Author: AIN Author

ಬಿಗ್ ಬಾಸ್ ಮನೆಗೆ (Bigg Boss Kannada) ಇಬ್ಬರು ಹೊಸ ಅತಿಥಿಗಳ ಆಗಮನವಾಗಿದೆ. ಹಾಗಂತ ಇವರು ಅಲ್ಲಿಗೆ ಕೇವಲ ಗೆಸ್ಟ್ ಆಗಿ ಹೋಗಿಲ್ಲ. ವೈಲ್ಡ್ ಕಾರ್ಡ್ (Wild Card) ಎಂಟ್ರಿ ಮೂಲಕ ಕಂಟೆಸ್ಟೆಂಟ್ ಆಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಅವರು ಗ್ರ್ಯಾಂಡ್ ಎಂಟ್ರಿ ಸಖತ್ ಕ್ರೇಜ್ ಕ್ರಿಯೇಟ್ ಮಾಡಲಾಗಿದೆ. ಒಂದು ಹುಡುಗ ಮತ್ತು ಒಂದು ಹುಡುಗಿಯನ್ನು ಇಂದು ಬಿಗ್ ಬಾಸ್ ಮನೆಗೆ ಕಳುಹಿಸಲಾಗಿದ್ದು, ಮೊದ ಮೊದಲು ಆ ಹುಡುಗಿ ಸಾನ್ಯಾ ಐಯ್ಯರ್ ಇರಬಹುದಾ ಎಂಬ ಅನುಮಾನ ವ್ಯಕ್ತವಾಗಿತ್ತು. ಆನಂತರ ಅಸಲಿ ಹುಡುಗಿಯ ಹೆಸರು ಹೊರ ಬಿದ್ದಿದೆ. ಮಾಡೆಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ, ಬಿಕಿನಿ ಬಾಲೆ ಎಂದೇ ಖ್ಯಾತರಾಗಿರುವ ಪವಿ ಪೂವಪ್ಪ ಈ ಬಾರಿ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಪವಿ ಪೂವಪ್ಪ (Pavi Poovappa) ಹೆಸರು ಕೇಳುತ್ತಿದ್ದಂತೆಯೇ ಅನೇಕ ನೆಟ್ಟಿಗರು ಆ ಹೆಸರಿಗಾಗಿ ಹುಡುಕಾಡಿದ್ದಾರೆ. ಹುಡುಕಿದವರಿಗೆಲ್ಲ ಸಿಕ್ಕಿದ್ದು, ರಾಶಿ ರಾಶಿ ಹಾಟ್ ಫೋಟೋಗಳು. ಬಿಕಿನಿ ಶೂಟ್ ಗಳು. ಹೌದು,…

Read More

ಕಳೆದ ವರ್ಷ ಬಿಡುಗಡೆಯಾಗಿ  ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುವುದರ ಜೊತೆಗೆ ದೊಡ್ಡ ಯಶಸ್ಸು ಕಂಡ ‘ಕಾಂತಾರ’ ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್, ಈಗ ಇನ್ನೊಂದು ಅಂಥದ್ದೇ ಪ್ರಯತ್ನದೊಂದಿಗೆ ವಾಪಸಾಗುತ್ತಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಮಹತ್ವಾಕಾಂಕ್ಷೆಯ ಮತ್ತು ಬಹುನಿರೀಕ್ಷಿತ ಚಿತ್ರವಾದ ‘ಕಾಂತಾರ – ಅಧ್ಯಾಯ 1’ ರ (Kantara Chapter 1) ಮೊದಲ ನೋಟ ಬಿಡುಗಡೆಯಾಗಿದ್ದು, ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದೆ.  ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರು ವಿಶ್ಲೇಷಿಸಿದ್ದಾರೆ ಕಾಂತಾರ’ ಜಗತ್ತನ್ನು ಪರಿಚಯಿಸುವ ಈ ಟೀಸರ್ ನಲ್ಲಿ ರಿಷಬ್ ಶೆಟ್ಟಿ (Rishabh Shetty) ಅವರ ಪಾತ್ರ ಮತ್ತು ವೇಷ ಗಮನ ಸೆಳೆಯುತ್ತದೆ. ಮೊದಲ ಭಾಗದ ಆ ಆರ್ಭಟ ಇಲ್ಲೂ ಮರುಕಳಿಸಿದ್ದು, ಈ ಮೂಲಕ ಹೊಸದೊಂದು ದಂತಕಥೆಯ ಸೃಷ್ಟಿಗೆ ಮುನ್ನುಡಿ ಬರೆದಿದೆ. ಅಷ್ಟೇ ಅಲ್ಲ, ರಿಷಭ್ ಶೆಟ್ಟಿ ಅವರ ಪಾತ್ರ ವೀಕ್ಷಕರಲ್ಲಿ ಹೊಸದೊಂದು ಕೌತುಕವನ್ನು ಹುಟ್ಟುಹಾಕಿದೆ. ಮೊದಲ ಭಾಗದ ಯಶಸ್ಸಿಗೆ ಕಾರಣವಾಗಿದ್ದ ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಸಂಗೀತವು ಈ ಟೀಸರ್ ಮೂಲಕ ವಾಪಸ್ಸಾಗಿದೆ. ಈ…

Read More

ತಮಿಳಿನ ಖ್ಯಾತ ಖಳನಟ ಮನ್ಸೂರ್ ಅಲಿಖಾನ್ ಮತ್ತೆ ಕಲಾವಿದರ ವಿರುದ್ಧ ಸಿಡಿದೆದ್ದಿದ್ದಾರೆ. ದಕ್ಷಿಣದ ಹೆಸರಾಂತ ತಾರೆ ತ್ರಿಷಾ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದ ಮನ್ಸೂರ್ ಮೇಲೆ ಕಲಾವಿದರು ಮತ್ತು ತಂತ್ರಜ್ಞರು ಮುಗಿ ಬಿದ್ದಿದ್ದರು. ಅದರಲ್ಲೂ ಖ್ಯಾತ ನಟ ಚಿರಂಜೀವಿ (Chiranjeevi), ತ್ರಿಷಾ ಮತ್ತು ಖುಷ್ಬೂ (Khushboo) ಪ್ರತಿಕ್ರಿಯೆ ನೀಡಿದ್ದರು. ಮನ್ಸೂರ್ ವಿರುದ್ಧ ದೂರು ಕೂಡ ನೀಡಲಾಗಿತ್ತು. ಆ ನಂತರ ಮನ್ಸೂರ್ ಕ್ಷಮೆ ಕೂಡ ಕೇಳಿದ್ದರು. ಅಲ್ಲಿಗೆ ಪ್ರಕರಣ ಸುಖಾಂತ್ಯವಾಗಿದೆ ಎಂದು ನಂಬಲಾಗಿತ್ತು. ಆದರೆ, ಮನ್ಸೂರ್ ಅಲಿಖಾನ್ ಮತ್ತೆ ಆ ಮೂವರು ಕಲಾವಿದರ ವಿರುದ್ಧ ಸಿಡಿದೆದ್ದಿದ್ದಾರೆ. ತಮ್ಮ ಮೇಲೆ ಸಲ್ಲದ ಆರೋಪ ಮಾಡಿರುವ ಚಿರಂಜೀವಿ, ತ್ರಿಷಾ ಮತ್ತು ಖುಷ್ಬೂ ವಿರುದ್ಧ ಮಾನನಷ್ಟ ಮೊಕದ್ದಮೆ (Defamation Suit) ಹೂಡುವುದಾಗಿ ಅವರು ತಿಳಿಸಿದ್ದಾರೆ. ತ್ರಿಷಾಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದ ಮನ್ಸೂರ್ ಅಲಿ ಖಾನ್ ಮೇಲೆ ಲೈಂಗಿಕ ಕಿರುಕುಳ ದೂರು ದಾಖಲಾಗಿತ್ತು. ಚೆನ್ನೈನ ಥೌ‍ಸಂಡ್ ಲೈಟ್ಸ್ ಆಲ್ ವುಮೆನ್ ಪೊಲೀಸ್ ಠಾಣೆಗೆ ಬಂದು ಹಾಜರಾಗುವಂತೆ ನಟನಿಗೆ ನೋಟಿಸ್ ನೀಡಲಾಗಿತ್ತು.…

Read More

ತಂತ್ರಜ್ಞಾನ ದುರ್ಬಳಕೆಯಿಂದ ರಶ್ಮಿಕಾ ಮಂದಣ್ಣ (Rashmika Mandanna) ಡೀಪ್‌ಫೇಕ್ (Deepafake) ವಿಡಿಯೋ ಸಖತ್ ವೈರಲ್ ಆಗಿತ್ತು. ಇದೀಗ ಆಲಿಯಾ ಭಟ್‌ಗೂ ಅದೇ ಕಂಟಕ ಎದುರಾಗಿದೆ. ಬೇರೆ ಯಾರದ್ದೋ ಮಹಿಳೆಯ ದೇಹಕ್ಕೆ ಆಲಿಯಾ ಮುಖವನ್ನ ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ ಡೀಪ್‌ಫೇಕ್ ವಿಡಿಯೋ ವೈರಲ್ ಆದ ಬೆನ್ನಲೇ ಸೈಬರ್ ಕ್ರೈಂ ತಂಡ ಕಠಿಣ ಕ್ರಮ ಕೈಗೊಂಡರೂ ಕೂಡ ಮತ್ತೆ ಕಿಡಿಗೇಡಿಗಳಿಂದ ಕಾಟ ಶುರುವಾಗಿದೆ. ಈ ಸೋಷಿಯಲ್ ಮೀಡಿಯಾದಲ್ಲಿ ಅರೆ ಬರೆ ಬಟ್ಟೆಯಲ್ಲಿ ಸಖತ್ ಹಾಟ್ ಕಾಣಿಸಿಕೊಂಡಿರುವ ಯುವತಿಯ ದೇಹಕ್ಕೆ ಆಲಿಯಾ (Aliaa Bhatt) ಮುಖ ಅಂಟಿಸಿ ವೈರಲ್ ಮಾಡಿದ್ದಾರೆ. ಈ ಹಿಂದೆಯೂ ಕೂಡ ರಶ್ಮಿಕಾ ಡೀಪ್‌ಫೇಕ್ ವಿಡಿಯೋ ವೈರಲ್ ಆದಾಗ ಅಮಿತಾಭ್ ಬಚ್ಚನ್ ಸೇರಿದಂತೆ ಹಲವರು ಕಲಾವಿದರು ರಶ್ಮಿಕಾ ಪರ ಧ್ವನಿಯೆತ್ತಿದ್ದರು. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕೆಂದು ಅನೇಕರು ಮನವಿ ಮಾಡಿದ್ದರು.

