ಬೆಂಗಳೂರು:- ಇದು ಸಾರಿಗೆ ಸಚಿವರು ನೋಡಲೇ ಬೇಕಾದ ಸುದ್ದಿ. ಬಿಎಂಟಿಸಿಯಿಂದಲೇ ನಗರದಲ್ಲಿ ಹೆಚ್ಚಾಗ್ತಿದ್ಯಾ ಟ್ರಾಫಿಕ್ ಜಾಮ್.. ಸಂಚಾರದಟ್ಟಣೆ ಬ್ರೇಕ್ ಹಾಕ್ಬೇದವರೇ, ಟ್ರಾಫಿಕ್ ಜಾಮ್ ಗೆ ಕಾರಣರಾಗ್ತಿದ್ದರಾ..? ಬೆಂಗಳೂರು ಟ್ರಾಫಿಕ್ ಪೊಲೀಸರ ಅಂಕಿ ಅಂಶ ಬಿಚ್ಚಿಟ್ಟ ರಹಸ್ಯವೇನು..? ಇವೆಲ್ಲಾ ಸಮಸ್ಯೆಗಳು ಪ್ರಯಾಣಿಕರನ್ನ ಸಾಗಿಸಬೇಕಾಗಿದ್ದ BMTC ಯನ್ನ ಜನರೇ ದೂಡಬೇಕಾದ ಪರಿಸ್ಥಿತಿ. ನೋ ‘ ರೈಟ್ ರೈಟ್ ‘. ಹೌದು, ರಾಜಧಾನಿ ಬೆಂಗಳೂರಿನಲ್ಲಿ ದಿನಕ್ಕೆ 4-5 ಬಿಎಂಟಿಸಿ ಬಸ್ ಗಳು ಕೆಟ್ಟು ಹೋಗ್ತಿವೆ. ಮಾರ್ಗ ಮಧ್ಯೆನೇ ಕೆಟ್ಟು ಹೋಗ್ತಿರೋದ್ರಿಂದ ಟ್ರಾಫಿಕ್ ಕಿರಿ ಕಿರಿ ಉಂಟಾಗುತ್ತಿದೆ. ತಿಂಗಳಿಗೆ 120-170 ಬಸ್ ಗಳು ಈ ರೀತಿ ಕೆಟ್ಟು ರಸ್ತೆಯಲ್ಲೆ ನಿಲುಗಡೆ ಮಾಡಲಾಗುತ್ತಿದೆ. ಮಾರ್ಗ ಮಧ್ಯೆ ಬಸ್ ಕೆಟ್ಟು ನಿಲ್ಲೋದ್ರಿಂದ ಗಂಟೆ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ವರ್ಷ ನಡು ರಸ್ತೆಯಲ್ಲಿ ಕೆಟ್ಟು ಹೋದ ವಾಹನಗಳ ಪೈಕಿ ಬಿಎಂಟಿಸಿ ಬಸ್ ಗಳೇ ಮೊದಲ ಸ್ಥಾನ. ಈ ವರ್ಷ ಬರೋಬ್ಬರಿ 1,478 ಬಿಎಂಟಿಸಿ ಬಸ್ ಗಳು ಕೆಟ್ಟು ರಸ್ತೆಯಲ್ಲೇ…
Author: AIN Author
ಬೆಂಗಳೂರು: ಗೊಂಬೆ ಮಾಸ್ಕ್ ಧರಿಸಿ ಲಗ್ಗೆರೆ ಬಳಿ ಹದಿನೈದು ಕಾರು ಗ್ಲಾಸ್ ಗಳನ್ನ ಪುಡಿ ಮಾಡಿ ಪುಂಡಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ರಾಜಗೋಪಾಲನಗರ ಪೊಲೀಸ್ರಿಂದ ಆರು ಮಂದಿಯನ್ನು ಬಂಧಿಸಲಾಗಿದೆ ಏರಿಯಾದಲ್ಲಿ ಹವಾ ಮೈಂಟೇನ್ ಮಾಡಲು ಈ ಯುವಕರ ಗುಂಪು ಕೃತ್ಯ ಎಸಗಿದ್ದಾರೆ. ಆರೋಪಿಗಳು, ಂಠ ಪೂರ್ತಿ ಕುಡಿದು ರಾಡ್ ಮತ್ತು ಲಾಂಗ್ ನಿಂದ ಕಾರು ಗ್ಲಾಸ್ ಹೊಡೆದಿದ್ದರು. ಬೈಕ್ ಗಳಲ್ಲಿ ಬಂದು ತೂರಾಡಿಕೊಂಡು ಮನಬಂದಂತೆ ವರ್ತನೆ ಮಾಡಿ ಎಸ್ಕೇಪ್ ಆಗಿದ್ದರು. ಸ್ಥಳಕ್ಕೆ ಶಾಸಕ ಮುನಿರತ್ನ ಭೇಟಿ ಕೊಟ್ಟು ಪರಿಶೀಲನೆ ಮಾಡಿದರು. ಪಕ್ಕದ ಏರಿಗಳಿಂದ ಬಂದು ಕೃತ್ಯ ಎಸಗಿ ಬೇರೆಡೆ ಪ್ರತ್ಯೇಕವಾಗಿದ್ದುಕೊಂಡು ತಲೆಮರೆಸಿಕೊಂಡಿದ್ರು. ಇದೀಗ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದಾವಣಗೆರೆ: ಮುಂಬರುವ 2024ರ ಲೋಕಸಭೆ ಚುನಾವಣೆಗೆ ನಾವು ಕೂಡ ಭರ್ಜರಿಯಾಗಿ ತಯಾರಿಯನ್ನ ನಡೆಸಿದ್ದು, ರಾಜ್ಯದಲ್ಲಿ ಈ ಬಾರಿ ಬಿಜೆಪಿ ಧೂಳಿಪಟವಾಗಲಿದೆ ಎಂದು ಬಿಜೆಪಿ ವಿರುದ್ದ ಸಚಿವ ಈಶ್ವರ್ ಖಂಡ್ರೆ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಮತ್ತು ಮುಂಚೂಣಿ ಮುಖಂಡರ ಸಭೆಯನ್ನ ಕರೆಯಲಾಗಿತ್ತು. ಸಭೆಗೆ ಆಗಮಿಸಿದ್ದ ಸಚಿವ ಈಶ್ವರ ಖಂಡ್ರೆ ಬಿಜೆಪಿ ವಿರುದ್ಧ ಹರಿಹಾಯ್ದರು. https://ainlivenews.com/are-we-stupid-to-believe-hd-kumaraswamys-words-dcm-question/ ಈ ಬಾರಿ ಮಳೆಯ ಕೊರತೆಯಿಂದ ಇಡೀ ರಾಜ್ಯವೇ ಬರದಿಂದ ತತ್ತರಿಸಿ ಹೋಗಿದೆ. ಮುಂಗಾರು ಸಂಪೂರ್ಣ ನಷ್ಟವಾಗಿದ್ದು, ಹಿಂಗಾರು ನಷ್ಟವಾಗುವ ಲಕ್ಷಣಗಳಿವೆ. ಬರದಿಂದ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಬರ ಪರಿಹಾರದ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಬರ ಪರಿಹಾರದ ಪ್ರಸ್ತಾವನೆ ಕಳಿಸಿದ್ದೇವೆ. ಆದರೆ, ಕೇಂದ್ರ ಸರ್ಕಾರ ಈವರೆಗೂ ನಯಾ ಪೈಸೆ ಹಣವನ್ನ ಬಿಡುಗಡೆ ಮಾಡಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ರಾಜ್ಯದ ಮೇಲೆ ಪ್ರಹಾರದ ಮೇಲೆ ಪ್ರಹಾರ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಚಳಿಗಾಲದಲ್ಲಿ ಪಿಸ್ತಾ ತಿನ್ನುವುದರಿಂದ ಬಹಳ ಉಪಯೋಗವಾಗುತ್ತದೆ ಎಂದು ವೈದ್ಯರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಪಿಸ್ತಾವನ್ನು ದಿನನಿತ್ಯ ಸೇವಿಸುವುದರಿಂದ ದೇಹಕ್ಕೆ ಉಂಟಾಗುವ ಹಲವು ಕಾಯಿಲೆಗಳನ್ನು ತಡೆಗಟ್ಟಬಹುದು. ಪಿಸ್ತಾದಲ್ಲಿ ಹಲವು ಅಂಶಗಳನ್ನು ಒಳಗೊಂಡಿದೆ. ಉದಾಹರಣೆಗೆ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು, ಬಹು ಅಪರ್ಯಾಪ್ತ ಕೊಬ್ಬಿನಾಮ್ಲಗಳು, ಲಿನೋಲಿಕ್ ಆಮ್ಲ, ಪ್ರೋಟೀನ್, ವಿಟಮಿನ್ಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೈಬರ್ಗಳ ಗುಣಗಳನ್ನೊಳಗೊಂಡಿದೆ. ಪಿಸ್ತಾ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳು ಸಿಗುತ್ತವೆ. ಹಾಗೂ ಮುಖ್ಯವಾಗಿ ಚಳಿಗಾಲದಲ್ಲಿ ಪಿಸ್ತಾ ತಿನ್ನುವುದರಿಂದ ಹಲವು ರೋಗಗಳಿಂದ ದೂರ ಉಳಿಯಬಹುದು. ರಕ್ತದ ಕೊರತೆ ನೀಗಿಸುತ್ತದೆ ಪಿಸ್ತಾದಲ್ಲಿ ವಿಟಮಿನ್ ಬಿ6 ಸಮೃದ್ಧವಾಗಿದ್ದು, ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಹಾಗೂ ಹಿಮೋಗ್ಲೋಬಿನ್ ಮಟ್ಟವನ್ನು ಕೂಡ ಉತ್ತಮ ಮಾಡುತ್ತದೆ. ಮಧುಮೇಹ ರೋಗಿಗಳಿಗೆ ಉತ್ತಮ : ಪಿಸ್ತಾ ಸೇವನೆಯು ಮಧುಮೇಹ ರೋಗಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ.ಪಿಸ್ತಾದಲ್ಲಿರುವ ಅನೇಕ ಅಂಶಗಳು ಮಧುಮೇಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಕಲಬುರಗಿ:- ಇಲ್ಲಿ ನಡೆದ KEA ಪರೀಕ್ಷಾ ಅಕ್ರಮಕ್ಕೆ ಸಹಕರಿಸಿದ ಆರೋಪದ ಇಬ್ಬರು ಉಪನ್ಯಾಸಕರನ್ನ CID ಪೋಲೀಸರು ಬಂಧಿಸಿದ್ದಾರೆ. ಅಫಜಲಪುರ ತಾಲೂಕಿನ ಬಸಣ್ಣ ಪೂಜಾರಿ & ಚಂದ್ರಕಾಂತ ಬಂಧಿತರು..ರಾಯಲ್ ಪಬ್ಲಿಕ್ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ಒಬ್ಬ ಅಧೀಕ್ಷಕ ಇನ್ನೊಬ್ಬ ಪ್ರಶ್ನೆ ಪತ್ರಿಕೆ ಕಸ್ಟೋಡಿಯನ್ ಆಗಿದ್ರು.. ಖಚಿತ ಮಾಹಿತಿ ಮೇರೆಗೆ ಇಬ್ಬರು ಆರೋಪಿಗಳು ಇದೀಗ ಲಾಕ್ ಆಗಿದ್ದಾರೆ. ಹೀಗಾಗಿ CID ಬೀಸಿದ ಬಲೆಗೆ ಈವರೆಗೆ ಒಟ್ಟು 7 ಜನ ಅಂದರ್ ಆದಂತಾಗಿದೆ..
