ಅಹಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium Ahemadabad) ನಡೆದ ವಿಶ್ವಕಪ್ 2023ರ ಫೈನಲ್ (World Cup 2023) ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದ್ದು, ಆಟಗಾರರು ಕಣ್ಣೀರಾಕಿದ್ದಾರೆ. ಈ ವೇಳೆ ಕಣ್ಣೀರು ಹಾಕುತ್ತಿದ್ದ ವಿರಾಟ್ ಕೊಹ್ಲಿಯನ್ನು ಆಸ್ಟ್ರೇಲಿಯಾ ಆಟಗಾರ ಮ್ಯಾಕ್ಸ್ವೆಲ್ (Maxwell) ಅಪ್ಪಿ ಸಂತೈಸಿದರು.
ಬೇಸರದಲ್ಲಿದ್ದ ವಿರಾಟ್ ಕೊಹ್ಲಿಯನ್ನು (Virat Kohli) ಮ್ಯಾಕ್ಸ್ವೆಲ್ ಬಿಗಿದಪ್ಪಿ ಸಾಂತ್ವ ಹೇಳಿದರಲ್ಲದೇ ಜೆರ್ಸಿಗೆ (Jeresey) ಕೊಹ್ಲಿಯಿಂದ ಸಹಿ ಹಾಕಿಸಿಕೊಂಡಿದ್ದಾರೆ. ಸದ್ಯ ಕೊಹ್ಲಿಯನ್ನು ಅಪ್ಪಿ ಹಿಡಿದ ಮ್ಯಾಕ್ಸ್ ವೆಲ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ
ಕೊಹ್ಲಿ, ಮ್ಯಾಕ್ಸ್ ವೆಲ್ ಫೋಟೋವನ್ನು ಐಸಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದು, ಜೊತೆಗೆ ಗೌರವ ಮತ್ತು ಅಭಿಮಾನದ ಸಂಕೇತ ಎಂದು ಕ್ಯಾಪ್ಷನ್ ನೀಡಿದೆ. ಸದ್ಯ ಫೋಟೋ ನೋಡಿದ ಎಲ್ಲರೂ ಭಾವುಕರಾಗುತ್ತಿದ್ದಾರೆ. ಇತ್ತ ಅನುಷ್ಕಾ ಶರ್ಮಾ (Anushka Sharma) ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.