ಜೈಪುರ:- ಕಾಂಗ್ರೆಸ್ ಪಕ್ಷ ಬುಡಸಮೇತ ಕಿತ್ತೊಗೆಯಲು ಜನತೆ ನಿರ್ಧರಿಸಿದ್ದಾರೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ. ರಾಜಸ್ಥಾನ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಉಸ್ತುವಾರಿ ವಹಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಚುನಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿನ ಕಾಂಗ್ರೆಸ್ ನಡೆಯೊಂದನ್ನು ಟೀಕಿಸಿರುವ ಅವರು ಅದಕ್ಕೆ ಸಂಬಂಧಿಸಿದಂತೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ ಎಂದು ಅವರು ಇಂದು ಒಂದು ಜಾಹೀರಾತು ನೀಡಿದ್ದಾರೆ. ಆದರೆ ಮುಖ್ಯಮಂತ್ರಿಯ ಸಾರ್ವಜನಿಕ ಸಭೆಗೇ ಜನರು ಬರುತ್ತಿಲ್ಲ. ಐದು ವರ್ಷಗಳಿಂದ ನಿದ್ರೆ ಮಾಡುತ್ತಿರುವ ಕಾಂಗ್ರೆಸ್ ಜನರಿಗೆ ಕೊಟ್ಟ ಒಂದು ಭರವಸೆಯನ್ನು ಕೂಡ ಈಡೇರಿಸಿಲ್ಲ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಜನತೆಗೆ ಸುಳ್ಳು ಹೇಳುವುದರಿಂದ ಅಲೆ ಸೃಷ್ಟಿಸಬಹುದು ಎಂಬುದು ಕಾಂಗ್ರೆಸ್ನವರ ಯೋಚನೆ. ಆದರೆ ಜನರು ಅವರನ್ನು ಬುಡಸಮೇತ ತೊಲಗಿಸಲು ನಿರ್ಧರಿಸಿದ್ದಾರೆ ಎಂಬುದಾಗಿ ರಾಜಸ್ಥಾನ ಕಾಂಗ್ರೆಸ್ ನಡೆ ವಿರುದ್ಧ ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದ್ದಾರೆ.
Author: AIN Author
ಚಾಮರಾಜನಗರ:- ತಾಲೂಕಿನ ಕಿಲಗೆರೆ ಗ್ರಾಮದ ಶ್ರೀ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಮೊದಲ ಕಾರ್ತೀಕ ಸೋಮವಾರದ ಅಂಗವಾಗಿ ೧೦೧ ದೀಪಗಳನ್ನು ಹಚ್ಚುವ ಮೂಲಕ ಸಡಗರದಿಂದ ಮೊದಲ ಕಾರ್ತೀಕ ಮಹೋತ್ಸವವನ್ನು ಆಚರಿಸಲಾಯಿತು. ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ, ದೊಡ್ಡಮ್ಮತಾಯಿ, ಚೆನ್ನಾಜಮ್ಮ ದೇವರುಗಳಿಗೆ ತಮಟೆ, ಜಾಗಟೆ ಸದ್ದಿನೊಂದಿಗೆ ಪೂಜೆ ಸಲ್ಲಿಸಿ, ನಂತರ ಬಸವನಿಗೆ ಪೂಜೆ ಸಲ್ಲಿಸಿದ ಬಳಿಕ ಸಿದ್ದಪ್ಪಾಜಿ, ಮಂಟೇಸ್ವಾಮಿ ಕಂಡಾಯಗಳನ್ನು ಸತ್ತಿಗೆ, ಸೂರಪಾನಿ, ಛತ್ರಿ ಚಾಮರಗಳೊಂದಿಗೆ ದೇವಸ್ಥಾನದ ಸುತ್ತ ಮೂರು ಸುತ್ತು ಬರಲಾಯಿತು. ತದನಂತರ ದೇವಸ್ಥಾನದ ಮುಂದೆ ಜೋಡಿಸಿದ್ದ ೧೦೧ ದೀಪಗಳನ್ನು ಹಚ್ಚುವ ಮೂಲಕ ಮೊದಲ ಕಾರ್ತೀಕ ಮಹೋತ್ಸವವನ್ನು ಆಚರಿಸಿದರು. ಈ ವೇಳೆ ಗ್ರಾಮದ ಜನತೆ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತಾದಿಗಳು ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು.
