Author: AIN Author

ಕನ್ನಡದ ಹೆಸರಾಂತ ನಟಿ ಪೂಜಾ ಗಾಂಧಿ ಇಂದು ಸಪ್ತಪದಿ ತುಳಿದಿದ್ದಾರೆ. ಇಂದು ಸಂಜೆ ಉದ್ಯಮಿ ವಿಜಯ್ ಜೊತೆ ಪೂಜಾ ಮಂತ್ರ ಮಾಂಗಲ್ಯ ಮಾದರಿಯಲ್ಲಿ ಮದುವೆಯಾಗಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ಈ ಮದುವೆ ನಡೆದಿದಿದು, ಉದ್ಯಮಿ ಹಾಗೂ ಅವರಿಗೆ ಕನ್ನಡ ಕಲಿಸಿರುವ ವಿಜಯ್ ಘೋರ್ಪಡೆ ಎನ್ನುವವರ ಜೊತೆ ಪೂಜಾ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ವಿಜಯ್ ಬೆಂಗಳೂರಿನ ಲಾಜೆಸ್ಟಿಕ್ ಕಂಪನಿಯ ಮಾಲೀಕರು ಎಂದು ಹೇಳಲಾಗುತ್ತಿದೆ. ಕುವೆಂಪು ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಪೂಜಾಗಾಂಧಿ ಹಾಗೂ ವಿಜಯ್ ಘೋರ್ಪಡೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Read More

ಕಲಬುರಗಿ:- ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಪರೀಕ್ಷಾ ಅಕ್ರಮಕ್ಕೆ ನೆರವಾದ ಹಿನ್ನಲೆ ಇಬ್ಬರು ಪ್ರಾಂಶುಪಾಲರನ್ನ CID ತಂಡ ಬಂಧಿಸಿದೆ.. ಕಲಬುರಗಿಯಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಭಾಗಿಯಾದ ಅಫಜಲಪುರ ಮೂಲದ ಚಂದ್ರಕಾಂತ್ ಬಸಣ್ಣ ಬಂಧನಕ್ಕೆ ಒಳಗಾದ ಆರೋಪಿಗಳು. ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯರಾದ ಇಬ್ಬರು KEA ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ್ರು. ಮೊನ್ನೆಮೊನ್ನೆ ಈ ಇಬ್ಬರೂ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿ ಬಿಟ್ಟಿದ್ದು ಇದೀಗ ಅರೆಸ್ಟ್ ಮಾಡಲಾಗಿದೆ…

Read More

ಬೆಂಗಳೂರು:- ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಸಂಬಂಧ ಆಯಾ ವಲಯ ವ್ಯಾಪ್ತಿಯಲ್ಲಿ ಸ್ಥಳಗಳನ್ನು ಗುರುತಿಸಿ ಕೂಡಲೆ ಪಟ್ಟಿ ನೀಡಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್* ರವರು ವಲಯ ಆಯುಕ್ತರಿಗೆ ಸೂಚನೆ ನೀಡಿದರು. ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಸಂಬಂಧ ಇಂದು ಬಿ.ಎಸ್.ಡಬ್ಲ್ಯೂ.ಎಂ.ಎಲ್ ಕಛೇರಿಯ ಸಭಂಗಣದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದ ಆಯಾ ವಲಯ ವ್ಯಾಪ್ತಿಯಲ್ಲಿ ಜನದಟ್ಟಣೆ ಪ್ರದೇಶ, ಮಾರುಕಟ್ಟೆಗಳು, ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಸಂಬಂಧ ತ್ವರಿತವಾಗಿ ಸ್ಥಳಗಳನ್ನು ಗುರುತಿಸಿ ಪಟ್ಟಿ ನೀಡಲು ಸೂಚಿಸಲಾಯಿತು. ನಗರದಲ್ಲಿ ಈಗಾಗಲೇ 255 ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಸ್ಥಳಗಳನ್ನು ಗುರುತಿಸಲಾಗಿದ್ದು, ಶೌಚಾಲಯಗಳನ್ನು ನಿರ್ಮಿಸುವ ಸ್ಥಳ ವಿಶಾಲವಾಗಿರಬೇಕಿದೆ. ಈ ಸಂಬಂಧ ವಿಶಾಲವಾದ ಸ್ಥಳಗಳನ್ನು ಗುರುತಿಸಬೇಕಿದೆ. ಜೊತೆಗೆ ನಗರದ ಕೇಂದ್ರ ಪ್ರದೇಶದಲ್ಲಿ ಹೆಚ್ಚಾಗಿ ಶೌಚಾಲಯಗಳನ್ನು ನಿರ್ಮಿಸಬೇಕು. ಈ ಪೈಕಿ ಸೂಕ್ತ ಸ್ಥಳಗಳನ್ನು ಗುರುತಿಸಬೇಕು. ಅಲ್ಲದೆ ಹೊಸದಾಗಿ 46 ಶೌಚಾಲಯಗಳನ್ನು ನಿರ್ಮಾಣ ಮಾಡಲು ಕೂಡಾ ಸೂಕ್ತ ಸ್ಥಳಗಳನ್ನು ಗುರುತಿಸಲು…

