ಕಲಬುರಗಿ: ಪಕ್ಷ ನಾಯಕ ಆರ್ ಅಶೋಕ ಅವರು ಇಂದು ಕಲಬುರಗಿ ಜಿಲ್ಲೆಯಲ್ಲಿಂದು ಬರ ವೀಕ್ಷಣೆ ಮಾಡಿದ್ದಾರೆ. ವಿಪಕ್ಷ ನಾಯಕರಾದ ಬಳಿಕ ಮೊದಲ ಬಾರಿಗೆ ಕಲಬುರಗಿ ಪ್ರವಾಸ ಕೈಗೊಂಡಿದ್ದು, ಗ್ರಾಮೀಣ ಮತಕ್ಷೇತ್ರದ ಮೂಕಿ ತಾಂಡಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಂದ ತೊಗರಿ ಹಾನಿ ಕುರಿತು ಮಾಹಿತಿ ಸಂಗ್ರಹ ಮಾಡಿದರು. ಇನ್ನೂ ಬರ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸರಕಾರದ ಖಜಾನೆ ಖಾಲಿ ಆಗಿ ಪರಿಹಾರ ಕೊಡಲು ಅವರ ಬಳಿ ದುಡ್ಡಿಲ್ಲ. ಪಂಚರಾಜ್ಯ ಚುನಾವಣೆ ಹೋಗಿ ರಾಜ್ಯದ ಜನರ ಸಮಸ್ಯೆಗಳನ್ನು ಮರೆತಿದ್ದಾರೆ. ರೈತರ ಸಂಕಷ್ಟವನ್ನು ಯಾರೋಬ್ಬ ಜನಪ್ರತಿನಿಧಿಗಳು ಕೇಳುತ್ತಿಲ್ಲ, ಬೆಳಗಾವಿ ಅಧಿವೇಶನದಲ್ಲಿ ಇದೇ ಮೊದಲ ವಿಷಯ ಚರ್ಚೆ ಮಾಡುವೆ ಎಂದು ಕಲಬುರಗಿಯಲ್ಲಿ ವಿಪಕ್ಷ ನಾಯಕ R ಅಶೋಕ್ ಹೇಳಿದರು.
Author: AIN Author
ಬೆಳಗಾವಿ: ಕಾಂಗ್ರೆಸ್‌ನಲ್ಲಿ (Congress) ಮತ್ತೆ ಮುಂದಿನ ಮುಖ್ಯಮಂತ್ರಿ (CM) ಬಗ್ಗೆ ಚರ್ಚೆ ಶುರುವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ತೆರೆದ ವೇದಿಕೆಯ ಮೇಲೆಯೇ ಸತೀಶ್ ಜಾರಕಿಹೊಳಿ (Satish Jarkiholi) ಮುಂದಿನ ಸಿಎಂ ಎಂದು ಸವದತ್ತಿ ಶಾಸಕ ವಿಶ್ವಾಸ ವೈದ್ಯ (Vishwas Vaidya) ಹೇಳಿಕೆ ನೀಡಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಮಾತನಾಡಿರುವ ವಿಶ್ವಾಸ ವೈದ್ಯ, ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಾತೀತವಾಗಿ ಪ್ರಭಾವ ಬೆಳೆಸಿಕೊಂಡಿರುವ ಸತೀಶ್ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಸತೀಶ್ ಜಾರಕಿಹೊಳಿ ಸಿಎಂ ಆಗುವುದು ಅಷ್ಟೇ ಸತ್ಯ ಎಂದು ಹೇಳಿದ್ದಾರೆ. ದೀಪಾವಳಿ ಹಾಗೂ ರಾಜ್ಯೋತ್ಸವ ನಿಮಿತ್ತ ರಸಮಂಜರಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಕಾರ್ಯಕ್ರಮ ಉದ್ಘಾಟಕರಾಗಿ ಭಾಗಿಯಾಗಿದ್ದ ಸವದತ್ತಿ ಶಾಸಕ ಸಿಎಂ ವಿಚಾರದ ಬಗ್ಗೆ ಯಾರು ಕೂಡಾ ಮಾತನಾಡಬಾರದು ಎಂದು ಆದೇಶಿಸಿದ್ದರೂ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಇದೇ 