ತುಮಕೂರು: ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಗೋವಿಂದ ಆಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯರನ್ನು ಇಳಿಸಲು ಡಿ.ಕೆ.ಶಿವಕುಮಾರ್ ಪರ ಗ್ಯಾಂಗ್ ಈಗಾಗಲೇ ರೆಡಿ ಆಗಿ ಕೂತಿದೆ. ಇನ್ನೊಂದು ಕಡೆ ಶಿವಕುಮಾರ್ ಅವರನ್ನು ಸಿಕ್ಕಿಹಾಕಿಸಲು ಸಿದ್ದರಾಮಯ್ಯ ಅವರು ಪರಮೇಶ್ವರ್ ಮನೆಯಲ್ಲಿ ಮೀಟಿಂಗ್ ಮಾಡಿದ್ದಾರೆ.
ನಾಲ್ಕು ಜನ ಸೇರಿ ಶಿವಕುಮಾರ್ಗೆ ಖೆಡ್ಡಾ ತೋಡಲು ರೆಡಿ ಮಾಡಿದ್ದಾರೆ ಎಂದರು. ಹಿಂದೆ ಮೈತ್ರಿ ಸರ್ಕಾರವನ್ನು ಬೀಳಿಸುವುದಕ್ಕೆ ಬೆಳಗಾವಿಯಲ್ಲಿಯೇ ಪ್ಲಾನ್ ಆಗಿತ್ತು. ಈಗಲೂ ಅಲ್ಲಿಂದಲೇ ತಯಾರಿ ನಡೀತಾ ಇದೆ. ಇವೆಲ್ಲ ಬೆಳವಣಿಗೆಯನ್ನು ನೋಡಿದರೆ ಶೀಘ್ರ ಸರ್ಕಾರ ಗೋವಿಂದ ಆಗಲಿದೆ ಎಂದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಸುವರ್ಣವಾಕಾಶ..! SBIನಲ್ಲಿ ಖಾಲಿಯಿದೆ 8283 ಹುದ್ದೆಗಳು
ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಆದರೆ ಯಾರಿಗೆ ಎಷ್ಟು ಸೀಟು ಅನ್ನೋದು ಇನ್ನೂ ನಿರ್ಧಾರ ವಾಗಿಲ್ಲ. ರಾಷ್ಟ್ರೀಯ ನಾಯಕರು, ಜೆಡಿಎಸ್ ವರಿಷ್ಠ ದೇವೇಗೌಡರು ಸೇರಿ ತೀರ್ಮಾನ ಮಾಡುತ್ತಾರೆ ಎಂದ ಅವರು, ಮೊದಲೆಲ್ಲ 24, 25 ಕಡೆಗಳಲ್ಲಿ ಸ್ಪರ್ಧೆ ಮಾಡುತ್ತಿದ್ದೆವು. ಈ ಬಾರಿ 28 ಕ್ಷೇತ್ರಗಳಲ್ಲಿಯೂ ನಾವು ಟಫ್ ಫೈಟ್ ಕೊಡುತ್ತೇವೆ ಎಂದರು.