Author: AIN Author

ಕಲಬುರ್ಗಿ:- ಬಿಜೆಪಿಯಲ್ಲಿ ಮಾಜಿ ಸಚಿವ ಬಿ ಸೋಮಣ್ಣ ಅಸಮಾಧಾನ ವಿಚಾರವಾಗಿ ಮಾಜಿ DCM ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ವಿ ಸೋಮಣ್ಣ ನಮ್ಮ ಪಕ್ಷದ ಹಿರಿಯ ನಾಯಕರು. ನಮ್ಮ ಪಕ್ಷದಲ್ಲಿ ಅವರಿಗೆ ಸಂಪೂರ್ಣ ಗೌರವ ಇದೆ, ಅವರನ್ನು ವಿಶ್ವಾಸದಿಂದ ಕರೆದುಕೊಂಡು ಹೋಗುವ ಕೆಲಸ ಬಿಜೆಪಿ ಮಾಡ್ತದೆ. ಚುನಾವಣೆ ಅಂದ ಮೇಲೆ ಸೋಲು ಗೆಲುವು ಸಹಜ. ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಸೋಮಣ್ಣನವರೇ ಪದೇ ಪದೇ ಈ ಮಾತು ಹೇಳ್ತಿದ್ದಾರೆ. ಸೋಮಣ್ಣ ಇಂದು, ಮುಂದು ಎಂದೆಂದೂ ನಮ್ಮ ಜೊತೆಯೇ ಇರ್ತಾರೆ. ಅವರ ನೋವು ಅಳಲು ದೂರ ಮಾಡುವ ಕೆಲಸ ಬಿಜೆಪಿಯಿಂದ ಆಗುತ್ತದೆ ಎಂದು ಕಲಬುರಗಿಯಲ್ಲಿ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆ ನೀಡಿದ್ದಾರೆ.

Read More

ಮಹದೇವಪುರ:- ದೇಶಿಯ ಕ್ರೀಡೆಯಾದ ಖೋ ಖೋ ಆಟವನ್ನ ಮದರ್ ಆಫ್  ಆಲ್ ಗೇಮ್ಸ್  ಎನ್ನುತ್ತಾರೆ‌. ಖೋ ಖೋ ಕ್ರೀಡೆಯನ್ನ ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆಯ ಅಧ್ಯಕ್ಷ  ಲೋಕೇಶ್ವರ್ ತಿಳಿಸಿದರು. ಕ್ಷೇತ್ರದ ವರ್ತೂರು ವಾರ್ಡ್ ನ  ಗುಂಜೂರು ಗ್ರಾಮದ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಅತಿ ಕಿರಿಯ ಬಾಲಕ ಬಾಲಕಿಯರ  ಹೊನಲು ಬೆಳಕಿನ ಅಂತರಾಷ್ಟ್ರೀಯ ಖೋ ಖೋ ಸ್ಪರ್ಧೆ 2023ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದೇಶಿಯ ಕ್ರೀಡೆಯಾದ ಖೋ ಖೋ ಅಟವನ್ನು ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ.  ಎಂದು ಹೇಳಿದರು. ರಾಜ್ಯದ ಎಲ್ಲಾ ಭಾಗಗಳಿಂದ 120ಕ್ಕು ಹೆಚ್ಚು ತಂಡಗಳು 1200 ಕ್ಕು ಹೆಚ್ಚು ಮಕ್ಕಳು ಖೋ ಖೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಅತಿ ಕಿರಿಯ ಬಾಲಕ,ಬಾಲಕಿಯರ ಆಟವನ್ನು ನೋಡಲು ಚಂದ ಮತ್ತು ಕಿರಿಯ ವಯಸ್ಸಿನಲ್ಲಿ ಏನು  ಸಾಧನೆ ಮಾಡುತ್ತಾರೋ ಅದು ಅವರ ಜೀವನದಲ್ಲಿ ಮುಂದುವರೆಯುತ್ತದೆ ಅದ್ದರಿಂದ ಹೆಚ್ಚಿನ ಅವಕಾಶಗಳನ್ನು…

