ಕಲಬುರಗಿ: ಬರೋಬ್ಬರಿ 8 ವರ್ಷಗಳ ನಂತ್ರ ಬಿಸಿಲೂರು ಕಲಬುರಗಿಯಲ್ಲಿ ನಡೆಯುತ್ತಿದೆ ITF ಟೆನ್ನಿಸ್ ಪಂದ್ಯಾವಳಿ..ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಪಂದ್ಯಾವಳಿ ಶುರುವಾಯಿತು.ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ತಿಪ್ಪಣ್ಣಪ್ಪ ಕಮಕನೂರ್ DC ಫೌಜಿಯಾ ತರುನಮ್ ಆಕಾಶಕ್ಕೆ ಬಲೂನ್ ಹಾರಿ ಬಿಡೋದರ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದ್ರು. ಈಗಾಗಲೇ ರಾಂಕಿಂಗ್ ಮುಖಾಂತರ 20 ಆಟಗಾರರು ಕರ್ನಾಟಕದ ಇಬ್ಬರು ಸೇರಿ ನಾಲ್ವರು ವೈಲ್ಡ್ ಕಾರ್ಡ್ ಎಂಟ್ರಿ ಹಾಗು 8 ಜನ ಅರ್ಹತಾ ಪಂದ್ಯಗಳಲ್ಲಿ ಜಯಗಳಿಸುವ ಆಟಗಾರರು ಆಡಲಿದ್ದಾರೆ. ಉಳಿದಂತೆ ಜಪಾನ್ ವಿಯೆಟ್ನಾಂ ಕೊರಿಯಾ ಆಸ್ಟ್ರೇಲಿಯ ಅಮೆರಿಕಾ ಆಟಗಾರರು ಸಿಂಗಲ್ಸ್ ದಲ್ಲಿ ಆಡಲಿದ್ದಾರೆ. ಟೂರ್ನಿ ಗೆಲ್ಲುವ ಆಟಗಾರ 3600 ಅಮೇರಿಕನ್ ಡಾಲರ್ ಪಡೆಯಲಿದ್ದಾರೆ..
Author: AIN Author
ಹುಬ್ಬಳ್ಳಿ: ಪರಿಸರ ರಕ್ಷಣೆಗಾಗಿ ಎಲೆಕ್ಟ್ರಿಕಲ್ ವಾಹನಗಳನ್ನು ತಯಾರಿಸಿದ್ದಾರೆ. ಆದ್ರೆ ಅವುಗಳು ಪದೇ ಪದೇ ತೊಂದ್ರೆಗೆ ಬರುತ್ತಿದ್ದು, ಓಲಾ ಎಲೆಕ್ಟ್ರಿಕಲ್ ಬೈಕ್ ಖರೀದಿಸಿದ ಮಾಲೀಕರು ಪರದಾಡುತ್ತಿದ್ದಾರೆ. ಹೌದು,,, ಓಲಾ ಎಲೆಕ್ಟ್ರಿಕಲ್ ಬೈಕ್ ನಿಂದಾಗಿ ದಿನನಿತ್ಯ ಸಂಕಷ್ಟಕ್ಕೆ ಸಿಲುಕುತ್ತಿರುವ ಸವಾರರು, ಯಾಕಪ್ಪ ಈ ಬೈಕ್ ತಗೊಂಡೆ ಎನ್ನುವಂತಾಗಿದೆ ಖರೀದಿ ಮಾಡಿದವರ ಸ್ಥಿತಿ. ದಿನೆ ದಿನೆ ಓಲಾ ಕಂಪನಿಯ ದ್ವಿಚಕ್ರ ವಾಹನಗಳಲ್ಲಿ ದೋಷಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ, ಓಲಾ ಎಲೆಕ್ಟ್ರಿಕಲ್ ಬೈಕ್ ಖರೀದಿ ಮಾಡಿದ ಗ್ರಾಹಕರು, ಶೂರೂಮ್ ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಓಲಾ ಕಂಪನಿಯ ಎಲೆಕ್ಟ್ರಿಕಲ್ ಬೈಕ್‌ಗಳು ಏಕಾಏಕಿ ರಸ್ತೆ ಮಧ್ಯದಲ್ಲೇ ಬಂದ್ ಬೀಳುತ್ತಿವಂತೆ. ಬೈಕ್ ಖರೀದಿ ಮಾಡಿದಾಗಿಂದ ಪ್ರತಿದಿನ ಶೋರೋಂ ಗೆ ತೆಗೆದುಕೊಂಡು ಹೋಗುವ ಅನಿವಾರ್ಯತೆ ಬಂದಿದೆ. ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದ ಎದುರಿರುವ ಓಲಾ ಕಂಪನಿ ಶೋರೂಂಗೆ ಬಂದ ಗ್ರಾಹಕರು. ಎಷ್ಟೇ ಬಾರಿ ರಿಪೇರಿ ಮಾಡಿದರೂ ಮತ್ತೆ ಮತ್ತೆ ಬೈಕ್ ನಲ್ಲಿ ದೋಷ ಕಂಡು ಬರುತ್ತಿದೆ. ಎಲ್ಲಾ ಕೆಲಸ…
ಜಗತ್ತಿನಲ್ಲಿ ಇಂದು ಅತಿ ಹೆಚ್ಚು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಅಗ್ರಸ್ಥಾನದಲ್ಲಿದೆ. ಹೃದಯದ ಆರೋಗ್ಯದ ಬಗೆಗಿನ ಸಿಮೀತ ಜ್ಞಾನವು ಹೃದಯ ಸಂಬಂಧಿ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಿರಬಹುದು ಎಂಬುದು ತಜ್ಞರ ಅಭಿಪ್ರಾಯ. ಜಗತ್ತಿನಲ್ಲಿ 18 ಲಕ್ಷಕ್ಕೂ ಅಧಿಕ ಮಂದಿ ಪ್ರತಿ ವರ್ಷ ಹೃದಯ ಸಂಬಂಧೀ ಸಮಸ್ಯೆಗಳಿಂದ ಮೃತಪಡುತ್ತಿದ್ದಾರೆ ಎಂದು ವರದಿಯೊಂದು ಹೇಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ಯುವಜನತೆ ಮತ್ತು ಮಧ್ಯವಯಸ್ಸಿನವರು ಹೆಚ್ಚಾಗಿ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಹಿರಿಯ ವೈದ್ಯರು ವಿವರಣೆ ನೀಡಿದ್ದು ಹೀಗೆ: ಯುವಜನರು ಏಕೆ ಹೃದಯಾಘಾತದಿಂದ ಬಳಲುತ್ತಿದ್ದಾರೆ ಆಧುನಿಕ ಜೀವನಶೈಲಿಯ ಅಂಶಗಳು ಯುವಜನರಲ್ಲಿ ಹೃದಯಾಘಾತದ ಹೆಚ್ಚಳದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಸಂಸ್ಕರಿಸಿದ ಆಹಾರಗಳಲ್ಲಿ ಹೆಚ್ಚು ಅನಾರೋಗ್ಯಕರ ಆಹಾರಗಳು, ಸಕ್ಕರೆ ಮತ್ತು ಕೊಬ್ಬಿನ ಆಹಾರಗಳ ಅತಿಯಾದ ಸೇವನೆ, ಕಡಿಮೆ ದೈಹಿಕ ಚಟುವಟಿಕೆಯೊಂದಿಗೆ ಜಡ ಜೀವನಶೈಲಿ, ಒತ್ತಡ, ನಿದ್ರೆಯ ಕೊರತೆ, ಧೂಮಪಾನ ಮತ್ತು ಮದ್ಯಪಾನವು ಹೃದ್ರೋಗಕ್ಕೆ ಪ್ರಮುಖ ಕಾರಣವಾಗುತ್ತದೆ. ಈ ಅಪಾಯಗಳನ್ನು ತಗ್ಗಿಸಲು ಆರಂಭಿಕ ಪತ್ತೆ, ಆರೋಗ್ಯಕರ ಅಭ್ಯಾಸಗಳ ಶಿಕ್ಷಣ…
ಚಾಮರಾಜನಗರ: ಅಂತೂ ಇಂತೂ ಕಾಡಂಚಿನ ಮಕ್ಕಳಿಗೆ ಸಾರಿಗೆ ವ್ಯವಸ್ಥೆಯಾಗಿದೆ. ಹೌದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರಬೆಟ್ಟದ ಕಾಡಂಚಿನ ಜನರಿಗೆ ಮಲೆಮಹದೇಶ್ವರಬೆಟ್ಟ ಅಭಿವೃದ್ದಿ ಪ್ರಾಧಿಕಾರದಿಂದ ಜನವನ ವಾಹನ ಸೇವೆ ಮತ್ತೆ ಆರಂಭವಾಗಿದೆ. ಜನವನ ಈ ಹಿಂದೆ ಪ್ರಾರಂಭವಾಗಿತ್ತು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ಥಗಿತಗೊಂಡಿತ್ತು. ಆದ್ದರಿಂದ ಹಲವು ದಿನಗಳಿಂದ ವಾಹನದ ವ್ಯವಸ್ಥೆ ಇಲ್ಲದೆ ಕಾಡಂಚಿನ ಮಕ್ಕಳು ಶಾಲೆಗೆ ತೆರಳಲು ಪರದಾಡ್ತಾ ಇದ್ರು. ಮಕ್ಕಳು ಸೇರಿದಂತೆ ವೃದ್ದರಿಗೆ ಸಂಚರಿಸಲು ವಾಹನದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ರು. ಅದರಲ್ಲೂ ಅನಾರೋಗ್ಯಕ್ಕೆ ಒಳಗಾದ್ರೆ ಜನರ ಪಾಡು ಹೇಳತೀರದಾಗಿತ್ತು. ಹಾಗಾಗಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿರವರ ವಿಶೇಷ ಕಾಳಜಿಯಿಂದ ಜನವನ ಸಾರಿಗೆ ಮತ್ತೆ ಪ್ರಾರಂಭವಾಗಿದೆ. ಖುದ್ದು ಸರಸ್ವತಿರವರು ಶಾಲಾ ಮಕ್ಕಳಿಗೆ ಸಿಹಿ ಹಂಚಿ ಇಂಡಿಗನತ್ತ ಕಡೆಗೆ ಶಾಲಾ ಮಕ್ಕಳನ್ನು ಕರೆದೊಯ್ದು ಸುರಕ್ಷತೆಯಿಂದ ಪ್ರಯಾಣಿಸಲು ಮಕ್ಕಳಿಗೆ ತಿಳಿಹೇಳಿ ಶುಭ ಕೋರಿದರು.
