Author: AIN Author

ಭಾರತದಲ್ಲಿನ ಟಾಪ್ 10 ಶ್ರೀಮಂತ ನಗರಗಳ ಪಟ್ಟಿ: ನಾಮಮಾತ್ರದ GDP ಯಿಂದ ಭಾರತವು ವಿಶ್ವದ 6 ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ಕೊಳ್ಳುವ ಶಕ್ತಿ ಸಮಾನತೆ (PPP) ಮೂಲಕ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು 2031 ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಭಾರತದಲ್ಲಿ, ಅನೇಕ ನಗರಗಳು ತಮ್ಮ GDP ಆಧಾರದ ಮೇಲೆ ಶ್ರೀಮಂತವಾಗಿವೆ, ಇದರಿಂದಾಗಿ ದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ. ನಾವು ಭಾರತದ ಟಾಪ್ 10 ಶ್ರೀಮಂತ ನಗರಗಳನ್ನು ನೋಡೋಣ. 1- ಮುಂಬೈ ಭಾರತದ ಹಣಕಾಸು ರಾಜಧಾನಿ ಮುಂಬೈ, $310 ಬಿಲಿಯನ್ ಅಂದಾಜು GDP ಯೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತದ ಅತಿದೊಡ್ಡ ನಗರವು ಟಾಟಾ ಗ್ರೂಪ್, ರಿಲಯನ್ಸ್ ಇಂಡಸ್ಟ್ರೀಸ್, ಆದಿತ್ಯ ಬಿರ್ಲಾ ಗ್ರೂಪ್, ಇತರ ಪ್ರಮುಖ ಭಾರತೀಯ ಕಂಪನಿಗಳ ಪ್ರಧಾನ ಕಛೇರಿಯನ್ನು ಹೊಂದಿದೆ. 2- ದೆಹಲಿ ಭಾರತದ ರಾಷ್ಟ್ರೀಯ ರಾಜಧಾನಿ ದೆಹಲಿ, ಭಾರತದ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ…

Read More

ನುಗ್ಗೇಹಳ್ಳಿ:- ವರ್ಗಾವಣೆ ದಂಧೆಯಲ್ಲಿ ಕಾಂಗ್ರೆಸ್ ಸರ್ಕಾರ ಮುಳುಗಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬಿಡುಗಡೆ ಮಾಡದೇ, ಕೇವಲ ಅಧಿಕಾರಿಗಳ ವರ್ಗಾವಣೆಯಲ್ಲಿ ಮುಳುಗಿದ್ದು, ಈ ಸರ್ಕಾರದಿಂದ ರಾಜ್ಯದ ಜನ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು. 5 ಗ್ಯಾರಂಟಿ ಯೋಜನೆಗಳ ನೆಪ ಮಾಡಿ ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ. ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಕೊಬ್ಬರಿಗೆ ಪ್ರತಿ ಕ್ವಿಂಟಲ್‌ಗೆ ₹15 ಸಾವಿರ ನೀಡುವುದಾಗಿ ಹೇಳಿತ್ತು. ನಾವು ಕೂಡ ನಮ್ಮ ಪ್ರಣಾಳಿಕೆಯಲ್ಲಿ ₹ 15 ಸಾವಿರ ಕೊಡುವುದಾಗಿ ಘೋಷಣೆ ಮಾಡಿದ್ದೇವು. ಆದರೆ ನಮ್ಮ ಪಕ್ಷಕ್ಕೆ ಬಹುಮತ ಬರಲಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಈ ಬಗ್ಗೆ ಅಧಿವೇಶನದಲ್ಲಿ ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಪ್ರತಿಭಟಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

