2024ರಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ಗೆ BCCI ತಯಾರಿ ಆರಂಭಿಸಿದೆ. ಇನ್ನು ಕೆಲ ತಂಡಗಳು ಈ ಬಾರಿಯಾದರೂ ಟ್ರೋಫಿ ಗೆಲ್ಲಬೇಕೆಂಬ ನಿಟ್ಟಿನಲ್ಲಿ ತಯಾರಿ ನಡೆಸಲು ಶುರು ಮಾಡಿದ್ದು, ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡತೊಡಗಿವೆ
ಈ ಪೈಕಿ ಇತ್ತೀಚಿಗೆ ಲಖನೌ ಸೂಪರ್ಜೈಂಟ್ಸ್ ತಂಡವನ್ನು ತೊರೆದು ಕಲ್ಕತ್ತಾ ನೈಟ್ರೈಡರ್ಸ್ ತಂಡವನ್ನು ಕೂಡಿಕೊಂಡಿದ್ದ ಗೌತಮ್ ಗಂಭೀರ್ ಈ ಬಗ್ಗೆ ಮಾತನಾಡಿದ್ದು, ಬಂಗಾಳ ಜನರು ನನಗೆ ನೀಡಿದ್ದ ಪ್ರೀತಿಯನ್ನು ಹಿಂತಿರುಗಿಸಲು ಇದು ಸರಿಯಾದ ಸಮಯ ಎಂದಿದ್ದಾರೆ.
ಅಲ್ಲಿಗೆ ಮರಳಿದಾಗ ನನಗೆ ಶ್ರಮ, ನೆನಪು ಹಾಗೂ ತಂಡದ ಮೇಲಿನ ಭಾವನೆ ಮರಳಿ ನೆನಪಿಗೆ ಬರುತ್ತವೆ. ಇದು ಹೊಸ ಆರಂಭ ಮತ್ತು ಆಶಾದಾಯಕವಾಗಿ ನಾನು ತಂಡವನ್ನು ಮುನ್ನಡೆಸಲು ನೋಡುತ್ತೇನೆ. ಬಂಗಾಳದ ಜನರು ನನಗೆ ತೋರಿರುವ ಪ್ರೀತಿ ಕೆಕೆಆರ್ ನನ್ನ ಹೃದಯಕ್ಕೆ ಮತ್ತಷ್ಟು ಹತ್ತಿರವಾಗಿದೆ. ಇದು ಅವರಿಗೆ ಹಿಂತಿರುಗಿಸಲು ಸರಿಯಾದ ಸಮಯ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.