ಕೆ ಆರ್ ಪುರ:- ಸ್ತನದ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಹಾಗೂ ಮಹಿಳೆಯರ ಆರೋಗ್ಯ ಕುರಿತಂತೆ ಗಮನ ಸೆಳೆಯಲು 5 ಕೆ,10ಕೆ ಕಿಲೋ ಮೀಟರ್ ದೂರದ ಮೂರನೇ ವರ್ಷದ ‘ವಾಕಥಾನ್ ‘ ಕಾರ್ಯಕ್ರಮವನ್ನು ಟ್ರಸ್ಟ್ ಇನ್ ಆಸ್ಪತ್ರೆ ವತಿಯಿಂದ ಹೊರಮಾವಿನಲ್ಲಿ ಟ್ರಸ್ಟ್ ಇನ್ ರನ್ ಆಯೋಜಿಸುವ ಮೂಲಕ ಅರಿವು ಮೂಡಿಸಲಾಯಿತು.
ವಾಕಥಾನ್ ಗೆ ಚಾಲನೆ ನೀಡಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಆಯುಕ್ತ ರಂದೀಪ್.ಡಿ ಅವರು ಮಹಿಳೆರಲ್ಲಿ ಇತ್ತೀಚಿನ ವರ್ಷಗಳಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿದೆ, ಇದರ ಬಗ್ಗೆ ಟ್ರಸ್ಟ್ ಇನ್ ಆಸ್ಪತ್ರೆ 2500 ಮ್ಯಾರಥಾನ್ ಸ್ಪರ್ಧಿಗಳು ಭಾಗವಹಿಸಿದ್ದ ಮೂರನೇ ವರ್ಷದ ಟ್ರಸ್ಟ್ ಇನ್ ರನ್ ವಾಕಥಾನ್ ಆಯೋಜಿಸುವ ಮೂಲಕ ಅರಿವು ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಇತ್ತೀಚೆಗೆ ಸ್ತನ ಕ್ಯಾನ್ಸರ್ ಕಾಯಿಲೆ ಎಲ್ಲಾ ವಯಸ್ಸಿನವರಿಗೂ ಕಾಣಿಸಿಕೊಳ್ಳುತ್ತಿದ್ದು, ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ಪ್ರಥಮ ಹಂತದಲ್ಲಿರುವಾಗಲೇ ವೈದ್ಯರನ್ನ ಸಂಪರ್ಕಿಸಿ ಸೂಕ್ತವಾದ ಚಿಕಿತ್ಸೆ ತೆಗೆದುಕೊಳ್ಳುಬೇಕು ಎಂದು ಮನವಿ ಮಾಡಿದರು.
ಕಾಯಿಲೆಗಳಿಂದ ದೂರವಿರಲು ಮತ್ತು ಫಿಟ್ ಅಂಡ್ ಫೈನ್ ಆಗಿರಬೇಕು ಎನ್ನುವ ನಿಟ್ಟಿನಲ್ಲಿ ವ್ಯಾಯಾಮ, ಸೈಕ್ಲಿಂಗ್, ಮ್ಯಾರಥಾನ್ ಓಟದಲ್ಲಿ ಪಾಲ್ಗೋಳ್ಳುವಂತೆ ತಿಳಿಸಿದರು.
ಸಾರ್ವಜನಿಕರಲ್ಲಿ ಟ್ರಸ್ಟ್ ಇನ್ ಆಸ್ಪತ್ರೆ ಅರಿವು ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳು ಹೆಚ್ಚು ಪೂರವಾಗಿದೆ ಎಂದು ನುಡಿದರು.
ಸ್ತನದ ಜೀವಕೋಶಗಳಲ್ಲಿ ಆರಂಭವಾಗುವ ಇದು ಬಳಿಕ ಹತ್ತಿರದ ಅಂಗಾಂಶಗಳನ್ನು ಹಾಳುಮಾಡುತ್ತದೆ ಮತ್ತು ದೇಹದ ಇತರ ಭಾಗಗಳಿಗೆ ಹರಡುತ್ತದೆ,ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಸಾಮಾನ್ಯ ಎನ್ನುವಂತಾಗಿದೆ ಇದರ ಬಗ್ಗೆ ಅರಿವು ಅಗತ್ಯ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಇನ್ ಆಸ್ಪತ್ರೆಯ ವ್ಯವಸ್ಥಾಪಕ ಡಾ.ಕೆ.ಎಚ್. ಬಸವರಾಜ್ ಹಿರೇಮಠ, ಡಾ. ಶಿವಮಾಡಿದರು
ಡಾ.ಬಿ.ಎಸ್. ಶಂಕರ್,ಉಪ್ಪಾಲ್
ಮುಖಂಡರಾದ ರಾಮಚಂದ್ರಪ್ಪ, ವೆಂಕಟೇಶ್,ಸತೀಶ್, ಇದ್ದರು