ಬಳ್ಳಾರಿ:- ಗಣಿನಾಡು ಬಳ್ಳಾರಿಯಲ್ಲಿ ದಿನೇ ದಿನೇ ಕಳ್ಳರ ಕೈಚಳಕ ಹೆಚ್ಚುತ್ತಿದೆ. ಬಳ್ಳಾರಿ ನಗರದ ಹೃದಯ ಭಾಗದಲ್ಲಿರುವ ಎಚ್.ಆರ್.ಗವಿಯಪ್ಪ ಸರ್ಕಲ್ನಲ್ಲಿ ಕಳ್ಳತನ ನಡೆದಿದೆ. ಬಳ್ಳಾರಿಯ ಮೋತಿ ವೃತ್ತದ ಹತ್ತಿರದ ಮೊಬೈಲ್ ಶಾಪ್’ನಲ್ಲಿ ಕಳ್ಳತನ ನಡೆದಿದ್ದು, ಸುಮಾರು 20 ಲಕ್ಷ ರೂ ಬೆಲೆ ಬಾಳುವ ಮೊಬೈಲ್ ಕಳ್ಳತನ ನಡೆದಿದೆ. ವಿವಿಧ ಕಂಪನಿಯ ಬೆಲೆ ಬಾಳುವ ಮೊಬೈಲ್ ಗಳನ್ನು ಖದೀಮರು ಕಳ್ಳತನ ಮಾಡಿದ್ದಾರೆ. ಇಂದು ಬೆಳಗಿನ ಜಾವ 3 ಗಂಟೆಗೆ ಸುಮಾರಿಗೆ ಕಳ್ಳತನವಾಗಿದ್ದು, ಅಂಗಡಿಯ ಶಟರ್ ಹೊಡೆದು ಕಳ್ಳತನ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ಮಾಡಿದ್ದಾರೆ.
Author: AIN Author
ಬಾಗಲಕೋಟೆ:- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಜಮಖಂಡಿ ಮಿರಜ್ ಹೆದ್ದಾರಿ ರಸ್ತೆ ತಡೆದು ಪ್ರತಿಭಟಿಸಿ ಮತ್ತು ಇಷ್ಟಲಿಂಗ ಪೂಜೆ ಮಾಡುವುದರ ಮುಖಾಂತರ ಟು ಎ ಮೀಸಲಾತಿ ನೀಡಲು ವಿನೂತನವಾಗಿ ಪ್ರತಿಭಟಿಸಿದರು. ಕರ್ನಾಟಕದಲ್ಲಿ ಸುಮಾರು ಮೂರು ವರ್ಷಗಳಿಂದ ಲಿಂಗಾಯತ ಪಂಚಮಸಾಲಿ ಸಮುದಾಯವು ನಿರಂತರ ಹೋರಾಟ ಮಾಡ್ತಾ ಬಂದಿದೆ. ಸರ್ಕಾರ ಕಣ್ಣು ತೆರೆದು ನೋಡ್ತಾ ಇಲ್ಲ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಟು ಎ ಮೀಸಲಾತಿ ನೀಡದಿದ್ದರೆ ರಾಜ್ಯದ ಪ್ರತಿ ಹೆದ್ದಾರಿ ರಸ್ತೆಯನ್ನು ತಡೆದು ಇಷ್ಟಲಿಂಗ ಪೂಜೆ ಮಾಡಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯ ಮುಂದೆ ಮತ್ತು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಮುಂಭಾಗದ ಹೆದ್ದಾರಿ ರಸ್ತೆಯ ಮೇಲೆ ಇಷ್ಟಲಿಂಗ ಪೂಜೆ ಮಾಡಿ ಪ್ರತಿಭಟಿಸಲಿದ್ದೇವೆ ಸರ್ಕಾರ ಇದನ್ನು ಗಮನದಲ್ಲಿ ಇಟ್ಟುಕೊಂಡು ನಮಗೆ ನ್ಯಾಯ ಕೊಡಿ ಎಂದು ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳು ಕೂಡಲಸಂಗಮ ಹೇಳಿದರು. ಭಾರತ ದೇಶದಲ್ಲಿ ನಿರಂತರವಾಗಿ ಮೂರು ವರ್ಷಗಳ ಕಾಲ ರಸ್ತೆ ಇಳಿದು ಪ್ರತಿಭಟಿಸಿದ…