Read More

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್​ಗಳು ಮತ್ತಷ್ಟು ಬಿಗಿಗೊಂಡಿದೆ. ಬೆಳಗ್ಗೆ ರಸಪ್ರಶ್ನೆ ಟಾಸ್ಕ್​ನಲ್ಲಿ ಭಾಗಿಯಾದವರು ಎರಡನೇ ಚಟುವಟಿಕೆಯಲ್ಲಿ ಪರಸ್ಪರ ನೋವುಂಟು ಮಾಡಿಕೊಂಡಿದ್ದಾರೆ. ರಸಪ್ರಶ್ನೆ ಆಟವಾಡಿದ್ದ ಸ್ಫರ್ಧಿಗಳಿಗೆ ಎರಡನೇ ಟಾಸ್ಕ್‌ ಸಖತ್‌ ಚಾಲೆಂಜಿಂಗ್ ಆಗಿದೆ. ಅದರ ಪರಿಣಾಮವೂ ಜೋರಾಗಿಯೇ ಇದೆ. ಎರಡೂ ಗುಂಪಿನ ಎಲ್ಲ ಸದಸ್ಯರು ಕಾಲಿಗೆ ಹಗ್ಗವನ್ನು ಕಟ್ಟಿಕೊಳ್ಳಬೇಕು. ಎದುರಿಗೆ ನಂಬರ್ ಹಾಕಿದ ಜಾಗದಲ್ಲಿ ಒಂದಿಷ್ಟು ಬಾಲ್‌ಗಳನ್ನು ಇಡಲಾಗಿದೆ. ಬಿಗ್‌ಬಾಸ್ ಸೂಚಿಸಿದ ನಂಬರ್ ಇರುವ ಜಾಗಕ್ಕೆ ಎರಡೂ ಗುಂಪಿನ ಸದಸ್ಯರು ಜಿಗಿಯುತ್ತ ಓಡಿಹೋಗಿ ಬಾಲ್‌ ಎತ್ತಿಕೊಂಡು ಬಂದು ತಮ್ಮ ತಂಡದ ಜಾಲರಿಯಲ್ಲಿ ಹಾಕಬೇಕು. ಇದು ಟಾಸ್ಕ್​ನ ಮೂಲ ನಿಯಮ. ಯಾವ ತಂಡದವರು ಹೆಚ್ಚು ಬಾಲ್‌ಗಳನ್ನು ಎತ್ತಿಕೊಂಡು ಬಂದು ಜಾಲರಿಯಲ್ಲಿ ಹಾಕುತ್ತಾರೋ ಅವರು ಗೆದ್ದಂತೆ. ಈ ಟಾಸ್ಕ್‌ನಲ್ಲಿ ಬಾಲ್‌ ಎತ್ತುವಾಗ ಎರಡೂ ತಂಡದ ನಡುವೆ ಭಾರೀ ಜಿದ್ದಾಜಿದ್ದಿಯಾಗಿದೆ. ಸ್ನೇಹಿತ್‌ ತಳ್ಳಿದ್ದರಿಂದ ಬಿದ್ದಿರುವ ಸಿರಿ, ‘ಇಷ್ಟೊಂದು ಫಿಸಿಕಲ್ ಆಗುವುದು ಬೇಕಾ?’ ಎಂದು ಪ್ರಶ್ನಿಸಿದ್ದಾರೆ. ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರ್ತಿಕ್, ಎರಡೂ ತಂಡದ ಸದಸ್ಯರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.