Read More

ಲಂಡನ್ : ಬ್ರಿಟಿಷ್ ರಾಜಕುಮಾರಿ ಡಯಾನ ದುರಂತವಾಗಿ ಸಾವನ್ನಪ್ಪಿ 26 ವರುಷಗಳೇ ಕಳೆದಿವೆ. ಆದರೆ ಅವರು ಅಂದು ಧರಿಸಿದ್ದ ಸ್ವೆಟರ್‌ ಈಗ 26 ವರ್ಷಗಳ ನಂತರ ಸುಮಾರು 1.1 ಮಿಲಿಯನ್ ಡಾಲರ್‌ಗೆ ಹರಾಜಾಗಿದೆ.  ಹರಾಜು ಸಂಸ್ಥೆ ಸೋಥಿಬೆ ಈ ಹರಾಜು ಪ್ರಕ್ರಿಯೆ ನಡೆಸಿದ್ದು, ಭರ್ಜರಿ ಮೊತ್ತಕ್ಕೆ ರಾಜಕುಮಾರಿ ಡಯಾನ ಸ್ವೆಟ್ಟರ್ ಸೇಲ್ ಆಗಿದೆ.  ಕೊನೆಯ 15 ನಿಮಿಷಗಳಲ್ಲಿ  1,90,000 ಡಾಲರ್‌ನಿಂದ ಈಗ 1.1 ಮಿಲಿಯನ್ ಡಾಲರ್‌ಗೆ ಜಂಪ್ ಆಗಿದ್ದು,  ಇದು ಸ್ವೆಟರ್‌ನ ಮೂಲ ಬೆಲೆಗಿಂತ 80 ಸಾವಿರ ಡಾಲರ್ ಅಧಿಕ ಬೆಲೆಗೆ ಸೇಲ್ ಆಗಿ ಅಚ್ಚರಿ ಮೂಡಿಸಿದೆ.   https://ainlivenews.com/geo-scientist-statue-murder-case-explosive-issue-comes-to-light-during-investigation/ ಡಯಾನ 1981ರಲ್ಲಿ ಬಿಳಿ ಹಾಗೂ ಕಪ್ಪು ಕುರಿ ಮಾದರಿಯ ಕೆಂಪು ಸ್ವೆಟರ್‌ನ್ನು ಧರಿಸಿದ್ದರು. ಆಗ 19 ವರ್ಷ ವಯಸ್ಸಿನವರಾಗಿದ್ದ ಡಯಾನಾ ಈ ಸ್ವೆಟರ್ ಧರಿಸಿ ರಾಜಕುಮಾರ ಚಾರ್ಲ್ಸ್‌ನ ಪೋಲೋ ಪಂದ್ಯವನ್ನು ವೀಕ್ಷಿಸಿದ್ದರು. ಆದರೆ ನಂತರ ಈ ಸ್ವೆಟರ್‌ ಸ್ವಲ್ಪ ಹರಿದು ಹೋಗಿತ್ತು. ಈ ವೇಳೆ ಅದನ್ನು ಅವರು ಬೇರೆ ಬೇರೆ…

