ಕಲಬುರಗಿ: ಬರೋಬ್ಬರಿ 8 ವರ್ಷಗಳ ನಂತ್ರ ಬಿಸಿಲೂರು ಕಲಬುರಗಿಯಲ್ಲಿ ನಡೆಯುತ್ತಿದೆ ITF ಟೆನ್ನಿಸ್ ಪಂದ್ಯಾವಳಿ..ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಪಂದ್ಯಾವಳಿ ಶುರುವಾಯಿತು.ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ತಿಪ್ಪಣ್ಣಪ್ಪ ಕಮಕನೂರ್ DC ಫೌಜಿಯಾ ತರುನಮ್ ಆಕಾಶಕ್ಕೆ ಬಲೂನ್ ಹಾರಿ ಬಿಡೋದರ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದ್ರು.
ಈಗಾಗಲೇ ರಾಂಕಿಂಗ್ ಮುಖಾಂತರ 20 ಆಟಗಾರರು ಕರ್ನಾಟಕದ ಇಬ್ಬರು ಸೇರಿ ನಾಲ್ವರು ವೈಲ್ಡ್ ಕಾರ್ಡ್ ಎಂಟ್ರಿ ಹಾಗು 8 ಜನ ಅರ್ಹತಾ ಪಂದ್ಯಗಳಲ್ಲಿ ಜಯಗಳಿಸುವ ಆಟಗಾರರು ಆಡಲಿದ್ದಾರೆ. ಉಳಿದಂತೆ ಜಪಾನ್ ವಿಯೆಟ್ನಾಂ ಕೊರಿಯಾ ಆಸ್ಟ್ರೇಲಿಯ ಅಮೆರಿಕಾ ಆಟಗಾರರು ಸಿಂಗಲ್ಸ್ ದಲ್ಲಿ ಆಡಲಿದ್ದಾರೆ. ಟೂರ್ನಿ ಗೆಲ್ಲುವ ಆಟಗಾರ 3600 ಅಮೇರಿಕನ್ ಡಾಲರ್ ಪಡೆಯಲಿದ್ದಾರೆ..