Read More

ಬಳ್ಳಾರಿ:- ಡಿಕೆ ಶಿವಕುಮಾರ್ ಅವರು ಸರ್ಕಾರವನ್ನು ಬುಗುರಿಯಂತೆ ಆಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಶ್ರೀ ರಾಮುಲು ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ಇಡೀ ಸರ್ಕಾರವನ್ನೇ ಡಿಕೆ ಶಿವಕುಮಾರ ಕೈಗೊಂಬೆ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ತೋರಿಸುವ ರೀತಿಯಲ್ಲಿ ಸರ್ಕಾರವನ್ನು ಬುಗುರಿಯಂತೆ ಆಡಿಸುತ್ತಿದ್ದಾರೆ. ಗೊಂಬೆ ಆಡುತ್ತೈತೆ ಎನ್ನುವ ಹಾಗೆ ಡಿಕೆಶಿಗಾಗಿ‌ ಮತ್ತೊಮ್ಮೆ ಹೊಸ ಹಾಡು ಬರೆಯಬೇಕು ಎಂದರು. ಸರ್ಕಾರ ಮತ್ತು ಕಾನೂನಿನ‌ ಮಧ್ಯೆ ತಿಕ್ಕಾಟ, ಭಿನ್ನಾಪ್ರಾಯ ಪ್ರಾರಂಭವಾಗಿದೆ. ಸರ್ಕಾರ ಮತ್ತು ಕಾನೂನು ಮಧ್ಯೆ ದೊಡ್ಡ ಆತಂಕ ನಿರ್ಮಾಣವಾಗಿದೆ. ಡಿಕೆ ಶಿವಕುಮಾರ್ ಮುಂದೆ ಸರ್ಕಾರ ನೇ ತಲೆ ಬಾಗುತ್ತಿದೆಯೇ ಅಥವಾ ಸರ್ಕಾರದ ಮುಂದೆ ಇವರು ತಲೆ ಬಾಗ್ತಿದ್ದಾರಾ ಗೊತ್ತಾಗ್ತಿಲ್ಲ. ಸಿಬಿಐ ತನಿಖೆ ಪ್ರಕರಣದಲ್ಲಿ ಡಿಕೆಶಿ ತಪ್ಪು ಮಾಡಿಲ್ಲ ಅಂದ್ರೆ ಹೊರಬರುವ ವಿಶ್ವಾಸ ಇರಬೇಕಿತ್ತು. ಆದರೆ ಸರ್ಕಾರವನ್ನು ದುರುಪಯೋಗಪಡಿಸಿಕೊಂಡು ಸಿಬಿಐ ಕೇಸ್ ಹಿಂಪಡೆಯುವಂತೆ ನೋಡಿಕೊಂಡಿದ್ದಾರೆ. ಒಂದು ರೀತಿ ಸರ್ಕಾರವನ್ನೇ ಡಿಕೆಶಿ ಕೆಳಗಡೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಇಷ್ಟೊಂದು ದೊಡ್ಡ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.

