ಬೆಂಗಳೂರು:- ಬ್ಯಾಟರಾಯನಪುರದಲ್ಲಿ ಪೌರ ಕಾರ್ಮಿಕ ಕೊಲೆ ಮಾಡಿದ ಆಟೊ ಚಾಲಕ ಬಂಧಿಸಲಾಗಿದೆ. ಪ್ರಭು ಬಂಧಿತ ಆರೋಪಿ.
ಪಂತರಪಾಳ್ಯದ ನಿವಾಸಿ ಭರತ್, ಬಿಬಿಎಂಪಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಆರೋಪಿ ಪ್ರಭು, ಆಟೊ ಚಾಲಕ. ಇವರಿಬ್ಬರು ಪರಿಚಿತರಾಗಿದ್ದರು’ ಎಂದು ಪೊಲೀಸರು ಹೇಳಿದರು.
‘ಪಂತರಪಾಳ್ಯದಲ್ಲಿ ವ್ಯಕ್ತಿಯೊಬ್ಬರು ನಿಧನ ಹೊಂದಿದ್ದರು. ಮನೆ ಎದುರು ಪಾರ್ಥಿವ ಶರೀರವನ್ನು ದರ್ಶನಕ್ಕೆ ಇರಿಸಲಾಗಿತ್ತು. ಅದೇ ಸ್ಥಳದಲ್ಲಿ ಭರತ್ ಹಾಗೂ ಪ್ರಭು ಒಟ್ಟಿಗೆ ಸೇರಿದ್ದರು. ಕ್ಷುಲ್ಲಕ ಕಾರಣಕ್ಕಾಗಿ ಅವರಿಬ್ಬರ ನಡುವೆ ಗಲಾಟೆ ಶುರುವಾಗಿತ್ತು.’
‘ಮಾತಿನ ಚಕಮಕಿ ನಡೆದು, ಇಬ್ಬರೂ ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಆರೋಪಿ ಪ್ರಭು, ಚಾಕುವಿನಿಂದ ಭರತ್ ಅವರ ಕತ್ತು ಹಾಗೂ ದೇಹದ ಇತರೆ ಭಾಗಗಳಿಗೆ ಇರಿದಿದ್ದ. ತೀವ್ರ ಗಾಯಗೊಂಡಿದ್ದ ಭರತ್ ಅವರನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಯೇ ಅವರು ಮೃತಪಟ್ಟರು’ ಎಂದು ಪೊಲೀಸರು ಹೇಳಿದರು.