ಬೆಂಗಳೂರು:- ಕುಂಬಳಗೋಡು ಪೊಲೀಸ್ ಠಾಣೆ ನೂತನ ಕಟ್ಟಡವನ್ನು ಗೃಹ ಸಚಿವ ಜಿ ಪರಮೇಶ್ವರ್ ಅವರು ಬುಧವಾರ ಉದ್ಘಾಟನೆ ಮಾಡಿದರು. ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಟಿಎ ಶರವಣ ಅವರು ಮುಖ್ಯ ಅತಿಥಿಯಾಗಿ ಭಾಗಿಯಾಗಿದರು. ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಇನ್ನೂ ಈ ಪೊಲೀಸ್ ಠಾಣೆಯ ನೂತನ ಕಟ್ಟಡದಲ್ಲಿ ಮಹಿಳಾ ಪೊಲೀಸರಿಗೆ ಪ್ರತ್ಯೇಕ ಶೌಚಗೃಹ, ವಿಶ್ರಾಂತಿ ಗೃಹ, ರಾತ್ರಿ ಉಳಿಯಲು ಕೊಠಡಿ ಇರುವುದು ವಿಶೇಷವಾಗಿದೆ. ದೂರುದಾರರು ಮತ್ತು ಸಾರ್ವಜನಿಕರು ಠಾಣೆಗೆ ಬಂದಾಗ ಅವರಿಗೆ ಕೂರಲು ಸ್ಥಳ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಒದಗಿಸಲಾಗಿದೆ. ಹಳೆಯ ಕೇಸ್‌ಗಳಿಗೆ ಸಂಬಂಧಿಸಿದ ರೆಕಾರ್ಡ್, ಜಪ್ತಿ ಮಾಡಿದ ವಸ್ತುಗಳ, ಸಶಸಗಳ ಸಂಗ್ರಹ ಸೇರಿದಂತೆ ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ಕೊಠಡಿ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮದಲ್ಲಿ, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಟಿ ಸೋಮಶೇಖರ್, ಡಿಜಿಪಿ ಡಾ.ಕೆ. ರಾಮಚಂದ್ರ ರಾವ್, ಐಜಿಪಿ ಡಾ.ಬಿ. ಆರ್. ರವಿಕಾಂತೇಗೌಡ, ಜಿಲ್ಲಾ…
ಕಳೆದ ಒಂದು ವರ್ಷದಿಂದ ಸುದ್ದಿ ಮಾಡುತ್ತಿದೆ. ಅವರ್ ಬಿಟ್ ಇವರ್ ಬಿಟ್ ಇನ್ಯಾರ್ ಎನ್ನುವ ಹಂತಕ್ಕೆ ಬಂದು ಹೋಗಿ ಬಹಳ ತಿಂಗಳಾದವು. ಈಗ ನಿರ್ದೇಶಕರು ಪಕ್ಕಾ ಆಗಿದ್ದಾರೆ. ಸಕಲ ತಂತ್ರಜ್ಞರೂ ಯುದ್ಧಕ್ಕೆ ಹೊರಡಲು ಸಿದ್ದರಾಗಿದ್ದಾರೆ. ಕ್ಯಾಮೆರಾ ಆನ್ ಆಗಲು ಚಡಪಡಿಸುತ್ತಿದೆ. ಇಷ್ಟಿದ್ದರೂ ಹೀಗಿದ್ದರೂ ಯಶ್ (Yash) ಮಾತ್ರ ಇನ್ ಸೈಲೆಂಟ್ ಮೋಡ್. ದಸರಾ ಹೊತ್ತಿಗೆ ಹೊಸ ಸಿನಿಮಾ ಘೋಷಣೆ ಎನ್ನಲಾಗಿತ್ತು. ಅದು ಹೋಯಿತು. ದೀಪಾವಳಿಗೆ ಪಕ್ಕಾ ಎಂದರು. ಇಲ್ಲ…ಅದಕ್ಕೂ ಕಲ್ಲು ಬಿದ್ದಿದೆ. ಭಕ್ತಗಣ ಕೊತಕೊತ ಕುದಿಯುತ್ತಿದೆ. ಯಾವಾಗ ಸಿನಿಮಾ ಎನ್ನುತ್ತಾ ಧರಣಿ ಮಾಡಲು ಸಜ್ಜಾಗಿದೆ. ದೀಪಾವಳಿ (Deepavali) ಹಬ್ಬಕ್ಕೆ ಟೈಟಲ್ ಅನೌನ್ಸ್ಮೆಂಟ್ ಫಿಕ್ಸ್ ಆಗಿದ್ದು ನಿಜವಾ ಅಥವಾ ಅವರವರೇ ಅಂದುಕೊಂಡಿದ್ದಾ ಎಲ್ಲವೂ ನಿಗೂಢ. ಈಗಾಗಲೇ ಕತೆ, ಚಿತ್ರಕತೆ, ಸಂಭಾಷಣೆ ಸಹಿತ ಸಕಲವೂ ಪೇಪರ್ ಮೇಲೆ ಬಂದು ಕುಳಿತಿದೆ. ಅದಕ್ಕೆ ಆಕ್ಷನ್ ಕಟ್ ಹೇಳಲು ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ತಯಾರಾಗಿದ್ದಾರೆ. ಮೊಟ್ಟ ಮೊದಲ ಬಾರಿಗೆ ಕಮರ್ಶಿಯಲ್ ಸಿನಿಮಾ, ಅದೂ ಯಶ್ ಜೊತೆ…