Read More

ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್ 2023ರ ಫೈನಲ್ ಹಣಾಹಣಿಯಲ್ಲಿ ಕಾಂಗರೂ ಪಡೆ ಟೀಂ ಇಂಡಿಯಾ ವಿರುದ್ಧ ಗೆದ್ದು ಸಂಭ್ರಮಿಸಿತು. ಈ ವೇಳೆ ಟೂರ್ನಿಯ ಪೂರ ನಡೆದ ಪಂದ್ಯಗಳಲ್ಲಿ ಸತತ ಗೆಲುವಿನ ಮುಖೇನ ಅತ್ಯುತ್ತಮ ಪ್ರದರ್ಶನ ಕೊಟ್ಟು ಅಂತಿಮ ಪಂದ್ಯಕ್ಕೆ ಲಗ್ಗೆಯಿಡುವ ಮುನ್ನವೇ ಕ್ರಿಕೆಟ್ ಅಭಿಮಾನಿಗಳ ಮನವನ್ನು ಗೆದ್ದಿದ್ದ ಟೀಮ್ ಇಂಡಿಯಾ ಆಟಗಾರರು, ಸೋಲಿನ ಬಳಿಕ ಭಾರೀ ಬೇಸರವನ್ನು ಹೊರಹಾಕಿದರು. ಇದೀಗ ಈ ಕುರಿತಂತೆ ಟಿ-20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ತಮ್ಮ ಅನಿಸಿಕೆಯೊಂದನ್ನು ಹಂಚಿಕೊಂಡಿದ್ದಾರೆ. https://twitter.com/PTI_News/status/1728336979870224579?ref_src=twsrc%5Etfw%7Ctwcamp%5Etweetembed%7Ctwterm%5E1728336979870224579%7Ctwgr%5Ebfd3af760dd90cdc82b193f366ea982584e0a4df%7Ctwcon%5Es1_c10&ref_url=http%3A%2F%2Fapi-news.dailyhunt.in%2F ‘ವಿಶ್ವಕಪ್ ಮುಗಿದು ಇಂದಿಗೆ 4-5 ದಿನಗಳೇ ಕಳೆದಿವೆ. ನಮಗೆಲ್ಲರಿಗೂ ಭಾರೀ ನಿರಾಸೆಯಾಗಿದೆ. ನಮ್ಮ ಅಭಿಮಾನಿಗಳಿಂದ ನಮಗೆ ಅದ್ಭುತವಾದ ಬೆಂಬಲ ಸಿಕ್ಕಿದೆ ಮತ್ತು ಇದು ಒಂದು ಕ್ರೀಡೆಯಾಗಿದೆ’ ಎಂದು ಹೇಳಿದರು. ಇದು ನಮಗೆ ಹೆಚ್ಚು ಕಲಿಸುತ್ತದೆ ಎಂದ ಸೂರ್ಯ, ‘ಆಸ್ಟ್ರೇಲಿಯಾ ವಿರುದ್ಧ ಫೈನಲ್‌ ಪಂದ್ಯದ ನಂತರ ಪ್ರಧಾನಿ ಮೋದಿಯವರು ಡ್ರೆಸ್ಸಿಂಗ್ ರೂಮ್‌ಗೆ ಆಗಮಿಸಿ ನಮ್ಮನ್ನು ಭೇಟಿ ಮಾಡಿ, ಇದೊಂದು ಕ್ರೀಡೆ, ಈ ರೀತಿ ಆಗುವುದು ಸಾಮಾನ್ಯ ಬೇಸರವಾಗದಿರಿ…