ಸೂರ್ಯೋದಯ: 06.25 AM, ಸೂರ್ಯಾಸ್ತ : 05.51 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಕಾರ್ತೀಕ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ ಶರತ್ ಋತು, ತಿಥಿ: ಇವತ್ತು ಬಿದಿಗೆ 01:56 PM ತನಕ ನಂತರ ತದಿಗೆ ನಕ್ಷತ್ರ: ಇವತ್ತು ಮೃಗಶಿರ 01:59 PM ತನಕ ನಂತರ ಆರ್ದ್ರಾ ಯೋಗ: ಇವತ್ತು ಸಾಧ್ಯ 08:55 PM ತನಕ ನಂತರ ಶುಭ ಕರಣ: ಇವತ್ತು ತೈತಲೆ 01:56 AM ತನಕ ನಂತರ ಗರಜ 01:56 PM ತನಕ ನಂತರ ವಣಿಜ ರಾಹು ಕಾಲ: 12:00 ನಿಂದ 01:30 ವರೆಗೂ ಯಮಗಂಡ: 07:30 ನಿಂದ 09:00 ವರೆಗೂ ಗುಳಿಕ ಕಾಲ: 10:30 ನಿಂದ 12:00 ವರೆಗೂ ಅಮೃತಕಾಲ: 05.01 AM to 06.38 AM ಅಭಿಜಿತ್ ಮುಹುರ್ತ: 0: ನಿಂದ 0: ವರೆಗೂ ಮೇಷ ರಾಶಿ: ವೃತ್ತಿ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಯಒತ್ತಡದ ಮೇರೆಗೆ ಗ್ರಾಹಕರಿಂದ ಹಣ ಸ್ವೀಕರಿಸುವಿರಿ, ಯಾವುದೇ ಪರಿಸ್ಥಿತಿಯಲ್ಲೂ ಅವಸರದ ಮದುವೆ…
ಬೆಂಗಳೂರು:- ಜೈಲಿನಲ್ಲಿದ್ರೂ ರೌಡಿಯ ಬರ್ತಡೆ ಸೆಲೆಬ್ರೆಷನ್ ಮಾತ್ರ ಜೋರಾಗಿದೆ. U Boss ಅಂತಾ ಕೇಕ್ ಮಾಡಿಸಿ ಉಮೇಶನ ಸಹಚರರಿಂದ ಸಂಭ್ರಮ ಜೋರಾಗಿದೆ. ಉಗ್ರಂ ಸಿನಿಮಾದ ಡೈಲಾಗ್ , ಸಾಂಗ್ ಹಾಕಿ ಹವಾ ಕ್ರಿಯೆಟ್ ಮಾಡಿದ್ದಾರೆ. ಪೀಣ್ಯದ ಉಮೇಶನ ಏರಿಯಾದಲ್ಲಿ ಅಕ್ಟೋಬರ್ ನಲ್ಲಿ ಬರ್ತಡೆ ಸೆಲೆಬ್ರೆಷನ್ ನಡೆದಿದೆ. ರೌಡಿ ಆನಂದನ ಕೊಲೆ ಕೇಸಲ್ಲಿ ರೌಡಿ ಉಮೇಶ ಜೈಲಿಗೆ ಹೋಗಿದ್ದಾನೆ. ಜೈಲಿನ ಒಳಗೇ ಉಮೇಶ ಬರ್ತಡೆ ಆಚರಿಸಿಕೊಂಡಿದ್ದಾನೆ. ಬ್ಯಾರಕ್ ನಲ್ಲಿ ಬರ್ತಡೆ ಆಚರಿಸಿಕೊಂಡು ಹಾರ ಹಾಕಿಕೊಂಡು ಪೋಸ್ ಕೊಟ್ಟಿದ್ದ ಆಸಾಮಿ, ಸಿಸಿಬಿ ತನಿಖೆಯಲ್ಲಿ ಬದಲಾಗಿದ್ದ ಜೈಲಿನಲ್ಲಿನ ಬರ್ತಡೆ ವಿಚಾರ..ಇತ್ತ ಏರಿಯಾದಲ್ಲೂ ರೌಡಿ ಸಹಚರರಿಂದ ಸೆಲೆಬ್ರೆಷನ್ ನಡೆದಿದೆ. ಏರಿಯಾದಲ್ಲಿ ಕೇಕ್ ಕಟ್ ಮಾಡಿಸಿ ಹವಾ ಕ್ರಿಯೇಟ್ ಮಾಡಿದ್ದಾರೆ.