ಕೆ ಆರ್ ಪುರ:- ಸ್ತನದ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಹಾಗೂ ಮಹಿಳೆಯರ ಆರೋಗ್ಯ ಕುರಿತಂತೆ ಗಮನ ಸೆಳೆಯಲು 5 ಕೆ,10ಕೆ ಕಿಲೋ ಮೀಟರ್ ದೂರದ ಮೂರನೇ ವರ್ಷದ ‘ವಾಕಥಾನ್ ‘ ಕಾರ್ಯಕ್ರಮವನ್ನು ಟ್ರಸ್ಟ್ ಇನ್ ಆಸ್ಪತ್ರೆ ವತಿಯಿಂದ ಹೊರಮಾವಿನಲ್ಲಿ ಟ್ರಸ್ಟ್ ಇನ್ ರನ್ ಆಯೋಜಿಸುವ ಮೂಲಕ ಅರಿವು ಮೂಡಿಸಲಾಯಿತು. ವಾಕಥಾನ್ ಗೆ ಚಾಲನೆ ನೀಡಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಆಯುಕ್ತ ರಂದೀಪ್.ಡಿ ಅವರು ಮಹಿಳೆರಲ್ಲಿ ಇತ್ತೀಚಿನ ವರ್ಷಗಳಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿದೆ, ಇದರ ಬಗ್ಗೆ ಟ್ರಸ್ಟ್ ಇನ್ ಆಸ್ಪತ್ರೆ 2500 ಮ್ಯಾರಥಾನ್ ಸ್ಪರ್ಧಿಗಳು ಭಾಗವಹಿಸಿದ್ದ ಮೂರನೇ ವರ್ಷದ ಟ್ರಸ್ಟ್ ಇನ್ ರನ್ ವಾಕಥಾನ್ ಆಯೋಜಿಸುವ ಮೂಲಕ ಅರಿವು ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. ಇತ್ತೀಚೆಗೆ ಸ್ತನ ಕ್ಯಾನ್ಸರ್ ಕಾಯಿಲೆ ಎಲ್ಲಾ ವಯಸ್ಸಿನವರಿಗೂ ಕಾಣಿಸಿಕೊಳ್ಳುತ್ತಿದ್ದು, ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ಪ್ರಥಮ ಹಂತದಲ್ಲಿರುವಾಗಲೇ ವೈದ್ಯರನ್ನ ಸಂಪರ್ಕಿಸಿ ಸೂಕ್ತವಾದ ಚಿಕಿತ್ಸೆ ತೆಗೆದುಕೊಳ್ಳುಬೇಕು ಎಂದು ಮನವಿ ಮಾಡಿದರು. ಕಾಯಿಲೆಗಳಿಂದ ದೂರವಿರಲು…
ಕೋಲಾರ:- ಸೋಮಣ್ಣ ಎಲ್ಲ ಪಾರ್ಟಿ ನೋಡಿಕೊಂಡು ಬಂದಿದ್ದಾರೆ, ಬಿಜೆಪಿಯಲ್ಲೇ ಇರುತ್ತಾರೆ ಎಂದು ಶ್ರೀರಾಮುಲು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಎಲ್ಲಾ ರಾಜಕೀಯ ಪಕ್ಷದವರ ಮೇಲೆ ಸಿಬಿಐ ಕೇಸ್ ಗಳಿವೆ. ಹಾಗಂತ ಇಂತಹ ನಿರ್ಧಾರಗಳು ಹಿಂದೆ ನಡೆದಿಲ್ಲ ಎಂದು ಡಿಕೆಶಿ ಮೇಲಿನ ಸಿಬಿಐ ತನಿಖೆ ಆದೇಶ ಹಿಂಪಡೆದ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇಡಿ ಶಿಫಾರಸ್ಸು ಮಾಡಿದಕ್ಕೆ ನಾವು ಸಿಬಿಐಗೆ ವಹಿಸಿದ್ವಿ. ರಾಜಕೀಯ ದ್ವೇಷ ಎಂಬುದೆಲ್ಲ ಸುಳ್ಳು. ಕಾನೂನು ಸಲಹೆ ಪಡೆದು ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ. ಇನ್ನೇನು ಚಾರ್ಜ್ ಶೀಟ್ ಆಗುವ ಕ್ಷಣದಲ್ಲಿ ಈ ರೀತಿ ಮೂರ್ಖತನದ ಕೆಲಸ ಮಾಡಿದ್ದಾರೆ. ಇದಕ್ಕೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದರು. ಇತಿಹಾಸದಲ್ಲಿ ಯಾವುದೇ ಸರ್ಕಾರಗಳು ಈ ತರಹದ ನಿರ್ಧಾರ ಮಾಡಿಲ್ಲ. ಕಾಂಗ್ರೆಸ್‌ನ ಈ ನಿರ್ಧಾರದಿಂದ ಕಾನೂನು ಮತ್ತು ರಾಜಕಾರಣಕ್ಕೆ ಸಂಘರ್ಷ ಆಗುವಂತೆ ಮಾಡಿದೆ. ತಪ್ಪು ಮಾಡಿಲ್ಲ ಅನ್ನೋ ವಿಶ್ವಾಸ ಡಿಕೆಶಿ ಗೆ ಇರಬೇಕಾಗಿತ್ತು. ಆದರೆ ಅವರು ತಪ್ಪು ಮಾಡಿದ್ದರಿಂದಲೇ ಇಂಥ ನಿರ್ಧಾರ…