ಬೆಂಗಳೂರು:- ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಬಸನಗೌಡ ಯತ್ನಾಳ್ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. NEP ಬಾಲ್ಯದ ಆರೈಕೆ ಮತ್ತು ಶಿಕ್ಷಣದ ಪ್ರಾಮುಖ್ಯತೆಯನ್ನು ಗುರುತಿಸುತ್ತದೆ. ಇದು ಅಧಿಕಾರಾವಧಿ, ಬಡ್ತಿ ಮತ್ತು ಸಂಬಳ ರಚನೆಯ ದೃಢವಾದ ಅರ್ಹತೆ ಆಧಾರಿತ ರಚನೆಯನ್ನು ಹೈಲೈಟ್ ಮಾಡುವ ಗುರಿಯನ್ನು ಹೊಂದಿದೆ ಎಂದು ನೂತನ ಶಿಕ್ಷಣ ನೀತಿಯ ಮಹತ್ವ ತಿಳಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯು ಶಾಲೆಗಳಲ್ಲಿ ಬೋಧನಾ ಮಾಧ್ಯಮವಾಗಿ ಸ್ಥಳೀಯ ಭಾಷೆಗಳ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ನೀತಿ ಅಡಿಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಆರಾಮದಾಯಕ ಮತ್ತು ಉತ್ತಮವಾಗಿ ಪಠ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು. ಈ NEP ಜಾರಿಯಾದ ಬಳಿಕ ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ವೃತ್ತಿಪರ ಮತ್ತು ಕೌಶಲ್ಯ ಆಧಾರಿತ ತರಬೇತಿಯ ಏಕೀಕರಣಕ್ಕೆ ಆದ್ಯತೆ ನೀಡಲಾಗುತ್ತದೆ. ಹೀಗೆ ನಮ್ಮ ಪದವೀಧರರು ಹೆಚ್ಚು ಉದ್ಯೋಗಶೀಲರು ಮತ್ತು ಕೌಶಲ್ಯಪೂರ್ಣರಾಗುತ್ತಾರೆ. ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸಲು ಎನ್‌ಇಪಿ ಸಮಯದ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
ಬೆಂಗಳೂರು:- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರದಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ನಗರ ಜಿಲ್ಲೆ ವ್ಯಾಪ್ತಿಯಲ್ಲಿ 2,877 ಅಂಗನವಾಡಿ ಕೇಂದ್ರಗಳಿವೆ. ಇದರಲ್ಲಿ 430 ಕಾರ್ಯಕರ್ತೆಯರು ಹಾಗೂ 1,198 ಸಹಾಯಕಿಯರ ಹುದ್ದೆಗಳು 3-4 ವರ್ಷಗಳಿಂದ ಖಾಲಿ ಇವೆ. ಸಹಾಯಕಿಯರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಕಾರಣ ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಕ್ರಮ ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ನ್ಯಾಯಯುತವಾಗಿ ಇರುವವರಿಗೆ ಆದೇಶ ಪತ್ರ ನೀಡಬೇಕು ಎಂದು ಫೆಡರೇಷನ್ ಕಾರ್ಯದರ್ಶಿ ಎಂ. ಜಯಮ್ಮ ಒತ್ತಾಯಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಬೆಳಗ್ಗೆ 9.30ರಿಂದ ಸಂಜೆ 4ರವರೆಗೆ ಉಪಹಾರ ಸಿದ್ಧಪಡಿಸುವುದು, ಶಾಲಾ ಚಟುವಟಿಕೆ, ಗೃಹಲಕ್ಷ್ಮೀ ಯೋಜನೆ, ಆರೋಗ್ಯ ಸಮೀಕ್ಷೆ ಸೇರಿ ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಒಬ್ಬರೇ ಕಾರ್ಯನಿರ್ವಹಿಸಬೇಕಿದ್ದು, ಕೆಲಸದ ಒತ್ತಡ ಹೆಚ್ಚಾಗಿದೆ. ಹೀಗಾಗಿ, ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಪ್ರತಿಭಟನಾನಿರತರು ಆಗ್ರಹ ಮಾಡಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಸೂಪರ್ ಹಿಟ್ ಸಿನಿಮಾ ‘ಗೂಢಚಾರಿ’. ಅಡಿವಿ ಶೇಷ್ ನಟನೆಯಲ್ಲಿ ಮೂಡಿ ಬಂದ ಆಕ್ಷನ್ ಅಂಡ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಗಳಿಕೆ ಕಂಡಿತ್ತು. ಈ ಚಿತ್ರದ ಸೀಕ್ವೆಲ್ ಬರ್ತಿರೋದು ಗೊತ್ತೇ ಇದೆ. ಈಗಾಗಲೇ ರಿಲೀಸ್ ಆಗಿದ್ದ ‘ಗೂಢಚಾರಿ 2’ ಫಸ್ಟ್ ಲುಕ್ ಬರೀ ಸದ್ದು ಮಾಡಿತ್ತು. ಇದೀಗ ಚಿತ್ರತಂಡ ನಾಯಕಿಯನ್ನು ಪರಿಚಯಿಸಿದೆ. ಗೂಢಚಾರಿ-2 ಸಿನಿಮಾಗೆ ನಾಯಕಿ ಸಿಕ್ಕಿದ್ದಾರೆ. ಪ್ರತಿಭಾನ್ವಿತ ನಟಿ ಬನಿತಾ ಸಂಧು ಶೇಶ್ ಅಡಿವಿ ಶೇಷ್ ಗೆ ಜೋಡಿಯಾಗಿ ನಟಿಸುತ್ತಿದ್ದಾಳೆ. ಅಕ್ಟೋಬರ್, ಸರ್ದಾರ್ ಉದಾಮ್, ಆದಿತ್ಯ ವರ್ಮಾ ಸೇರಿದಂತೆ ಹಲವು ಹಿಂದಿ ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿದ್ದು, ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಬನಿತಾ, ಇದು ನನ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ವಿಷನರಿ ತಂಡದ ಜೊತೆ ಕೈ ಜೋಡಿಸಿರುವುದಕ್ಕೆ ಉತ್ಸುಕಳಾಗಿದ್ದೇನೆ. ನಾನು…
ಮಹದೇವಪುರ:- ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಯಿ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃತರ ನಿವಾಸಕ್ಕೆ ತೆರಳಿ ಸಂತ್ವಾನ ಹೇಳಿದ್ದಾರೆ. ಇನ್ನೂ ಕಾಡುಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಯಿ ಮಗು ನಿನ್ನೆ ಸಾವನ್ನಪ್ಪಿದ್ದರು.
ವಿಜಯಪುರ:- ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ಮನೆಯೊಂದು ಮೂರು ಬಾಗಿಲು ಅಗಿದೆ, ಒಬ್ಬರ ಮುಖ ಮತ್ತೊಬ್ಬರು ನೋಡದಂತಾಗಿದೆ. ಬಿಜೆಪಿಯಲ್ಲಿ ಆಂತರಿಕ ಕಲಹ ಬಹಳ ಇದೆ. ಆದರೆ, ಅದು ಯಾವತ್ತೂ ಸರಿ ಆಗಲ್ಲ, ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲ ಎಂದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮೊದಲಿಗೆ ತಮ್ಮ ಪಕ್ಷದಲ್ಲಿರುವ ಅವ್ಯವಸ್ಥೆಯನ್ನು ಸರಿ ಮಾಡಿಕೊಳ್ಳಲಿ, ಅವರ ತಾಟಿನಲ್ಲಿ ಹೆಗ್ಗಣ ಬಿದ್ದಿದೆ, ನಮ್ಮ ತಾಟಿನಲ್ಲಿ ನೊಣ ಬಿದ್ದಿದೆ ಎಂದು ಹೇಳುತ್ತಿದ್ದಾರೆ ಎಂದು ಕುಟುಕಿದರು. ಬಿಜೆಪಿ ಶಾಸಕಾಂಗ ಸಭೆಯಲ್ಲಿ ಏನೇನು ಆಗಿದೆ ಎಂಬುದನ್ನು ವಿಜಯೇಂದ್ರ ನೆನಪು ಮಾಡಿಕೊಳ್ಳಲಿ, ಅವರಿಗೆ ನಮ್ಮ ಬಗ್ಗೆ ಮಾತನಾಡುವ ಅವಶ್ಯಕತೆಯಿಲ್ಲ ಎಂದರು. ಕಾಂಗ್ರೆಸ್ ನಲ್ಲಿ ಎಲ್ಲರೂ ಒಗ್ಗಟ್ಟಿಗಿದ್ದೇವೆ, ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಜನರು ಸಹ ನಮ್ಮ ಸರ್ಕಾರದಿಂದ ನೀಡಿರೋ 5 ಗ್ಯಾರಂಟಿಗಳಿಂದ ತೃಪ್ತಿಯಾಗಿದ್ಧಾರೆ. ಇದನ್ನು ನೋಡಲು ಬಿಜೆಪಿಯವರಿಗೆ ಆಗುತ್ತಿಲ್ಲ ಎಂದರು. ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಸೆಳೆಯುವ…
ವೀಕೆಂಡ್ ಗಾಗಿ ಬಿಗ್ ಬಾಸ್ ಅಭಿಮಾನಿಗಳು ಕಾಯುತ್ತಿರುತ್ತಾರೆ. ಕಿಚ್ಚನ ಜೊತೆ ನಡೆಯೋ ಬಿಗ್ ಬಾಸ್ ಕಥೆ ಕೇಳಲು ಕಣ್ತುಂಬಿ ಕಾತುರರಾಗಿರುತ್ತಾರೆ. ಕಿಚ್ಚನ ಹೊಸ ಲುಕ್ ನೋಡುವುದಕ್ಕೆ ಹಾಗೂ ಕಿಚ್ಚನ ಆ ಮಾತು ಕೇಳೋಕೆ ಅಭಿಮಾನಿಗಳಿಗೆ ಹಬ್ಬ. ಇಷ್ಟೇ ಅಲ್ಲ ಸುದೀಪ್ ಬಂದು ಹೋದ ಮೇಲೆ ಕಿಚ್ಚನ ಅಭಿಮಾನಿಗಳು, ಸುದೀಪ್ ಹಾಕೋ ಕಾಸ್ಟೂಮ್ಸ್ ಬಗ್ಗೆ ಮಾತಾಡ್ತಾರೆ. ಇದೀಗ ಸಂಡೇ ಎಪಿಸೋಡ್ ನಲ್ಲಿ ಹಾಕಿರೋ Costume ಮತ್ತು ಶ್ಯೂ ಬೆಲೆ ಕೇಳಿ ಫ್ಯಾನ್ಸ್ ಫುಲ್ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಸುದೀಪ್ ಧರಿಸಿದ ಜಾಕೆಟ್ ಮತ್ತು ಶೂ ಬೆಲೆ ಕೇಳಿದ್ರೆ ನೀವು ಕೂಡ ಶಾಕ್ ಹಾಗ್ತೀರಾ ! ಜಾಕೆಟ್ ಬೆಲೆ ಬರೋಬ್ಬರಿ 97,259, ಆದರೆ ಸುದೀಪ್ ಧರಿಸಿದ ಶೂ ಬೆ ಯಲೆ 94,700 ರೂ. ಇಷ್ಟು ದುಬಾರಿಯ ಬಟ್ಟೆ ಕಿಚ್ಚ ಧರಿಸುತ್ತಾರೆ ಎಂದು ಕೇಳಿದ ಫ್ಯಾನ್ಸ್ ಒಂದು ಕ್ಷಣ ಧಂಗಾಗಿದ್ದಾರೆ.
ಬೆಂಗಳೂರು:- ಬ್ಯಾಟರಾಯನಪುರದಲ್ಲಿ ಪೌರ ಕಾರ್ಮಿಕ ಕೊಲೆ ಮಾಡಿದ ಆಟೊ ಚಾಲಕ ಬಂಧಿಸಲಾಗಿದೆ. ಪ್ರಭು ಬಂಧಿತ ಆರೋಪಿ. ಪಂತರಪಾಳ್ಯದ ನಿವಾಸಿ ಭರತ್, ಬಿಬಿಎಂಪಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಆರೋಪಿ ಪ್ರಭು, ಆಟೊ ಚಾಲಕ. ಇವರಿಬ್ಬರು ಪರಿಚಿತರಾಗಿದ್ದರು’ ಎಂದು ಪೊಲೀಸರು ಹೇಳಿದರು. ‘ಪಂತರಪಾಳ್ಯದಲ್ಲಿ ವ್ಯಕ್ತಿಯೊಬ್ಬರು ನಿಧನ ಹೊಂದಿದ್ದರು. ಮನೆ ಎದುರು ಪಾರ್ಥಿವ ಶರೀರವನ್ನು ದರ್ಶನಕ್ಕೆ ಇರಿಸಲಾಗಿತ್ತು. ಅದೇ ಸ್ಥಳದಲ್ಲಿ ಭರತ್ ಹಾಗೂ ಪ್ರಭು ಒಟ್ಟಿಗೆ ಸೇರಿದ್ದರು. ಕ್ಷುಲ್ಲಕ ಕಾರಣಕ್ಕಾಗಿ ಅವರಿಬ್ಬರ ನಡುವೆ ಗಲಾಟೆ ಶುರುವಾಗಿತ್ತು.’ ‘ಮಾತಿನ ಚಕಮಕಿ ನಡೆದು, ಇಬ್ಬರೂ ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಆರೋಪಿ ಪ್ರಭು, ಚಾಕುವಿನಿಂದ ಭರತ್ ಅವರ ಕತ್ತು ಹಾಗೂ ದೇಹದ ಇತರೆ ಭಾಗಗಳಿಗೆ ಇರಿದಿದ್ದ. ತೀವ್ರ ಗಾಯಗೊಂಡಿದ್ದ ಭರತ್ ಅವರನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಯೇ ಅವರು ಮೃತಪಟ್ಟರು’ ಎಂದು ಪೊಲೀಸರು ಹೇಳಿದರು.
ಬೆಂಗಳೂರು:- ಭ್ರಷ್ಟಾಚಾರ ಆರೋಪದ ಹಿನ್ನೆಲೆ, ಬೆಂಗಳೂರಿನ 11 ಕಡೆ ಲೋಕಾಯುಕ್ತ ದಾಳಿ ನಡೆಸಿದ್ದು, ಭೂ ಮಾಪನ ಇಲಾಖೆ ಕಚೇರಿಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಸರ್ವೆಗಳಿಗೆ ಸಂಬಂಧಿಸಿದ ಕಡತಗಳ ವಿಲೇವಾರಿಯಲ್ಲಿನ ಅಕ್ರಮ, ಹಣಕ್ಕೆ ಬೇಡಿಕೆ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ ಭೂದಾಖಲೆ ನಿರ್ದೇಶಕರ ಕಚೇರಿ ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಲೋಕಾಯುಕ್ತ ಕಾರ್ಯಾಚರಣೆ ಕೈಗೊಂಡಿದೆ. ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಮೇಲೆ ಖುದ್ದು ಲೋಕಾಯುಕ್ತ ನ್ಯಾ. ಬಿ. ಎಸ್. ಪಾಟೀಲ್ ನೇತೃತ್ವದ ತಂಡ ದಾಳಿ ನಡೆಸಿ ಪರಿಶೀಲಿಸಿದೆ. ಲೋಕಾಯುಕ್ತ ದಾಳಿ ನಡೆದ ಸ್ಥಳಗಳು ಎಡಿಎಲ್‌ಆರ್, ದೊಡ್ಡಬಳ್ಳಾಪುರ ಡಿಡಿಎಲ್‌ಆರ್, ಬೆಂಗಳೂರು ಗ್ರಾಮಾಂತರ, ಡಿಡಿ ಕಚೇರಿ, ದೊಡ್ಡಬಳ್ಳಾಪುರ ರಸ್ತೆ, ಚಪ್ರಕಲ್ಲು ಎಡಿಎಲ್‌ಆರ್, ದೇವನಹಳ್ಳಿ ಎಡಿಎಲ್‌ಆರ್, ಆನೇಕಲ್ ಎಡಿಎಲ್‌ಆರ್, ಕೆ.ಆರ್.ಪುರಂ ಉತ್ತರ ವಿಭಾಗದ ಎಡಿಎಲ್‌ಆರ್, ಕಂದಾಯ ಭವನ ಡಿಡಿಎಲ್‌ಆರ್, ಡಿಸಿ ಬೆಂಗಳೂರು ನಗರ, ಕಂದಾಯ ಭವನ ಎಡಿಎಲ್‌ಆರ್, ನೆಲಮಂಗಲ ಎಡಿಎಲ್‌ಆರ್ , ಹೊಸಕೋಟೆ ಎಡಿಎಲ್‌ಆರ್ ದಕ್ಷಿಣ, ಕಂದಾಯ ಭವನ ಎಡಿಎಲ್‌ಆರ್ ಯಲಹಂಕ ಲೋಕಾಯುಕ್ತ ಬಿ.ಎಸ್. ಪಾಟೀಲ್ ಪ್ರತಿಕ್ರಿಯಿಸಿ, ನಗರದ…