ಕಲಬುರ್ಗಿ:- KEA ಪರೀಕ್ಷಾ ಅಕ್ರಮದಲ್ಲಿ ಬಂಧಿತರಾಗಿರುವ ಆರೋಪಿಗಳಿಂದ ಮೊಬೈಲ್ ಜಪ್ತಿ ಮಾಡಿರುವ CID ಒಟ್ಟು 23 ಮೊಬೈಲ್ ಗಳನ್ನು ಇದೀಗ FSL ಗೆ ಕಳಿಸಿದೆ.. ಹೀಗಾಗಿ ಪ್ರಮುಖ ಆರೋಪಿ RD ಸೇರಿದಂತೆ ಎಲ್ಲ ಆರೋಪಿಗಳ ಎದೆಯಲ್ಲಿ ಢವಢವ ಶುರುವಾಗಿದೆ.. FSL ವರದಿ ಬಂದ ನಂತ್ರ ಎಲ್ಲರ ಬಂಡವಾಳ ಬಯಲಾಗೋದು ಪಕ್ಕಾ ಅಂತ ಹೇಳಲಾಗ್ತಿದೆ
Author: AIN Author
ಉಡುಪಿ: ಉಡುಪಿ ನೇಜಾರಿನಲ್ಲಿ ಮನೆಯೊಂದರಲ್ಲಿ ನ.12 ರ ಹಾಡಹಗಲೇ ತಾಯಿ ಹಾಗೂ ಮೂವರು ಮಕ್ಕಳನ್ನು ಭೀಕರವಾಗಿ ಕೊಲೆ ಮಾಡಿರುವ ಕಿರಾತಕ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕ್ಯಾಬಿನ್ ಕ್ರೂ ಪ್ರವೀಣ್ ಅರುಣ್ ಚೌಗುಲೆ (39) ಕೃತ್ಯ ನಡೆಸಿ ರಕ್ತಸಿಕ್ತ ಬಟ್ಟೆಯಲ್ಲೇ ಸ್ಥಳದಿಂದ ಪರಾರಿಯಾಗಿದ್ದು, ಆ ಬಟ್ಟೆಯನ್ನು ಮಂಗಳೂರು ತೆರಳುವ ಮಾರ್ಗ ಮಧ್ಯೆ ಸುಟ್ಟು ಹಾಕಿ ಸಾಕ್ಷ್ಯನಾಶ ನಡೆಸಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಕೃತ್ಯಕ್ಕೂ ಮುನ್ನ ಹೆಜಮಾಡಿ ಟೋಲ್‌ನಿಂದ ಆಚೆಗೆ ಕಾರು ನಿಲ್ಲಿಸಿದ್ದ ಹಂತಕ ಪ್ರವೀಣ್ ನೇಜಾರಿನಿಂದ ಪರಾರಿಯಾಗಿ ಬಂದು ತನ್ನ ಕಾರು ಏರಿ ಮಂಗಳೂರಿನತ್ತ ಹೊರಟಿದ್ದ. ರಕ್ತಸಿಕ್ತ ಬಟ್ಟೆಯಲ್ಲೇ ಮನೆಗೆ ಹೋದರೆ ಪತ್ನಿಗೆ ಅನುಮಾನ ಬರುವ ಹಿನ್ನೆಲೆಯಲ್ಲಿ ಹಾಗೂ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಮಂಗಳೂರಿಗೆ ತೆರಳುವ ಮುನ್ನವೇ ಸುರಕ್ಷಿತ ಜಾಗ ನೋಡಿಕೊಂಡು ಕೃತ್ಯದ ವೇಳೆ ತಾನು ಧರಿಸಿದ್ದ ಬಟ್ಟೆಯನ್ನು ಬಿಚ್ಚಿ ಸುಟ್ಟು ಹಾಕಿದ್ದ ಬಗ್ಗೆ ಪೊಲೀಸರಲ್ಲಿ ಬಾಯ್ಬಿಟ್ಟಿದ್ದಾನೆ. ನ.20 ರಂದು ತನಿಖಾ ತಂಡಕ್ಕೆ ಈ ಸ್ಥಳ ತೋರಿಸುವುದಾಗಿ ಒಪ್ಪಿಕೊಂಡಿದ್ದು, ಸ್ಥಳ ಮಹಜರು ಮಾಡಲಾಗುತ್ತದೆ…
ಬೆಂಗಳೂರು:- ಮಣಿಪಾಲ್ ಆಸ್ಪತ್ರೆಯು ಹಿರಿಯ ನಾಗರಿಕರಿಗಾಗಿ ಹೆಚ್ಚು ಸೇವೆ ನೀಡಲು ಮುಂದಾಗಿದೆ. ಹಿರಿಯ ನಾಗರಿಕರಿಗೆ ವಿವಿಧ ಆರೋಗ್ಯ ನಿರ್ಬಂಧಗಳಿಂದ ಹಾಜರಾಗಲು ಆಗಲ್ಲ. ಈ ಸಂಧರ್ಭದಲ್ಲಿ ಮನರಂಜನಾ ಚಟುವಟಿಕೆಗಳ ಭಾಗವಾಗಲು ಆಸ್ಪತ್ರೆಯಿಂದ ಅವಕಾಶ ಕಲ್ಪಿಸಲಾಗಿದೆ. ಸುಮಾರು 200/300 ಹಿರಿಯ ನಾಗರಿಕರು ಭಾಗಿ ಆಗಲಿದ್ದು,ಹಿರಿಯರ ಬೆಂಬಲವನ್ನು ಹೆಚ್ಚಿಸಲು ಹಾಡುಗಾರಿಕೆ, ಕವನ, ಪಠಣ, ನೃತ್ಯ, ನಟನೆ ಮತ್ತು ಚಿತ್ರಕಲೆ ಸೇರಿದಂತೆ ಅದ್ಭುತ ಪ್ರತಿಭೆಗೆ ಅವಕಾಶ ನೀಡಲಾಗಿದೆ. ಮಣಿಪಾಲ್ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ತಿಕ್ ರಾಜಗೋಪಾಲ್ ಸಾಥ್ ನೀಡಿದ್ದಾರೆ. ನಮ್ಮ ಹಿರಿಯ ನಾಗರಿಕರು ಹಂಚಿಕೊಂಡು ಪ್ರೀತಿ ಮತ್ತು ಉತ್ಸಾಹದಿಂದ ನಾನು ನಿಜವಾಗಿಯೂ ಪ್ರಭಾವಿತನಾಗಿದ್ದೇನೆ. ಕಾರ್ಯಕ್ರಮ ಪ್ರತಿಭೆಯನ್ನು ಮಾತ್ರವಲ್ಲದೆ ನಮ್ಮ ಹಿರಿಯರ ಅನಮ್ಯ ಚೈತನ್ಯ ಪ್ರದರ್ಶಿಸಿಸುತ್ತಿದೆ. ಹಿರಿಯರ ಸಕ್ರಿಯ ಭಾಗವಹಿಸುವಿಕೆ ಮತ್ತು ಕೊಡುಗೆಯು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆ ಎಂದಿದ್ದಾರೆ.