ಪಾಟ್ನಾ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹರಿದು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಸಚಿವರೊಬ್ಬರು ನೀಡಿರುವ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಬಿಹಾರದ ಜಮುಯಿ ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ನಿಂದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಒಬ್ಬರನ್ನು ಹತ್ಯೆ ಮಾಡಲಾಯಿತು. ಘಟನೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಸೇರಿದಂತೆ ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಬಿಹಾರ ಸಚಿವ ಚಂದ್ರಶೇಖರ್, ಇಂತಹ ಘಟನೆಗಳು ಹೊಸದೇನಲ್ಲ. ಇವುಗಳು ನಡೆಯುತ್ತಲೇ ಇರುತ್ತವೆ. ಈ ಹಿಂದೆಯೂ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಇಂತಹ ಘಟನೆಗಳು ನಡೆದಿವೆ ಎಂದು ಹೇಳಿಕೆ ನೀಡಿದ್ದಾರೆ. ಪ್ರಕರಣದ ಆರೋಪಿಗಳಿಗೆ ಕಾನೂನಿನ ಪ್ರಕಾರ ಶಿಕ್ಷೆ ನೀಡಲಾಗುವುದು ಎಂದು ತಿಳಿಸಿದ್ದಾರೆ. https://ainlivenews.com/are-we-stupid-to-believe-hd-kumaraswamys-words-dcm-question/ ಜಮುಯಿಯ ಮಹುಲಿಯಾ ತಾಂಡ್ ಗ್ರಾಮದಲ್ಲಿ ಈ ಹತ್ಯೆ ಘಟನೆ ನಡೆದಿದೆ. ಮೃತರನ್ನು ಪ್ರಭಾತ್ ರಂಜನ್ ಎಂದು ಗುರುತಿಸಲಾಗಿದ್ದು, ಸಿವಾನ್ ಜಿಲ್ಲೆಯ ನಿವಾಸಿಯಾಗಿದ್ದಾರೆ. ಗರ್ಹಿ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿದ್ದರು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟೊತ್ತಿಗಾಗಲೇ…
ದೊಡ್ಡಬಳ್ಳಾಪುರ: ಬಯಲಲ್ಲಿ ಆಟವಾಡುತ್ತಿದ್ದ 4 ವರ್ಷದ ಬಾಲಕಿಯ ಮೇಲೆ ಬೀದಿನಾಯಿ ದಾಳಿ ಮಾಡಿದ್ದು, ಬಾಲಕಿಯ ಕುತ್ತಿಗೆಗೆ ಬಾಯಾಕಿದೆ, ಬೆನ್ನಿನ ಮೇಲೆ ಎರಗಿ ಬಿದ್ದಿದೆ, ಅದೃಷ್ಟವಶಾತ್ ಸಂಬಂಧಿಕರು ಅದೇ ಸಮಯಕ್ಕೆ ಅಲ್ಲಿಗೆ ಬಂದಿದ್ದು ಬಾಲಕಿ ಪ್ರಾಣಾಪಾಯದಿಂದ ಪಾರಾಗಾಗಲು ಸಾಧ್ಯವಾಗಿದೆ. ದೊಡ್ಡಬಳ್ಳಾಪುರ ನಗರದ ಗಾಣಿಗರಪೇಟೆಯ ವಾಸವಿ ಕಲ್ಯಾಣ ಮಂಟಪದಲ್ಲಿ ನಿನ್ನೆ ಸಂಜೆ ಘಟನೆ ನಡೆದಿದ್ದು, ರಾಜೀವ್ ರವರ ನಾಲ್ಕು ವರ್ಷದ ಮಗಳು ಸ್ವೀಕೃತಿ ಮೇಲೆ ಬೀದಿ ನಾಯಿ ದಾಳಿ ಮಾಡಿದೆ, ಬಯಲಲ್ಲಿ ಮಕ್ಕಳ ಜೊತೆ ಆಟವಾಡುತ್ತಿದ್ದ ಸ್ವೀಕೃತಿ ಮನೆಯತ್ತ ಬರುತ್ತಿದ್ದಳು, ಈ ವೇಳೆ ಬೀದಿನಾಯೊಂದು ಪುಟ್ಟ ಬಾಲಕಿಯ ಮೇಲೆ ಎರಗಿದೆ, ಆಕೆಯ ಕುತ್ತಿಗೆ ಭಾಗಕ್ಕೆ ಬಾಯಾಕಿದೆ, ಬೆನ್ನಿನ ಮೇಲೆ ಬಲವಾಗಿ ಪರಚಿದೆ, ಬಾಲಕಿಯ ಅದೃಷ್ಟಕ್ಕೆ ಅದೇ ಸಮಯಕ್ಕೆ ಸಂಬಂಧಿಕರೊಬ್ಬರು ಅಲ್ಲಿಗೆ ಬಂದಿದ್ದಾರೆ, ನಾಯಿಯಿಂದ ಬಾಲಕಿಯ ರಕ್ಷಣೆ ಮಾಡಿದ್ದಾರೆ, ಮಗಳ ಮೇಲೆ ಬೀದಿ ನಾಯಿ ದಾಳಿ ಮಾಡಿರುವ ಬಗ್ಗೆ ಮಾತನಾಡಿದ ರಾಜೀವ್, ಒಂದು ವೇಳೆ ನಾಯಿ ಕುತ್ತಿಗೆ ಭಾಗಕ್ಕೆ ಬಾಯಾಕಿದ್ರೆ ಮಗಳ ಸ್ಥಿತಿ ಉಹಿಸಲೇ ಅಸಾಧ್ಯವಾಗಿತ್ತು…
ವಾಟ್ಸಾಪ್ ಇತ್ತೀಚೆಗೆ ಹೊಸ ಗೌಪ್ಯತೆ ವೈಶಿಷ್ಟ್ಯನ್ನು ಹೊರತಂದಿದೆ. ಅದೇ ಐಪಿ ಪ್ರೊಟೆಕ್ಷನ್ ಫೀಚರ್. ಈ ಫೀಚರ್ ವಾಟ್ಸಾಪ್ ಕರೆಯಲ್ಲಿ ಇರುವ ಇತರರಿಗೆ ನಿಮ್ಮ ಐಪಿ ವಿಳಾಸವನ್ನು ಮರೆ ಮಾಚುತ್ತದೆ. ಈ ವೈಶಿಷ್ಟ್ಯ ಸಕ್ರಿಯವಾಗಿದ್ದಾಗ, ನಿಮ್ಮ ಕರೆಗಳನ್ನು ನೇರವಾಗಿ ಡಿವೈಸ್ ಬದಲಾಗಿ ವಾಟ್ಸಾಪ್ ಸರ್ವರ್‌ಗಳ ಮೂಲಕ ಕಳುಹಿಸಲಾಗುತ್ತದೆ. ಇದರಿಂದ ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡಲು ಇತರರಿಗೆ ಹೆಚ್ಚು ಕಷ್ಟಕರವಾಗಿಸುತ್ತದೆ. ಪ್ರಸ್ತುತ ಈ ವೈಶಿಷ್ಟ್ಯ ಸೀಮಿತ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ ಎಲ್ಲರಿಗೂ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ವಾಟ್ಸಾಪ್ ಕರೆಯಲ್ಲಿ ಇತರರು ಭಾಗವಹಿಸುವವರಿಂದ ನಿಮ್ಮ ಐಪಿ ವಿಳಾಸವನ್ನು ಮರೆಮಾಡುವ ಮೂಲಕ ಇದು ನಿಮ್ಮ ಗೌಪ್ಯತೆಯನ್ನು ರಕ್ಷಿಸುತ್ತದೆ. ಇದು ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡಲು ಇತರರಿಗೆ ಹೆಚ್ಚು ಕಷ್ಟಕರವಾಗಿಸುತ್ತದೆ. ನಿಮ್ಮ ವಾಟ್ಸಾಪ್ ಕರೆಗಳ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ನಿಮಗೆ ಚೆನ್ನಾಗಿ ತಿಳಿದಿಲ್ಲದ ಜನರಿಗೆ ನೀವು ಕರೆಗಳನ್ನು ಮಾಡುತ್ತಿದ್ದರೆ ಅಥವಾ ನಿಮ್ಮ ಗೌಪ್ಯತೆಯ ಬಗ್ಗೆ ನೀವು ಕಾಳಜಿ ವಹಿಸುತ್ತಿದ್ದರೆ ಇದು ವಿಶೇಷವಾಗಿ ಮುಖ್ಯವಾದ ವೈಶಿಷ್ಟ್ಯವಾಗಿದೆ. ವಾಟ್ಸಾಪ್‌ನ…