Read More

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ನಾಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಮರೋಹಳ್ಳಿ, ತೊಣಚಿನಕುಪ್ಪೆ, ಭುವನೇಶ್ವರಿ ನಗರ, ಬೂದಿಹಾಳ್, ಬೊಮ್ಮನಹಳ್ಳಿ, ವೀರನಂಜಿಪುರ, ಕಾಚನಹಳ್ಳಿ, ಬೀಚನಹಳ್ಳಿ, ಪಾಪಭೋವಿಪಾಳ್ಯ, ಎರಮಂಚನಹಳ್ಳಿ, ಬೈರನಹಳ್ಳಿ, ಹೊಸೂರು, ಮಿಂಡಾಪುರ, ಎಸ್‌ಜೆಎಂ ನಗರ, ಎಸ್‌ಎಂಕೆ ನಗರ, ಬಾಬು ಜಗಜೀವನ ನಗರ, ರಾಜನಗರ, ವಿಜಯನಗರ, ದೇವರಾಜನಗರ ಮತ್ತು ಇತರ ಪ್ರದೇಶಗಳು. , ಎಸ್ಪಿ ಕಚೇರಿ, ಆರ್‌ಟಿಒ ಕಚೇರಿ, ಕೊಣನೂರು, ಚಿಕ್ಕೇನಹಳ್ಳಿ, ಬಿ ಜಿ ಹಳ್ಳಿ, ತೊಡ್ರನಾಳ್, ಟಿ ನುಲೇನೂರು, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೆ.ಟಿ.ಎನ್.ಹಳ್ಳಿ, ಪಿಲಾಲಿ ಮತ್ತು ರಂಗನಾಥಪುರ. ರಾಮರಾಯನ ಪಾಳ್ಯ, ಬಿಟಿಎಸ್ ಮಿಲ್, ಕನ್ನಮಂಗಲ, ಕನ್ನಮಂಗಲ ಗೇಟ್, ನಾಗೇನಹಳ್ಳಿ, ಕೆಂಜಿಗಾನಹಳ್ಳಿ, ಕಮ್ಮಸಂದ್ರ, ಎಲ್ಲದಹಳ್ಳಿ, ತಿಮ್ಮಸಂದ್ರ, ವೊಡ್ಡಿಗೆರೆ, ಆಲೇನಹಳ್ಳಿ, ಬಿಲಂಕೋಟೆ ಏರಿಯಾ, ಹೊಸಹಳ್ಳಿ, ಹನುಮಂತಪುರ, ಕುಳ್ಳುವನಹಳ್ಳಿ, ಲಕ್ಕೇನಹಳ್ಳಿ, ಜಿರಾಮಪ್ಪನನಹಳ್ಳಿ, ಜಿರಾಮಪ್ಪನಹಳ್ಳಿ ದೊಡ್ಡೇರಿ d ಇಂಡಸ್ಟ್ರಿ, Sk ಸ್ಟೀಲ್ ಕೈಗಾರಿಕೆ, ಯಡೇಹಳ್ಳಿ, ಭಾರತೀಪುರ, ಕೆ ಜಿ ಶ್ರೀನಿವಾಸಪುರ, ಕೆಂಗಲ್ಕೆಂಪೋಹಳ್ಳಿ, ಬಿಲ್ಲನಕೋಟೆ, ಹೊಸಹಳ್ಳಿ, ಹನುಮಂತಪುರ, ಕುಳ್ಳುವನಹಳ್ಳಿ, ಲಕ್ಕೇನಹಳ್ಳಿ, ದೊಡ್ಡೇರಿ,…

Read More

ಬೆಂಗಳೂರು:- ಸೋಮಣ್ಣ ಫೋನ್‌ ರಿಸೀವ್‌ ಮಾಡ್ತಿಲ್ಲ, ಇನ್ನೇನೂ ಮಾಡಕ್ಕಾಗಲ್ಲ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಪಕ್ಷದಿಂದ ಅನ್ಯಾಯ ಆಗಿದೆ ಎಂದು ಹೇಳಿಕೊಳ್ಳುತ್ತಿರುವ ವಿ.ಸೋಮಣ್ಣ ಅವರನ್ನು ಫೋನ್‌ನಲ್ಲಿ ಸಂಪರ್ಕಿಸಲು ಪ್ರಯತ್ನ ನಡೆಸುತ್ತಿದ್ದೇನೆ. ಅವರು ಫೋನ್‌ ರಿಸೀವ್‌ ಮಾಡುತ್ತಿಲ್ಲ. ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಬರಲಿಲ್ಲ ಅಂದರೆ ಏನು ಮಾಡಲು ಆಗುತ್ತದೆ?-ಹೀಗೆಂದು ಹೇಳಿದ್ದಾರೆ. ವಿ. ಸೋಮಣ್ಣ ಅವರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ ತಮಗೆ ಪಕ್ಷದಿಂದ ಅನ್ಯಾಯ ಆಗಿದೆ ಎಂದು ಸ್ವಾಮೀಜಿಗಳ ಬಳಿ ನೋವು ತೋಡಿಕೊಂಡಿದ್ದರು. ತಾನು ಗೋವಿಂದರಾಜ ಕ್ಷೇತ್ರದಿಂದ ಸ್ಪರ್ಧೆ ಮಾಡದೆ ಘೋರ ಅಪರಾಧ ಮಾಡಿದೆ. ಅಮಿತ್‌ ಶಾ ಮತ್ತು ನರೇಂದ್ರ ಮೋದಿ ಅವರು ತನ್ನನ್ನು ಬಲವಂತದಿಂದ ಚಾಮರಾಜನಗರ ಮತ್ತು ವರುಣಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಮಾಡಿದರು ಎಂದು ಕಣ್ಣೀರು ಹಾಕಿದ್ದರು. ಮಾಧ್ಯಮದ ಮಂದಿ ಈ ಬಗ್ಗೆ ಬಿ.ಎಸ್‌. ಯಡಿಯೂರಪ್ಪ ಅವರನ್ನು ಪ್ರಶ್ನಿಸಿದಾಗ, ಸೋಮಣ್ಣ ಅವರು ಮಾತನಾಡಿದ್ದನ್ನು ನಾನು ನೋಡಿದ್ದೇನೆ. ಅವರ…

