ಬೆಂಗಳೂರು:- ನಾಲ್ಕು ದಿನಗಳ ಕಾಲ ರಾಜಧಾನಿ ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳಕ್ಕೆ ಅದ್ದೂರಿ ತೆರೆ ಬಿದ್ದಿದೆ. ಆರಂಭದ ದಿನಕ್ಕಿಂತ ವಾರಾಂತ್ಯದ ದಿನಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ಮೇಳದ ವಿಶೇಷತೆ ವೀಕ್ಷಿಸಿದರು. ಉದ್ಘಾಟನಾ ದಿನವಾದ ಶುಕ್ರವಾರ 1.31 ಲಕ್ಷ ಜನರು ಆಗಮಿಸಿದ್ದರೆ, ವಾರಾಂತ್ಯದ ಶನಿವಾರ ಈ ಸಂಖ್ಯೆ ಬರೋಬ್ಬರಿ 5.48 ಲಕ್ಷದಷ್ಟಿತ್ತು. ಭಾನುವಾರವಾದ ಮೂರನೇ ದಿನ ಕ್ರಿಕೆಟ್ ನಡುವೆಯೂ 5.10 ಲಕ್ಷ ಜನರು ಭೇಟಿ ನೀಡಿದ್ದು, ಮೂರು ದಿನದಲ್ಲಿ 11.89 ಲಕ್ಷ ಜನರು ಕೃಷಿ ಮೇಳವನ್ನು ವೀಕ್ಷಿಸಿದ್ದರು. ನಾಲ್ಕನೇ ಹಾಗೂ ಕೊನೆಯ ದಿನ ಅಂದರೆ ಇಂದು 3.78 ಲಕ್ಷ ಜನ ವೀಕ್ಷಕರು ಬಂದು ಕೃಷಿ ಮೇಳ ಆಸ್ಪಾದಿಸಿದ್ದಾರೆ. ಅಲ್ಲದೆ ವಾರಾಂತ್ಯ ದಿನಗಳಾದ ಶನಿವಾರ 1.65 ಲಕ್ಷ ಭಾನುವಾರ 1.45 ಕೋಟಿ ವ್ಯವಹಾರ ನಡೆದಿತ್ತು. ಇದು ಕೃಷಿಮೇಳದ ಅದ್ಧೂರಿ ಯಶಸ್ಸಿಗೆ ನಿದರ್ಶನವಾಗಿದೆ. ಮೇಳಕ್ಕೆ ಭೇಟಿ ನೀಡಿದವರ ಸಂಖ್ಯೆ 15.67 ಲಕ್ಷ ದಾಟಿದೆ. ಜೊತೆಗೆ, 5.28 ಕೋಟಿ ವ್ಯವಹಾರ ನಡೆದಿದೆ.
Author: AIN Author
ಕೇರಳ: ಇಸ್ರೇಲ್ – ಹಮಾಸ್ ಉಗ್ರರ ನಡುವಣ ಸಂಘರ್ಷ ನಡೆಯುತ್ತಿರುವ ಹೊತ್ತಲ್ಲಿ ಕೇರಳ ರಾಜ್ಯದ ಕಾಂಗ್ರೆಸ್ ಸಂಸದ ರಾಜಮೋಹನ್ ಉನ್ನಿತಾನ್ ಹಮಾಸ್ ಉಗ್ರರ ಪರ ವಹಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಮಾಸ್ ಉಗ್ರರು ಭಯೋತ್ಪಾ ದಕರಲ್ಲ, ಅವರು ಕೇವಲ ತಮ್ಮ ಭೂಮಿಯ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ರಾಜಮೋಹನ್ ಉನ್ನಿತಾನ್ ಹೇಳಿದ್ದಾರೆ. ಈ ಮೂಲಕ ನೇರವಾಗಿಯೇ ಹಮಾಸ್ ಉಗ್ರರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಇದೇ ವೇಳೆ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ವಿರುದ್ಧವೂ ಹರಿಹಾಯ್ದಿರುವ ಕಾಂಗ್ರೆಸ್ ಎಂಪಿ ರಾಜಮೋಹನ್ ಉನ್ನಿತಾನ್, ಯಾವುದೇ ವಿಚಾರಣೆ ನಡೆಸದೆ ಬೆಂಜಮಿನ್ ನೆತನ್ಯಾಹು ಅವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಪ್ಯಾಲಿಸ್ತೀನ್ ಹೋರಾಟಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಕಾಸರಗೋಡು ಯುನೈಟೆಡ್ ಮುಸ್ಲಿಂ ಜಮಾಯತ್ ಸಂಘಟನೆಯು ಸಮಾವೇಶ ಆಯೋಜಿಸಿತ್ತು. https://ainlivenews.com/geo-scientist-statue-murder-case-explosive-issue-comes-to-light-during-investigation/ ಈ ಸಮಾವೇಶದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಸಂಸದ ರಾಜಮೋಹನ್ ಉನ್ನಿತಾನ್, ಹಮಾಸ್ ಸಂಘಟನೆಯ ಸದಸ್ಯರು ಭಯೋತ್ಪಾದಕರಲ್ಲ ಎಂದು ಹೇಳಿದರು. ಅಷ್ಟೇ ಅಲ್ಲ ಹಮಾಸ್…
ಕೋಲಾರ: ಮುಖ್ಯಮಂತ್ರಿಗಳು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ರಾಜಕಾರಣ ಮಾಡುತ್ತಿದ್ದಾರೆಯೇ ಹೊರತು ರಾಜ್ಯದ ಅಭಿವೃದ್ಧಿ ಗಾಗಿ ರಾಜಕಾರಣ ನಡೆಯುತ್ತಿಲ್ಲ. ಈ ಹಿಂದೆ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಹೋರಾಟ ಮಾಡಲಾಗಿತ್ತು. ಪ್ರಸ್ತುತ ಮೂರು ಪಕ್ಷಗಳು ರಾಜಕೀಯ ಬಿಟ್ಟು ತೊಲಗಿ ಎಂದು ಕ್ರಾಂತಿ ಮಾಡ ಬೇಕಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. ಆಮ್ ಆದ್ಮಿ ಪಕ್ಷದ ವತಿಯಿಂದ ಹಮ್ಮಿ ಕೊಂಡಿರುವ ಅರಳಿಕಟ್ಟೆ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ರಾಜ್ಯದಲ್ಲಿ ಈವರೆಗೂ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅಭಿವೃದ್ಧಿಗೆ ಆದ್ಯತೆ ನೀಡದೆ ಸರ್ವಾಧಿಕಾರಿಯಾಗಿ ಆಡಳಿತ ನಡೆಸಿವೆ. ಜೆಡಿಎಸ್ ಸಂದರ್ಭಾನುಸಾರ ವಾಗಿ ಅನುಕೂಲ ಸಿಂಧು ರಾಜಕಾರಣ ಮಾಡಿವೆ. ಪ್ರಧಾನಿ ನರೇಂದ್ರ ಮೋದಿ ಕಳೆದ 9 ವರ್ಷಗಳಿಂದ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ. ಧಾರ್ಮಿಕ, ಕೋಮುವಾದ, ಹಿಟ್ಲರ್ ಮಾದರಿ ಆಡಳಿತ, ಗುಲಾಮಗಿರಿಯ ಮಂತ್ರಿಮಂಡಲ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. https://ainlivenews.com/geo-scientist-statue-murder-case-explosive-issue-comes-to-light-during-investigation/ ರಾಜ್ಯದಲ್ಲಿ ಬರಗಾಲ ಬಂದಿದೆ. ಎಲ್ಲಾ ರಾಜ್ಯಗಳಿಗೂ ಕೇಂದ್ರದಿಂದ…
ಒಂದು ನಿಮಿಷದಲ್ಲಿ ನಿಮ್ಮ ಮುಖ ಬಿಳಿಯಾಗಬೇಕಾದರೆ ಹೀಗೆ ಮಾಡಿ ಸಾಕು . ನೀವು ಕುಡಿಯುವ ಕಾಫಿಪುಡಿಯಿಂದ..! ಮುಖ ಬೆಳ್ಳಗಾಗೋದು ಅಲ್ಲದೇ ಚರ್ಮವೂ ಕಾಂತಿಯಿಂದ ಮಿಂಚುತ್ತದೆ. ಬಗೆ ಬಗೆಯ ಸೋಪುಗಳು ವಿವಿಧ ರೀತಿಯ ಕ್ರಿಮ್ಗಳನ್ನು ನೋಡ್ತಾ ಇದ್ದಿವಿ. ಈ ಎಲ್ಲ ಸೌಂದರ್ಯ ಸಾಧನಗಳು ಇವೆ. ಇದೆಲ್ಲ ಒಂದು ಕಡೆ ಆದ್ರೆ ಬಿಸಿಲಿನ ತೀವೃತೆ ಮತ್ತು ಧೂಳು , ಆಹಾರ ಪದ್ದತಿ, ಜೀವನ ಶೈಲಿ ಇತ್ಯಾದಿ ಆನೇಕ ಕಾರಣಗಳಿಂದ ಮುಖ ಕಪ್ಪಗೆ, ಡಲ್ ಆಗಿ ಕಾಣುತ್ತದೆ. ಕೆಲವರಿಗೆ ಬೋರಿಂಗ್ ನೀರು ಸಹ ಆಗಿಬರದೆ ಕಪ್ಪು ಬಣ್ಣಕ್ಕೆ ಚರ್ಮ ತಿರುಗುತ್ತದೆ. ಆದರೆ ಹೀಗೆ ಕಪ್ಪು ಬಣ್ಣಕೆ ತಿರುಗಿದ ಚರ್ಮವನ್ನು ಕಾಫಿಪುಡಿ ಉಪಯೋಗ ಮಾಡಿ ಮುಖವನ್ನು ಬೆಳ್ಳಗೆ ಮಾಡಿಕೊಳ್ಳಬಹುದು ಸುಲಭವಾಗಿಯೇ… ಯಾವ ಕಾಫಿಪುಡಿ ಬಳಸಬೇಕು ಅಂತ ಸಂದೇಹ ಬರುತ್ತಿದೆಯಾ? ಹಾಗಾದ್ರೆ ಅದಕೆಲ್ಲ ಉತ್ತರ ಇಲ್ಲಿದೆ.! ನಮಗೆ ಸುಲಭವಾಗಿ ಸಿಗುವ ಕಾಫಿಪುಡಿಯನ್ನೇ ತೆಗೆದುಕೊಳ್ಳಬೇಕು. ಅದ್ರಲ್ಲು ಬ್ರು ಮತ್ತು ನೆಸ್ಕೆಫೇ ಪ್ರತಿಯೊಬ್ಬರ ಮನೆಯಲ್ಲೂ ಇದ್ದೆ ಇರುತ್ತೆ ಇಂತಹ ಬ್ರು ಅಥವಾ…
ಬೆಂಗಳೂರು :- ಬಿಬಿಎಂಪಿಯಿಂದ ರಸ್ತೆಗಳಲ್ಲಿ ಡಕ್ಟ್ ಅಳವಡಿಕೆ ಮಾಡಲಾಗುತ್ತದೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ವೈಟ್‌ಟಾಪಿಂಗ್ ಹಾಗೂ ಕೆಲವು ಪ್ರಮುಖ ರಸ್ತೆಗಳಲ್ಲಿ ಡಕ್ಟ್ ವ್ಯವಸ್ಥೆ ಇದೆ. ಇತರೆ ರಸ್ತೆಗಳಲ್ಲಿ ಈ ವ್ಯವಸ್ಥೆಯಿಲ್ಲ. ಹೀಗಾಗಿ ಹಲವು ಸಂಸ್ಥೆಗಳು ಕೇಬಲ್ ಅಥವಾ ಒಎಫ್‌ಸಿ ಅಳವಡಿಸಲು ರಸ್ತೆ ಅಗೆಯುತ್ತಿರುತ್ತವೆ. ಇದನ್ನು ತಪ್ಪಿಸಲು ಯೋಜಿಸಲಾಗಿದೆ’ ಎಂದರು. ರಸ್ತೆಯಲ್ಲಿ ದೊಡ್ಡ ಅಳತೆಯ ಪೈಪ್ ಅಳವಡಿಸುವುದರಿಂದ ಮತ್ತೆ ಮತ್ತೆ ರಸ್ತೆ ಅಗೆಯುವುದು ತಪ್ಪುತ್ತದೆ. ಆದ್ದರಿಂದ ಬಿಬಿಎಂಪಿ ವತಿಯಿಂದಲೇ ಪೈಪ್ ಅಳವಡಿಸಲು ಯೋಜಿಸಲಾಗಿದೆ. ಈ ಯೋಜನೆಗೆ ಸದ್ಯದಲ್ಲಿಯೇ ಟೆಂಡರ್ ಕರೆಯಲಾಗುತ್ತದೆ’ ಎಂದರು. ‘ಬಿಬಿಎಂಪಿಗೆ ಹೋಲಿಸಿದರೆ ಬೆಸ್ಕಾಂ, ನಗರದಲ್ಲಿ ಡಕ್ಟ್ ಮೂಲಕ ಹೆಚ್ಚು ಕೇಬಲ್ ಅಳವಡಿಸಿದೆ. ಸುಮಾರು 400 ಕಿ.ಮೀ ಡಕ್ಟ್ ಇದೆ. ಬಿಬಿಎಂಪಿಯ ಕೆಲವು ರಸ್ತೆಗಳಲ್ಲಿ ಡಕ್ಟ್ ಇವೆ. ಇದರಲ್ಲೇ ಒಎಫ್‌ಸಿ ಹಾಗೂ ಕೇಬಲ್ ಸಂಸ್ಥೆಗಳು ತಮ್ಮ ಕೇಬಲ್‌ಗಳನ್ನು ಅಳವಡಿಸಿಕೊಳ್ಳಬೇಕು. ಇದಲ್ಲದೆ ಬೇರೆಡೆ ಕೇಬಲ್ ಅಳವಡಿಸಲು ಅವಕಾಶವಿಲ್ಲ’ ಎಂದು ತುಷಾರ್ ಗಿರಿನಾಥ್ ಹೇಳಿದರು.
ಬೆಂಗಳೂರು:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಹೆಂಡತಿಯನ್ನು ರೂಂನಲ್ಲಿ ಕೂಡಿಹಾಕಿ ಅತ್ತೆ, ಮಕ್ಕಳ ಜೊತೆ ನಿದ್ರಿಸುತ್ತಿದ್ದ ಪತಿ ವಿರುದ್ಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಘಟನೆ ಜರುಗಿದೆ. ಅಲ್ಲದೇ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಪತಿ ಹಾಗೂ ಮನೆಯವರ ವಿರುದ್ಧ ಆರೋಪಿಸಲಾಗಿದೆ. ಮದುವೆಗೂ ಮೊದಲು ನಾನು ಸ್ಕ್ರಾಪ್ ಡೀಲರ್ ಆಗಿದ್ದು, ಲಕ್ಷ ಲಕ್ಷ ಹಣ ಬರುತ್ತದೆ ಅಂತ ಪ್ರತಾಪ್ ನಂಬಿಸಿದ್ದನು. ಮದುವೆಯಾದ ಬಳಿಕವೇ ಪ್ರತಾಪ್ ಸ್ಕ್ರಾಪ್ ಡೀಲರ್ ಬಳಿ ಕೆಲಸ ಮಾಡುತ್ತಿದ್ದ ಎಂಬ ವಿಚಾರ ತಿಳಿದುಬಂದಿದೆ. ಮದುವೆಯಾದ ಬಳಿಕ ಗಂಡ ಪ್ರತಾಪ್ನನ್ನು ಕರೆದುಕೊಂಡು ತನ್ನ ಅತ್ತೆ ಮಾವನೊಂದಿಗೆ ಅಶ್ಚಿನಿ ವಾಸವಿದ್ದಳು. ಇಲ್ಲಿ ಸಣ್ಣ ಸಣ್ಣ ವಿಚಾರಗಳಿಗೂ ಜಗಳ ತೆಗೆದು ಹಣ ತರುವಂತೆ ಮಾನಸಿಕ ದೈಹಿಕ ಹಿಂಸೆ ನೀಡುತ್ತಿದ್ದರು. ನಂತರ ಬೆಂಗಳೂರಿನ ಕಿರ್ಲೋಸ್ಕರ್ ಲೇಔಟ್ನಲ್ಲಿ ಲೀಸ್ ಮನೆಯಲ್ಲಿ ವಾಸವಾಗಿದ್ದಾರೆ. ಅಲ್ಲಿಯೂ ವರದಕ್ಷಿಣೆ ತರುವಂತೆ ಹಿಂಸೆ ನೀಡುತ್ತಿದ್ದರು. ಅಲ್ಲದೆ, ಪತಿ ಪ್ರತಾಪ್ ಅವರ ಅತ್ತೆ ದೇವಿಕಾ ಅವರ ಮಗಳಾದ ಚಿತ್ರ ಅವರೊಂದಿಗೆ…
