಜಕಾರಣ ಮಾಡುತ್ತೇನೆ ಎಂದು ಮಾಜಿ ಶಾಸಕ ಸಿ ಟಿ ರವಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾನೇನು ರಾಜಕೀಯ ಸನ್ಯಾಸಿಯಲ್ಲ, ಲೋಕಸಭಾ ಚುನಾವಣೆ ಬಳಿಕ ನಾನು ನನ್ನ ವೈಯಕ್ತಿಕ ರಾಜಕಾರಣ ಮಾಡುತ್ತೇನೆ. ಚುನಾವಣೆ ಎನ್ನುವುದು ಇಬ್ಬರ ನಡುವಿನ ಚೆಸ್ ಗೇಮ್ ಅಲ್ಲ, ತಂಡವಾಗಿ ಎಲ್ಲರೂ ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಿಗಲಿದೆ. ನಾಯಕ ಸಮನ್ವಯತೆ ಮೂಡಿಸುವ ಕೆಲಸ ಮಾಡಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಬೇಕು ಎಂದರು. ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ ಆಗಿರಲಿಲ್ಲ, ಹಾಗಾಗಿ ನನಗೆ ಯಾವುದೇ ಅಸಮಾಧಾನ ಇಲ್ಲ. ನಮ್ಮ ಗುರಿ 2024ಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರ ತರಬೇಕು ಎನ್ನುವುದಾಗಿದೆ. ಮೂರನೇ ಬಾರಿ ಮೋದಿ ಪಿಎಂ ಆಗಬೇಕಾಗಿರುವುದು ದೇಶಕ್ಕಾಗಿ. ಮೋದಿ ನೇತೃತ್ವ, ಬಿಜೆಪಿ ವಿಚಾರಧಾರೆ ಕಾರಣದಿಂದ ಭಾರತ ವಿಶ್ವಗುರುವಾಗಲಿದೆ. ಅದಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಆ ಕಡೆಗೆ ಮಾತ್ರ ನಮ್ಮ ಗಮನವಿರಲಿದೆ” ಎಂದರು. ನಾವೇನು ಸನ್ಯಾಸಿಗಳಲ್ಲ, ಈಗೇನಿದ್ದರೂ ಮೋದಿ ಸರ್ಕಾರ ಅಧಿಕಾರಕ್ಕೆ…
ಬೆಂಗಳೂರು:- ಅಂಧಕಾರವ ಕಳೆದು ಬೆಳಕಿನೆಡೆಗೆ ಕರೆದುಕೊಂಡು ಹೋಗುವ ದೀಪಗಳ ಹಬ್ಬವನ್ನು ಸ್ವಾಗತಿಸಲು ನಗರದ ಮಾರುಕಟ್ಟೆಯಲ್ಲಿ ಬಗೆಬಗೆಯ ಹಣತೆಗಳು ಬಂದಿವೆ. ಮಣ್ಣಿನ ದೀಪಗಳು ದುಬಾರಿ ಎನಿಸಿದರೂ ಪರಿಸರ ಸ್ನೇಹಿ ದೀಪಗಳಾಗಿರುವುದರಿಂದ ಬೇಡಿಕೆ ಹೆಚ್ಚಿದೆ. ನಗರದಲ್ಲಿ ಜೇಡಿ ಮಣ್ಣಿನಿಂದ ಹೂವು, ಆನೆಯ ಮಾದರಿಯ ದೀಪ, ನವಿಲುಗರಿ ಮತ್ತು ಮಹಿಳಾ ಪ್ರತಿರೂಪದ ದೀಪ ಸೇರಿದಂತೆ ಬಣ್ಣ ಬಣ್ಣದ ಹಣತೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಮಲ್ಲೇಶ್ವರ, ರಾಜಾಜಿನಗರ, ಜೆಪಿ ನಗರ, ವಸಂತನಗರ, ಶಿವಾಜಿನಗರ, ಶೇಷಾದ್ರಿಪುರ ಸೇರಿದಂತೆ ವಿವಿಧೆಡೆ ದೀಪಗಳ ಖರೀದಿ ಭರದಿಂದ ಸಾಗಿದೆ. ಮಣ್ಣಿನ ಹಣತೆ, ಮಡಿಕೆ, ಹೂಕುಂಡ ಮನೆಯ ಅಲಂಕಾರಿಕ ವಸ್ತುಗಳನ್ನು ಜನರು ಖರೀದಿಸುತ್ತಿದ್ದಾರೆ. ಬಣ್ಣ, ಆಕೃತಿ, ಗಾತ್ರಕ್ಕನುಗುಣವಾಗಿ ಒಂದು ಹಣತೆಗೆ 10 ರೂ. ಗಳಿಂದ 250 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ ಪರಿಸರಸ್ನೇಹಿ ಮಣ್ಣಿನಿಂದ ತಯಾರಿಸಲಾದ ಹಣತೆಗಳಿಗೆ ಈ ಬಾರಿ ಬಹುಬೇಡಿಕೆಯಿದೆ.ಪಟಾಕಿಗಳನ್ನು ಬದಿಗಿಟ್ಟು ಈ ಬಾರಿ ಪರಿಸರ ಮಾಲಿನ್ಯಗೊಳಿಸದೇ ಹೆಚ್ಚು ಹಣತೆಗಳನ್ನು ಕೊಂಡು ದೀಪ ಹಚ್ಚಿ ಸಂಭ್ರಮಿಸುವ ಸಂಕಲ್ಪವನ್ನು ಎಲ್ಲರೂ ಮಾಡಬೇಕು ಎಂದು ರಾಜ್ಯ ಕುಂಬಾರರ ಸಂಘದ…
ಇಸ್ಲಾಮಾಬಾದ್: ಹಲವು ಔಷಧೀಯ ಗುಣಗಳನ್ನು ಹೊಂದಿರುವ ಅಪರೂಪದ ಮೀನುಗಳನ್ನು ಮಾರಾಟ ಮಾಡಿ ಪಾಕಿಸ್ತಾನದ ಮೀನುಗಾರನೊಬ್ಬ (Pakistan Fisherman) ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ. ಬಡ ಇಬ್ರಾಹಿಂ ಹೈದರಿ ಮೀನುಗಾರಿಕಾ ಗ್ರಾಮದಲ್ಲಿ ವಾಸಿಸುವ ಹಾಜಿ ಬಲೋಚ್ ಮತ್ತು ಆತನ ಸಂಗಡಿಗರು ಅರಬ್ಬಿ ಸಮುದ್ರದಿಂದ ಗೋಲ್ಡನ್ ಫಿಶ್ ಅಥವಾ “ಸೋವಾ” (Sowa Fish) ಎಂದು ಕರೆಯಲ್ಪಡುವ ಮೀನುಗಳನ್ನು ಹಿಡಿದಿದ್ದರು. ಮೀನು ಮಾರಿ ಬಂದ ಹಣವನ್ನು 7 ಮಂದಿ ಮೀನುಗಾರರು ಹಂಚಿಕೊಂಡಿದ್ದಾರೆ. ಬೆಳಗ್ಗೆ ಕರಾಚಿ ಬಂದರಿನಲ್ಲಿ ಅಪರೂಪದ ಮೀನುಗಳನ್ನು ಹರಾಜು ಹಾಕಲಾಯಿತು. ಸುಮಾರು 7 ಕೋಟಿ ರೂಪಾಯಿಗೆ ಮೀನು ಮಾರಾಟವಾಗಿದೆ ಎಂದು ಪಾಕಿಸ್ತಾನದ ಮೀನುಗಾರರ ಜಾನಪದ ವೇದಿಕೆಯ ಮುಬಾರಕ್ ಖಾನ್ ತಿಳಿಸಿದ್ದಾರೆ. ಸೋವಾ ಮೀನು ಅಪರೂಪದ್ದು ಮತ್ತು ಬೆಲೆಬಾಳುವಂತಹದ್ದು. ಏಕೆಂದರೆ ಅದರ ಹೊಟ್ಟೆಯಲ್ಲಿರುವ ಪದಾರ್ಥಗಳು ಕಾಯಿಲೆಗಳನ್ನು ಗುಣಪಡಿಸುವ ಮತ್ತು ಔಷಧೀಯ ಗುಣಗಳನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಮೀನಿನ ದಾರದಂತಹ ವಸ್ತುವನ್ನು ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿಯೂ ಬಳಸಲಾಗುತ್ತದೆ. https://ainlivenews.com/great-job-opportunity-in-hindustan-aeronautics-limited-posting-in-bangalore/ ಒಂದು ಮೀನು ಹರಾಜಿನಲ್ಲಿ ಸುಮಾರು 70 ಲಕ್ಷ ರೂಪಾಯಿಗೆ ಮಾರಾಟವಾಗುತ್ತದೆ. ಸಾಮಾನ್ಯವಾಗಿ 20…