ರಾಮನಗರ: ನಿಖಿಲ್, ವಿಜಯೇಂದ್ರ ಇಬ್ಬರೂ ಸಹೋದರ ಮನೋಭಾವದಲ್ಲಿ ಒಟ್ಟಾಗಿ ಹೋಗ್ತಾರೆ. ಉತ್ತಮ ಬಾಂಧವ್ಯದೊಂದಿಗೆ ಚುನಾವಣೆಯಲ್ಲಿ ತೊಡಗಿಸಿಕೊಳ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ವಿಜಯೇಂದ್ರ ಭೇಟಿ ಕುರಿತು ಮಾತನಾಡಿದ ಹೆಚ್‌ಡಿಕೆ, ಬಹಳ ದಿನಗಳ ಹಿಂದೆಯೇ ವಿಜಯೇಂದ್ರ ಭೇಟಿ ಮಾಡಬೇಕಿತ್ತು. https://ainlivenews.com/upi-id-with-no-transaction-for-1-year-upi-number-de-activate-reason/ ಹಲವಾರು ಕಾರ್ಯಕ್ರಮಗಳು ಇದ್ದ ಕಾರಣ ಆಗಿರಲಿಲ್ಲ. ಇವತ್ತು ನಮ್ಮ ಭೇಟಿಯ ಉದ್ದೇಶ ರಾಜ್ಯದ ಅಭಿವೃದ್ಧಿ ದೃಷ್ಟಿ. ಮೋದಿ ಮತ್ತೆ ದೇಶದ ಪ್ರಧಾನಮಂತ್ರಿ ಆಗುವ ನಿಟ್ಟಿನಲ್ಲಿ ಕೂತು ಚರ್ಚೆ ಮಾಡಿದ್ದೇವೆ. ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರ ಬಗ್ಗೆ ಮಾತಾಡಿಲ್ಲ. ಆ ಬಗ್ಗೆ ಕೇಂದ್ರ ನಾಯಕರು ಕೂತು ಚರ್ಚೆ ಮಾಡ್ತಾರೆ ಎಂದು ಹೇಳಿದರು.
ಗದಗ:- ಡಿಸಿಎಂ ಡಿಕೆಶಿಯ ಸಿಬಿಐ ತನಿಖೆ ಪ್ರಕರಣ ಹಿಂಪಡೆದ ವಿಚಾರವಾಗಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಗದಗ್ ನಲ್ಲಿ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಸೇಫ್ ಅಂತ ಯಾಕೆ ಹೇಳ್ತೀರಾ..? ಕಾನೂನಿನಲ್ಲಿ ಮಾಡಬಾರದು ಅಂತ ರೂಲ್ಸ್ ಏನಾದ್ರು ಇದೆನಾ !?ರೂಲ್ಸ್ ಇಲ್ಲ ಅಂದ್ರೆ ಯಾಕೇ ನೀವು ಸೇಫ್ ಅಂತೀರಾ. ವಿರೋಧ ಪಕ್ಷದವರಿಗೆ ಅದನ್ನು ಬಿಟ್ಟು ಬೇರೆ ಕೆಲಸ ಇಲ್ಲ ಕಾನೂನು ಸಚಿವರು ಎಲ್ಲವನ್ನೂ ಸವಿಸ್ತಾರವಾಗಿ ಹೇಳಿದ್ದಾರೆ. ಇದರ ಬಗ್ಗೆ ಹೆಚ್ಚಿನ ಚರ್ಚೆ ಮಾಡುವ ಅವಶ್ಯಕತೆ ಇಲ್ಲಾ ಎಂದರು. ಇದೇ ವೇಳೆ ಜಾತಿ ಜನಗಣತಿ ವಿಚಾರವಾಗಿ ಮಾತನಾಡಿ, ನಾನಂತೂ ನೋಡಿಲ್ಲ. ಯಾರು ಕೊಡಬಾರದು ಅಂತ ಹೇಳಿಲ್ಲ. ಇನ್ನೂ ಹೊರಗಡೆ ಬಂದಿಲ್ಲ. ಅದು ಬಂದ ಮೇಲೆ ಒಳ್ಳೆಯ ರೀತಿ ಚರ್ಚೆ ಆಗಬಹುದು. ವಿರೋಧಿಸುವವರ ವೈಯಕ್ತಿಕ ವಿಚಾರಕ್ಕೆ ಬಿಟ್ಟಿದ್ದು, ಕಾಂಗ್ರೆಸ್ ಪಕ್ಷದ ನಿರ್ಧಾರ ಜಾತಿ ಗಣತಿ ಆಗಬೇಕು. ನ್ಯಾಯಬದ್ಧವಾಗಿ ಆಗಲಿ. ಜಾತಿ ಗಣತಿ ಆಗಬೇಕು ಅನ್ನೋದು ನಮ್ಮದು ಮತ್ತು ರಾಹುಲ್ ಗಾಂಧಿಯವರೂ ಕೂಡಾ…