ಬೆಂಗಳೂರು:- ನಾಲ್ಕು ದಿನಗಳ ಕಾಲ ರಾಜಧಾನಿ ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳಕ್ಕೆ ಅದ್ದೂರಿ ತೆರೆ ಬಿದ್ದಿದೆ. ಆರಂಭದ ದಿನಕ್ಕಿಂತ ವಾರಾಂತ್ಯದ ದಿನಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ಮೇಳದ ವಿಶೇಷತೆ ವೀಕ್ಷಿಸಿದರು. ಉದ್ಘಾಟನಾ ದಿನವಾದ ಶುಕ್ರವಾರ 1.31 ಲಕ್ಷ ಜನರು ಆಗಮಿಸಿದ್ದರೆ, ವಾರಾಂತ್ಯದ ಶನಿವಾರ ಈ ಸಂಖ್ಯೆ ಬರೋಬ್ಬರಿ 5.48 ಲಕ್ಷದಷ್ಟಿತ್ತು. ಭಾನುವಾರವಾದ ಮೂರನೇ ದಿನ ಕ್ರಿಕೆಟ್ ನಡುವೆಯೂ 5.10 ಲಕ್ಷ ಜನರು ಭೇಟಿ ನೀಡಿದ್ದು, ಮೂರು ದಿನದಲ್ಲಿ 11.89 ಲಕ್ಷ ಜನರು ಕೃಷಿ ಮೇಳವನ್ನು ವೀಕ್ಷಿಸಿದ್ದರು. ನಾಲ್ಕನೇ ಹಾಗೂ ಕೊನೆಯ ದಿನ ಅಂದರೆ ಇಂದು 3.78 ಲಕ್ಷ ಜನ ವೀಕ್ಷಕರು ಬಂದು ಕೃಷಿ ಮೇಳ ಆಸ್ಪಾದಿಸಿದ್ದಾರೆ. ಅಲ್ಲದೆ ವಾರಾಂತ್ಯ ದಿನಗಳಾದ ಶನಿವಾರ 1.65 ಲಕ್ಷ ಭಾನುವಾರ 1.45 ಕೋಟಿ ವ್ಯವಹಾರ ನಡೆದಿತ್ತು. ಇದು ಕೃಷಿಮೇಳದ ಅದ್ಧೂರಿ ಯಶಸ್ಸಿಗೆ ನಿದರ್ಶನವಾಗಿದೆ. ಮೇಳಕ್ಕೆ ಭೇಟಿ ನೀಡಿದವರ ಸಂಖ್ಯೆ 15.67 ಲಕ್ಷ ದಾಟಿದೆ. ಜೊತೆಗೆ, 5.28 ಕೋಟಿ ವ್ಯವಹಾರ ನಡೆದಿದೆ.
ಕೇರಳ: ಇಸ್ರೇಲ್ – ಹಮಾಸ್ ಉಗ್ರರ ನಡುವಣ ಸಂಘರ್ಷ ನಡೆಯುತ್ತಿರುವ ಹೊತ್ತಲ್ಲಿ ಕೇರಳ ರಾಜ್ಯದ ಕಾಂಗ್ರೆಸ್ ಸಂಸದ ರಾಜಮೋಹನ್ ಉನ್ನಿತಾನ್ ಹಮಾಸ್ ಉಗ್ರರ ಪರ ವಹಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಮಾಸ್ ಉಗ್ರರು ಭಯೋತ್ಪಾ ದಕರಲ್ಲ, ಅವರು ಕೇವಲ ತಮ್ಮ ಭೂಮಿಯ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ರಾಜಮೋಹನ್ ಉನ್ನಿತಾನ್ ಹೇಳಿದ್ದಾರೆ. ಈ ಮೂಲಕ ನೇರವಾಗಿಯೇ ಹಮಾಸ್ ಉಗ್ರರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಇದೇ ವೇಳೆ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ವಿರುದ್ಧವೂ ಹರಿಹಾಯ್ದಿರುವ ಕಾಂಗ್ರೆಸ್ ಎಂಪಿ ರಾಜಮೋಹನ್ ಉನ್ನಿತಾನ್, ಯಾವುದೇ ವಿಚಾರಣೆ ನಡೆಸದೆ ಬೆಂಜಮಿನ್ ನೆತನ್ಯಾಹು ಅವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಪ್ಯಾಲಿಸ್ತೀನ್ ಹೋರಾಟಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಕಾಸರಗೋಡು ಯುನೈಟೆಡ್ ಮುಸ್ಲಿಂ ಜಮಾಯತ್ ಸಂಘಟನೆಯು ಸಮಾವೇಶ ಆಯೋಜಿಸಿತ್ತು. https://ainlivenews.com/geo-scientist-statue-murder-case-explosive-issue-comes-to-light-during-investigation/ ಈ ಸಮಾವೇಶದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಸಂಸದ ರಾಜಮೋಹನ್ ಉನ್ನಿತಾನ್, ಹಮಾಸ್ ಸಂಘಟನೆಯ ಸದಸ್ಯರು ಭಯೋತ್ಪಾದಕರಲ್ಲ ಎಂದು ಹೇಳಿದರು. ಅಷ್ಟೇ ಅಲ್ಲ ಹಮಾಸ್…
ಕೋಲಾರ: ಮುಖ್ಯಮಂತ್ರಿಗಳು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ರಾಜಕಾರಣ ಮಾಡುತ್ತಿದ್ದಾರೆಯೇ ಹೊರತು ರಾಜ್ಯದ ಅಭಿವೃದ್ಧಿ ಗಾಗಿ ರಾಜಕಾರಣ ನಡೆಯುತ್ತಿಲ್ಲ. ಈ ಹಿಂದೆ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಹೋರಾಟ ಮಾಡಲಾಗಿತ್ತು. ಪ್ರಸ್ತುತ ಮೂರು ಪಕ್ಷಗಳು ರಾಜಕೀಯ ಬಿಟ್ಟು ತೊಲಗಿ ಎಂದು ಕ್ರಾಂತಿ ಮಾಡ ಬೇಕಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. ಆಮ್ ಆದ್ಮಿ ಪಕ್ಷದ ವತಿಯಿಂದ ಹಮ್ಮಿ ಕೊಂಡಿರುವ ಅರಳಿಕಟ್ಟೆ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ರಾಜ್ಯದಲ್ಲಿ ಈವರೆಗೂ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅಭಿವೃದ್ಧಿಗೆ ಆದ್ಯತೆ ನೀಡದೆ ಸರ್ವಾಧಿಕಾರಿಯಾಗಿ ಆಡಳಿತ ನಡೆಸಿವೆ. ಜೆಡಿಎಸ್ ಸಂದರ್ಭಾನುಸಾರ ವಾಗಿ ಅನುಕೂಲ ಸಿಂಧು ರಾಜಕಾರಣ ಮಾಡಿವೆ. ಪ್ರಧಾನಿ ನರೇಂದ್ರ ಮೋದಿ ಕಳೆದ 9 ವರ್ಷಗಳಿಂದ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ. ಧಾರ್ಮಿಕ, ಕೋಮುವಾದ, ಹಿಟ್ಲರ್ ಮಾದರಿ ಆಡಳಿತ, ಗುಲಾಮಗಿರಿಯ ಮಂತ್ರಿಮಂಡಲ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. https://ainlivenews.com/geo-scientist-statue-murder-case-explosive-issue-comes-to-light-during-investigation/ ರಾಜ್ಯದಲ್ಲಿ ಬರಗಾಲ ಬಂದಿದೆ. ಎಲ್ಲಾ ರಾಜ್ಯಗಳಿಗೂ ಕೇಂದ್ರದಿಂದ…
ಒಂದು ನಿಮಿಷದಲ್ಲಿ ನಿಮ್ಮ ಮುಖ ಬಿಳಿಯಾಗಬೇಕಾದರೆ ಹೀಗೆ ಮಾಡಿ ಸಾಕು . ನೀವು ಕುಡಿಯುವ ಕಾಫಿಪುಡಿಯಿಂದ..! ಮುಖ ಬೆಳ್ಳಗಾಗೋದು ಅಲ್ಲದೇ ಚರ್ಮವೂ ಕಾಂತಿಯಿಂದ ಮಿಂಚುತ್ತದೆ. ಬಗೆ ಬಗೆಯ ಸೋಪುಗಳು ವಿವಿಧ ರೀತಿಯ ಕ್ರಿಮ್ಗಳನ್ನು ನೋಡ್ತಾ ಇದ್ದಿವಿ. ಈ ಎಲ್ಲ ಸೌಂದರ್ಯ ಸಾಧನಗಳು ಇವೆ. ಇದೆಲ್ಲ ಒಂದು ಕಡೆ ಆದ್ರೆ ಬಿಸಿಲಿನ ತೀವೃತೆ ಮತ್ತು ಧೂಳು , ಆಹಾರ ಪದ್ದತಿ, ಜೀವನ ಶೈಲಿ ಇತ್ಯಾದಿ ಆನೇಕ ಕಾರಣಗಳಿಂದ ಮುಖ ಕಪ್ಪಗೆ, ಡಲ್ ಆಗಿ ಕಾಣುತ್ತದೆ. ಕೆಲವರಿಗೆ ಬೋರಿಂಗ್ ನೀರು ಸಹ ಆಗಿಬರದೆ ಕಪ್ಪು ಬಣ್ಣಕ್ಕೆ ಚರ್ಮ ತಿರುಗುತ್ತದೆ. ಆದರೆ ಹೀಗೆ ಕಪ್ಪು ಬಣ್ಣಕೆ ತಿರುಗಿದ ಚರ್ಮವನ್ನು ಕಾಫಿಪುಡಿ ಉಪಯೋಗ ಮಾಡಿ ಮುಖವನ್ನು ಬೆಳ್ಳಗೆ ಮಾಡಿಕೊಳ್ಳಬಹುದು ಸುಲಭವಾಗಿಯೇ… ಯಾವ ಕಾಫಿಪುಡಿ ಬಳಸಬೇಕು ಅಂತ ಸಂದೇಹ ಬರುತ್ತಿದೆಯಾ? ಹಾಗಾದ್ರೆ ಅದಕೆಲ್ಲ ಉತ್ತರ ಇಲ್ಲಿದೆ.! ನಮಗೆ ಸುಲಭವಾಗಿ ಸಿಗುವ ಕಾಫಿಪುಡಿಯನ್ನೇ ತೆಗೆದುಕೊಳ್ಳಬೇಕು. ಅದ್ರಲ್ಲು ಬ್ರು ಮತ್ತು ನೆಸ್ಕೆಫೇ ಪ್ರತಿಯೊಬ್ಬರ ಮನೆಯಲ್ಲೂ ಇದ್ದೆ ಇರುತ್ತೆ ಇಂತಹ ಬ್ರು ಅಥವಾ…