Read More

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಗೆ ಸೇರ್ಪಡೆ ವಿಚಾರದ ಬಗ್ಗೆ ಮಾಜಿ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದು, ‘ಬಿಜೆಪಿ ಪಾರ್ಟಿ(BJP Party)ಯನ್ನು ಒಬ್ಬ ರಾಮುಲು ಮಾತ್ರ ಕಟ್ಟಿಲ್ಲ. ರಾಜ್ಯದಲ್ಲಿರುವ ಕೊಟ್ಯಾಂತರ ಕಾರ್ಯಕರ್ತರ ಶ್ರಮದಿಂದ ಇವತ್ತು ಇಷ್ಟು ದೊಡ್ಡ ಪಾರ್ಟಿ ಆಗಿ ಬೆಳೆದಿದೆ. ಇಂತಹ ಸಂಧರ್ಭದಲ್ಲಿ ಯಾರನ್ನೂ ಸೇರಬೇಡ ಎನ್ನಲು ನನಗೆ ಅಧಿಕಾರ ಇಲ್ಲ. ನೂರು ಅಲ್ಲ, ಸಾವಿರ ಜನ ಬಂದ್ರೂ ನಮ್ಮ ಪಾರ್ಟಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ಸರ್ವಾಧಿಕಾರ ಇದೆ. ಹೀಗಾಗಿ ನನ್ನ ಅಭ್ಯಂತರವಿಲ್ಲ ಎಂದರು. ಎಲ್ಲರೂ ಸೇರಿದ್ರೆ ಮತ್ತೆ ಗೆಲುವು ಸಾಧ್ಯ ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ನಾನು ಜೀವನದಲ್ಲಿ ಯಾವತ್ತೂ ದ್ವೇಷ ಹಾಗೂ ಅಸೂಹೆ ರಾಜಕಾರಣ ಮಾಡಿಲ್ಲ‌. ಯಾರೇ ಬಂದರೂ ಪಾರ್ಟಿಗೆ ಅನುಕೂಲ ಆಗಲಿ ಎಂದು ಬಯಸುವೆ. ಯಾರಾದರೂ ಬರುತ್ತಾರೆ ಎಂದರೆ ಬೇಡ ಎನ್ನುವುದಕ್ಕೆ ನಾನು ಯಾರು?, ಪಾರ್ಟಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ನನ್ನ ವೈಯಕ್ತಿಕ ತೀರ್ಮಾನ, ಅಭಿಪ್ರಾಯ ಇರಲ್ಲ. ಪಾರ್ಟಿ ತೀರ್ಮಾನ ಏನಿರುತ್ತದೆ, ಅದಕ್ಕೆ ನಾವು…