ರಾಮನಗರ: ಬಿವೈ ವಿಜಯೇಂದ್ರ (BY VIjayendra) ಅವರು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದಂತೆಯೇ ಪಕ್ಷದ ಹಿರಿಯ ನಾಯಕರು ಹಾಗೂ ವಿವಿಧ ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ. ಅದರಂತೆ ಇದೀಗ ಮೈತ್ರಿ ಪಕ್ಷದ ನಾಯಕ ಮಾಜಿ ಮಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಭೇಟಿ ಮಾಡಿದರು. https://ainlivenews.com/upi-id-with-no-transaction-for-1-year-upi-number-de-activate-reason/ ಬಿಡದಿಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು. ಮುಂಬರುವ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಉಭಯ ನಾಯಕರ ಭೇಟಿ ರಾಜ್ಯ ರಾಜಕಾರಣದಲ್ಲಿ ಮಹತ್ವ ಪಡೆದುಕೊಂಡಿದೆ.
ಮುಂಬರುವ ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವು ಪೂರೈ ಕೆಗೆ ಯಾವುದೇ ಸಮಸ್ಯೆ ತಲೆದೋರದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಹೆಚ್ .ಸಿ. ಮಹದೇವಪ್ಪ ಅವರು ಸೂಚನೆ ನೀಡಿದರು. ನಗರದ ಜಲದರ್ಶಿನಿ ಅತಿಧಿ ಗೃಹದಲ್ಲಿ ಬರ ನಿರ್ವಹಣೆ ಸಿದ್ಧತೆ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, https://ainlivenews.com/upi-id-with-no-transaction-for-1-year-upi-number-de-activate-reason/ ಬೇಸಿಗೆ ಯಲ್ಲಿ ಎದುರಾಗುವ ಸವಾಲುಗಳ ನಿರ್ವ ಹಣೆಗೆ ವ್ಯವಸ್ಥಿತ ಪೂರ್ವ ತಯಾರಿ ನಡೆಸುವಂತೆ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿಗಳಾದ ಡಾ ಕೆ.ವಿ.ರಾಜೇಂದ್ರ ಅವರು ಮುಂದಿನ ಮುಂಗಾರಿನವರೆಗೆ, ಕುಡಿಯುವ ನೀರು ಕೊರತೆಯಾಗದಂತೆ ಕೈಗೊಳ್ಳಲಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಅಸಾದ್ ಉರ್ ರೆಹಮಾನ್ ಷರೀಫ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮುಂಬರುವ ಹನುಮಂತೋತ್ಸವ ಮೆರವಣಿಗೆ ಸಂಬಂಧ ನಗರ ಠಾಣೆ ಪೊಲೀಸರು ಪೂರ್ವಬಾವಿ ಸಭೆ ನಡೆಸಿದರು. ನಗರ ಠಾಣೆ ಸಭಾಂಗಣದಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣರವರ ಅಧ್ಯಕ್ಷತೆಯಲ್ಲಿ ಮುಖಂಡರಿಂದ ಮಾಹಿತಿ ಪಡೆದ ನಂತರ ಮಾತನಾಡಿದ ಡಿವೈಎಸ್ ಪಿ ಯವರು ತಾಲೂಕು ಮತ್ತು ಜಿಲ್ಲಾಡಳಿತದ ನಿಬಂಧನೆಗೊಳಪಟ್ಟು ಹನುಮಂತೋತ್ಸವ ಮೆರವಣಿಗೆ ನಡೆಸಬೇಕು. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು. https://ainlivenews.com/upi-id-with-no-transaction-for-1-year-upi-number-de-activate-reason/ ಶಾಂತಿ ಕಾಪಾಡಬೇಕು. ಸಾರ್ಜನಿಕರ ನೆಮ್ಮದಿಗೆ ಭಂಗ ಬರದಂತೆ ಮೆರವಣಿಗೆ ನಡೆಸಬೇಕು. ಬೈಕ್ ಮತ್ತಿತರ ವಾಹನಗಳಲ್ಲಿ ಬಾವುಟ ಕಟ್ಟಿಕೊಂಡು ಓಡಾಡುವುದು. ಬೈಕ್ ರ್ಯಾಲಿ ನಡೆಸಬಾರದು. ಬಂಟಿಂಗ್ಸ್ .ಬ್ಯಾನರ್ ಅಳವಡಿಸುವ ಮುನ್ನ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ಮೆರವಣಿಗೆಯಲ್ಲಿ ಸಮಿತಿಯವರು ಗುರುತು ಪತ್ರ ಹೊಂದಿರುವ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಬೇಕು. ಸಣ್ಣಪುಟ್ಟ ವಿಷಯವೆಂದು ಅಲಕ್ಷ್ಯ ಮಾಡದೆ ಸಮಿತಿಯವರು ತಕ್ಷಣವೇ ಪೊಲೀಸರ ಗಮನಕ್ಕೆ ತರಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಪೋಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಬೆಂಗಳೂರು: ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕಂಬಳ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜಧಾನಿಯಲ್ಲಿ ನಡೆದಿರೋ ಕಂಬಳ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಯಿತು. ಲಕ್ಷಾಂತರ ಜನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಎರಡನೇ ದಿನವೂ ಬೆಂದುಕಾಳೂರಿನಲ್ಲಿ ಬೇಯಿಸಿ, ರುಬ್ಬಿದ ಹುರಳಿ ಕಾಳು ತಿಂದು ಕೆರೆ ಗಿಳಿದ ಜೋಡಿ ಕೋಣಗಳು ಮಿಂಚಿನ ಓಡ ನಡೆಸಿದ್ದವು. ಹಾಗಾದ್ರೆ ಕೊನೆಯ ದಿನದ ಕೋಣಗಳ ಮಿಂಚಿನ ಓಟ ಹೇಗಿತ್ತು ಬನ್ನೋ ತೋರಿಸ್ತೀವಿ ‘ ಕಂಬಳ ಅಂದರೆ ನೆನಪಾಗೋದು ಕರಾವಳಿಯ ಮಂಗಳೂರು, ಉಡುಪಿ. ಆದ್ರೆ ಇನ್ಮುಂದೆ ಕಂಬಳ ಅಂದ್ರೆ ಕಣ್ಮಂದೆ ಬರೋದು ಬೆಂಗಳೂರು. ಹೌದು ಕರಾವಳಿ ಆಚರಣೆಯ ಕಂಬಳ ಫಸ್ಟ್ ಟೈ ಬೆಂಗಳೂರಿನಲ್ಲಿ ನಿನ್ನೆ ಇಂದು ಅಂದರೆ ಎರಡು ದಿನ ನಡೆದಿದೆ. 150 ಹೆಚ್ಚು ಜೋಡಿ ಕೋಣಗಳು ಕೆಸರಗದ್ದೆಯಲ್ಲಿ ನಾನಾ ನೀನಾ ಅಂತ ಸ್ವರ್ಧೆಗೆ ಬಿದ್ದದ್ವು. ಈ ಕೋಣಗಳನ್ನ ನೋಡೋಕೆ ಸಿಕ್ಕಾಪಟ್ಟೆ ತ್ರಿಲ್ ಆಗಿತ್ತು.ಕರಾವಳಿಗರ ಕಂಬಳ ಕಿಕ್ ಕೊಡೋಕೆ ಕಾರಣ ರಿಷಬ್ ಶೆಟ್ಟಿಯ ಕಾಂತರ ಸಿನಿಮಾ. ಕಾಂತರದಲ್ಲಿ ಕಾಡುಬೆಟ್ಟದ ಶಿವ ಕಂಬಳ ಪಟ್ಟುವಾಗಿದ್ದು, ಶೆಟ್ರು…