ಬಾಗಲಕೋಟೆ: ರಬಕವಿ ಬನಹಟ್ಟಿ ತಾಲೂಕಿನಲ್ಲಿ ಸುಮಾರು 30,300 ರಷ್ಟು ಕಬ್ಬು ಬೆಳೆದಿದೆ ಮಳೆ ಇಲ್ಲದ ಕಾರಣ 18,699 ರಷ್ಟು ಕಬ್ಬು ನಾಶವಾಗಿದೆ. ಜಮಖಂಡಿ ಮತ್ತು ರಬಕವಿ ಬನಹಟ್ಟಿಯಲ್ಲಿ ಈ ಎರಡು ತಾಲೂಕಿನಲ್ಲಿ ಬರ ಅಧ್ಯಾಯನ ನಡೆಸಿದ್ದೇವೆ ಕಳೆದ ಬಾರಿ ಎರಡು ಸಾವಿರ ಹೆಕ್ಟೇರ ಎಷ್ಟು ಅರಿಶಿಣ ಬೆಳೆದಿತ್ತು. ಮಳೆ ಇಲ್ಲದ ಕಾರಣ ಈ ಬಾರಿ 1000 ಹೆಕ್ಟೇರ ಎಷ್ಟು ಅರಿಶಿನ ಬೆಳೆದು ಬಾರಿ ಇಳುವರಿ ಕಂಡಿದೆ.
ರಬಕವಿ ಬನಹಟ್ಟಿಯಲ್ಲಿ 612 ಬೋರ್ವೆಲ್ಗಳಿವೆ ಅದರಲ್ಲಿ 480 ಬೋವೆಲ್ಗಳಲ್ಲಿ ನೀರು ಇದೆ 112 ರಲ್ಲಿ ನೀರು ಬತ್ತಿ ಹೋಗಿದೆ ಸದ್ಯದ ಪರಿಸ್ಥಿತಿಯಲ್ಲಿ ರಬಕವಿ ಬನಹಟ್ಟಿ ರಾಮಪುರ ಹೊಸೂರಗಳಲ್ಲಿ ಸಾರ್ವಜನಿಕರ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಗರಸಭೆ ಸಭಾಭವನದಲ್ಲಿ ಅಧಿಕಾರಿಗಳ ಪರಿಶೀಲನ ಸಭೆ ನಡೆಯಿತು. ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರು ಮತ್ತು ಮೇವು ಯಾವುದೇ ತೊಂದರೆ ಇಲ್ಲ ಅದರಲ್ಲಿ ಈ ತಾಲೂಕಿನಲ್ಲಿ 40 ಗ್ರಾಮ ಗ್ರಾಮಗಳು ಬರ ಎದುರಿಸುತ್ತಿವೆ ಮತ್ತು ಕುಡಿಯುವ ನೀರಿಗೆ ಸ್ವಲ್ಪ ವ್ಯತ್ಯವಾಗಿದೆ ಅದನ್ನು ಕೂಡ ನಮ್ಮ ಅಧಿಕಾರಿಗಳು ಸರಿಪಡಿಸಲಿದ್ದಾರೆ ಎಂದು ಹೇಳಿದರು.
ಬರಗಾಲದಿಂದ ಹಾನಿಗೆ ಒಳಗಾದ ಭೂಮಿಗಳಿಗೆ ಕೇಂದ್ರ ಸರ್ಕಾರ ಎನ್ ಡಿ ಆರ್ ಎಫ್ ರೇಟ್ ನಿಗದಿಯಂತೆ ಶೀಘ್ರದಲ್ಲಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು. ಜಲಕ್ಷಾಮದಿಂದ ನೇರವಾಗಿ ಪರಿಣಾಮ ಎದುರಾಗುವುದು ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯ ಮೇಲೆ. ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಕುಡಿಯುವ ನೀರಿಗೆ ಅಗತ್ಯವಾದ ನೀರನ್ನು ಜಾಗೃತೆಯಿಂದ ಉಳಿಸಿಕೊಂಡು ಸಾರ್ವಜನಿಕರಿಗೆ ಪೂರೈಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸಮಸ್ಯಾತ್ಮಕ ಹಳ್ಳಿಗಳನ್ನು ತಕ್ಷಣ ಗುರುತಿಸಿ ಕುಡಿಯುವ ನೀರು ಒದಗಿಸುವ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಜಾನುವಾರುಗಳ ರಕ್ಷಣೆಗಾಗಿ ಅಗತ್ಯವಾದ ಸ್ಥಳಗಳಲ್ಲಿ ಗೋಶಾಲೆಗಳ ನಿರ್ಮಾಣ, ಮೇವು ಸಂಗ್ರಹ, ಹೊರರಾಜ್ಯಕ್ಕೆ ಮೇವು ಸಾಗಾಣಿಕೆಯನ್ನು ನಿಷೇಧಿಸುವುದು ಮೊದಲಾದ ಉಪಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.
ಒಂದು ಕಾಲದಲ್ಲಿ ಬರಬಿದ್ದಾಗ ಸಾಮೂಹಿಕ ಗುಳೇ ಹೋಗುವ ಪರಿಸ್ಥಿತಿ ಇತ್ತು. ಆಹಾರದ ಕೊರತೆಯಿಂದಾಗಿ ಈಗ ಯಾರೂ ಊರು ಬಿಟ್ಟು ಹೋಗುವ ಸ್ಥಿತಿ ಇಲ್ಲ. ಅನ್ನಭಾಗ್ಯ ಯೋಜನೆ, ಉದ್ಯೋಗ ಖಾತ್ರಿ ಯೋಜನೆಗಳಿವೆ. ಆ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು.
ಎಲ್ಲಕ್ಕಿಂತ ಮುಖ್ಯವಾಗಿ ಬರಗಾಲದಂತ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿಯಾದರೂ ರಾಜಕೀಯ ಮರೆತು ಪರಿಹಾರೋಪಾಯಗಳ ಕಡೆಗೆ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ. ಅಂಥ ಸಮಚಿತ್ತ, ಸಮಭಾವ, ಪರಿಪಕ್ವತೆ ನಮ್ಮ ರಾಜಕಾರಣಿಗಳಿಗೆ ಬರಲಿ, ಅಧಿಕಾರಶಾಹಿ ಇಂಥ ಸಂದರ್ಭದಲ್ಲಾದರೂ ಭ್ರಷ್ಟಾಚಾರಕ್ಕೆ ಸ್ವಯಂ ನಿಯಂತ್ರಣ ಹಾಕಿಕೊಂಡು ರಾಜ್ಯಕ್ಕೆ ಎದುರಾಗಿರುವ ಬರಗಾಲವೆಂಬ ಗಂಡಾಂತರವನ್ನು ಎದುರಿಸಲು ಸಜ್ಜಾಗಬೇಕಾಗಿದೆ.
ಅಧ್ಯಯನದ ಪರಿಣಾಮ ಬೆಳೆಹಾನಿಯಾದ ರೈತನಿಗೆ ವೈಜ್ಞಾನಿಕ ಪರಿಹಾರ, ಬಡವನ ತಟ್ಟೆಗೆ ರೊಟ್ಟಿ ಬೇಕಾಗಿದೆ ಹೊರತು ಬರಗಾಲದ ಹೆಸರಿನಲ್ಲಿ ನಡೆಯುವ ಪ್ರಚಾರದ ಭರಾಟೆಯಂತೂ ಖಂಡಿತ ಅಲ್ಲ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವರಿ ಸಚಿವ ಆರ್ ಬಿ ತಿಮ್ಮಾಪುರ್ ಹೇಳಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