ಬಳ್ಳಾರಿ: ಸಾಲ ಭಾದೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುರುಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಬಳ್ಳಾರಿಯ ಕುರುಗೋಡು ಸಮೀಪದ ಬಾದನಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾದನಹಟ್ಟಿ ಗ್ರಾಮದ ಪೋತಪ್ಪನ ಕಟ್ಟೆ 4ನೇ ವಾರ್ಡಿನ ನಿವಾಸಿ ಬಸಾಪುರ ಪೆನ್ನಯ್ಯ ವಾಲ್ಮೀಕಿ ಸಮುದಾಯ (35) ವರ್ಷ ಮೃತ ದುರ್ದೈವಿ. ಈತನಿಗೆ ಪತ್ನಿ ಸೇರಿ ಐದು ಜನ ಪುತ್ರಿಯರು ಹಾಗೂ ಒಬ್ಬ ಪುತ್ರನು ಇದ್ದಾನೆ. ಬಸಾಪುರ ಪೆನ್ನಯ್ಯ ತನ್ನ 3 ಎಕರೆ ಜಮೀನು ನಲ್ಲಿ ಮೆಣಿಸಿನಕಾಯಿ ಬೆಳೆ ಬಿತ್ತನೆ ಮಾಡಿ ವ್ಯವಸಾಯ ಮಾಡಿಕೊಂಡು ಹೋಗುತಿದ್ದ,
ಮಳೆ ಇಲ್ಲದೆ, ಬೆಳೆಗೆ ನೀರು ಸಿಗದೆ ಮೆಣಿಸಿನ ಕಾಯಿ ಸಸಿ ಒಣಗಿ ಹೋಗಿ ಬೆಳೆ ನಷ್ಟವಾಗಿದೆ. ಬೆಳೆಗೆ ಕ್ರಿಮಿನಾಶಕ ಔಷಧಿ, ರಸಗೊಬ್ಬರ, ಬೀಜ ಬಿತ್ತನೆಗೆ ಅಂತ ತನ್ನ ಪತ್ನಿ ನೀಲಮ್ಮ ಹೆಸರಲ್ಲಿ ಎಸ್. ಬಿ. ಐ ಬ್ಯಾಂಕ್ ನಲ್ಲಿ 1 ಲಕ್ಷದ 20 ಸಾವಿರ ಸಾಲವನ್ನು ತೆಗೆದುಕೊಂಡಿದ್ದಾನೆ. ಅಲ್ಲದೆ ಗ್ರಾಮದಲ್ಲಿ 5 ಲಕ್ಷ ಕೈ ಸಾಲ ಮಾಡಿದ್ದಾನೆ. ಮೆಣಿಸಿನಕಾಯಿ ಬೆಳೆ ಒಣಗಿ ಹೋದ ಹಿನ್ನಲೆ ಮತ್ತೆ ಜೋಳ ಹಾಕಿದ್ದಾನೆ.
ಮಳೆಯಿಲ್ಲದೇ ಮೆಣಿಸಿನಕಾಯಿ ಬೆಳೆ ಬಾರದೆ ನಷ್ಟ ಉಂಟಾಗಿದ್ದರಿಂದ ಸಾಲ ಹೆಚ್ಚಾಗಿ ತೀರಿಸುವುದು ಹೇಗೆ ಅಂತ ಚಿಂತೆಗೀಡಾಗಿ ಮನನೊಂದು ಕ್ರಿಮಿನಾಶಕ ಔಷಧಿ ಸೇವಿಸಿದ್ದಾನೆ. ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆ ಕರೆದೋಯ್ಯಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾನೆ ಎಂದು ಪತ್ನಿ ನೀಡಿದ ದೂರಿನ ಅನ್ವಯ ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.