Read More

ಹುಬ್ಬಳ್ಳಿ: ಭಾರತಪೇ ಸ್ಕೈಪಿಂಗ್ ಮಷಿನ್ ಪೂರೈಸಿ ವಂಚಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಇಲ್ಲಿನ ಸಿಇಎನ್ ಕ್ರೈಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳೂರು ಮೂಲದ ಮಹ್ಮದ್ ಆಸೀಫ್ (42) ಎಂಬ ಬಂಧಿತ. ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಕೆ. ಪಾಟೀಲ ನೇತೃತ್ವದ ತಂಡ ವಿಶೇಷ ಕಾರ್ಯಾಚಾರಣೆ ಮೂಲಕ ಮೈಸೂರಿನಲ್ಲಿ ಮಹ್ಮದ್‌ನನ್ನು ಬಂಧಿಸಿದೆ. ಬಂಧಿತನಿಂದ 2 ಭಾರತಪೇ ಸ್ಕೈಪಿಂಗ್ ಮಷಿನ್, 2 ಮೊಬೈಲ್ ಫೋನ್, 1 ಎಸ್‌ಬಿಐ ಎಟಿಎಂ ಕಾರ್ಡ್ ವಶಕ್ಕೆ ಪಡೆದುಕೊಂಡಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪರಾರಿಯಾಗಿರುವ ಇನ್ನಿತರ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಧಾರವಾಡ:- ಗ್ರಾಪಂ ಪಿಡಿಒ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ತಾಲೂಕಿನ ಯರಿಕೊಪ್ಪ ಗ್ರಾಪಂ ಪಿಡಿಒ ನಾಗರಾಜ್, ಆತ್ಮಹತ್ಯೆಗೆ ಯತ್ನಿಸಿದ ಅಧಿಕಾರಿ. ಇಲಿ ಔಷಧಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆ ಯತ್ನಕ್ಕೂ ಮುಂಚೆ PDO ವಿಡಿಯೋ ಮಾಡಿದ್ದು, ಆರ್‌ಟಿಐ ಕಾರ್ಯಕರ್ತನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿರುವುದು ತಿಳಿದು ಬಂದಿದೆ. ಮಲ್ಲಿಕಾರ್ಜುನ ರೊಟ್ಟಿಗವಾಡ, ಕಿರುಕುಳ ನೀಡಿದ ಆರ್‌ಟಿಐ ಕಾರ್ಯಕರ್ತ ಎನ್ನಲಾಗಿದೆ. ರೊಟ್ಟಿಗವಾಡ ಹೆಸರು ಹೇಳಿ ವಿಡಿಯೋ ಮಾಡಿದ್ದಾರೆ. ಬಹಳ ಅಧಿಕಾರಿಗಳಿಗೆ ರೊಟ್ಟಿಗವಾಡ ಕಿರುಕುಳ ಕೊಟ್ಟಿದ್ದಾರೆ. ನಮಗೂ ಕಿರುಕುಳ ಕೊಟ್ಟಿದ್ದಾರೆ. ಮಾಡಲು ಆಗದೇ ಇರೋ ಕೆಲಸಗಳನ್ನು ಮಾಡಲು ಒತ್ತಾಯಿಸುತ್ತಾರೆ. ಅದಕ್ಕಾಗಿ ನನ್ನ ಜೀವನ ಇಲ್ಲಿಗೆ ಎಂಡ್ ಮಾಡಲು ತಿರ್ಮಾನಿಸಿದ್ದೇನೆ. ವಿಷ ಕುಡಿಯುತ್ತಿದ್ದೇನೆ I am SORRY ಎಂದು ವಿಡಿಯೋ ಸ್ನೇಹಿತರಿಗೆ ಹಾಕಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅನೇಕರಿಗೆ ವಾಟ್ಸಾಪ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಾಟ್ಸಾಪ್ ಗಮನಿಸಿ ಸ್ನೇಹಿತರು ಹುಡುಕಿದ್ದಾರೆ. ಹುಡುಕಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಧಾರವಾಡ-ಬೆಳಗಾವಿ ರಸ್ತೆಯಲ್ಲಿವ ಪಕ್ಕದಲ್ಲಿ ಆತ್ಮಹತ್ಯೆಗೆ…