Read More

ಸಾಮಾನ್ಯವಾಗಿ ಧೂಳು, ಮಾಲಿನ್ಯ, ವಿಷಕಾರಕ ಸಸ್ಯಗಳು, ಇಂಜೆಕ್ಷನ್ ಮತ್ತು ಡ್ರಗ್ಸ್ ಈ ಕಾರಣಗಳಿಂದ ಅಲರ್ಜಿ ಉಂಟಾಗುವುದು. ಕೆಲವರಿಗೆ ಅತೀ ಶಾಖ ಅಥವಾ ಅತೀ ಕಡಿಮೆ ಉಷ್ಣತೆ ಇರುವ ಸ್ಥಳಕ್ಕೆ ಹೋದಾಗ ಕೂಡ ಅಲರ್ಜಿ ಉಂಟಾಗುವುದು. ಕೆಲವೊಮ್ಮೆ ಶುಚಿಯಿಲ್ಲದ ಅಹಾರ ಸೇವನೆ , ಜೀವನ ಶೈಲಿ, ದೈಹಿಕ ಸುಸ್ತು, ಮಾನಸಿಕ ಒತ್ತಡ ಇವುಗಳು ಕೂಡ ಅಲರ್ಜಿ ಸಮಸ್ಯೆಗೆ ಒಂದು ಕಾರಣವಾಗಿದೆ. ಈ ರೀತಿ ಅಲರ್ಜಿ ಉಂಟಾದರೆ ತಲೆ ನೋವು, ಮುಖ ಮೈ ಊದಿಕೊಳ್ಳುವುದು, ಚರ್ಮದಲ್ಲಿ ಕೆಂಪು ಗುಳ್ಳೆಗಳು ಕಂಡುಬರುತ್ತದೆ. ಅಲರ್ಜಿಗೆ ಮನೆ ಮದ್ದು: ಗಂಧವನ್ನು ತೇಯ್ದು ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ, ತುರಿಕೆ ಕಂಡು ಬರುವ ಜಾಗದಲ್ಲಿ ಹಾಕಿದರೆ ತುರಿಕೆ ಕಡಿಮೆಯಾಗುವುದು. ಬಾದಾಮಿಯನ್ನು ಪೇಸ್ಟ್ ರೀತಿ ಮಾಡಿ ತುರಿಕೆ ಕಂಡು ಬಂದಲ್ಲಿ ಹಚ್ಚಿದರೆ ತುರಿಕೆ ಕಡಿಮೆಯಾಗುವುದು. ಪುದೀನಾ ಎಲೆಯನ್ನು ಪೇಸ್ಟ್ ಮಾಡಿ ಅದನ್ನು ಒಂದು ಗ್ಲಾಸ್‌ಗೆ ಹಾಕಿ ಪಾನಕ ರೀತಿ ಮಾಡಿ ಒಂದು ಚಮಚ ಸಕ್ಕರೆ ದಿನಕ್ಕೆ ಎರಡು ಬಾರಿ ಕುಡಿದರೆ…

Read More

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು. ಸೋಮಶೇಖರ್B.Sc ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.93534 88403 ಈ “ಬುಧಾದಿತ್ಯ ಯೋಗ” ಉಳ್ಳವರು ತುಂಬಾ ಜಾಣರು ಕಷ್ಟದಲ್ಲಿದ್ದಾಗ ಎದುರಿಸಿ ಚಾಣಕ್ಷತನದಿಂದ ಪಾರಾಗಿ ಬರುವರು. ಧೈರ್ಯದಿಂದ ಎದುರಿಸಿ ಹೋರಾಡುವರು. ಇವರು ತುಂಬಾ ಮಾತನಾಡುವ ವಾಕ್ಚಾತುರ್ಯ ಹೊಂದಿರುತ್ತಾರೆ. ಲಗ್ನ ಒಂದನೇ ಸ್ಥಾನದಲ್ಲಿ ರವಿ ಬುಧ ಇದ್ದರೆ _ಪ್ರತಿಷ್ಠೆಯ ಕುಟುಂಬ ಅಥವಾ ಸಮಾಜದಲ್ಲಿ ಪ್ರತಿಷ್ಠೆ ವ್ಯಕ್ತಿಯಾಗುತ್ತಾನೆ. ಲಗ್ನದಿಂದ ಎರಡನೇ ಸ್ಥಾನದಲ್ಲಿ ರವಿ ಬುಧ ಇದ್ದರೆ _ತುಂಬಾ ಬುದ್ಧಿವಂತನು, ಉತ್ತಮ ಮಾತುಗಾರನು ,ಬೋಧನಾ ಪ್ರಿಯರು, ಸಾಹಿತಿಗಳ…

Read More

ಜನನ ದಿನಾಂಕ ಮತ್ತು ಸಮಯದ ಆಧಾರ ಮೇಲೆ ನಿಮ್ಮ ಜನ್ಮಜಾತಕ ಬರೆದು ಅದನ್ನು ಸರಿಯಾಗಿ ಪರೀಕ್ಷಿಸಿ ಈ ಕೆಳಕಂಡ ಮಾಹಿತಿಗಳು ಇದ್ದರೆ”ಲಕ್ಷ್ಮಿ ಯೋಗ” ಉಂಟಾಗುತ್ತದೆ. ರಾಶಿಚಕ್ರದ ಚಿಹ್ನೆಯು ಏರಿಕೆಯ ಸ್ಥಾನದಲ್ಲಿ ಯೋಗವನ್ನು ಪಡೆದುಕೊಂಡರೆ ಉತ್ತಮ ಅದೃಷ್ಟದಿಂದ ಕೂಡಿರುತ್ತದೆ. ಲಕ್ಷ್ಮಿ ದೇವಿಯು ತ್ರಿಕೋನ ಭಾವ ದೇವತೆ ಆಗಿರುತ್ತಾಳೆ. ಭಗವಾನ್ ವಿಷ್ಣು ಕೇಂದ್ರ ಭವನದ ದೇವರು. ಕೇಂದ್ರ ತ್ರಿಕೋನ ರಾಜ ಯೋಗದಲ್ಲಿ ಒಂತ್ತನೇ ಮನೆಯ ಅಧಿಪತಿ ಉದಾತ್ತನಾಗಿದ್ದರೆ ಉತ್ತಮ ಅದೃಷ್ಟವು ಪಡೆದುಕೊಳ್ಳುವವರು. ಈ ಯೋಗದಲ್ಲಿ ವಿವಿಧ ಮನೆಗಳಲ್ಲಿ ಗ್ರಹಗಳ ಸ್ಥಾನ ಹೇಗಿದೆ ಎನ್ನುವುದನ್ನು ಪರಿಗಣಿಸಿ, ಅದೃಷ್ಟದ ತೀರ್ಪು ತಿಳಿಸಲಾಗುವುದು. ಈ ಯೋಗ ಅಥವಾ ಕುಂಡಲಿಯ ಲೆಕ್ಕಾಚಾರವನ್ನು ಪಾಶ್ಚಾತ್ಯ ಜ್ಯೋತಿಷ್ಯದಲ್ಲಿ ತಿಳಿಯಬಹುದು. ಒಂಬತ್ತನೇ ಮನೆ ಅದು “ಭಾಗ್ಯಸ್ಥಾನ”. ಒಂಬತ್ತನೇ ಮನೆಯಲ್ಲಿ ತ್ರಿಕೋನ ಉಂಟಾದರೆ ಅದನ್ನು “ಶುಭ ಲಕ್ಷ್ಮಿ ಯೋಗ” ಎಂದು ಪರಿಗಣಿಸಲಾಗುತ್ತದೆ. ಈ ಯೋಗದಿಂದ ಸಂಪತ್ತಿನ ಆದಾಯ ಉಂಟಾಗುವುದು. ಐಷಾರಾಮಿ ಜೀವನ ನಡೆಸುವರು. ಐಷಾರಾಮಿ ವಸ್ತುಗಳ ಬಳಕೆ ಮತ್ತು ಸಂತೋಷವನ್ನು ಪಡೆದುಕೊಳ್ಳುವರು. ಕೇಂದ್ರ ತ್ರಿಕೋನ ರಾಜ…