23ರಂದು ನಡೆಯಲಿರುವ ಟಿ-20 ಸರಣಿಗೆ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕರಾಗಿ ಆಯ್ಕೆ ಮಾಡಲಾಗಿದೆ. ಇಂದು ಅಹಮದಾಬಾದ್ನಲ್ಲಿ ಸಭೆ ನಡೆಸಿದ ಆಯ್ಕೆ ಸಮಿತಿ ಭಾರತ ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಿದೆ. ಕೆಲವು ಆಯ್ಕೆದಾರರು ಶ್ರೇಯಸ್ ಅಯ್ಯರ್ ಕಡೆಗೆ ಒಲವು ತೋರಿದ್ದರು. ಆದರೆ, ಅಂತಿಮ ಕ್ಷಣದಲ್ಲಿ ಅವರೂ ಸೂರ್ಯಕುಮಾರ್ರಿಗೆ ತಂಡದ ಜವಾಬ್ದಾರಿ ನೀಡಲು ನಿರ್ಧರಿಸಿದ್ದಾರೆ. ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುರ್ಮಾಗೆ ವಿಶ್ರಾಂತಿ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಸೂರ್ಯಕುಮಾರ್ ಯಾದವ್ಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಇನ್ನೂ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಗೆ ಬಿಸಿಸಿಐ 15 ಮಂದಿಯ ಭಾರತ ತಂಡವನ್ನು ಪ್ರಕಟಿಸಿದೆ. ಸೂರ್ಯಕುಮಾರ್ ಯಾದವ್ ನಾಯಕ ಹಾಗೂ ಋತುರಾಜ್ ಗಾಯಕ್ವಾಡ್ ಉಪನಾಯಕರಾಗಿದ್ದಾರೆ. ಶ್ರೇಯಸ್ ಅಯ್ಯರ್ ಅವರು ರಾಯ್‌ಪುರ ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ಕೊನೆಯ ಎರಡು ಟಿ-20 ಪಂದ್ಯಗಳಿಗೆ ಉಪ ನಾಯಕರಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಭಾರತ ತಂಡ : ಸೂರ್ಯಕುಮಾರ್ ಯಾದವ್…
ಅಹಮದಾಬಾದ್: ಭಾರತದ ಆತಿಥ್ಯದಲ್ಲಿ ಆಯೋಜನೆಗೊಂಡಿದ್ದ 2023ರ ಏಕದಿನ ವಿಶ್ವಕಪ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಆದ್ರೆ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಸೋಲು ಭಾರತೀಯ ಅಭಿಮಾನಿಗಳಿಗೆ ಇಂದಿಗೂ ಅರಗಿಸಿಕೊಳ್ಳಲಾರದ ನೋವು ತರಿಸಿದೆ. ಟೀಂ ಇಂಡಿಯಾ (Team India) ಬೆಂಬಲಿಸಲು ಮೈದಾನದಲ್ಲಿ ನೆರೆದಿದ್ದ ಲಕ್ಷಾಂತರ ಮಂದಿ ಕೊನೆಯಲ್ಲಿ ಕಣ್ಣಲ್ಲಿ ನೀರು ತುಂಬಿಕೊಂಡು ಹೊರಟಿದ್ದನ್ನು ಮರೆಯುವಂತಿಲ್ಲ. ಈಗಲೂ ಅಭಿಮಾನಿಗಳು ಸೋಲಿನ ಕ್ಷಣಗಳನ್ನು ಮೆಲುಕುಹಾಕುತ್ತಿದ್ದಾರೆ. ವಿಶ್ವಕಪ್ ಫೈನಲ್‌ನಲ್ಲಿ ಭಾರತ ಆಸೀಸ್ ಎದುರು ಸೋತ ನಂತರ ಟೀಂ ಇಂಡಿಯಾದ ಭಾವುಕ ಚಿತ್ರಗಳು ಜಾಲತಾಣದಲ್ಲಿ ಸದ್ದು ಮಾಡ್ತಿವೆ. ಚಿತ್ರರಂಗದ ಸೆಲಬ್ರಿಟಿಗಳು ಸೇರಿದಂತೆ ರಾಜಕೀಯ ನಾಯಕರು ಕೂಡ ಟೀಂ ಇಂಡಿಯಾ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲದರ ಮಧ್ಯೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರ ಭಾವುಕ ಫೋಟೋಗಳು ಅಭಿಮಾನಿಗಳನ್ನೂ ಭಾವುಕರಾಗುವಂತೆ ಮಾಡಿವೆ. ವಿಶ್ವಕಪ್‌ನ ಪ್ರತಿ ಪಂದ್ಯಕ್ಕೂ ಹಾಜರಾಗುತ್ತಿದ್ದ ಅನುಷ್ಕಾ ಶರ್ಮಾ, ಕೊಹ್ಲಿ ಅವರಿಂದ ಸಿಡಿದ ಸಾಲು ಸಾಲು ದಾಖಲೆಗಳನ್ನ ಕಣ್ತುಂಬಿಕೊಂಡಿದ್ದರು. ಸ್ಟೇಡಿಯಂನಲ್ಲೇ ಕುಣಿದು…
ಅಹಮದಾಬಾದ್: ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾದ (Team India) ಪ್ರಶಸ್ತಿ ಗೆಲ್ಲುವ ಬರ ಮುಂದುವರಿದಿದೆ. ಭಾನುವಾರ (ನ.19) ಆಸ್ಟ್ರೇಲಿಯಾ (Australia) ವಿರುದ್ಧ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ ಟೀಂ ಇಂಡಿಯಾ ತಾಯ್ನಾಡಿನಲ್ಲಿ ಟ್ರೋಫಿ ಗೆಲ್ಲುವ ಅವಕಾಶ ಕೈಚೆಲ್ಲಿತು. 2003ರಲ್ಲೂ ಆಸ್ಟ್ರೇಲಿಯಾ ಎದುರು ಫೈನಲ್‌ನಲ್ಲಿ ಭಾರತ ಮುಗ್ಗರಿಸಿತ್ತು. 2023ರಲ್ಲೂ ಅದೃಷ್ಟ ಕೈ ಹಿಡಿಯದೇ ಹೋಯಿತು. ಆದ್ರೆ ಅಭಿಮಾನಿಗಳಿಗೆ ಮಾತ್ರ ಈ ನೋವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಕುರಿತು ಟೀಂ ಇಂಡಿಯಾ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ (Shubman Gill) ಭಾವುಕ ನುಡಿಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಳೆದ ರಾತ್ರಿಯಿಂದಲೂ ಇನ್ನೂ ವಿಶ್ವಕಪ್ ಕಳೆದುಕೊಂಡ ನೋವು ಕಡಿಮೆಯಾಗಿಲ್ಲ. ಕೆಲವೊಮ್ಮೆ ಎಷ್ಟು ಕೊಡುಗೆ ನೀಡಿದರೂ ಸಾಲೋದಿಲ್ಲ. ಹಾಗಾಗಿ ನಮ್ಮ ಅಂತಿಮ ಗುರಿ ಕಳೆದುಕೊಂಡಿದ್ದೇವೆ. ಆದ್ರೆ ಈ ಪ್ರಯಾಣದ ಪ್ರತಿಯೊಂದು ಹೆಜ್ಜೆಯು ನಮ್ಮ ತಂಡದ ಉತ್ಸಾಹ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಏಳು ಬೀಳುಗಳ ನಡುವೆಯೂ ತಳಮಟ್ಟದಿಂದಲೂ ನಮಗೆ ಅಭಿಮಾನಿಗಳಿಂದ (Team India Fans) ಸಿಕ್ಕ…
ಅಹಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium Ahemadabad) ನಡೆದ ವಿಶ್ವಕಪ್ 2023ರ ಫೈನಲ್ (World Cup 2023) ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದ್ದು, ಆಟಗಾರರು ಕಣ್ಣೀರಾಕಿದ್ದಾರೆ. ಈ ವೇಳೆ ಕಣ್ಣೀರು ಹಾಕುತ್ತಿದ್ದ ವಿರಾಟ್ ಕೊಹ್ಲಿಯನ್ನು ಆಸ್ಟ್ರೇಲಿಯಾ ಆಟಗಾರ ಮ್ಯಾಕ್ಸ್‌ವೆಲ್ (Maxwell) ಅಪ್ಪಿ ಸಂತೈಸಿದರು. ಬೇಸರದಲ್ಲಿದ್ದ ವಿರಾಟ್ ಕೊಹ್ಲಿಯನ್ನು (Virat Kohli) ಮ್ಯಾಕ್ಸ್‌ವೆಲ್ ಬಿಗಿದಪ್ಪಿ ಸಾಂತ್ವ ಹೇಳಿದರಲ್ಲದೇ ಜೆರ್ಸಿಗೆ (Jeresey) ಕೊಹ್ಲಿಯಿಂದ ಸಹಿ ಹಾಕಿಸಿಕೊಂಡಿದ್ದಾರೆ. ಸದ್ಯ ಕೊಹ್ಲಿಯನ್ನು ಅಪ್ಪಿ ಹಿಡಿದ ಮ್ಯಾಕ್ಸ್ ವೆಲ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ ಕೊಹ್ಲಿ, ಮ್ಯಾಕ್ಸ್ ವೆಲ್ ಫೋಟೋವನ್ನು ಐಸಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದು, ಜೊತೆಗೆ ಗೌರವ ಮತ್ತು ಅಭಿಮಾನದ ಸಂಕೇತ ಎಂದು ಕ್ಯಾಪ್ಷನ್ ನೀಡಿದೆ. ಸದ್ಯ ಫೋಟೋ ನೋಡಿದ ಎಲ್ಲರೂ ಭಾವುಕರಾಗುತ್ತಿದ್ದಾರೆ. ಇತ್ತ ಅನುಷ್ಕಾ ಶರ್ಮಾ (Anushka Sharma) ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
ಬೆಂಗಳೂರು: ಆರ್ ಅಶೋಕ್ ವಿಪಕ್ಷ ನಾಯಕನಾಗಿ ಆಯ್ಕೆಯಾದ ಬಳಿಕ ರಾಜ್ಯ ಬಿಜೆಪಿಗೆ ಬೇರೆಯದ್ದೇ ಖದರ್ ಬಂದಂತಿದೆ, ಪಕ್ಷದ ಶಾಸಕರಿಗೆ ಸಮನ್ವಯತೆಯ ಪಾಠ ಹೇಳುತ್ತಿರುವ ಸಾಮ್ರಾಟ ಹಿರಿಯ ನಾಯಕರ ಸಲಹೆ ಸೂಚನೆಗಳ ಜೊತೆ ಮಠಾಧೀಶರ ಆಶೀರ್ವಾದ ಪಡೆಯುತ್ತಿದ್ದಾರೆ. ಅದೇ ರೀತಿ ಇಂದು ಆರ್ ಅಶೋಕ್ ಅವರು ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ಸಂಸದರು ಆದ ಡಿ ವಿ ಸದಾನಂದ ಗೌಡರ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ಮುನಿರಾಜು ಹಾಗೂ ಇತರರು ಉಪಸ್ಥಿತರಿದ್ದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಕೆಂಡ ಕಾರುತ್ತಿರುವ ಕೇಸರಿ ಸಾಮ್ರಾಟ ಸಿದ್ದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು ಇಂದಿನಿಂದ ರಾಜ್ಯಾದ್ಯಂತ ಬರ ಪ್ರವಾಸ ಆರಂಭಿಸ್ತಿದ್ದಾರೆ. ಅಶೋಕ್ ಆಡುತ್ತಿರುವ ಮಾತುಗಳು ಕೈ ನಾಯಕರಿಗೆ ಎಚ್ಚರಿಕೆಯ ಕರೆಗಂಟೆಯಾಗ್ತಿವೆ.
ಕಲಬುರಗಿ: ವಿಧಾನಸಭೆ ವಿರೋಧ ಪಕ್ಷದ ನಾಯಕನಾದ ನಂತ್ರ ಫುಲ್ ಆಕ್ಟೀವ್ ಆಗಿರುವ ಸಾಮ್ರಾಟ್ ಆರ್ ಅಶೋಕ್ ಇಂದಿನಿಂದ ಬರ ಅಧ್ಯಯನ ಶುರು ಮಾಡಿದ್ದಾರೆ.. ಅದ್ರಲ್ಲೂ ಕಲಬುರಗಿಯಿಂದಲೇ ಬರ ಅಧ್ಯಯನ ಆರಂಭ ಮಾಡುವ ಮೂಲಕ ಸರ್ಕಾರದ ಕಣ್ಣು ತೆರೆಸಲು ಮುಂದಾಗಿದ್ದಾರೆ. ಗ್ರಾಮೀಣ ಮತಕ್ಷೇತ್ರದ ಮೊಕಿನ್ ತಾಂಡಾದ ರೈತರ ಹೊಲಗಳಿಗೆ ಭೇಟಿ ಕೊಟ್ರು ಇದೇವೇಳೆ ರೈತರಿಂದ ಮಾಹಿತಿ ಪಡೆದು ಹಾನಿಯಾದ ವಿವರ ಪಡೆದು ನಂತ್ರ ಅಳಂದ ತಾಲೂಕಿನ ಕಡಗಂಚಿಯ ಗ್ರಾಮದ ರೈತರೊಡನೆ ಚರ್ಚಿಸಿದ್ರು.
ತುಮಕೂರು: ಪೊಲೀಸರ 112 ವಾಹನವನ್ನೆ ಓಡಿಸಿಕೊಂಡು ಪರಾರಿಯಾದ ವ್ಯಕ್ತಿಯನ್ನು ಸಿನಿಮಾ ಸ್ಟೈಲಿನಲ್ಲಿ ಚೇಸ್ ಮಾಡಿ ಪತ್ತೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಾರಾನಹಳ್ಳಿಯಲ್ಲಿ ನಡೆದಿದೆ. ತಡರಾತ್ರಿ ಗ್ರಾಮದ ಸಿಎಸ್ ಪುರ ಪೊಲೀಸ್ ಠಾಣೆ ಯ ವ್ಯಾಪ್ತಿಯಲ್ಲಿ ಸಹೋದರಿಬ್ಬರ ನಡುವೆ ಗಲಾಟೆ ಆಗ್ತಿತ್ತು. ಈ ವೇಳೆ ಆರೋಪಿ ಸಹೋದರ 112 ಗೆ ಕರೆ ಮಾಡಿದ್ದರಿಂದ ಗ್ರಾಮಕ್ಕೆ ವಾಹನ ಬಂದಿತ್ತು.. ಈ ವೇಳೆ ಆರೋಪಿ ಹಿಂದೆ ಇದ್ದ 112 ಕಾರಿನ ಮೇಲೆ ಕಲ್ಲು ಎತ್ತಿಹಾಕಿದ್ದಾನೆ. https://ainlivenews.com/geo-scientist-statue-murder-case-explosive-issue-comes-to-light-during-investigation/ ಇದನ್ನ ಗಮನಿಸಲು 112 ಚಾಲಕ ಹಿಂದೆ ಬಂದಿದ್ದಾನೆ.. ಈ ವೇಳೆ ಮುಂದೆ ಹೋಗಿ ಕಾರು ತೆಗೆದುಕೊಂಡು ಆರೋಪಿ ಎಸ್ಕೇಪ್ ಆಗಿದ್ದಾನೆ. ಸತತ ಮೂರು ಗಂಟೆಗಳ ಕಾಲ ಹುಡುಕಾಟ ನಡೆಸಿ ಆರೋಪಿಯನ್ನೂ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತುಮಕೂರು ತಾಲೂಕಿನ ಹೆಬ್ಬೂರು ಬಳಿ ವಾಹನ ಪತ್ತೆಯಾಗಿದ್ದು, ಆರೋಪಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ಈ ಘಟನೆ ಸಂಭಂಧ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಆರ್ ಅಶೋಕ್ ವಿಪಕ್ಷ ನಾಯಕನಾಗಿ ಆಯ್ಕೆಯಾದ ಬಳಿಕ ರಾಜ್ಯ ಬಿಜೆಪಿಗೆ ಬೇರೆಯದ್ದೇ ಖದರ್ ಬಂದಂತಿದೆ, ಪಕ್ಷದ ಶಾಸಕರಿಗೆ ಸಮನ್ವಯತೆಯ ಪಾಠ ಹೇಳುತ್ತಿರುವ ಸಾಮ್ರಾಣ ಹಿರಿಯ ನಾಯಕರ ಸಲಹೆ ಸೂಚನೆಗಳ ಜೊತೆ ಮಠಾಧೀಶರ ಆಶೀರ್ವಾದ ಪಡೆಯುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಕೆಂಡ ಕಾರುತ್ತಿರುವ ಕೇಸರಿ ಸಾಮ್ರಾಟ ಸಿದ್ದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು ನಾಳೆಯಿಂದ ರಾಜ್ಯಾದ್ಯಂತ ಬರ ಪ್ರವಾಸ ಆರಂಭಿಸ್ತಿದ್ದಾರೆ. ಅಶೋಕ್ ಆಡುತ್ತಿರುವ ಮಾತುಗಳು ಕೈ ನಾಯಕರಿಗೆ ಎಚ್ಚರಿಕೆಯ ಕರೆಗಂಟೆಯಾಗ್ತಿವೆ. ಬಿಜೆಪಿಗೆ ಇಬ್ಬರು ಸಾರಥಿಗಳು ಸಿಕ್ಕಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ಆರ್.ಅಶೋಕ್ ಆಯ್ಕೆಯಾಗಿದ್ರೆ, ಬಿಜೆಪಿ ರಾಜ್ಯಾಧ್ಯಕ್ಷನಾಗಿ ಬಿವೈ ವಿಜಯೇಂದ್ರ ಪಕ್ಷ ಸಂಘಟನೆಗಾಗಿ ಸುತ್ತಾಡ್ತಿದ್ದಾರೆ. ಇಬ್ಬರು ನಾಯಕನ ಆಯ್ಕೆಯಿಂದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಿದ್ದು, ಸರ್ಕಾರದ ವಿರುದ್ಧ ಮೊದಲ ಪೂರ್ಣ ಪ್ರಮಾಣದ ಹೋರಾಟಕ್ಕೆ ಬೆಳಗಾವಿ ಅಧಿವೇಶನಲ್ಲಿ ವೇದಿಕೆಯೂ ಸಿದ್ದವಾಗಿದೆ. ರಾಜ್ಯಾಧ್ಯಕ್ಷ ಬದಲಾವಣೆ ಹಾಗೂ ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬದಿಂದ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಕುಗ್ಗಿತ್ತು. ಜೊತೆಗೆ ಆಂತರಿಕವಾಗಿ ಭಿನ್ನಾಭಿಪ್ರಾಯಗಳೂ ಪಕ್ಷಕ್ಕೆ…