ಬೆಂಗಳೂರು:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಹೆಂಡತಿಯನ್ನು ರೂಂನಲ್ಲಿ ಕೂಡಿಹಾಕಿ ಅತ್ತೆ, ಮಕ್ಕಳ ಜೊತೆ ನಿದ್ರಿಸುತ್ತಿದ್ದ ಪತಿ ವಿರುದ್ಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಘಟನೆ ಜರುಗಿದೆ.

ಅಲ್ಲದೇ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಪತಿ ಹಾಗೂ ಮನೆಯವರ ವಿರುದ್ಧ ಆರೋಪಿಸಲಾಗಿದೆ. ಮದುವೆಗೂ ಮೊದಲು ನಾನು ಸ್ಕ್ರಾಪ್ ಡೀಲರ್ ಆಗಿದ್ದು, ಲಕ್ಷ ಲಕ್ಷ ಹಣ ಬರುತ್ತದೆ ಅಂತ ಪ್ರತಾಪ್ ನಂಬಿಸಿದ್ದನು. ಮದುವೆಯಾದ ಬಳಿಕವೇ ಪ್ರತಾಪ್ ಸ್ಕ್ರಾಪ್ ಡೀಲರ್ ಬಳಿ ಕೆಲಸ ಮಾಡುತ್ತಿದ್ದ ಎಂಬ ವಿಚಾರ ತಿಳಿದುಬಂದಿದೆ.

ಮದುವೆಯಾದ ಬಳಿಕ ಗಂಡ ಪ್ರತಾಪ್​ನನ್ನು ಕರೆದುಕೊಂಡು ತನ್ನ ಅತ್ತೆ ಮಾವನೊಂದಿಗೆ ಅಶ್ಚಿನಿ ವಾಸವಿದ್ದಳು. ಇಲ್ಲಿ ಸಣ್ಣ ಸಣ್ಣ ವಿಚಾರಗಳಿಗೂ ಜಗಳ ತೆಗೆದು ಹಣ ತರುವಂತೆ ಮಾನಸಿಕ ದೈಹಿಕ ಹಿಂಸೆ ನೀಡುತ್ತಿದ್ದರು. ನಂತರ ಬೆಂಗಳೂರಿನ ಕಿರ್ಲೋಸ್ಕರ್ ಲೇಔಟ್​ನಲ್ಲಿ ಲೀಸ್ ಮನೆಯಲ್ಲಿ ವಾಸವಾಗಿದ್ದಾರೆ. ಅಲ್ಲಿಯೂ ವರದಕ್ಷಿಣೆ ತರುವಂತೆ ಹಿಂಸೆ ನೀಡುತ್ತಿದ್ದರು.

ಅಲ್ಲದೆ, ಪತಿ ಪ್ರತಾಪ್ ಅವರ ಅತ್ತೆ ದೇವಿಕಾ ಅವರ ಮಗಳಾದ ಚಿತ್ರ ಅವರೊಂದಿಗೆ ಮೊಬೈಲ್​ನಲ್ಲಿ ಹೆಚ್ಚಾಗಿ ಮಾತನಾಡುತ್ತಿದ್ದು, ವಾಟ್ಸ್​ಆಯಪ್​ನಲ್ಲಿ ಮೇಸೆಜ್ ಮಾಡುವುದು, ಸಲುಗೆಯಿಂದ ವರ್ತಿಸುವುದು, ಹೊರಗಡೆ ಸುತ್ತಾಡುವುದು ಮಾಡುತ್ತಿದ್ದರು. ಈ ಬಗ್ಗೆ ಪತಿ ಮತ್ತು ಚಿತ್ರಾರನ್ನ ವಿಚಾರಿಸಿದಾಗ ನನ್ನ ಮಾವ ನನ್ನ ಇಷ್ಟ ಎಂದು ಚೈತ್ರ ಹೇಳಿದ್ದಾಳೆ. ಈ ರೀತಿ ಯಾಕೆ ಕೇಳಿದೆಂದು ಪ್ರಶ್ನಿಸಿ ಪತ್ನಿ ಅಶ್ಚಿನಿಗೆ ಪ್ರತಾಪ್ ಮನಬಂದಂತೆ ಬೈದು ಥಳಿಸಿದ್ದಾನೆ.

ಇದಾದ ಬಳಿಕ ಅಕ್ಕಪಕ್ಕದವರೊಂದಿಗೆ, ಸ್ನೇಹಿತರೊಂದಿಗೆ ಹಾಗೂ ತವರು ಮನೆಯವರೊಂದಿಗೆ ಮಾತನಾಡಲು ಬಿಡದೆ ಪತ್ನಿಯ ಚಾರಿತ್ರ್ಯದ ಬಗ್ಗೆ ಪ್ರತಾಪ್ ಸಂಶಯಪಡಲು ಆರಂಭಿಸಿದ್ದಾನೆ. ಅಲ್ಲದೆ, ಚಿನ್ನ, ಬೆಳ್ಳಿ ಆರಭರಣಗಳ ಜೊತೆ ಸ್ಕೂಟರ್, ಎರಡು ಮೊಬೈಲ್, ಲ್ಯಾಪ್​ಟಾಪ್​ ಅನ್ನು ಕಿತ್ತುಕೊಂಡು ಬಲವಂತವಾಗಿ ಅಶ್ಚಿನಿ ಅತ್ತೆ ಶಾಂತಮ್ಮ, ಮಾವ ರಾಮು, ನನ್ನ ಗಂಡನ ಅಣ್ಣ ನವೀನ್ ಮತ್ತು ಆತನ ಹೆಂಡತಿ ಮಾನಸ ಸೇರಿ ಆಕೆಯನ್ನು ಗಂಡನ ಮನೆಯಿಂದ ತುಮಕೂರಿನಲ್ಲಿರುವ ಅತ್ತೆಯ ತಮ್ಮ ಯತಿರಾಜ್ ಮತ್ತು ಗೀತಾ ಅವರ ಮನೆಗೆ ಕಳುಹಿಸಿದ್ದಾರೆ.

ಇಲ್ಲಿಯೂ ಅಶ್ಚನಿಯನ್ನು ಯತೀರಾಜ್ ಮತ್ತು ಗೀತಾ ಮೂರು ತಿಂಗಳ ಕಾಲ ಯಾರ ಸಂಪರ್ಕಕ್ಕೂ ಬಿಡದೆ, ಮನೆಯಿಂದ ಹೊರಗೆ ಹೋಗಲು ಬಿಡದೆ ಬಂಧನದಲ್ಲಿಟ್ಟಿದ್ದರು. ಅಲ್ಲದೆ, ಪತಿ ಪ್ರತಾಪ್, ಗೀತಾ, ಯತೀರಾಜ್ ಮತ್ತು ಇವರ ಮಕ್ಕಳು ಹಲ್ಲೆ ಮಾಡುತ್ತಿದ್ದರು. ನಂತರ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಗ ಅವಮಾನಿಸಿ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ.

ಪತಿ ಮತ್ತು ಕುಟುಂಬಸ್ಥರ ಕಿರುಕುಳ ತಾಳಲಾಗದೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ ಅಶ್ಚಿನಿ ದೂರು ನೀಡಿದ್ದಾರೆ.

Share.