Read More

2024ರಲ್ಲಿ ನಡೆಯುವ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ BCCI ತಯಾರಿ ಆರಂಭಿಸಿದೆ. ಇನ್ನು ಕೆಲ ತಂಡಗಳು ಈ ಬಾರಿಯಾದರೂ ಟ್ರೋಫಿ ಗೆಲ್ಲಬೇಕೆಂಬ ನಿಟ್ಟಿನಲ್ಲಿ ತಯಾರಿ ನಡೆಸಲು ಶುರು ಮಾಡಿದ್ದು, ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡತೊಡಗಿವೆ ಈ ಪೈಕಿ ಇತ್ತೀಚಿಗೆ ಲಖನೌ ಸೂಪರ್​​ಜೈಂಟ್ಸ್​ ತಂಡವನ್ನು ತೊರೆದು ಕಲ್ಕತ್ತಾ ನೈಟ್​ರೈಡರ್ಸ್​ ತಂಡವನ್ನು ಕೂಡಿಕೊಂಡಿದ್ದ ಗೌತಮ್​ ಗಂಭೀರ್​ ಈ ಬಗ್ಗೆ ಮಾತನಾಡಿದ್ದು, ಬಂಗಾಳ ಜನರು ನನಗೆ ನೀಡಿದ್ದ ಪ್ರೀತಿಯನ್ನು ಹಿಂತಿರುಗಿಸಲು ಇದು ಸರಿಯಾದ ಸಮಯ ಎಂದಿದ್ದಾರೆ. ಅಲ್ಲಿಗೆ ಮರಳಿದಾಗ ನನಗೆ ಶ್ರಮ, ನೆನಪು ಹಾಗೂ ತಂಡದ ಮೇಲಿನ ಭಾವನೆ ಮರಳಿ ನೆನಪಿಗೆ ಬರುತ್ತವೆ. ಇದು ಹೊಸ ಆರಂಭ ಮತ್ತು ಆಶಾದಾಯಕವಾಗಿ ನಾನು ತಂಡವನ್ನು ಮುನ್ನಡೆಸಲು ನೋಡುತ್ತೇನೆ. ಬಂಗಾಳದ ಜನರು ನನಗೆ ತೋರಿರುವ ಪ್ರೀತಿ ಕೆಕೆಆರ್​ ನನ್ನ ಹೃದಯಕ್ಕೆ ಮತ್ತಷ್ಟು ಹತ್ತಿರವಾಗಿದೆ. ಇದು ಅವರಿಗೆ ಹಿಂತಿರುಗಿಸಲು ಸರಿಯಾದ ಸಮಯ ಎಂದು ಗೌತಮ್​ ಗಂಭೀರ್​ ಹೇಳಿದ್ದಾರೆ.

Read More

ದಾವಣಗೆರೆ:- BR Patil ರಾಜೀನಾಮೆ ಪತ್ರದ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು ,ಶಾಸಕ ಬಿ.ಆರ್.ಪಾಟೀಲ್ ಯಾವ ಕಾರಣಕ್ಕೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೋ ಗೊತ್ತಿಲ್ಲ. ಯಾವ ಕಾರಣಕ್ಕೆ ಎಂಬುದನ್ನ ಅವರನ್ನೇ ಕೇಳಬೇಕು ಎಂದರು. ಶಾಸಕ ಬಿ.ಆರ್.ಪಾಟೀಲ್ ಯಾವ ಕಾರಣಕ್ಕಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎನ್ನುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು. ಯಾವ ಸಚಿವರು ಸ್ಪಂದಿಸುತ್ತಿಲ್ಲವೆ ಎಂಬುದನ್ನ ಅವರೇ ಬಹಿರಂಗವಾಗಿ ಹೇಳಲಿ. ಯಾವ ಸಚಿವರು, ಎಲ್ಲಾ ಸಚಿವರಾ, ಇಂತಹವರೇ ಎಂಬುದನ್ನ ಹೇಳಬೇಕು ಎಂದು ತಿಳಿಸಿದರು. ಬಿ.ಆರ್. ಪಾಟೀಲ್ ಅವರಿಗೆ ಏನು ಸಮಸ್ಯೆ ಅಂತಾ ಸಂಬಂಧಪಟ್ಟ ಸಚಿವರು ಅಥವಾ ಮುಖ್ಯಮಂತ್ರಿಯವರ ಬಳಿ ಚರ್ಚಿಸಬೇಕು ಎಂದು ತಿಳಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಕರಣ ಸದ್ಯ ನ್ಯಾಯಾಲಯದಲ್ಲಿದೆ. ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮಾಹಿತಿ ಇದ್ದಿದ್ದರೆ ಹೇಳಬಹುದಿತ್ತು.ಯಾವುದೇ ಹೇಳಿಕೆ ನೀಡುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಾತಿಗಣತಿ ವರದಿ ಮೊದಲು ಬಿಡುಗಡೆಯಾದ…

