ಬೆಂಗಳೂರು:- ನಗರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಮೆಟ್ರೋ ನಿಗಮ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 6 ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ.
ಅಭ್ಯರ್ಥಿಗಳು ಆನ್ಲೈನ್ & ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 22, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಹುದ್ದೆಯ ಮಾಹಿತಿ:
ಮ್ಯಾನೇಜರ್ ಸಿವಿಲ್ (CSW)-2
ಮ್ಯಾನೇಜರ್ (P-Way)-2
ಮ್ಯಾನೇಜರ್ (ಆಪರೇಶನ್ಸ್)-2
ವಿದ್ಯಾರ್ಹತೆ:
ಮ್ಯಾನೇಜರ್ ಸಿವಿಲ್ (CSW), ಮ್ಯಾನೇಜರ್ (P-Way)- ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ
ಮ್ಯಾನೇಜರ್ (ಆಪರೇಶನ್ಸ್)- ಎಲೆಕ್ಟ್ರಿಕಲ್/ ಮೆಕ್ಯಾನಿಕಲ್/ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ನಲ್ಲಿ ಪದವಿ
ವಯೋಮಿತಿ:
ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 40 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಮಾಸಿಕ ₹ 75,000
ಉದ್ಯೋಗದ ಸ್ಥಳ:
ಬೆಂಗಳೂರು
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.