Read More

ಸೋಮಶೇಖರ್B.Sc ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.9353488403 ಒಂದು ಹೆಣ್ಣು ತನ್ನ ತವರು ಮನೆಯಲ್ಲಿ ತಿಂದು ಉಂಡು ಸಂತೋಷವಾಗಿ ಬೆಳೆದಿರುತ್ತಾಳೆ. ಅದೇ ಹೆಣ್ಣು ತನ್ನ ತಂದೆ-ತಾಯಿ, ಅಣ್ಣ-ತಮ್ಮ ,ಅಕ್ಕ-ತಂಗಿ, ಎಲ್ಲರಿಗೂ ಮುದ್ದಿನ ಮಗುವಾಗಿ ಬೆಳೆದಿರುತ್ತಾಳೆ . ಅದೇ ಹೆಣ್ಣು ಮದುವೆ ವಯಸ್ಸಿಗೆ ಬಂದಿದ್ದು ಮದುವೆ ಮಾಡಿಕೊಂಡು ಗಂಡನ ಮನೆಗೆ ಕಳಿಸುತ್ತಾರೆ. ಗಂಡನ ಮನೆಯಲ್ಲಿ ಎಲ್ಲರ ಪ್ರೀತಿಯ ಪ್ರೇಮಕ್ಕಿಂತ ಗಂಡನ ಪ್ರೀತಿ ಪ್ರೇಮ ಸುಖ ನೆಮ್ಮದಿ ಬಹಳ ಪ್ರಮುಖವಾದದ್ದು. ಜಾತಕವನ್ನು ನೋಡದೆ ಆಗಿರುವ ಮದುವೆ ಕಾರ್ಯ ಅಥವಾ ಪರಸ್ಪರ ಪ್ರೀತಿಸಿ ಆದ ಮದುವೆ ಕಾರ್ಯದಲ್ಲಿ ಗಂಡ-ಹೆಂಡತಿ ಮಧ್ಯೆ ನಿರಂತರವಾಗಿ ಜಗಳ, ಕಿರಿಕಿರಿ ,ಮನಸ್ತಾಪ, ಅನುಮಾನ ಎದುರಿಸುವ ಪ್ರಸಂಗ ಬರುತ್ತದೆ . ವಧು ವರರ ಸಾಲಾವಳಿ ಪರೀಕ್ಷಿಸುವಾಗ ಗಣ ಕೂಟ, ರಾಶಿ ಕೂಟ ,ನಾಡಿ ಇತ್ಯಾದಿ ತಾಳಿ ಆದರೆ ಸಾಕು, ಎಂದು ಜ್ಯೋತಿಷ್ಯಗಳು ವಿವಾಹ ನಿಶ್ಚಯಿಸಲು ಅನುಮತಿ ಕೊಡುತ್ತಾರೆ. ಜನ್ಮಂಗ ಲಗ್ನ…

Read More

ಸೂರ್ಯೋದಯ: 06.21 AM, ಸೂರ್ಯಾಸ್ತ : 05.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಕಾರ್ತೀಕ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಅಷ್ಟಮಿ 03:16 AM ತನಕ ನಂತರ ನವಮಿ ನಕ್ಷತ್ರ: ಇವತ್ತು ಶತಭಿಷ 08:01 PM ತನಕ ನಂತರ ಪೂರ್ವಾ ಭಾದ್ರ ಯೋಗ: ಇವತ್ತು ವ್ಯಾಘಾತ05:41 PM ತನಕ ನಂತರ ಹರ್ಷಣ ಕರಣ: ಇವತ್ತು ಬವ 03:16 AM ತನಕ ನಂತರ ಬಾಲವ 02:12 PM ತನಕ ನಂತರ ಕೌಲವ ರಾಹು ಕಾಲ: 03:00 ನಿಂದ 04:30 ವರೆಗೂ ಯಮಗಂಡ: 09:00 ನಿಂದ 10:30 ವರೆಗೂ ಗುಳಿಕ ಕಾಲ: 12:00 ನಿಂದ 01:30 ವರೆಗೂ ಅಮೃತಕಾಲ: 01.15 PM to 02.45 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:39 ನಿಂದ ಮ.12:24 ವರೆಗೂ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ,…