ಬೆಂಗಳೂರು :- ಬಿಬಿಎಂಪಿಯಿಂದ ರಸ್ತೆಗಳಲ್ಲಿ ಡಕ್ಟ್ ಅಳವಡಿಕೆ ಮಾಡಲಾಗುತ್ತದೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ವೈಟ್‌ಟಾಪಿಂಗ್ ಹಾಗೂ ಕೆಲವು ಪ್ರಮುಖ ರಸ್ತೆಗಳಲ್ಲಿ ಡಕ್ಟ್ ವ್ಯವಸ್ಥೆ ಇದೆ. ಇತರೆ ರಸ್ತೆಗಳಲ್ಲಿ ಈ ವ್ಯವಸ್ಥೆಯಿಲ್ಲ. ಹೀಗಾಗಿ ಹಲವು ಸಂಸ್ಥೆಗಳು ಕೇಬಲ್ ಅಥವಾ ಒಎಫ್‌ಸಿ ಅಳವಡಿಸಲು ರಸ್ತೆ ಅಗೆಯುತ್ತಿರುತ್ತವೆ. ಇದನ್ನು ತಪ್ಪಿಸಲು ಯೋಜಿಸಲಾಗಿದೆ’ ಎಂದರು. ರಸ್ತೆಯಲ್ಲಿ ದೊಡ್ಡ ಅಳತೆಯ ಪೈಪ್ ಅಳವಡಿಸುವುದರಿಂದ ಮತ್ತೆ ಮತ್ತೆ ರಸ್ತೆ ಅಗೆಯುವುದು ತಪ್ಪುತ್ತದೆ. ಆದ್ದರಿಂದ ಬಿಬಿಎಂಪಿ ವತಿಯಿಂದಲೇ ಪೈಪ್ ಅಳವಡಿಸಲು ಯೋಜಿಸಲಾಗಿದೆ. ಈ ಯೋಜನೆಗೆ ಸದ್ಯದಲ್ಲಿಯೇ ಟೆಂಡರ್ ಕರೆಯಲಾಗುತ್ತದೆ’ ಎಂದರು. ‘ಬಿಬಿಎಂಪಿಗೆ ಹೋಲಿಸಿದರೆ ಬೆಸ್ಕಾಂ, ನಗರದಲ್ಲಿ ಡಕ್ಟ್ ಮೂಲಕ ಹೆಚ್ಚು ಕೇಬಲ್ ಅಳವಡಿಸಿದೆ. ಸುಮಾರು 400 ಕಿ.ಮೀ ಡಕ್ಟ್ ಇದೆ. ಬಿಬಿಎಂಪಿಯ ಕೆಲವು ರಸ್ತೆಗಳಲ್ಲಿ ಡಕ್ಟ್ ಇವೆ. ಇದರಲ್ಲೇ ಒಎಫ್‌ಸಿ ಹಾಗೂ ಕೇಬಲ್ ಸಂಸ್ಥೆಗಳು ತಮ್ಮ ಕೇಬಲ್‌ಗಳನ್ನು ಅಳವಡಿಸಿಕೊಳ್ಳಬೇಕು. ಇದಲ್ಲದೆ ಬೇರೆಡೆ ಕೇಬಲ್ ಅಳವಡಿಸಲು ಅವಕಾಶವಿಲ್ಲ’ ಎಂದು ತುಷಾರ್ ಗಿರಿನಾಥ್ ಹೇಳಿದರು.
ಬೆಂಗಳೂರು:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಹೆಂಡತಿಯನ್ನು ರೂಂನಲ್ಲಿ ಕೂಡಿಹಾಕಿ ಅತ್ತೆ, ಮಕ್ಕಳ ಜೊತೆ ನಿದ್ರಿಸುತ್ತಿದ್ದ ಪತಿ ವಿರುದ್ಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಘಟನೆ ಜರುಗಿದೆ. ಅಲ್ಲದೇ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಪತಿ ಹಾಗೂ ಮನೆಯವರ ವಿರುದ್ಧ ಆರೋಪಿಸಲಾಗಿದೆ. ಮದುವೆಗೂ ಮೊದಲು ನಾನು ಸ್ಕ್ರಾಪ್ ಡೀಲರ್ ಆಗಿದ್ದು, ಲಕ್ಷ ಲಕ್ಷ ಹಣ ಬರುತ್ತದೆ ಅಂತ ಪ್ರತಾಪ್ ನಂಬಿಸಿದ್ದನು. ಮದುವೆಯಾದ ಬಳಿಕವೇ ಪ್ರತಾಪ್ ಸ್ಕ್ರಾಪ್ ಡೀಲರ್ ಬಳಿ ಕೆಲಸ ಮಾಡುತ್ತಿದ್ದ ಎಂಬ ವಿಚಾರ ತಿಳಿದುಬಂದಿದೆ. ಮದುವೆಯಾದ ಬಳಿಕ ಗಂಡ ಪ್ರತಾಪ್ನನ್ನು