Read More

ಡಿಸೆಂಬರ್‌ನಲ್ಲಿ ನಡೆಯಲಿರುವ ಈ ವರ್ಷದ ಐಪಿಎಲ್ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ ಐದು ಬಾರಿ ಐಪಿಎಲ್ ವಿಜೇತ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಲು ಕುರಿತು ವರದಿಯಾಗಿದೆ. ಐಪಿಎಲ್ ಫ್ರಾಂಚೈಸಿಗಳು ಆಟಗಾರರನ್ನು ವಿನಿಮಯ ಮಾಡಿಕೊಳ್ಳುವ ಟ್ರೇಡಿಂಗ್ ವಿಂಡೋ ಮುಗಿಯಲು ಇನ್ನೊಂದು ದಿನ ಬಾಕಿ ಇರುವಂತೆಯೇ ಹಾರ್ದಿಕ್ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಹಾರ್ದಿಕ್​ ಪಾಂಡ್ಯ ಮುಂಬೈ ಇಂಡಿಯನ್ಸ್​ಗೆ ಮರಳಲಿದ್ದಾರೆ ಎಂಬ ವರದಿಗಳಿವೆ. ಆದರೆ ಈ ಬಗ್ಗೆ ಗುಜರಾತ್ ಟೈಟಾನ್ಸ್ ಅಥವಾ ಮುಂಬೈ ಇಂಡಿಯನ್ಸ್ ಯಾವುದೇ ಹೇಳಿಕೆ ನೀಡಿಲ್ಲ. ಆಟಗಾರರನ್ನು ಬದಲಿಸಲು ಫ್ರಾಂಚೈಸಿಗಳಿಗೆ ಭಾನುವಾರದವರೆಗೆ ಅವಕಾಶವಿದೆ. ಅಲ್ಲಿಯವರೆಗೆ ಈ ಬಗ್ಗೆ ಸ್ಪಷ್ಟತೆ ಸಿಗುವ ಸಾಧ್ಯತೆ ಇಲ್ಲದಂತಾಗಿದೆ. ಪಾಂಡ್ಯ ಏಳು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ಪರ ಆಡಿರುವುದು ಗಮನಾರ್ಹ. 2022ರ ಸೀಸನ್‌ಗೂ ಮುನ್ನ ಮುಂಬೈ ತಂಡದ ಪರ ಆಡುತ್ತಿದ್ದ ಪಾಂಡ್ಯರನ್ನು ತಮ್ಮೆ ತಂಡಕ್ಕೆ ಕರೆತಂದ ಗುಜರಾತ್ ಟೈಟಾನ್ಸ್, ನಾಯಕತ್ವ ಪಟ್ಟವನ್ನು ನೀಡಿತು. ಹಾರ್ದಿಕ್ ನಾಯಕತ್ವದಲ್ಲಿ ಗುಜರಾತ್ ಸತತ ಎರಡು ವರ್ಷಗಳ ಫೈನಲ್ ತಲುಪಿದೆ. ಮೊದಲ ವರ್ಷ…

Read More

ಬೆಂಗಳೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಕಿಡಿ ಕಾರಿದರು. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಡಿಕೆಶಿಗೆ ಒಂದು ನ್ಯಾಯ, ಸಚಿವ ನಾಗೇಂದ್ರಗೆ ಒಂದು ನ್ಯಾಯ ಸಿಕ್ಕಿದೆ. ಇದೇ ಸಿದ್ದರಾಮಯ್ಯ ಹಿಂದೆ ನಾಗೇಂದ್ರ ವಿರುದ್ಧ 8-10 ಕೇಸ್ ಗಳಲ್ಲಿ ತನಿಖೆಗೆ ಅನುಮತಿ ಕೊಟ್ಟಿದ್ರು. ನಾಗೇಂದ್ರರನ್ನು ಈಗ ಅವರದ್ದೇ ಸಂಪುಟದಲ್ಲಿ ಸಿದ್ದರಾಮಯ್ಯ ಸಚಿವ ಮಾಡಿದ್ದಾರೆ. ಆದರೆ ನಾಗೇಂದ್ರ 8-10 ಪ್ರಕರಣಗಳಲ್ಲಿ ಈಗಲೂ ತನಿಖೆ ಎದುರಿಸುತ್ತಿದ್ದಾರೆ. ಅವರ ವಿರುದ್ಧ ಚಾರ್ಜ್ ಶೀಟ್ ಸಹ ಹಾಕಲಾಗಿದೆ. ಡಿಕೆಶಿ ವಿರುದ್ಧ ಸಿಬಿಐ ಅನುಮತಿ ವಾಪಸ್ ಪಡೆದ ಸಿದ್ದರಾಮಯ್ಯ ನಾಗೇಂದ್ರ ವಿರುದ್ಧದ ಪ್ರಕರಣಗಳಲ್ಲೂ ಅನುಮತಿ ವಾಪಸ್ ಪಡೆಯಲಿ. ಸಿದ್ದರಾಮಯ್ಯ ಡಿಕೆಶಿಗೆ ಒಂದು ನ್ಯಾಯ – ನಾಗೇಂದ್ರ ಗೆ ಒಂದು ನ್ಯಾಯ ಕೊಡಬಾರದು. ನಾಗೇಂದ್ರ ವಿರುದ್ಧ‌ ಇರುವ ಪ್ರಕರಣಗಳಲ್ಲಿ ತನಿಖೆಗೆ ಕೊಟ್ಟಿರುವ ಅನುಮತಿಗಳನ್ನು ವಾಪಸ್ ಪಡೆಯಲಿ ಎಂದು ಸವಾಲು ಹಾಕಿದರು. ಕೆಆರ್‌ಪಿಪಿ ಪಕ್ಷ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡ್ತಿದ್ದೇವೆ. ನಾನು ಪ್ರತೀ…