ನವದೆಹಲಿ: ದೇಶೀಯ ಹಾಗೂ ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ (India) ಆಪಲ್ ಐಫೋನ್‌ಗಳನ್ನು (Apple iPhones) ತಯಾರಿಸಲು ಟಾಟಾ ಗ್ರೂಪ್ ಆರಂಭಿಸಲಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ತಿಳಿಸಿದ್ದಾರೆ. ಆಪಲ್‌ನ ಪ್ರಮುಖ ಪೂರೈಕೆದಾರ ಕಂಪನಿ ವಿಸ್ಟ್ರಾನ್ ಕಾರ್ಪೊರೇಷನ್ ಖರೀದಿ ಕುರಿತಂತೆ ಆಡಳಿತ ಮಂಡಳಿ ಸಭೆ ನಡೆಸಿದ್ದು, ಅದರ ನಿರ್ಣಯದ ಪ್ರತಿಯನ್ನು ಸಚಿವರು ಹಂಚಿಕೊಂಡಿದ್ದಾರೆ ಈ ಕುರಿತು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ PLI ಯೋಜನೆಯು ಈಗಾಗಲೇ ಭಾರತವನ್ನು ಸ್ಮಾರ್ಟ್‌ಫೋನ್ ತಯಾರಿಕೆ ಮತ್ತು ರಫ್ತಿಗೆ ಅತ್ಯಂತ ವಿಶ್ವಾಸಾರ್ಹ ಕೇಂದ್ರವಾಗಿ ಮಾರ್ಪಟ್ಟಿದೆ. ಇನ್ನು ಕೇವಲ ಎರಡುವರೆ ವರ್ಷಗಳೊಳಗೆ ಟಾಟಾ ಕಂಪನಿಯು ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಭಾರತದಿಂದ ಐಫೋನ್‌ಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ ಎಂದು ತಿಳಿಸಿದ್ದಾರೆ. ವಿಸ್ಟ್ರಾನ್ ಕಾರ್ಯಾಚರಣೆಯನ್ನು ವಹಿಸಿಕೊಂಡಿರುವ ಟಾಟಾ ತಂಡಕ್ಕೆ ಹಾರ್ದಿಕ ಅಭಿನಂದನೆಗಳು. ಅದ್ಭುತ ಕೊಡುಗೆಗಳನ್ನು ನೀಡಿರುವ ವಿಸ್ಟ್ರಾನ್ ತಂಡಕ್ಕೆ ಧನ್ಯವಾದಗಳು. ಆಪಲ್ ಸಂಸ್ಥೆಯು ತನ್ನ ಚುಕ್ಕಾಣಿಯಲ್ಲಿರುವ ಭಾರತೀಯ…
ಇತ್ತೀಚೆಗೆ ಯುವಕರಲ್ಲಿ ಹೃದಯಘಾತ ಹೆಚ್ಚಾಗುತ್ತಿದೆ ಎನ್ನುವ ಆತಂಕ ಪದೇ ಪದೇ ಕೇಳುತ್ತಿದ್ದೇವೆ. ಆದರೆ, ಬೆಂಗಳೂರು ಹಾಗೂ ಸುತ್ತಮುತ್ತ ಉಂಟಾಗುತ್ತಿರುವ ವಾಯು ಮಾಲಿನ್ಯದಿಂದಲೂ ಹೃದಯಘಾತ ಆಗುತ್ತಿದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹತ್ತಿಬೆಲೆಯ ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಆಯೋಜನೆ ಮಾಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಹೃದಯಘಾತ ಎನ್ನುವುದು ಎಲ್ಲೆಡೆ ಕೇಳಿ ಬರುತ್ತಿರುವ ಆಘಾತಕಾರಿ ವಿಚಾರ. ಆದರೆ, ಹೃದಯಾಘಾತಕ್ಕೆ ವ್ಯಾಕ್ಸಿನ್ ಕಾರಣ ಎನ್ನುವುದು ಸುಳ್ಳು ಎಂದು ಹೇಳಿದ್ದಾರೆ. ಶೇ.35ರಷ್ಟು ಹೃದಯಘಾತಗಳು 45 ವರ್ಷದ ಒಳಗಿನವರಲ್ಲಿಯೇ ಆಗುತ್ತಿದೆ ಎನ್ನುವುದು ಆತಂಕಕಾರಿ ಸಂಗತಿ. ಆದರೆ, ಇದು ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಘಟನೆ ಅಲ್ಲ. 15 ವರ್ಷಗಳ ಹಿಂದಿನಿಂದಲೂ ಕೂಡ ಇಂತಹ ಘಟನೆಗಳು ಆಗಾಗ ಆಗುತ್ತಿವೆ. ಪ್ರತಿಷ್ಠಿತರ ಮನೆಯ ಮಕ್ಕಳು ಹೃದಯಾಘಾತಕ್ಕೆ ಒಳಪಡುತ್ತಿರುವುದರಿಂದ ಇದು ಹೆಚ್ಚು ಪ್ರಚಾರಕ್ಕೆ ಬರುತ್ತಿದೆ ಎಂದು ತಿಳಿಸಿದ್ದಾರೆ. 10 ಲಕ್ಷದಲ್ಲಿ 4 ಜನರಿಗೆ ಹೃದಯಘಾತ ಇನ್ನು ಕೋವಿಡ್ ನಂತರ ವ್ಯಾಕ್ಸಿನ್ ತೆಗೆದುಕೊಂಡ 10 ಲಕ್ಷದಲ್ಲಿ…
ಹಳೆಯ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (High Security Registration Plate) ಅಳವಡಿಸಲು ಸಾರಿಗೆ ಇಲಾಖೆ ಇನ್ನೂ ಮೂರು ತಿಂಗಳು ಸಮಯಾವಕಾಶ ಕೊಟ್ಟಿದೆ. ಹೆಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಹಾಕಿಸೋಕೆ ನವೆಂಬರ್ 17 ಕೊನೆಯ ದಿನ ಎಂದು ಸರ್ಕಾರ ಡೆಡ್‌ಲೈನ್ ಕೊಟ್ಟಿತ್ತು. ಇದೀಗ ಈ ಡೆಡ್‌ಲೈನ್ ವಿಸ್ತರಣೆ ಆಗಿದೆ. 2024ರ ಫೆಬ್ರುವರಿ 17ರವರೆಗೂ ಸರ್ಕಾರ ಟೈಂ ಕೊಟ್ಟಿದೆ. 2019ರ ಏಪ್ರಿಲ್ 1ಕ್ಕಿಂತ ಮೊದಲು ನೀವು ಖರೀದಿ ಮಾಡಿದ ವಾಹನಗಳಿಗೆ HSRP ನಂಬರ್ ಪ್ಲೇಟ್ ಇರಲಿಲ್ಲ. 2019ರ ಏಪ್ರಿಲ್ 1ರ ನಂತರ ಖರೀದಿ ಮಾಡಿರುವ ಎಲ್ಲಾ ವಾಹನಗಳಿಗೆ ಷೋರೂಮ್ ನವರೇ HSRP ನಂಬರ್ ಪ್ಲೇಟ್ ನೀಡುತ್ತಿದ್ದಾರೆ. 