ಬೆಂಗಳೂರು:- ಗಣೇಶ ದೇವರೇ ಅಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ವಿರುದ್ಧ ಹಿಂದೂ ಪರ ಹೋರಾಟಗಾರ ಪ್ರಶಾಂತ್ ಸಂಬರಗಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೋಟ್ಯಂತರ ಜನ ಅನುಯಾಯಿಗಳನ್ನು ಹೊಂದಿರುವ ಪಂಡಿತಾರಾಧ್ಯ ಶ್ರೀಗಳು ಸಮಾಜದ ಒಂದು ವರ್ಗವನ್ನು ಓಲೈಸುವ ಭರದಲ್ಲಿ, ದೇಶದ ಬಹುಸಂಖ್ಯಾತರ ಆರಾಧನೆಯ, ನಂಬಿಕೆಯ ಕೇಂದ್ರ ಬಿಂದುವಾಗಿರುವ, ಶತಮಾನಗಳಿಂದ ಪೂಜಿಸಲ್ಪಡುತ್ತಿರುವ ಗಣಪತಿ ದೇವರ ಕುರಿತು ಅತ್ಯಂತ ಕೀಳು ಹೇಳಿಕೆ ನೀಡಿದ್ದಾರೆ. ಸರ್ವಧರ್ಮೀಯರು ಪೂಜಿಸುವ ಗಣೇಶನ ಭಕ್ತವರ್ಗದ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಅಗ್ರ ಸ್ಥಾನ ಪಡೆದಿರುವ ವಿಘ್ನ ನಿವಾರಕನ ಬಗ್ಗೆ, ಹಾಗೂ ಹಿಂದೂ ಧರ್ಮದ ನಂಬಿಕೆಗಳನ್ನು ಅವಹೇಳನ ಮಾಡಿದ್ದು, ಇದರಿಂದ ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ಕುಂದುಂಟಾಗಿದೆ. ಸಾರ್ವಜನಿಕವಾಗಿ ಹೀಗೆ ಹಿಂದೂ ದೇವರ ವ್ಯಂಗ್ಯದ ಹಿಂದೆ ಸಮಾಜದ ಸಾಮರಸ್ಯಕ್ಕೆ ಹಾಳು ಮಾಡುವ ಕುತಂತ್ರ ಅಡಗಿರುವುದು ಸ್ಪಷ್ಟವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಐಸಿಸಿ ಏಕದಿನ ವಿಶ್ವಕಪ್‌ನ ಭಾರತ ಹಾಗೂ ನೆದರ್ಲೆಂಡ್ಸ್ ನಡುವಿನ ಪಂದ್ಯ ನಡೆಯಲಿದೆ. ಹೀಗಾಗಿ ಸುಗಮ ಸಂಚಾರದ ದೃಷ್ಟಿಯಿಂದ ಮೈದಾನದ ಸುತ್ತಮುತ್ತ ಸರಕು ಹಾಗೂ ಸಾಗಣಿಕೆ ವಾಹನಗಳಿಗೆ ನಿಷೇಧ ವಿಧಿಸಲಾಗಿದೆ. ವಿಶ್ವಕಪ್‌ನಲ್ಲಿ ಲೀಗ್ ಹಂತದ ಮತ್ತು ಭಾರತ ತಂಡದ ಕೊನೆಯ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಯಾವುದೇ ರೀತಿಯ ಸಂಚಾರ ದಟ್ಟಣೆ ಆಗದಂತೆ ಕ್ರಮವಹಿಸಲಾಗಿದೆ. ಕ್ಯಾಬ್ಗಳಿಗೆ ಪಿಕ್ ಅಪ್ ಅಂಡ್ ಡ್ರಾಪ್ ಸ್ಥಳಗಳನ್ನ ಗುರುತಿಸಲಾಗಿದೆ. ವಾರಾಂತ್ಯ ಆಗಿರುವುದರಿಂದ ಭಾನುವಾರ ಸಾರ್ವಜನಿಕರು ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಪ್ರಯಾಣಿಸುವುದನ್ನು ಸಾಧ್ಯವಾದಷ್ಡು ಕಡಿಮೆ ಮಾಡಿದರೆ ಉತ್ತಮ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದ್ದಾರೆ. ಟೂರ್ನಿಯಲ್ಲಿ ಒಂದೂ ಸೋಲು ಕಾಣದೇ ಟೇಬಲ್ ಟಾಪ್ನಲ್ಲಿರುವ ಟೀಮ್ ಇಂಡಿಯಾಕ್ಕೆ ತಳ ಮಟ್ಟದಲ್ಲಿರುವ ಕ್ರಿಕೆಟ್ ಶಿಶು ನೆದರ್ಲೆಂಡ್ಸ್ ಸಾವಾಲು ಒಡ್ಡುತ್ತಿದೆ. ಡಚ್ ತಂಡ ಅಂಕಪಟ್ಟಿಯಲ್ಲಿ ಕೆಳಗೆ ಇರಬಹುದು. ಹಾಗೆಂದ ಮಾತ್ರಕ್ಕೆ ಕೇವಲವಾಗಿ ನೋಡಲು ಸಾಧ್ಯವಿಲ್ಲ. ಏಕೆಂದರೆ ಟೂರ್ನಿಯಲ್ಲಿ ಬಲಿಷ್ಟ ಬ್ಯಾಟಿಂಗ್ ಬಲವನ್ನು ಹೊಂದಿರುವ…
ಭಾರತದಲ್ಲಿ ಎಲ್ಲಾ ಹಬ್ಬಗಳಿಗಿರುವಂತೆ ದೀಪಾವಳಿಗೂ ವಿಶೇಷ ಮನ್ನಣೆ. ದೇಶದಾದ್ಯಂತ ಜನ ತಮ್ಮ ಮನೆ, ಅಂಗಡಿ, ಕೆಲಸ ಮಾಡುವ ಸ್ಥಳ ಎಲ್ಲವನ್ನೂ ಅಲಂಕರಿಸಿ, ಮೇಣದ ಬತ್ತಿ, ಮಣ್ಣಿನ ಹಣತೆ, ಲೈಟಿಂಗ್ಸ್ ಹೀಗೆ ವಿಧವಿಧವಾದ ದೀಪ ಬೆಳಗಿಸಿ, ಪೂಜೆ ಮಾಡಿ ಸನ್ಮಂಗಳವನ್ನು ಬೇಡಿಕೊಳ್ಳುತ್ತಾರೆ. ದೀಪಾವಳಿ ಹಬ್ಬ ಒಂದು ರೀತಿ ಕುಟುಂಬಗಳು ಮತ್ತು ಸಮುದಾಯಗಳ ಬಾಂಧವ್ಯದ ಆಚರಣೆಯಾಗಿದೆ. ನಮ್ಮ ಅನುಕೂಲಕತೆಗೆ, ಖುಷಿಗೆ ಮಾಡಿಕೊಂಡ ಹಬ್ಬ ಇದಲ್ಲ, ಬದಲಿಗೆ ಸಾವಿರಾರು ವರ್ಷಗಳ ಹಿಂದಿನಿಂದ ನಡೆದುಕೊಂಡು ಬಂದ ಹಬ್ಬ ಇದು. ಈ ಬೆಳಕಿನ ಹಬ್ಬ ಭಾರತದ ಇತಿಹಾಸದೊಂದಿಗೆ ಹಣೆದುಕೊಂಡಿದೆ. ಐದು ದಿನಗಳ ಕಾಲ ಆಚರಿಸಲಾಗುವ ದೀಪಾವಳಿಯು ಭಾರತ ಉಪಖಂಡದಲ್ಲಿ ತನ್ನ ಬೇರುಗಳನ್ನು ಹೊಂದಿದೆ. 1ನೇ ಸಹಸ್ರಮಾನದ CE ಯ ದ್ವಿತೀಯಾರ್ಧದಲ್ಲಿ ಬರೆಯಲಾದ ಸ್ಕಂದ ಪುರಾಣ ಮತ್ತು ಪದ್ಮ ಪುರಾಣದಂತಹ ಆರಂಭಿಕ ಸಂಸ್ಕೃತ ಪಠ್ಯಗಳಲ್ಲಿ ದೀಪಾವಳಿ ಹಬ್ಬ ಉಲ್ಲೇಖವಾಗಿದೆ. ಸ್ಕಂದ ಕಿಶೋರ್ ಪುರಾಣದಲ್ಲಿ, ದೀಪಗಳು ಸೂರ್ಯನ ಭಾಗಗಳನ್ನು ಸಂಕೇತಿಸುತ್ತದೆ ಎಂದು ಹೇಳುವ ಮೂಲಕ ಹಬ್ಬದ ಮಹತ್ವ ಹೇಳಲಾಗಿದೆ. 7ನೇ ಶತಮಾನದಲ್ಲಿ…
ದೀಪಾವಳಿ ಹಬ್ಬವನ್ನು ದೇಶದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಎಲ್ಲೆಡೆ ದೀಪಗಳಿಂದ ಕಂಗೊಳಿಸುತ್ತಿರುತ್ತದೆ. ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ, ವಿಧ ವಿಧವಾದ ಹೂವುಗಳಿಂದ ಅಲಂಕರಿಸಲಾಗುತ್ತದೆ. ಮನೆಯಲ್ಲಿ ಸಿಹಿಯಾದ ಅಡುಗೆ ಮಾಡಿ ಹಬ್ಬವನ್ನು ಮತ್ತಷ್ಟು ಸಂಭ್ರಮಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಈ ಹಬ್ಬ ಕಾರ್ತಿಕ ಮಾಸದಲ್ಲಿ ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಕೆಲವರು ಮನೆಗೆ ಹೊಸ ವಸ್ತುಗಳನ್ನು ತರುತ್ತಾರೆ. ದೀಪಾವಳಿ ಹಬ್ಬದ ಮಹತ್ವ: ದೀಪಾವಳಿ ‘ದೀಪಾ’ ಎಂದರೆ ಮಣ್ಣಿನ ದೀಪ ಹಾಗೂ ‘ವಲಿ’ ಎಂದು ಯಾವುದಾದರು ವಸ್ತು ಸರಣಿಯಾಗಿಯಿಡುವುದು. ದೀಪಾವಳಿಯ ಅಮವಾಸ್ಯೆಯನ್ನು ದೀವಾಳಿ ಅಮಾವಾಸ್ಯೆಯೆಂದು ಕರೆಯುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಆ ದಿನ ಕತ್ತಲೆಯಿಂದ ಕೂಡಿರುತ್ತದೆ. ದೀಪಾವಳಿ ಹಬ್ಬವನ್ನು ಹಿಂದೂಗಳ ಹಬ್ಬ ಮಾತ್ರ ಆಗಿರದೇ ಈ ಹಬ್ಬವನ್ನು ಜೈನ್, ಸಿಖ್‍ಗಳು ಹಾಗೂ ಬೌದ್ಧರು ಕೂಡ ಈ ಹಬ್ಬವನ್ನು ಆಚರಿಸುತ್ತಾರೆ. ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ದೀಪಾವಳಿಗೆ ಅದರದ್ದೇ ಆದ ಮಹತ್ವವಿದೆ ಹಾಗೂ ಅವರದ್ದೆ ಆದ ಕೆಲವು ಸಂಪ್ರದಾಯಗಳು ಇರುತ್ತದೆ. ಕೆಲವರು ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ತಮ್ಮ…
SBI ಅಧಿಕೃತ ಅಧಿಸೂಚನೆಯ ಮೂಲಕ ಅಪ್ರೆಂಟಿಸ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. SBI ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹುದ್ದೆಗಳ ಸಂಖ್ಯೆ: 6160 ಉದ್ಯೋಗ ಸ್ಥಳ: ಭಾರತ ಪೋಸ್ಟ್ ಹೆಸರು: ಅಪ್ರೆಂಟಿಸ್ ವೇತನ: ರೂ. 15,000/- ಪ್ರತಿ ತಿಂಗಳು SBI ಹುದ್ದೆಯ ವಿವರಗಳು: 175 SBI ನೇಮಕಾತಿ 2023 ಅರ್ಹತಾ ವಿವರಗಳು ಶೈಕ್ಷಣಿಕ ಅರ್ಹತೆ: ಎಸ್‌ಬಿಐ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು. ವಯಸ್ಸಿನ ಮಿತಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 01-08-2023 ರಂತೆ ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳನ್ನು ಹೊಂದಿರಬೇಕು. ವಯೋಮಿತಿ ಸಡಿಲಿಕೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ…
ಮೊಟ್ಟೆಗಳನ್ನ ಪ್ರೋಟೀನ್ ಗಳ ನಿಧಿ ಎಂದು ಹೇಳಲಾಗುತ್ತದೆ. ವಿಶ್ವದಾದ್ಯಂತ ಮೊಟ್ಟೆಗಳನ್ನು ಪ್ರೋಟೀನ್‌ಗಳ ನಿಧಿ ಎಂದು ಹೇಳಲಾಗುತ್ತದೆ. ಪ್ರಪಂಚದಾದ್ಯಂತ ಜನರು ಬೆಳಗಿನ ಉಪಾಹಾರದಲ್ಲಿ ಮೊಟ್ಟೆಗಳನ್ನು ತಿನ್ನಲು ಇಷ್ಟಪಡುತ್ತಾರೆ. ಜನರು ತಮ್ಮ ಇಚ್ಛೆಯಂತೆ ವಿವಿಧ ರೀತಿಯಲ್ಲಿ ಮೊಟ್ಟೆಗಳನ್ನು ತಿನ್ನಬಹುದಾದರೂ ನೀವು ಮೊಟ್ಟೆಗಳನ್ನು ಹೇಗೆ ತಿನ್ನುತ್ತೀರಿ ಎಂಬುದು ಮುಖ್ಯವಲ್ಲ, ಆದರೆ ಕೆಲವು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ, ಖಂಡಿತವಾಗಿಯೂ ಅದನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಮೊಟ್ಟೆ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ಎಂದು ಪೌಷ್ಟಿಕತಜ್ಞರು ಹೇಳುತ್ತಿದ್ದರೂ, ನೀವು ಅದನ್ನು ಹೇಗೆ ತಯಾರಿಸುತ್ತೀರಿ ಎಂಬುದರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿರುತ್ತದೆ. ಮೊಟ್ಟೆಯಿಂದ ಶಕ್ತಿ ಸಂಪೂರ್ಣ ಪೋಷಕಾಂಶ ಸಿಗುತ್ತದೆ ಎನ್ನುತ್ತಾರಾದರೂ ಬಹುತೇಕ ಮಂದಿ ಮೊಟ್ಟೆಯ ಹಳದಿ ಭಾಗವನ್ನು ತ್ಯಜಿಸುತ್ತಾರೆ. ಆದರೆ ನಿಮಗೆ ಮೊಟ್ಟೆಯಿಂದ ಹೆಚ್ಚಿನ ಪೋಷಕಾಂಶ ಬೇಕು ಅನ್ನೋದಾದರೆ ಮೊಟ್ಟೆಯ ಹಳದಿಭಾಗವನ್ನೂ ತಿನ್ನಬೇಕು. ಏಕೆಂದರೆ ಮೊಟ್ಟೆಯಲ್ಲಿರುವ ಹೆಚ್ಚಿನ ಪೋಷಕಾಂಶಗಳು ಅದರ ಹಳದಿ ಲೋಳೆಯಲ್ಲಿಯೇ ಹೆಚ್ಚಾಗಿರುತ್ತವೆ. ಸಂಪೂರ್ಣ ಮೊಟ್ಟೆ ಸಂಪೂರ್ಣ ಪೋಷಕಾಂಶ. ಬಿಳಿ ಪದರ ಮತ್ತು ಹಳದಿ ಭಾಗ ಎರಡೂ ತಿನ್ನೋದು…