ಬಾಗಲಕೋಟೆ: ರಾಜ್ಯದಲ್ಲಿ ಬಿಜೆಪಿ ಬರ ಅದ್ಯಾಯನ ಮಾಡುತ್ತಾ ನಾಟಕ ಮಾಡುತ್ತಿದೆ ಈ ನಾಟಕ ಬಿಟ್ಟು ಕೇಂದ್ರದಿಂದ ಹಣವನ್ನುತರಲಿ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯಲ್ಲಿ ಸಚಿವ ಆರ್ ಬಿ ತಿಮ್ಮಾಪುರ ಮಾತನಾಡಿ, ಬಿಜೆಪಿಯವರಿಗೆ ಸುಳ್ಳು ಹೇಳೋದು ಬಿಟ್ಟರೆ ಬೇರೆ ಏನು ಗೊತ್ತಿಲ್ಲ ಇವರು ಸುಳ್ಳು ಹೇಳೋದನ್ನ ನೋಡಿ ನೋಡಿ ಜನ ಇವತ್ತು ತಕ್ಕ ಪಾಠ ಕಲಿಸಿದ್ದಾರೆ. ಪ್ರಕಾಶ ಕುಂಬಾರ ಬಾಗಲಕೋಟೆ
ಬಾಗಲಕೋಟೆ: ರಬಕವಿ ಬನಹಟ್ಟಿ ತಾಲೂಕಿನಲ್ಲಿ ಸುಮಾರು 30,300 ರಷ್ಟು ಕಬ್ಬು ಬೆಳೆದಿದೆ ಮಳೆ ಇಲ್ಲದ ಕಾರಣ 18,699 ರಷ್ಟು ಕಬ್ಬು ನಾಶವಾಗಿದೆ. ಜಮಖಂಡಿ ಮತ್ತು ರಬಕವಿ ಬನಹಟ್ಟಿಯಲ್ಲಿ ಈ ಎರಡು ತಾಲೂಕಿನಲ್ಲಿ ಬರ ಅಧ್ಯಾಯನ ನಡೆಸಿದ್ದೇವೆ ಕಳೆದ ಬಾರಿ ಎರಡು ಸಾವಿರ ಹೆಕ್ಟೇರ ಎಷ್ಟು ಅರಿಶಿಣ ಬೆಳೆದಿತ್ತು. ಮಳೆ ಇಲ್ಲದ ಕಾರಣ ಈ ಬಾರಿ 1000 ಹೆಕ್ಟೇರ ಎಷ್ಟು ಅರಿಶಿನ ಬೆಳೆದು ಬಾರಿ ಇಳುವರಿ ಕಂಡಿದೆ. ರಬಕವಿ ಬನಹಟ್ಟಿಯಲ್ಲಿ 612 ಬೋರ್ವೆಲ್ಗಳಿವೆ ಅದರಲ್ಲಿ 480 ಬೋವೆಲ್ಗಳಲ್ಲಿ ನೀರು ಇದೆ 112 ರಲ್ಲಿ ನೀರು ಬತ್ತಿ ಹೋಗಿದೆ ಸದ್ಯದ ಪರಿಸ್ಥಿತಿಯಲ್ಲಿ ರಬಕವಿ ಬನಹಟ್ಟಿ ರಾಮಪುರ ಹೊಸೂರಗಳಲ್ಲಿ ಸಾರ್ವಜನಿಕರ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಗರಸಭೆ ಸಭಾಭವನದಲ್ಲಿ ಅಧಿಕಾರಿಗಳ ಪರಿಶೀಲನ ಸಭೆ ನಡೆಯಿತು. ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರು ಮತ್ತು ಮೇವು ಯಾವುದೇ ತೊಂದರೆ ಇಲ್ಲ ಅದರಲ್ಲಿ ಈ ತಾಲೂಕಿನಲ್ಲಿ 40 ಗ್ರಾಮ ಗ್ರಾಮಗಳು ಬರ…
ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಚಿತ್ರದ ಪೂರ್ವ ಭಾಗವಾದ ‘ಕಾಂತಾರ – ಅಧ್ಯಾಯ 1’, ಸೋಮವಾರವಷ್ಟೇ ಅದ್ಧೂರಿಯಾಗಿ ಪ್ರಾರಂಭವಾಗಿತ್ತು. ಇಂದು ಚಿತ್ರವು ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಮಂಗಳವಾರ, ಗೋವಾದಲ್ಲಿ ಮುಕ್ತಾಯವಾದ 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಕನ್ನಡ ಚಿತ್ರವೊಂದು ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಶಸ್ತಿಗೆ ಭಾಜನವಾಗಿದೆ. ಈ ಬಾರಿ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ 15 ಚಿತ್ರಗಳು ಕಣದಲ್ಲಿದ್ದವು. ಈ ಪೈಕಿ ಭಾರತದಿಂದ ‘ಕಾಂತಾರ’ ಸೇರಿದಂತೆ ಒಟ್ಟು ಮೂರು ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಈ ವಿಭಾಗದಲ್ಲಿ “ಕಾಂತಾರ” ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿ ಪ್ರಮಾಣ ಪತ್ರ, ರಜತ ಮಯೂರ ಮತ್ತು 15 ಲಕ್ಷ ರೂ. ನಗದನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ರಿಷಭ್ ಶೆಟ್ಟಿ, ‘ಕಳೆದ ವರ್ಷ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಿತ್ರದ ಪ್ರಚಾರಕ್ಕಾಗಿ…
ಲೀಲಾವತಿಯವರಿಗೆ ಕೆಲವು ದಿನಗಳಿಂದ ಅನಾರೋಗ್ಯ ಉಂಟಾಗಿದೆ, ಆರೋಗ್ಯ ಪರಿಸ್ಥಿತಿ ಗಂಭೀರವಾಗಿ ಎಂಬ ವಿಷಯ ಚಿತ್ರರಂಗಕ್ಕೆ ಆತಂಕ ಉಂಟುಮಾಡ್ತು. ಆದರೆ ಈಗ ಸಮಾಧಾನಕರ ಅಪ್‌ಡೇಟ್ ಒಂದು ಬರ್ತಿಎದೆ. ಲೀಲಾವತಿಯವರ ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆಯಾಗಿದೆ. ಹಿರಿಯನಟಿ ಲೀಲಾವತಿ ವಹೋಸಹಜ ಖಾಯಿಲೆಯಿಂದ ಬಳಲುತ್ತಿದ್ದಾರೆ. ಮುಂಚಿನಂತೆ ಲೀಲಾವತಿಗೆ ಎದ್ದುಓಡಾಡೋಕೆ ಸಾಧ್ಯವಾಗ್ತಿಲ್ಲ. ಹಾಸಿಗೆಯಲ್ಲೇ ಲೀಲಾವತಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆಂಗಳೂರು ಹೊರವಲಯದ ಸೋಲದೇವನಹಳ್ಳಿಯ ತಮ್ಮ ನಿವಾಸದಲ್ಲಿ ಲೀಲಾವತಿ ಅನಾರೋಗ್ಯದಿಂದ ಬಳಲುತ್ತಿರೋ ದೃಶ್ಯಗಳು ಒಮ್ಮೆ ಮನಸ್ಸಿಗೆ ಚುರುಕ್ ಎನಿಸಿದೇ ಇರದು. ಚಿತ್ರರಂಗದಲ್ಲಿ ದೈತ್ಯಪ್ರತಿಭೆಯಾಗಿ ಮೆರೆದ ಲೀಲಾವತಿಯವರಿಗೆ 87 ವರ್ಷವಾಗಿದೆ. ಹಾಸಿಗೆ ಹಿಡಿದಿರೋ ಲೀಲಾವತಿಯವರನ್ನ ನೋಡಿ ಆರೋಗ್ಯ ವಿಚಾರಿಸಿಕೊಂಡು ಹೋಗೊಕೆ ಚಿತ್ರರಂಗದಿಂದ ನಟನಟಿಯರು ಹಾಗೂ ಗಣ್ಯರು ಬರ್ತಾವನೆ ಇದ್ದಾರೆ. ಇಂದು ಡಾ.ಶಿವರಾಜ್ ಕುಮಾರ್ ಭೇಟಿ ಮತ್ತೆ ಲೀಲಾವತಿ ಕುಟುಂಬಕ್ಕೊಂದು ಶಕ್ತಿ,ಉತ್ಸಾಹ ಕೊಟ್ಟಿದೆ. ಇಂದು ಶಿವಣ್ಣ ನೆಲಮಂಗಲದ ಸೋಲದೇವನಹಳ್ಳಿ ವಿನೋದ್‌ರಾಜ್ ನಿವಾಸಕ್ಕೆ ಭೇಟಿ ಕೊಟ್ರು. ವಿನೋದ್‌ರಾಜ್‌ರನ್ನ ನೋಡುತ್ತಿದ್ದಂತೆ ಪ್ರೀತಿಯಿಂದ ಹಗ್ ಮಾಡಿದ್ರು. ಲೀಲಾವತಿಯವರು ಮತ್ತೆ ಅನಾರೋಗ್ಯವನ್ನ ಗೆದ್ದು ಬರ್ತಾತರೆ ಎಂಬ ಆಶ್ವಾಸನೆ ತುಂಬಿದ್ರು. ಲೀಲಾವತಿಯವರನ್ನ…