‘ಡಂಕಿ’ ಸಿನಿಮಾ ಮೂಲಕ ಶಾರುಖ್ ಖಾನ್ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ‘ಡಂಕಿ’ ಡ್ರಾಪ್ 1 ಝಲಕ್ ಕಿಕ್ ಕೊಟ್ಟಿದೆ. ಮೊದಲ ಹಾಡನ್ನು ಡ್ರಾಪ್ 2 ಎಂದು ಚಿತ್ರತಂಡ ರಿಲೀಸ್ ಮಾಡಲು ಹೊರಟಿದೆ.. ‘ಡಂಕಿ’ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೊಂದು ರೊಮ್ಯಾಂಟಿಕ್ ಸಾಂಗ್ ಆಗಿದ್ದು, ಶಾರುಖ್ ಖಾನ್ ಅಭಿಮಾನಿಗಳ ಕಣ್ಣು ಅರಳಿದೆ. ಕಳೆದ ಎರಡು ಸಿನಿಮಾಗಳಲ್ಲಿ ಶಾರುಖ್ ಖಾನ್ ಅನ್ನು ಹೆಚ್ಚಾಗಿ ಆಕ್ಷನ್ ಅವತಾರದಲ್ಲಿಯೇ ನೋಡಿದ್ದರು. ಹೀಗಾಗಿ ರೊಮ್ಯಾಂಟಿಕ್ ಲುಕ್‌ನಲ್ಲಿ ನೋಡುವುದಕ್ಕೆ ಕಾತುರರಾಗಿದ್ದಾರೆ. ‘ಡಂಕಿ’ ಸಿನಿಮಾದ ಈ ರೊಮ್ಯಾಂಟಿಕ್ ಸಾಂಗ್ ನಾಳೆ ರಿಲೀಸ್ ಆಗಲಿದೆ. “ಲುಪ್ ಪುಟ್ ಗಯಾ..” ಅನ್ನೋ ಈ ಮೇಲೋಡಿ ಹಾಡನ್ನು ಕೇಳುವುದಕ್ಕೆ ಸಂಗೀತ ಆಸಕ್ತರು ಕಾದು ಕೂತಿದ್ದಾರೆ. ಬಾಲಿವುಡ್‌ನ ಜನಪ್ರಿಯರ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ ಈ ಸಿನಿಮಾಗೆ ಟ್ಯೂನ್ ಹಾಕಿದ್ದಾರೆ. ಶಾರುಖ್ ಖಾನ್ ಹಾಗೂ ತಾಪ್ಸಿ ಪನ್ನು ರೊಮ್ಯಾಂಟಿಕ್ ಸಾಂಗ್ ಗೆ ಫ್ಯಾನ್ಸ್ ಎದುರು…
Author: AIN Author
ಬೆಂಗಳೂರು:- ಬೆಂಗಳೂರು ಕಂಬಳಕ್ಕೆ ಕೊಟ್ಟಿರೋ 1 ಕೋಟಿ ವಾಪಸ್ಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ. ಕಂಬಳ ನಡೆಯೋದೇ ಅನುಮಾನವಾಗಿದ್ದು, ಹೀಗಾಗಿ ಹಣ ವಾಪಸ್ ಕೊಡುವಂತೆ ಸೂಚಿಸಿದೆ. MLA ಅಶೋಕ್ ರೈ ಸಸ್ಪೆಂಡ್ ಮಾಡಿ, ಸಿಎಂ, ಡಿಸಿಎಂ ಯಾರೂ ಕಂಬಳದ ವೇದಿಕೆ ಹತ್ತಬಾರದು ಎಂದು ಸುರ್ಜೇವಾಲ ಖಡಕ್ ಸೂಚನೆ ನೀಡಿದ್ದಾರೆ. ಪಕ್ಷದ ವಿರುದ್ಧ ಬೀದಿ-ಬೀದಿಯಲ್ಲಿ ಜನ ಆಕ್ರೋಶ ಹೊರ ಹಾಕ್ತಿದ್ದಾರೆ, ಲೈಂಗಿಕ ಕಿರುಕುಳ ಆರೋಪ ಹೊತ್ತವರನ್ನು ಆಹ್ವಾನಿಸೋದು ಅಂದ್ರೆ ಏನು. ಕಾಂಗ್ರೆಸ್ ಶಾಸಕರೇ ಇಂಥವರನ್ನು ಆಹ್ವಾನಿಸಿದ್ದು ಎಷ್ಟು ಸರಿ, ಬ್ರಿಜ್ ಭೂಷಣ್ ಆಹ್ವಾನಿಸಿದ್ದಕ್ಕೆ ಜನ ಹಾದಿ-ಬೀದಿಯಲ್ಲಿ ನಗ್ತಿದ್ದಾರೆ, ಕಾಂಗ್ರೆಸ್ ಮಾನ-ಮರ್ಯಾದೆ ಹರಾಜು ಆಗ್ತಿದೆ. ಕಾಂಗ್ರೆಸ್ ಶಾಸಕರೇ ಇಂಥಾ ಕೆಲಸಕ್ಕೆ ಕೈ ಹಾಕಬಹುದಾ..? ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಫುಲ್ ಗರಂ ಆಗಿದ್ದಾರೆ.
