Facebook Twitter Instagram YouTube
    ಕನ್ನಡ English తెలుగు
    Saturday, December 2
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    HSRP ನಂಬರ್ ಪ್ಲೇಟ್ ಅಳವಡಿಕೆಗೆ 3 ತಿಂಗಳ ಗಡುವು

    AIN AuthorBy AIN AuthorNovember 21, 2023
    Share
    Facebook Twitter LinkedIn Pinterest Email

    ಹಳೆಯ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (High Security Registration Plate) ಅಳವಡಿಸಲು ಸಾರಿಗೆ ಇಲಾಖೆ ಇನ್ನೂ ಮೂರು ತಿಂಗಳು ಸಮಯಾವಕಾಶ ಕೊಟ್ಟಿದೆ. ಹೆಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಹಾಕಿಸೋಕೆ ನವೆಂಬರ್ 17 ಕೊನೆಯ ದಿನ ಎಂದು ಸರ್ಕಾರ ಡೆಡ್‌ಲೈನ್ ಕೊಟ್ಟಿತ್ತು. ಇದೀಗ ಈ ಡೆಡ್‌ಲೈನ್ ವಿಸ್ತರಣೆ ಆಗಿದೆ. 2024ರ ಫೆಬ್ರುವರಿ 17ರವರೆಗೂ ಸರ್ಕಾರ ಟೈಂ ಕೊಟ್ಟಿದೆ.

    2019ರ ಏಪ್ರಿಲ್‌ 1ಕ್ಕಿಂತ ಮೊದಲು ನೀವು ಖರೀದಿ ಮಾಡಿದ ವಾಹನಗಳಿಗೆ HSRP ನಂಬರ್ ಪ್ಲೇಟ್ ಇರಲಿಲ್ಲ. 2019ರ ಏಪ್ರಿಲ್ 1ರ ನಂತರ ಖರೀದಿ ಮಾಡಿರುವ ಎಲ್ಲಾ ವಾಹನಗಳಿಗೆ ಷೋರೂಮ್ ನವರೇ HSRP ನಂಬರ್ ಪ್ಲೇಟ್ ನೀಡುತ್ತಿದ್ದಾರೆ. 2019ರ ಏಪ್ರಿಲ್‌ 1ಕ್ಕಿಂತ ಮೊದಲು ನೀವು ವಾಹನ ಖರೀದಿ ಮಾಡಿದ್ದರೆ HSRP ನಂಬರ್ ಪ್ಲೇಟ್ ಹಾಕಿಸಲೇಬೇಕು.

    Demo

    HSRP ನಂಬರ್ ಪ್ಲೇಟ್ ಎಂದರೇನು..?
    ಹೆಚ್‌ಎಸ್‌ಆರ್‌ಪಿ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದ್ದು, ನೋಂದಣಿ ಸಂಖ್ಯೆಯನ್ನು ಹೊರತುಪಡಿಸಿ ಅನೇಕ ವಿವರಗಳನ್ನು ಹೊಂದಿರುತ್ತವೆ. ವಿಶಿಷ್ಟವಾದ ಏಳು-ಅಂಕಿಯ ಲೇಸರ್ ಕೋಡ್, ನಕಲು ತಡೆಯಲು ಚಕ್ರಾಕಾರದ ಹೋಲೊಗ್ರಾಮ್, ನಿಮ್ಮ ವಾಹನದ ಎಂಜಿನ್ ಮತ್ತು ಚಾಸಿಸ್ ಸಂಖ್ಯೆ ಹೊಂದಿರುವ ಸ್ವಯಂ-ವಿನಾಶಕಾರಿ ಸ್ಟಿಕ್ಕರ್ ಅನ್ನು ಒಳಗೊಂಡಿದೆ. “IND” ಎಂದು ನೀಲಿ ಬಣ್ಣದಲ್ಲಿ ಎಂಬೋಸ್ ಮಾಡಲಾಗಿರುತ್ತದೆ. ಪ್ಲೇಟ್‌ನಲ್ಲಿರುವ ಎಲ್ಲಾ ಅಕ್ಷರಗಳು ಮತ್ತು ಸಂಖ್ಯೆಗಳಾದ್ಯಂತ 45 ಡಿಗ್ರಿ ಕೋನದಲ್ಲಿINDIA ಎಂದು ಹಾಟ್ ಸ್ಟಾಂಪಿಂಗ್ ಮಾಡಲಾಗಿರುತ್ತದೆ. ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳು ಸ್ನ್ಯಾಪ್-ಆನ್ ಲಾಕ್ ಅನ್ನು ಒಳಗೊಂಡಿರುತ್ತವೆ ಮತ್ತು ಹೇಗಾದರೂ ಆ ಲಾಕ್ ತೆಗೆದುಹಾಕಿದರೆ ಅದನ್ನು ಮರುಬಳಕೆ ಮಾಡಲಾಗುವುದಿಲ್ಲ.

    ಎಲ್ಲಾ ಮೋಟಾರು ವಾಹನಗಳ ರಾಷ್ಟ್ರೀಯ ಡೇಟಾ ಬೇಸ್ ರಚಿಸಲು HSRPಗಳು ಸಹಾಯ ಮಾಡುತ್ತವೆ. ನೀವು ದೇಶದ ಯಾವುದೇ ಹಳ್ಳಿಯಲ್ಲಿ ವಾಸಿಸುತ್ತಿದ್ದರೂ HSRPಗಳು ಕಡ್ಡಾಯ.

