ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್ 2023ರ ಫೈನಲ್ ಹಣಾಹಣಿಯಲ್ಲಿ ಕಾಂಗರೂ ಪಡೆ ಟೀಂ ಇಂಡಿಯಾ ವಿರುದ್ಧ ಗೆದ್ದು ಸಂಭ್ರಮಿಸಿತು.
ಈ ವೇಳೆ ಟೂರ್ನಿಯ ಪೂರ ನಡೆದ ಪಂದ್ಯಗಳಲ್ಲಿ ಸತತ ಗೆಲುವಿನ ಮುಖೇನ ಅತ್ಯುತ್ತಮ ಪ್ರದರ್ಶನ ಕೊಟ್ಟು ಅಂತಿಮ ಪಂದ್ಯಕ್ಕೆ ಲಗ್ಗೆಯಿಡುವ ಮುನ್ನವೇ ಕ್ರಿಕೆಟ್ ಅಭಿಮಾನಿಗಳ ಮನವನ್ನು ಗೆದ್ದಿದ್ದ ಟೀಮ್ ಇಂಡಿಯಾ ಆಟಗಾರರು, ಸೋಲಿನ ಬಳಿಕ ಭಾರೀ ಬೇಸರವನ್ನು ಹೊರಹಾಕಿದರು. ಇದೀಗ ಈ ಕುರಿತಂತೆ ಟಿ-20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ತಮ್ಮ ಅನಿಸಿಕೆಯೊಂದನ್ನು ಹಂಚಿಕೊಂಡಿದ್ದಾರೆ.
VIDEO | "It's been 4-5 days since the end of the World Cup. All of us are disappointed. The support that we received from our fans was amazing, and I would like to say that this is a sport and it teaches us a lot. PM Modi also met us in the dressing room (following the World Cup… pic.twitter.com/zsVATSXL9V
— Press Trust of India (@PTI_News) November 25, 2023
‘ವಿಶ್ವಕಪ್ ಮುಗಿದು ಇಂದಿಗೆ 4-5 ದಿನಗಳೇ ಕಳೆದಿವೆ. ನಮಗೆಲ್ಲರಿಗೂ ಭಾರೀ ನಿರಾಸೆಯಾಗಿದೆ. ನಮ್ಮ ಅಭಿಮಾನಿಗಳಿಂದ ನಮಗೆ ಅದ್ಭುತವಾದ ಬೆಂಬಲ ಸಿಕ್ಕಿದೆ ಮತ್ತು ಇದು ಒಂದು ಕ್ರೀಡೆಯಾಗಿದೆ’ ಎಂದು ಹೇಳಿದರು.
ಇದು ನಮಗೆ ಹೆಚ್ಚು ಕಲಿಸುತ್ತದೆ ಎಂದ ಸೂರ್ಯ, ‘ಆಸ್ಟ್ರೇಲಿಯಾ ವಿರುದ್ಧ ಫೈನಲ್ ಪಂದ್ಯದ ನಂತರ ಪ್ರಧಾನಿ ಮೋದಿಯವರು ಡ್ರೆಸ್ಸಿಂಗ್ ರೂಮ್ಗೆ ಆಗಮಿಸಿ ನಮ್ಮನ್ನು ಭೇಟಿ ಮಾಡಿ, ಇದೊಂದು ಕ್ರೀಡೆ, ಈ ರೀತಿ ಆಗುವುದು ಸಾಮಾನ್ಯ ಬೇಸರವಾಗದಿರಿ ಎಂದು ಹೇಳುವ ಮೂಲಕ ನಮ್ಮನ್ನು ಮತ್ತಷ್ಟು ಪ್ರೇರೇಪಿಸಿದರು’ ಎಂದು ಫೈನಲ್ ಪಂದ್ಯದ ಬಳಿಕ ನಡೆದ ಘಟನೆಯನ್ನು ಮೆಲುಕು ಹಾಕಿ ಸೂರ್ಯ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.