ಬೆಂಗಳೂರು :- ಬಿಬಿಎಂಪಿಯಿಂದ ರಸ್ತೆಗಳಲ್ಲಿ ಡಕ್ಟ್ ಅಳವಡಿಕೆ ಮಾಡಲಾಗುತ್ತದೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ವೈಟ್ಟಾಪಿಂಗ್ ಹಾಗೂ ಕೆಲವು ಪ್ರಮುಖ ರಸ್ತೆಗಳಲ್ಲಿ ಡಕ್ಟ್ ವ್ಯವಸ್ಥೆ ಇದೆ. ಇತರೆ ರಸ್ತೆಗಳಲ್ಲಿ ಈ ವ್ಯವಸ್ಥೆಯಿಲ್ಲ. ಹೀಗಾಗಿ ಹಲವು ಸಂಸ್ಥೆಗಳು ಕೇಬಲ್ ಅಥವಾ ಒಎಫ್ಸಿ ಅಳವಡಿಸಲು ರಸ್ತೆ ಅಗೆಯುತ್ತಿರುತ್ತವೆ. ಇದನ್ನು ತಪ್ಪಿಸಲು ಯೋಜಿಸಲಾಗಿದೆ’ ಎಂದರು.
ರಸ್ತೆಯಲ್ಲಿ ದೊಡ್ಡ ಅಳತೆಯ ಪೈಪ್ ಅಳವಡಿಸುವುದರಿಂದ ಮತ್ತೆ ಮತ್ತೆ ರಸ್ತೆ ಅಗೆಯುವುದು ತಪ್ಪುತ್ತದೆ. ಆದ್ದರಿಂದ ಬಿಬಿಎಂಪಿ ವತಿಯಿಂದಲೇ ಪೈಪ್ ಅಳವಡಿಸಲು ಯೋಜಿಸಲಾಗಿದೆ. ಈ ಯೋಜನೆಗೆ ಸದ್ಯದಲ್ಲಿಯೇ ಟೆಂಡರ್ ಕರೆಯಲಾಗುತ್ತದೆ’ ಎಂದರು.
‘ಬಿಬಿಎಂಪಿಗೆ ಹೋಲಿಸಿದರೆ ಬೆಸ್ಕಾಂ, ನಗರದಲ್ಲಿ ಡಕ್ಟ್ ಮೂಲಕ ಹೆಚ್ಚು ಕೇಬಲ್ ಅಳವಡಿಸಿದೆ. ಸುಮಾರು 400 ಕಿ.ಮೀ ಡಕ್ಟ್ ಇದೆ. ಬಿಬಿಎಂಪಿಯ ಕೆಲವು ರಸ್ತೆಗಳಲ್ಲಿ ಡಕ್ಟ್ ಇವೆ. ಇದರಲ್ಲೇ ಒಎಫ್ಸಿ ಹಾಗೂ ಕೇಬಲ್ ಸಂಸ್ಥೆಗಳು ತಮ್ಮ ಕೇಬಲ್ಗಳನ್ನು ಅಳವಡಿಸಿಕೊಳ್ಳಬೇಕು. ಇದಲ್ಲದೆ ಬೇರೆಡೆ ಕೇಬಲ್ ಅಳವಡಿಸಲು ಅವಕಾಶವಿಲ್ಲ’ ಎಂದು ತುಷಾರ್ ಗಿರಿನಾಥ್ ಹೇಳಿದರು.