ಬೆಂಗಳೂರು:- ನಗರ ಜಿಲ್ಲೆಯ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಮಗು ಸಾವನ್ನಪ್ಪಿರುವ ಘಟನೆ ಜರುಗಿದೆ. ಆನೇಕಲ್‌ನ ಪಂಪ್‌ಹೌಸ್ ನಿವಾಸಿಯಾಗಿದ್ದ ಸುಮಲತಾ ಎಂಬುವವರು ಇಂದು ಬೆಳಗ್ಗೆ 10.30ಕ್ಕೆ ಹೆರಿಗೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬಂದಿದ್ದರು. ಬೆಳಗ್ಗೆ 11 ಗಂಟೆಯಿಂದ ನಾರ್ಮಲ್ ಡೆಲಿವರಿಗೆ ಟ್ರೈ ಮಾಡಿದ್ದರು. ಆದರೆ, ಈ ವೇಳೆ ಮಗುವಿಗೆ ಉಸಿರಾಟದ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದ್ದರಂತೆ. ಇನ್ನು ನಾರ್ಮಲ್ ಹೆರಿಗೆ ಮಾಡಿಸಲು ವೈದ್ಯರು ಪ್ರಯತ್ನಪಟ್ಟಿದ್ದಾರೆ. ಆದರೆ, ಮಗು 4.5 ಕೆ.ಜಿ ತೂಕ ಇದ್ದಿದ್ದರಿಂದ ನಾರ್ಮಲ್ ಡೆಲಿವರಿ ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಮಗುವನ್ನು ಹೊರತೆಗೆಯಲು ವೈದ್ಯರು ಪ್ರಯತ್ನಿಸಿದ್ದರು. ಮಗುವನ್ನು ಹೊರತೆಗೆಯಲು ಆಗದಿದ್ದಾಗ ಸಿಸೇರಿಯನ್ ಮಾಡಿದ್ದರು. ಹಸುಗೂಸನ್ನು ಹೊರ ತೆಗೆದಾಗ ದೇಹದ ತುಂಬೆಲ್ಲಾ ಗಾಯವಾಗಿದೆ. ಬಳಿಕ ಹಸುಗೂಸು ಮೃತಪಟ್ಟಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರಂತೆ. ಹೀಗಾಗಿ ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬೆಂಗಳೂರು:- ನಗರದ ಹಲಸೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೂವರೆ ವರ್ಷದಿಂದ ಪ್ರೀತಿಸಿ ಮನೆ ಮಗಳನ್ನು ಕರೆದುಕೊಂಡು ಓಡಿ ಹೋಗಿದ್ದೂ ಅಲ್ಲದೆ ಅತ್ತೆ ಮನೆಯಲ್ಲಿದ್ದ ವಸ್ತುಗಳನ್ನೂ ಕದ್ದೊಯ್ದ ಅಳಿಯನನ್ನು ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಪ್ರದೀಪ್ ಕುಮಾರ್ ಬಂಧಿತ ಆರೋಪಿ ಎಂದು ಹೇಳಲಾಗಿದೆ. ಅತ್ತೆ ರೆಜಿನಾ ಕನ್ಯಾಕುಮಾರಿಗೆ ಹೋದ ಸಂದರ್ಭದಲ್ಲಿ ಕಳ್ಳತನ ನಡೆದಿದೆ. ಕಳ್ಳತನ ಮಾಡಿ ಚಿನ್ನಾಭರಣ ತೆಗೆದುಕೊಂಡು ಹೋಗುವಾಗ ಅಕ್ಕಪಕ್ಕದ ನಿವಾಸಿಗಳು ನೋಡಿದ್ದರು. ಪ್ರಶ್ನೆ ಮಾಡಿದಾಗ ನಾನು ಅವರ ಸಂಬಂಧಿಕ ಎಂದು ಹೇಳಿದ್ದ. ಆದ್ರೆ ಸ್ಥಳೀಯರು ಚಾಣಾಕ್ಷತನ ತೋರಿ, ಚಿನ್ನಾಭರಣ ತೆಗೆದುಕೊಂಡು ಹೋಗುತ್ತಿದ್ದ ಪ್ರದೀಪ್ ಕುಮಾರನ ಫೊಟೋವನ್ನು ಮೊಬೈಲ್ ನಲ್ಲಿ ಕರೆ ಹಿಡಿದಿದ್ದಾರೆ. ಜೊತೆಗೆ ರೆಜಿನಾ ಅವರಿಗೆ ಕರೆ ಮಾಡಿ, ಹೀಗೆಲ್ಲಾ ಆಗಿದೆ ಎಂದು ಫೋಟೋ ಸಮೇತ ಮಾಹಿತಿ ನೀಡಲು ಯತ್ನಿಸಿದ್ದರು. ಆದರೆ ರೆಜಿನಾ ಅವರ ನಂಬರ್ ನಾಟ್ ರೀಚಬಲ್ ಆದ ಹಿನ್ನೆಲೆ ಸಂಪರ್ಕ ಸಾಧ್ಯವಾಗಿರಲಿಲ್ಲ. ನಂತರ ರೆಜಿನಾ ಕನ್ಯಾಕುಮಾರಿಯಿಂದ ವಾಪಾಸ್ ಬಂದಾಗ ಬಾಗಿಲು ಒಡೆದಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡು ಒಳಗೆಲ್ಲಾ…
ಟೀಮ್ ಇಂಡಿಯಾದಲ್ಲಿ ಒಬ್ಬ ಆಟಗಾರನಿಗೆ ರಿಪ್ಲೇಸ್ ಮಾಡೋಕೆ ಆತನಷ್ಟೇ ಸಾಮರ್ಥ್ಯವಿರುವ ಆಟಗಾರನಿಲ್ಲ. ವಿಶ್ವಕಪ್ ಫೈನಲ್ ಸೋಲಿಗೆ ಆ ಆಟಗಾರರನ ಅನುಪಸ್ಥಿಯೇ ಕಾರಣ. ಭಾರತೀಯರ ಕೈಯಿಂದ ಏಕದಿನ ವಿಶ್ವಕಪ್ ಕೈ ಜಾರಿದೆ. ಸತತ 10 ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿದ್ದ ಟೀಂ ಇಂಡಿಯಾ, ಫೈನಲ್ನಲ್ಲಿ ಮುಗ್ಗರಿಸಿತು. ಫೈನಲ್ ಸೋಲಿಗೆ ನಾನಾ ಕಾರಣಗಳಿರಬಹುದು. ಆದ್ರೆ ತಂಡದಲ್ಲಿ ಲೋ ಆರ್ಡರ್ ಬ್ಯಾಟಿಂಗ್ ವೀಕ್ ಆಗಿದ್ದು, 6ನೇ ಬೌಲರ್ ಇಲ್ಲದೆ ಇದ್ದದ್ದು ಸೋಲಿಗೆ ಮೇನ್ ರೀಸನ್. ಆ ಎರಡು ಸ್ಥಾನ ತುಂಬಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂಜುರಿಯಾಗಿ ವಿಶ್ವಕಪ್ನಿಂದ ಕಿಕೌಟ್ ಆಗಿದ್ದು, ಭಾರತಕ್ಕೆ ಹಿನ್ನಡೆಯಾಯ್ತು. ಮೊದಲ ನಾಲ್ಕು ಪಂದ್ಯ ಆಡಿದ್ಮೇಲೆ ಪಾಂಡ್ಯ ಇಂಜುರಿಯಾಗಿ ವಿಶ್ವಕಪ್ನಿಂದಲೇ ಕಿಕೌಟ್ ಆದ್ರು. ಆದ್ರೂ 6 ಪಂದ್ಯಗಳಲ್ಲಿ ಅವರ ಅನುಪಸ್ಥಿತಿ ಕಾಡಲಿಲ್ಲ. ಯಾಕಂದ್ರೆ, ಟಾಪ್ ಆರ್ಡರ್ ಬ್ಯಾಟರ್ಸ್ ಉತ್ತಮ ಪ್ರದರ್ಶನ ನೀಡಿದ್ರು. ಐವರು ಬೌಲರ್ಸ್ ಅದ್ಭುತವಾಗಿ ದಾಳಿ ಮಾಡಿದ್ರು. ಆದ್ರೆ ಫೈನಲ್ನಲ್ಲಿ ಯಾವಾಗ ಇಂಡಿಯಾ ಬ್ಯಾಟಿಂಗ್ ಲೈನ್ ಅಪ್ ಕೋಲ್ಯಾಪ್ಸ್ ಆಯ್ತೋ, ಮಿಡಲ್…
ಚಿಕ್ಕಮಗಳೂರು:- ಕುಮಾರಸ್ವಾಮಿ ಜತೆ ಸಿದ್ದರಾಮಯ್ಯ ಅವರೂ ಮಾಲೆ ಹಾಕಿ ಬರಲಿ ಶಾಸಕ ಸಿ.ಟಿ.ರವಿ ಮನವಿ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ದತ್ತಪೀಠಕ್ಕೆ ಮಾಲೆ ಧರಿಸಿ ಬರಲಿ. ಹಿಂದೂ ಎಂದು ಹೇಳಿಕೊಳ್ಳಲು ಗರ್ವಪಡಬೇಕು. ಸಮಾಜ ಕೂಡ ಅದನ್ನೇ ನಿರೀಕ್ಷೆ ಮಾಡುತ್ತದೆ. ಕುಮಾರಸ್ವಾಮಿ ಅವರ ಹೇಳಿಕೆ ಸಿದ್ದರಾಮಯ್ಯ ಅವರಿಗೆ ಮಾದರಿ’ ಎಂದು ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದರು. ‘ನಾನು ಹಿಂದೂ ಅಲ್ವಾ, ನನ್ನ ಹೆಸರಲ್ಲೆ ಸಿದ್ದರಾಮ ಇದ್ದಾನೆ ಎಂದಿದ್ದೀರಿ. ಮಾಲೆ ಹಾಕಿ ಬನ್ನಿ, ನೀವು ಬಂದರೆ ಸಚಿವ ಜಮೀರ್ ಕೂಡ ಮಾಲೆ ಹಾಕೇ ಹಾಕುತ್ತಾರೆ. ಐದು ದಶಕಗಳ ಸತ್ಯದ ಹೋರಾಟಕ್ಕೆ ಬಲ ಬರಲಿದೆ’ ಎಂದರು. ‘ಹಿಂದುತ್ವದ ವಿಚಾರ ಬಂದಾಗ ಹಿಂದೆ ನೋಡಲೇಬಾರದು, ಮುಂದಕ್ಕೆ ನೋಡಬೇಕು. ನಮ್ಮ ಧರ್ಮದ ಪ್ರಕಾರ ನಡೆದುಕೊಳ್ಳಲು ಯಾರಿಗೂ ಹೆದರಬೇಕಿಲ್ಲ. ಚುನಾವಣೆ ಸಮಯಕ್ಕೆ ಹಿಂದೂಗಳಾಗಬಾರದು, ಜೀವನ ಪರ್ಯಂತ ಹಿಂದೂ ಆಗಿ ಇರಬೇಕು’ ಎಂದು ಹೇಳಿದರು.
