ಕಲಬುರಗಿ:- 2023ರ ವಾರ್ಷಿಕ ಪೋಲಿಸ್ ಕ್ರೀಡಾಕೂಟದ ಅಂಗವಾಗಿ ಇಂದು ನಡೆದ ಕ್ರಿಕೆಟ್ ಪಂದ್ಯದಲ್ಲಿ ಪೋಲಿಸ್ ತಂಡದ ವಿರುದ್ಧ ಮೀಡಿಯಾ ತಂಡ ಭರ್ಜರಿ ಜಯ ಸಾಧಿಸಿತು. ಟಾಸ್ ಗೆದ್ದ ಪೋಲಿಸ್ ಆಯುಕ್ತ ಆರ್. ಚೇತನ್ ನೇತೃತ್ವದ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 10 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 97 ರನ್ ಮಾಡಿತು.ನಂತರ ಬ್ಯಾಟ
ಮಾಡಿದ ಮೀಡಿಯಾ ತಂಡ ಕೇವಲ 5.4 ಓವರ್ಗಳಲ್ಲಿ ಜಸ್ಟ್ ಒಂದು ವಿಕಟ್ ಕಳೆದುಕೊಂಡು 98 ರನ್ ಬಾರಿಸಿ ಜಯ ಸಾಧಿಸಿತು.
ಒಟ್ಟಾರೆ ಅಂತಿಮವಾಗಿ ಪೋಲಿಸ್ ತಂಡವನ್ನು 9 ವಿಕಟ್ಗಳಿಂದ ಸೋಲಿಸಿ, ಗೆಲುವಿನ ಕಿರೀಟ ಮುಡಿಗೆರಿಸಿಕೊಂಡಿತು.
ಪ್ರೆಸ್ ತಂಡದ ಪರವಾಗಿ ಸಂಜು ರಾಠೋಡ 22 ಎಸೆತಗಳಲ್ಲಿ 6 ಸಿಕ್ಸ್ರ್ ಮತ್ತು 10 ಬೌಂಡರಿ ಸೇರಿ 78 ರನ್ ಬಾರಿಸಿದ್ರೆ ಅಮ್ಜದ್ 17 ರನ್ ಮಾಡಿ ಔಟಾಗದೇ ಉಳಿದರು.
ಮೀಡಿಯಾ ತಂಡದ ಕ್ಯಾಪ್ಟನ್ ಪ್ರವೀಣ ರೆಡ್ಡಿ ವೈಸ್ ಕ್ಯಾಪ್ಟನ್ ಅರುಣ್ ಕದಂ ಸೇರಿದಂತೆ ಇಡೀ ಟೀಂ ಗೆಲುವಿನ ಖುಷಿಯೊಂದಿಗೆ ಹೆಜ್ಜೆ ಹಾಕಿತು.ಇದೇವೇಳೆ ಪುರುಷೋತ್ತಮ ಕುಲಕರ್ಣಿ ಉತ್ತಮ ಬೌಲಿಂಗ್ ಮಾಡುವ ಮೂಲಕ ಪಂದ್ಯದಲ್ಲಿ ಮಿಂಚಿದ್ರು..ರಾಜು ದೇಶಮುಖ್ ಟಾಸ್ ಮಾಡಿದ್ರೆ ಕಾಮೆಂಟೆಟರ್ ಆಗಿ ಗೋಪಾಲ ಕುಲಕರ್ಣಿ ಕಾರ್ಯ ನಿರ್ವಹಿಸಿದ್ರು.