Read More

ಬೆಂಗಳೂರು:- ನಗರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಮೆಟ್ರೋ ನಿಗಮ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 6 ಮ್ಯಾನೇಜರ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ. ಅಭ್ಯರ್ಥಿಗಳು ಆನ್​​​ಲೈನ್ & ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 22, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹುದ್ದೆಯ ಮಾಹಿತಿ: ಮ್ಯಾನೇಜರ್ ಸಿವಿಲ್​ (CSW)-2 ಮ್ಯಾನೇಜರ್ (P-Way)-2 ಮ್ಯಾನೇಜರ್ (ಆಪರೇಶನ್ಸ್​)-2 ವಿದ್ಯಾರ್ಹತೆ: ಮ್ಯಾನೇಜರ್ ಸಿವಿಲ್​ (CSW), ಮ್ಯಾನೇಜರ್ (P-Way)- ಸಿವಿಲ್ ಎಂಜಿನಿಯರಿಂಗ್​ನಲ್ಲಿ ಪದವಿ ಮ್ಯಾನೇಜರ್ (ಆಪರೇಶನ್ಸ್​)- ಎಲೆಕ್ಟ್ರಿಕಲ್/ ಮೆಕ್ಯಾನಿಕಲ್/ ಎಲೆಕ್ಟ್ರಾನಿಕ್ಸ್​ & ಕಮ್ಯುನಿಕೇಶನ್/ ಕಂಪ್ಯೂಟರ್ ಸೈನ್ಸ್​ ಎಂಜಿನಿಯರಿಂಗ್​​ನಲ್ಲಿ ಪದವಿ ವಯೋಮಿತಿ: ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 40 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ವೇತನ: ಮಾಸಿಕ ₹ 75,000 ಉದ್ಯೋಗದ ಸ್ಥಳ: ಬೆಂಗಳೂರು ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ…

Read More

ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಚ್ಚನೆ ಏನಾದ್ರೂ ತಿನ್ನೋಣ ಅನ್ಸತ್ತೆ. ಹೀಗಾಗಿ ಚಳಿಗಾಲದಲ್ಲಿ ರಸ್ತೆ ಬದಿ ಮಾರುವ ಚುರುಮುರಿ ಅಥವಾ ಮಸಾಲೆ ಮಂಡಕ್ಕಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಇದನ್ನ ಮನೆಯಲ್ಲೇ ಹೇಗೆ ಮಾಡೋದು ಎಂದು ತಿಳಿಯೋಣ.. ಚುರುಮುರಿ ಮಾಡಲು ಬೇಕಾಗುವ ಪದಾರ್ಥಗಳು ಮಂಡಕ್ಕಿ ಈರುಳ್ಳಿ ಕ್ಯಾರೆಟ್​ ಟೊಮೆಟೊ ಮಿಕ್ಸ್ಚರ್ ಶೇಂಗಾ ಅರಿಶಿನ ಪುಡಿ ಖಾರದ ಪುಡಿ ಹಸಿ ಮೆಣಸು ಗರಂ ಮಸಾಲ ಕೊಬ್ಬರಿಎಣ್ಣೆ ಕೊತ್ತುಂಬರಿ ಸೊಪ್ಪು ಉಪ್ಪು ನಿಂಬೆ ಹಣ್ಣು ಚುರುಮುರಿ ಮಾಡುವ ವಿಧಾನ ಒಂದು ಪಾತ್ರೆಗೆ ಒಂದು ಚಮಚ ಕೊಬ್ಬರಿ ಎಣ್ಣೆ, ಸಣ್ಣಗೆ ಕತ್ತರಿಸಿದ ಈರುಳ್ಳಿ, ತುರಿದ ಕ್ಯಾರೆಟ್​, ಸಣ್ಣಗೆ ಕತ್ತರಿಸಿದ ಟೊಮೆಟೊ, ಮಿಕ್ಸ್ಚರ್ (ಸಣ್ಣ ಖಾರದ ಕಡ್ಡಿ), ಶೇಂಗಾ, ಅರಿಶಿನ ಪುಡಿ, ಖಾರದ ಪುಡಿ, ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನ ಕಾಯಿ, ಗರಂ ಮಸಾಲ ಪುಡಿ, ಸಣ್ಣಗೆ ಕತ್ತರಿಸಿದ ಕೊತ್ತುಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ನಿಂಬೆ ಹಣ್ಣಿನ ರಸ ಹಾಕಿ. ಎಲ್ಲವನ್ನೂ ದೊಡ್ಡ ಚಮಚದಲ್ಲಿ ಚೆನ್ನಾಗಿ ಕಲಸಿ. (ಇಲ್ಲಿ…

Read More