ಬೆಂಗಳೂರು: ಆರ್ ಅಶೋಕ್ ವಿಪಕ್ಷ ನಾಯಕನಾಗಿ ಆಯ್ಕೆಯಾದ ಬಳಿಕ ರಾಜ್ಯ ಬಿಜೆಪಿಗೆ ಬೇರೆಯದ್ದೇ ಖದರ್ ಬಂದಂತಿದೆ, ಪಕ್ಷದ ಶಾಸಕರಿಗೆ ಸಮನ್ವಯತೆಯ ಪಾಠ ಹೇಳುತ್ತಿರುವ ಸಾಮ್ರಾಟ ಹಿರಿಯ ನಾಯಕರ ಸಲಹೆ ಸೂಚನೆಗಳ ಜೊತೆ ಮಠಾಧೀಶರ ಆಶೀರ್ವಾದ ಪಡೆಯುತ್ತಿದ್ದಾರೆ.
ಅದೇ ರೀತಿ ಇಂದು ಆರ್ ಅಶೋಕ್ ಅವರು ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ಸಂಸದರು ಆದ ಡಿ ವಿ ಸದಾನಂದ ಗೌಡರ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ಮುನಿರಾಜು ಹಾಗೂ ಇತರರು ಉಪಸ್ಥಿತರಿದ್ದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಕೆಂಡ ಕಾರುತ್ತಿರುವ ಕೇಸರಿ ಸಾಮ್ರಾಟ ಸಿದ್ದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು ಇಂದಿನಿಂದ ರಾಜ್ಯಾದ್ಯಂತ ಬರ ಪ್ರವಾಸ ಆರಂಭಿಸ್ತಿದ್ದಾರೆ. ಅಶೋಕ್ ಆಡುತ್ತಿರುವ ಮಾತುಗಳು ಕೈ ನಾಯಕರಿಗೆ ಎಚ್ಚರಿಕೆಯ ಕರೆಗಂಟೆಯಾಗ್ತಿವೆ.