ತೋಟಗಾರಿಕೆ ಇಲಾಖೆಯು 2023-24 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ವಾಣಿಜ್ಯ ಹೂವಿನ ರಫ್ತಿಗಾಗಿ ತಳಿಗಳ ಕೊರತೆ ನಿವಾರಿಸಲು ಆಮದಿಗಾಗಿ ಪ್ರೋತ್ಸಾಹ ಕಾರ್ಯಕ್ರಮ ಹಮ್ಮಿಕೊಂಡಿದೆ.
ಉತ್ಕೃಷ್ಟ ಗುಣಮಟ್ಟದ ಜಾಗತಿಕ ತಳಿಗಳನ್ನು ಪರಿಚಯಿಸಿ (ಆಮದು) ಮತ್ತು ಅವುಗಳ ರಫ್ತುನ್ನು ಉತ್ತೇಜಿಸುವುದು, ರೈತರ ಆದಾಯವನ್ನು ಅಧಿಕಗೊಳಿಸುವುದು, ಸ್ಥಳೀಯ/ ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಒದಗಿಸುವುದು, ರಫ್ತು ಆಧಾರಿತ ವಿವಿಧ ವಾಣಿಜ್ಯ ತಳಿಗಳ ಪ್ರದೇಶವನ್ನು ಹೆಚ್ಚಿಸುವುದು, ಹೊಸ ಪುಷ್ಪ ಬೆಳೆ/ತಳಿಗಳನ್ನು ಪರಿಚಯಿಸಲು ಸಸ್ಯಾಭಿವೃದ್ಧಿ ಅವಕಾಶಗಳ ಬಗ್ಗೆ ವಿದೇಶಗಳಿಗೆ ಅಧ್ಯಯನ ಪ್ರವಾಸಕ್ಕಾಗಿ ಅಧ್ಯಯನ ಮಾಡುವುದು ಯೋಜನೆಯ ಉದ್ದೇಶವಾಗಿದೆ.
2023-24 ನೇ ಸಾಲಿನ ಮಾರ್ಗಸೂಚಿಯಂತೆ ಸಾಮಾನ್ಯ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸಣ್ಣ ಅತೀ ಸಣ್ಣ ರೈತರಿಗೆ ಹಾಗೂ ಮಹಿಳೆಯರಿಗೆ ಶೇ.50 ರಂತೆ ಗರಿಷ್ಠ ರೂ.4.00 ಲಕ್ಷಗಳಿಗೆ ಮೀರದಂತೆ ಕನಿಷ್ಟ 10 ಗುಂಟೆ ಪ್ರದೇಶದಲ್ಲಿ ಅನುಷ್ಟಾನಗೊಳಿಸಲು ಸಹಾಯಧನ ಪಡೆಯಲು ಈ ಕೂಡಲೇ ತಮ್ಮ ಹೆಸರನ್ನು ಆಯಾ ತಾಲ್ಲೂಕಿನ ತೋಟಗಾರಿಕೆ ಕಛೇರಿಗಳಲ್ಲಿ ನವೆಂಬರ್ ಅಂತ್ಯದೊಳಗೆ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.
ಮಲ್ಲಿಕಾರ್ಜುನ ಬಾಬು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ದೇವನಹಳ್ಳಿ-(ಮೊ) 9480461234. ಎಂ.ಎಸ್.ದೀಪಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ದೊಡ್ಡಬಳ್ಳಾಪುರ-(ಮೊ)9880210892. ರೇಖಾ ಬಿ.ಪಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಹೊಸಕೋಟೆ- (ಮೊ)8217210320. ಹರೀಶ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ನೆಲಮಂಗಲ-(ಮೊ) 9880461607 ಅವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕರಾದ ಗುಣವಂತ.ಜೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.