ಮುಂಬರುವ ಹನುಮಂತೋತ್ಸವ ಮೆರವಣಿಗೆ ಸಂಬಂಧ ನಗರ ಠಾಣೆ ಪೊಲೀಸರು ಪೂರ್ವಬಾವಿ ಸಭೆ ನಡೆಸಿದರು. ನಗರ ಠಾಣೆ ಸಭಾಂಗಣದಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣರವರ ಅಧ್ಯಕ್ಷತೆಯಲ್ಲಿ ಮುಖಂಡರಿಂದ ಮಾಹಿತಿ ಪಡೆದ ನಂತರ ಮಾತನಾಡಿದ ಡಿವೈಎಸ್ ಪಿ ಯವರು ತಾಲೂಕು ಮತ್ತು ಜಿಲ್ಲಾಡಳಿತದ ನಿಬಂಧನೆಗೊಳಪಟ್ಟು ಹನುಮಂತೋತ್ಸವ ಮೆರವಣಿಗೆ ನಡೆಸಬೇಕು. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು.
NPCI guidelines: ಒಂದು ವರ್ಷದಿಂದ ಯಾವುದೇ ವಹಿವಾಟು ನಡೆಸದ ಯುಪಿಐ ಐಡಿ, ಯುಪಿಐ ನಂಬರ್ ಡೀ ಆ್ಯಕ್ಟಿವೇಟ್: ಕಾರಣ!
ಶಾಂತಿ ಕಾಪಾಡಬೇಕು. ಸಾರ್ಜನಿಕರ ನೆಮ್ಮದಿಗೆ ಭಂಗ ಬರದಂತೆ ಮೆರವಣಿಗೆ ನಡೆಸಬೇಕು. ಬೈಕ್ ಮತ್ತಿತರ ವಾಹನಗಳಲ್ಲಿ ಬಾವುಟ ಕಟ್ಟಿಕೊಂಡು ಓಡಾಡುವುದು. ಬೈಕ್ ರ್ಯಾಲಿ ನಡೆಸಬಾರದು. ಬಂಟಿಂಗ್ಸ್ .ಬ್ಯಾನರ್ ಅಳವಡಿಸುವ ಮುನ್ನ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ಮೆರವಣಿಗೆಯಲ್ಲಿ ಸಮಿತಿಯವರು ಗುರುತು ಪತ್ರ ಹೊಂದಿರುವ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಬೇಕು. ಸಣ್ಣಪುಟ್ಟ ವಿಷಯವೆಂದು ಅಲಕ್ಷ್ಯ ಮಾಡದೆ ಸಮಿತಿಯವರು ತಕ್ಷಣವೇ ಪೊಲೀಸರ ಗಮನಕ್ಕೆ ತರಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಪೋಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.