ಮುಂಬೈ: 16 ಆವೃತ್ತಿ ಕಳೆದರೂ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಈ ಬಾರಿ ಬಲಿಷ್ಠ ಆಟಗಾರರ ಪಡೆ ಕಟ್ಟಿ, ಟ್ರೋಫಿ ಗೆಲ್ಲಲು ಮಾಸ್ಟರ್ ಪ್ಲ್ಯಾನ್ ಮಾಡಿದೆ. ಕಳೆದ ಆವೃತ್ತಿಯಲ್ಲಿದ್ದ 11 ಆಟಗಾರರಿಗೆ ಗೇಟ್ ಪಾಸ್ ನೀಡಿದ್ದು, 18 ಆಟಗಾರರನ್ನ ತಂಡದಲ್ಲಿ ಉಳಿಸಿಕೊಂಡಿದೆ.
ಅಲ್ಲದೇ ಪರ್ಸ್ನಲ್ಲಿ 40.75 ಕೋಟಿ ರೂ. ಉಳಿಸಿಕೊಂಡಿದ್ದ ಆರ್ಸಿಬಿ, ಟ್ರೇಡ್ ವಿಂಡೋ (T) ನಿಯಮದಲ್ಲಿ ಮುಂಬೈ ತಂಡದಿಂದ 17.5 ಕೋಟಿ ರೂ.ಗೆ ಕ್ಯಾಮರೂನ್ ಗ್ರೀನ್ (Cameron Green) ಅವರನ್ನು ಖರೀದಿ ಮಾಡಿದೆ. ಇದರಿಂದ ಆರ್ಸಿಬಿ (RCB) ಪರ್ಸ್ ಮೊತ್ತ 23.25 ಕೋಟಿ ರೂ.ಗೆ ಇಳಿಕೆಯಾಗಿದೆ.
ಕ್ಯಾಮರೂನ್ ಗ್ರೀನ್ ಅವರನ್ನು ಖರೀದಿಸಿರುವ ಬಗ್ಗೆ ಆರ್ಸಿಬಿ ಕೂಡ ತನ್ನ ಅಧಿಕೃತ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಗ್ರೀನ್ ಕೂಡ ಇದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. 2023ರಲ್ಲಿ ಐಪಿಎಲ್ (IPL 2023) ಪ್ರವೇಶಿಸಿದ ಗ್ರೀನ್ 16 ಪಂದ್ಯಗಳಿಂದ 50.22 ಸರಾಸರಿಯಲ್ಲಿ 425 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ, 2 ಅರ್ಧಶತಕಗಳೂ ಸೇರಿವೆ. ಬೌಲಿಂಗ್ನಲ್ಲಿ 9.50 ಎಕಾನಮಿಯಲ್ಲಿ 6 ವಿಕೆಟ್ ಪಡೆದಿದ್ದಾರೆ.