    ನಾಲ್ಕು ಚಕ್ರದ ವಾಹನಗಳಿಗೆ ನಂಬರ್ ಪ್ಲೇಟ್ ಹಾಕಿಸಲು 650-850 ರೂಪಾಯಿ ಮತ್ತು ಬೈಕ್, ಸ್ಕೂಟರ್‌ಗಳಿಗೆ 400- 600 ರೂಪಾಯಿ ವೆಚ್ಚವಾಗುತ್ತೆ. HSRP ನಂಬರ್ ಪ್ಲೇಟ್ ಗಳಿಗೆ ಐದು ವರ್ಷಗಳ ವಾರಂಟಿ ಇರುತ್ತದೆ.

    ಹೆಚ್‌ಎಸ್‌ಆರ್‌ಪಿ ಪಡೆಯುವುದು ಹೇಗೆ..?
    ಕರ್ನಾಟಕ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ https://transport.karnataka.gov.in ಅಥವಾ www.siam.in ಭೇಟಿ ನೀಡಿ ಮತ್ತು ‘Book HSRP’ ಮೇಲೆ ಕ್ಲಿಕ್ ಮಾಡಿ. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ ಮತ್ತು ಅಲ್ಲಿ ಕೇಳುವ ನಿಮ್ಮ ವಾಹನದ ವಿವರವನ್ನು ಭರ್ತಿ ಮಾಡಿ.


    Share. Facebook Twitter LinkedIn Email WhatsApp

    Related Posts

    Petrol Diesel Price: ಗ್ರಾಹಕರೇ ಗಮನಿಸಿ: ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಳಿಕೆ ಸಾಧ್ಯತೆ.! ಈ ದಿನದ ಬೆಲೆಗಳು ಹೀಗಿವೆ

    December 2, 2023

    Gold Price: ಚಿನ್ನದ ದರ ಮತ್ತಷ್ಟು ದುಬಾರಿ, ಒಂದು ಗ್ರಾಮ್ ಗೆ ಬೆಲೆ ಎಷ್ಟು ಗೊತ್ತಾ!?

    December 2, 2023

    SmartPhones: ಹೊಸ ಫೋನ್‌ ಕೊಳ್ಳುವ ಯೋಚನೆಯಲ್ಲಿದ್ದೀರಾ: ಇಲ್ಲಿದೆ ಕಮ್ಮಿ ಬೆಲೆಗೆ 5G ನ್ಯೂ ಮೊಬೈಲ್ಸ್!

    December 2, 2023

    Cylinder Price hike: ಗ್ರಾಹಕರಿಗೆ ಬಿಗ್ ಶಾಕ್ : ವಾಣಿಜ್ಯ ಬಳಕೆ ಎಲ್​ಪಿಜಿ ಸಿಲಿಂಡರ್ ದರ ಏರಿಕೆ

    December 1, 2023

    Bigg News: ಹೊಸ ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಸುವವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್:   ಈಗಲೇ ಮಿಸ್ ಮಾಡ್ದೆ ಓದಿ!

    December 1, 2023

    Whats Appನಲ್ಲಿ ಅಪರಿಚಿತ ಕರೆಗಳಿಂದ ಬೇಸತ್ತು ಹೋಗಿದ್ದೀರಾ?: ಇಲ್ಲಿದೆ ಟಿಪ್ಸ್

    December 1, 2023

    Visa-Free Entry: ಮಲೇಷ್ಯಾಗೆ ತೆರಳುವವರಿಗೆ ಗುಡ್‌ ನ್ಯೂಸ್:‌ ಇಂದಿನಿಂದ ಭಾರತೀಯರು ವೀಸಾ ಇಲ್ಲದೇ ಪ್ರಯಾಣಿಸಬಹುದು!

    December 1, 2023

    Gold Price: ಗಗನಕ್ಕೇರಿದ ಚಿನ್ನದ ಬೆಲೆ: ಬೆಂಗಳೂರಿನಲ್ಲಿ ಚಿನ್ನದ ಬೆಲೆ ಕೇಳಿದ್ರೆ ಶಾಕ್‌ ಆಗುತ್ತೆ!

    December 1, 2023

    ಬಸ್‌ ಅಪಘಾತ ಕೇಸ್ ತಡೆಯಲು ಟೆಕ್ನಾಲಜಿ ಮೊರೆ ಹೊದ BMTC : ಹೇಗೆ ನಿರ್ವಹಿಸುತ್ತೆ ಗೊತ್ತಾ ಹೊಸ ಟೆಕ್ನಾಲಜಿ?

    December 1, 2023

    Recruitment: NIT ಕರ್ನಾಟಕದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: 50 ಸಾವಿರದವರೆಗೆ ಸಂಬಳ

    December 1, 2023

    Fitness Startup: ಬೆಂಗಳೂರು ಮೂಲದ  ಸ್ಟಾರ್ಟ್ಅಪ್ನಲ್ಲಿ ಹೂಡಿಕೆ ಮಾಡಿದ MS ಧೋನಿ!

    November 30, 2023

    ಆಭರಣ ಪ್ರಿಯರಿಗೆ ಶಾಕ್: ಚಿನ್ನದ ಬೆಲೆ ಭರ್ಜರಿ ಹೆಚ್ಚಳ, ಬೆಳ್ಳಿ ದರವೂ ದುಬಾರಿ

    November 30, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.