ಹುಬ್ಬಳ್ಳಿ: ತಾಲ್ಲೂಕಿನ ನೋಲ್ವಿ ಗ್ರಾಮದ ಶ್ರೇಯಸ್ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ವಿಜ್ಞಾನಿಗಳ ವೇಷ ಭೂಷಣದ ಮೂಲಕ ಹಾಗೂ ಗಣಿತಜ್ಞರ ಸಂಶೋಧನೆಗಳ ಜೊತೆಗೆ ಗಣಿತ ಮತ್ತು ವಿಜ್ಞಾನ ವಸ್ತು ಪ್ರದರ್ಶನವನ್ನು ಯಶಸ್ವಿಯಾಗಿ ನೆರವೇರಿಸಿದರು. ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಮುಖ್ಯ ಅತಿಥಿಗಳಾಗಿ ಆಗಮಿಸಿದಂತ ಸಿ ಎನ್ ಬಡ್ಡಿ ಹಾಗೂ ಡಿ. ಟಿ.ಅರಿಶಾನು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೇಯಸ್ ಎಜುಕೇಶನ್ ಸಂಸ್ಥೆಯ ಅಧ್ಯಕ್ಷ ಎಂ ಬಿ ಖಾನಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬಿ ಜಿ ಹಿರೇಮಠ್, ಎಸ್ ಎನ್ ಹನ್ನಿ, ಜಿ. ಬಿ ಪಾಟೀಲ್, ಐ ಎಸ್ ಪೂಜಾರ್ , ಮುಖ್ಯೋಪಾಧ್ಯಾಯರು ಶ್ರೀಮತಿ ರೀಟಾ ರೋಣದ ವಿಜ್ಞಾನದ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು ಕಾರ್ಯಕ್ರಮಕ್ಕೆ ಶಾಲೆಯ ಶಿಕ್ಷಕರುಂದದವರೆಲ್ಲರೂ ಉಪಸ್ಥಿತರಿದ್ದರು.
ಪೀಣ್ಯ ದಾಸರಹಳ್ಳಿ: ಸಮೀಪದ ಚಿಕ್ಕಬಾಣಾವರದ ಸಂತೆ ಸರ್ಕಲ್ ಬಳಿ ಲೋಕೋಪಯೋಗಿ ವಿಶೇಷ ಅನುದಾನದಲ್ಲಿ ರಸ್ತೆ ಡಾಂಬರೀಕರಣಕ್ಕೆ ಶಾಸಕ ಎಸ್. ಮುನಿರಾಜು ಚಾಲನೆ ನೀಡಿದರು. ಬಳಿಕ ಎಸ್. ಮುನಿರಾಜು ಮಾತನಾಡಿ’ ಈ ಭಾಗದಲ್ಲಿ ಇನ್ನು ಅನೇಕ ರಸ್ತೆಗಳಿಗೆ ಡಾಂಬರೀಕರಣ ಆಗಿಲ್ಲ, ಈಗ ಅನುದಾನದ ಕೊರತೆ ಇದೆ. ಹಂತ ಹಂತವಾಗಿ ಡಾಂಬರೀಕರಣ ಮಾಡಲಾಗುತ್ತದೆ. ಈ ಭಾಗದಲ್ಲಿ ಅನೇಕ ಸಮಸ್ಯೆಗಳಿವೆ ಎಲ್ಲವನ್ನು ಗಮನಿಸಿದ್ದೇವೆ ಆದಷ್ಟು ಮಟ್ಟಿಗೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ’ ಎಂದರು. ಈ ಸಂದರ್ಭದಲ್ಲಿ ಸರ್ಕಾರಿ ಉರ್ದು ಶಾಲೆಗೆ ಭೇಟಿ ನೀಡಿ ಅಲ್ಲಿನ ಶಾಲೆಯ ದೋಸ್ತಿಯ ಬಗ್ಗೆ ಪರಿಶೀಲಿಸಿ ಬೃಹತ್ ಮರದ ಒಣಗಿದ ರಂಬೆ ಕೊಂಬೆಗಳನ್ನು ಮಕ್ಕಳಿಗೆ ತೊಂದರೆ ಆಗದ ರೀತಿಯಲ್ಲಿ ಅರಣ್ಯ ಅಧಿಕಾರಿಗಳಿಗೆ ಕತ್ತರಿಸಲು ಸೂಚಿಸಿದರು. ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಮರಿಸ್ವಾಮಿ, ಚಿಕ್ಕಬಾಣಾವರ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಭಾಗ್ಯಮ್ಮ, ಬಿಜೆಪಿ ಮುಖಂಡ ಕಬೀರ್, ಪುರಸಭೆ ಮುಖ್ಯ ಅಧಿಕಾರಿ ಕುಮಾರ್, ನವೀನ್, ಗಿರೀಶ್ ಮತ್ತು ಸ್ಥಳೀಯರಿದ್ದರು.