ಕರೆದುಕೊಂಡು ತನ್ನ ಅತ್ತೆ ಮಾವನೊಂದಿಗೆ ಅಶ್ಚಿನಿ ವಾಸವಿದ್ದಳು. ಇಲ್ಲಿ ಸಣ್ಣ ಸಣ್ಣ ವಿಚಾರಗಳಿಗೂ ಜಗಳ ತೆಗೆದು ಹಣ ತರುವಂತೆ ಮಾನಸಿಕ ದೈಹಿಕ ಹಿಂಸೆ ನೀಡುತ್ತಿದ್ದರು. ನಂತರ ಬೆಂಗಳೂರಿನ ಕಿರ್ಲೋಸ್ಕರ್ ಲೇಔಟ್ನಲ್ಲಿ ಲೀಸ್ ಮನೆಯಲ್ಲಿ ವಾಸವಾಗಿದ್ದಾರೆ. ಅಲ್ಲಿಯೂ ವರದಕ್ಷಿಣೆ ತರುವಂತೆ ಹಿಂಸೆ ನೀಡುತ್ತಿದ್ದರು. ಅಲ್ಲದೆ, ಪತಿ ಪ್ರತಾಪ್ ಅವರ ಅತ್ತೆ ದೇವಿಕಾ ಅವರ ಮಗಳಾದ ಚಿತ್ರ ಅವರೊಂದಿಗೆ…
ನವದೆಹಲಿ: ದೇಶೀಯ ಹಾಗೂ ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ (India) ಆಪಲ್ ಐಫೋನ್‌ಗಳನ್ನು (Apple iPhones) ತಯಾರಿಸಲು ಟಾಟಾ ಗ್ರೂಪ್ ಆರಂಭಿಸಲಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ತಿಳಿಸಿದ್ದಾರೆ. ಆಪಲ್‌ನ ಪ್ರಮುಖ ಪೂರೈಕೆದಾರ ಕಂಪನಿ ವಿಸ್ಟ್ರಾನ್ ಕಾರ್ಪೊರೇಷನ್ ಖರೀದಿ ಕುರಿತಂತೆ ಆಡಳಿತ ಮಂಡಳಿ ಸಭೆ ನಡೆಸಿದ್ದು, ಅದರ ನಿರ್ಣಯದ ಪ್ರತಿಯನ್ನು ಸಚಿವರು ಹಂಚಿಕೊಂಡಿದ್ದಾರೆ ಈ ಕುರಿತು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ PLI ಯೋಜನೆಯು ಈಗಾಗಲೇ ಭಾರತವನ್ನು ಸ್ಮಾರ್ಟ್‌ಫೋನ್ ತಯಾರಿಕೆ ಮತ್ತು ರಫ್ತಿಗೆ ಅತ್ಯಂತ ವಿಶ್ವಾಸಾರ್ಹ ಕೇಂದ್ರವಾಗಿ ಮಾರ್ಪಟ್ಟಿದೆ. ಇನ್ನು ಕೇವಲ ಎರಡುವರೆ ವರ್ಷಗಳೊಳಗೆ ಟಾಟಾ ಕಂಪನಿಯು ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಭಾರತದಿಂದ ಐಫೋನ್‌ಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ ಎಂದು ತಿಳಿಸಿದ್ದಾರೆ. ವಿಸ್ಟ್ರಾನ್ ಕಾರ್ಯಾಚರಣೆಯನ್ನು ವಹಿಸಿಕೊಂಡಿರುವ ಟಾಟಾ ತಂಡಕ್ಕೆ ಹಾರ್ದಿಕ ಅಭಿನಂದನೆಗಳು. ಅದ್ಭುತ ಕೊಡುಗೆಗಳನ್ನು ನೀಡಿರುವ ವಿಸ್ಟ್ರಾನ್ ತಂಡಕ್ಕೆ ಧನ್ಯವಾದಗಳು. ಆಪಲ್ ಸಂಸ್ಥೆಯು ತನ್ನ ಚುಕ್ಕಾಣಿಯಲ್ಲಿರುವ ಭಾರತೀಯ…