2019ರ ಏಪ್ರಿಲ್ 1ಕ್ಕಿಂತ ಮೊದಲು ನೀವು ವಾಹನ ಖರೀದಿ ಮಾಡಿದ್ದರೆ HSRP ನಂಬರ್ ಪ್ಲೇಟ್ ಹಾಕಿಸಲೇಬೇಕು. HSRP ನಂಬರ್ ಪ್ಲೇಟ್ ಎಂದರೇನು..? ಹೆಚ್‌ಎಸ್‌ಆರ್‌ಪಿ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದ್ದು, ನೋಂದಣಿ ಸಂಖ್ಯೆಯನ್ನು ಹೊರತುಪಡಿಸಿ ಅನೇಕ ವಿವರಗಳನ್ನು ಹೊಂದಿರುತ್ತವೆ. ವಿಶಿಷ್ಟವಾದ ಏಳು-ಅಂಕಿಯ ಲೇಸರ್ ಕೋಡ್, ನಕಲು ತಡೆಯಲು ಚಕ್ರಾಕಾರದ ಹೋಲೊಗ್ರಾಮ್,…
ಬೆಂಗಳೂರು:- ಬೆಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಸತ್ತು ಹೋಗಿದ್ದಾನೆಂದು ಬಿಂಬಿಸಿಕೊಂಡು ಕೊಲೆ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡು ತಿರುಗುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಬಂಧಿತ ಆರೋಪಿ. ಕಾಡುಬಿಸನಹಳ್ಳಿ ಸೋಮನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಲ್ಲಿಕಾರ್ಜುನ.ಬಳಿಕ ರಾಜಾನುಕುಂಟೆಯಲ್ಲಿ ಒಂದು ಕೊಲೆ ಕೇಸ್ ನಲ್ಲಿ ಅರೋಪಿಯಾಗಿದ್ದ. ಪೊಲೀಸರಿಗೆ ಸಿಗದೆ ಎರಡು ವರ್ಷಗಳಿಂದ ತಲೆತಪ್ಪಿಸಿಕೊಂಡು ತಿರುಗಾಡುತ್ತಿದ್ದ ಖತರ್ನಾಕ ಆಸಾಮಿ. ಪೊಲೀಸರು ಮನೆಯವರನ್ನು ವಿಚಾರಿಸಿದಾಗ ಮಗ ಸತ್ತು ಹೋಗಿದ್ದಾನೆ ಎಂದು ನಂಬಿಸಿದ್ದ ಕುಟುಂಬದವರು. ಆದರೆ ಸಿಸಿಬಿಗೆ ಅವನು ಸತ್ತಿರುವ ವಿಚಾರದ ಬಗ್ಗೆ ಡೌಟು ಬಂದಿತ್ತು. ಹೀಗಾಗಿ ಈ ಪ್ರಕರಣದಲ್ಲಿ ಸತ್ತಿದ್ದಾನೆಂದು ಹೇಳಲಾದ ಆರೋಪಿ ಮಲ್ಲಿಕಾರ್ಜುನ ಪತ್ತೆಗೆ ವಿಚಾರಣೆಗೆ ಮುಂದಾಗಿತ್ತು. ಗೆಳೆಯರು, ಕುಟುಂಬಸ್ಥರು ಯಾರನ್ನೇ ಕೇಳಿದರೂ ಸತ್ತಿದ್ದಾನೆಂದು ಮಾಹಿತಿ ನೀಡುತ್ತಿದ್ದರು. ಸಿಸಿಬಿ ಅಷ್ಟಕ್ಕೆ ಸುಮ್ಮನಾಗಲಿಲ್ಲ. ಆರೋಪಿ ಮಲ್ಲಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕತೊಡಗಿತು. ಕೊನೆಗೆ ಆರೋಪಿ ಮಲ್ಲಿ ಸತ್ತಿಲ್ಲ. ಅರೆಸ್ಟ್‌ನಿಂದ ಬಚಾವ್ ಆಗಲು ಸತ್ತಿದ್ದಾನೆ ಬಿಂಬಿಸಿ ತಲೆಮರೆಸಿಕೊಂಡು ಊರೂರು ಓಡಾಡುತ್ತಿರುವ ಬಗ್ಗೆ ಮಾಹಿತಿ ಕಲೆಹಾಕಿ ಕೊನೆಗೂ ಬಂಧಿಸಿದ್ದಾರೆ