Read More

ಮಂಡ್ಯ :- ಅನಧಿಕೃತವಾಗಿ ಖಾಸಗಿ ಕ್ಲಿನಿಕ್ ನಡೆಯುತ್ತಿದೆ ಎಂಬ ದೂರಿನ ಮೇರೆಗೆ ದಾಳಿ ಮಾಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ಲಿನಿಕ್ ಅನ್ನು ಮುಚ್ಚಿಸಿದ್ದಾರೆ. ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಕಾಲುವೆ ರಸ್ತೆಯಲ್ಲಿ ಉತ್ತರಪ್ರದೇಶ ಮೂಲದ ಡಾ.ಧೀರಜ್‍ಕುಮಾರ್ ಎಂಬುವರು ಅನಧಿಕೃತವಾಗಿ ವೆಂಕಟೇಶ್ವರ ಖಾಸಗಿ ಕ್ಲಿನಿಕ್ ಅನ್ನು ನಡೆಸುತ್ತಿದ್ದರು ಈ ಸಂಬಂಧ ಡಿಎಚ್ಓ ಅವರಿಗೆ ಸಾರ್ವಜನಿಕರು ದೂರು ನೀಡಿದ್ದರು. ಡಿಎಚ್ಓ ಸೂಚನೆ ಮೇರೆಗೆ ಸೋಮವಾರ ಕ್ಲಿನಿಕ್‍ಗೆ ದಿಡೀರ್ ಭೇಟಿ ನೀಡಿ ಪರಿಶೀಲಿನೆ ನಡೆಸಿದ ತಾಲೂಕು ವೈದ್ಯಾಧಿಕಾರಿ ಡಾ.ರವೀಂದ್ರ ಬಿ.ಗೌಡ, ಯಾವುದೇ ದಾಖಲೆಗಳಿಲ್ಲದೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕ್ಲಿನಿಕ್ ಅನ್ನು ಮುಚ್ಚಿಸಿದ್ದಾರೆ. ಅನಧಿಕೃತವಾಗಿ ಕ್ಲಿನಿಕ್‌ ನಡೆಸುತ್ತಿದ್ದ ವೈದ್ಯರ ಬಳಿ ಬಿ.ಎ.ಎಂ.ಎಸ್. ಪದವಿ ಸರ್ಟಿಫಿಕೇಟ್, ಕ್ಲಿನಿಕ್ ನೋಂದಣಿ ಪತ್ರ ಇಲ್ಲದಿರುವುದು ಪತ್ತೆಯಾಗಿದೆ. ಬಯೋ ಮೆಡಿಕಲ್ ವೇಸ್ಟ್ ಅನ್ನು ವಿಲೇವಾರಿ ಮಾಡುವ ಬಗ್ಗೆಯೂ ವೈದ್ಯರ ಬಳಿ ಮಾಹಿತಿ ಇಲ್ಲ ಎಂದು ರವೀಂದ್ರ ಡಾ.ಗೌಡ ತಿಳಿಸಿದ್ದಾರೆ. ಈ ವೇಳೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ತಮ್ಮೆಗೌಡ, ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು,…

Read More

ಕಲಬುರ್ಗಿ:- ಸಾಲಸೂಲ ಮಾಡಿ ಬೆಳೆದಿದ್ದ ಮೂರುವರೆ ಎಕರೆ ಕಬ್ಬು ಸುಟ್ಟು ಕರಕಲಾದ ಘಟನೆ ಕಲಬುರಗಿಯ ಕಡಣಿ ಗ್ರಾಮದಲ್ಲಿ ನಡೆದಿದೆ. ರೈತ ಹಣಮಂತರಾಯಗೆ ಸೇರಿದ ಹೊಲದಲ್ಲಿ ಶಾಟ್ ಸರ್ಕ್ಯೂಟ್ ಆಗಿ ಬೆಳೆದು ನಿಂತಿದ್ದ ಇಡೀ ಕಬ್ಬು ಹೊತ್ತಿ ಉರಿದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಬೆಂಕಿ ನಂದಿಸಿದೆ..ಆದ್ರೆ 2 ಲಕ್ಷಕ್ಕೂ ಅಧಿಕ ಮೌಲ್ಯದ ಕಬ್ಬು ಹಾನಿಯಾಗಿದ್ದು ಸರ್ಕಾರ ನೆರವಿಗೆ ಬರಬೇಕು ಅನ್ನೋದು ಅನ್ನದಾತನ ಅಳಲು.

Read More