ತಿಪಟೂರ್:- ನಗರದಲ್ಲಿ ಚಿರತೆ ಪ್ರತ್ಯಕ್ಷ ಸ್ಥಳೀಯರು ಆತಂಕಗೊಂಡಿದ್ದಾರೆ. ತಿಪಟೂರು ನಗರದ ಮಾರನ್ಗೆರೆ ಬಡಾವಣೆಯ ಸಂಗಮೇಶ್ವರ ತೋಟದ ಬಾವಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಈ ಸಂಬಂಧ ತೋಟದ ಮಾಲಿಕ ಸಂಗಮೇಶ್ ಹೇಳಿಕೆ ನೀಡಿದ್ದಾರೆ. ಮೂರು ಚಿರತೆಗಳಿದ್ದು, ಒಂದು ಚಿರತೆ ಬಾವಿಗೆ ಬಿದ್ದಿದೆ, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಒಂದು ಚಿರತೆಯನ್ನು ಮೇಲತ್ತಲು ಹರಾಸಾಹಸ ಪಡುತ್ತಿದ್ದಾರೆ.
ಪೀಣ್ಯ ದಾಸರಹಳ್ಳಿ:’ ನೀರಿನ ಅಭಾವ ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಲು ಕೊಳವೆಬಾವಿ ಕೊರೆಸಿ ನೀರು ನೀಡಲಾಗುತ್ತಿದೆ’ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು. ಮಲ್ಲಸಂದ್ರದ ಬಿ.ಎಚ್.ಇ.ಎಲ್ ಮಿನಿ ಕಾಲೋನಿಯಲ್ಲಿ ಕೊಳವೆಬಾವಿ ನೀರಿನ ಪೂರೈಕೆಗೆ ಚಾಲನೆ ನೀಡಿ ಮಾತನಾಡಿದರು. ಮಲ್ಲಸಂದ್ರದ ಮುನೇಶ್ವರ ಬಡಾವಣೆ ಬಿಎಚ್ಇಎಲ್ ಮಿನಿ ಕಾಲೋನಿ ಪೈಪ್ಲೈನ್ ರಸ್ತೆ ಸುತ್ತಮುತ್ತಲ ಪ್ರದೇಶದ ಜನರಿಗೆ ನೀರಿನ ಸಮರ್ಪಕ ಪೂರೈಕೆ ಆಗದ ಕಾರಣ ನೀರಿನ ಹಾಹಾಕಾರವಾಗಿತ್ತು. ದಿನನಿತ್ಯ ನೂರಾರು ದೂರುಗಳು ಬರುತ್ತಿದ್ದವು. ಹೀಗಿರುವ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಕಾವೇರಿ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಅದರಿಂದ ನೀರಿನ ಸಮಸ್ಯೆ ಜಾಸ್ತಿಯಾಗಿತ್ತು. ಈಗ ಕೊಳವೆ ಬಾವಿಯಲ್ಲಿ ನೀರು ಸಿಕ್ಕಿದೆ, ಈ ಭಾಗದ ಜನರಿಗೆ ಸ್ವಲ್ಪಮಟ್ಟಿಗೆ ಆದರೂ ಸಮಸ್ಯೆ ಬಗೆಹರಿಯಲಿದೆ’ ಎಂದರು. ಈ ವೇಳೆ ಬಿಜೆಪಿ ಮುಖಂಡರಾದ ಟಿ. ಶಿವಕುಮಾರ್, ಹುಚ್ಚ ರಂಗಯ್ಯ, ಎಂ. ಆನಂದ್, ಗಂಧದಗುಡಿ ನಾಗಣ್ಣ, ಗಂಗರಾಜು, ಪಾಂಡುರಂಗರಾವ್, ಕೆಂಪೇಗೌಡ ಸುರೇಶ್, ಗಂಗಾಧರ್, ಉದ್ಯಮಿ ತಿಮ್ಮೇಗೌಡ, ಮಹಿಳಾ ಮುಖಂಡರಾದ ಪಾರ್ವತಿ, ನಯನ…