Read More

ಹುಬ್ಬಳ್ಳಿ :- ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕಕ್ಕೆ ವಿ ಸೋಮಣ್ಣ ಬೇಸರ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪಕ್ಷದಲ್ಲಿ ಅತೃಪ್ತಿ ಏನೇ ಇರಲಿ, ಬಹಿರಂಗ ಚರ್ಚೆ ಸಲ್ಲದು. ಮಾಜಿ ಸಚಿವ ಸೋಮಣ್ಣ ಬಂಡಾಯದ ಕುರಿತು ಹಾಗೂ ವಿಜಯೇಂದ್ರ ನೇಮಕದ ನಂತರ ಸೋಮಣ್ಣ ಅತೃಪ್ತಿಯ ಬಗ್ಗೆ ನನಗೆ ಮಾಹಿತಿ ಇಲ್ಲ. ಅದು ಏನೇ ಇದ್ದರೂ ಬಹಿರಂಗ ಚರ್ಚೆ ಮಾಡುವುದು ಸರಿಯಲ್ಲ ಎಂದು ಹೇಳಿದರು. ಸೋಮಣ್ಣ ಹೈಕಮಾಂಡ್ ಗೆ ದೂರು ನೀಡುತ್ತಿರುವ ಕುರಿತು ಮಾಹಿತಿ ಇಲ್ಲ. ನಿಮ್ಮ ಕುಂದು ಕೊರತೆಗಳು ಏನೇ ಇರಲಿ ಅದನ್ನು ರಾಷ್ಟ್ರೀಯ ಅಧ್ಯಕ್ಷರಿಗೆ ಗಮನಕ್ಕೆ ತರಲಿ ಅಥವಾ ಇತರ ರಾಷ್ಟ್ರೀಯ ನಾಯಕರಿಗೆ ಮಾಹಿತಿ ನೀಡಲಿ. ಮಾಧ್ಯಮದ ಮೂಲಕ ಇದನ್ನು ಚರ್ಚಿಸುವುದು ಒಳ್ಳೆಯದಲ್ಲ ಎಂದರು. ಸೋಮಣ್ಣ ಪ್ರಮುಖ ನಾಯಕರು ವೈಯಕ್ತಿಕವಾಗಿಯೂ ಆತ್ಮೀಯರಾಗಿದ್ದು, ಅವರ ಜೊತೆ ಮಾತಾಡ್ತೇನೆ ಎಂದ ಅವರು, ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆವಿಚಾರದಲ್ಲಿ ಉತ್ತರ ಕರ್ನಾಟಕ ಕಡೆಗಣನೆ ವಿಚಾರವಾಗಿ ಮಾತನಾಡಿದ…

Read More