Read More

ಹುಬ್ಬಳ್ಳಿ: ರಾಜ್ಯ ಸರ್ಕಾರ ಜಾತಿ ಗಣತಿ‌ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಪಡೆಯಬೇಕು. ಅದರಲ್ಲಿ ಇರುವ ನ್ಯೂನತೆ ಹೊರಗಾಕುವ ಪ್ರಯತ್ನ ಮಾಡಬೇಕು. ಎಲ್ಲಾ ವರ್ಗದ ಪ್ರಮುಖರನ್ನು ಕರೆದು ಮಾತನಾಡುವ ಅವಶ್ಯಕತೆಯಿದೆ.  ಡಿಸಿಎಂ ಡಿಕೆಶಿ ಅವರು ಸಹಿ ಮಾಡಿದ್ದು ದೊಡ್ಡ ಅಪರಾಧ ಅಲ್ಲ.  ರಾಜ್ಯ ಬಿಜೆಪಿ ರಿಪೇರಿ ಮಾಡಲಾಗದಷ್ಟು ಪರಿಸ್ಥಿತಿ ದುಸ್ಥಿತಿ ತಲುಪಿದೆ. ಯಾರೇ ಅಧ್ಯಕ್ಷರಾದರು ಅದನ್ನು ರಿಪೇರಿ ಮಾಡಲಾಗದು ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. https://ainlivenews.com/visa-free-entry-for-indians-to-malaysia-from-now-on/ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅರವಿಂದ್ ಲಿಂಬಾವಳಿ, ಸೋಮಣ್ಣ ಸೇರಿದಂತೆ ಹಲವರು ಅಸಮಾಧಾನ ಧ್ವನಿ ಎತ್ತಿದ್ದಾರೆ. ಧ್ವನಿ ಎತ್ತಿದವರ ಮನೆಗೆ ಹೋಗಿ ಬಂದ್ರೆ ಎಲ್ಲಾ‌ ಸರಿ ಆಗಲ್ಲ.  ಬಿಜೆಪಿ ಕಾರ್ಯಕರ್ತರು ನನ್ನ ಬಳಿ ನೋವು ಹೊರ ಹಾಕುತ್ತಿದ್ದಾರೆ.  ನಮ್ಮದು ಲೀಡರ್ ಲೆಸ್ ಪಾರ್ಟಿ ಅಂತ ಅಳಲು ತೋಡಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಬಗ್ಗೆ  ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ. ಬಿಜೆಪಿ ಈಡಿ ಮತ್ತು ಐಟಿ ಮೂಲಕ ರಾಜಕೀಯ ಮಾಡುತ್ತಿದೆ.  ವಿಪಕ್ಷಗಳು ಇರಲೇ…

Read More

ಟಾಸ್ಕ್ ಆಡುತ್ತಿದ್ದಾಗ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಅವಘಡ ಸಂಭವಿಸಿದೆ. ಈ ಕಾರಣದಿಂದಾಗಿ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿರುವ ತನಿಷಾ ಕುಪ್ಪಂಡ (Tanisha Kuppanda) ಮನೆಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಟಾಸ್ಕ್ ಆಡುವಾಗ ಅವರಿಗೆ ಬಲವಾದ ಪೆಟ್ಟು ಬಿದ್ದಿದ್ದು, ಚಿಕಿತ್ಸೆಗಾಗಿ (Treatment) ಅವರನ್ನು ಮನೆಯಿಂದ ಕಳುಹಿಸಲಾಗಿದೆ ಎನ್ನುವ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಡ್ರೋನ್ ತಂಡದಲ್ಲಿ ಪವಿ, ತುಕಾಲಿ, ನಮ್ರತಾ, ವರ್ತೂರು, ಸಿರಿ, ಆಟ ಆಡಿದ್ರೆ, ಮೈಕಲ್ ಟೀಮ್‌ನಲ್ಲಿ ತನಿಷಾ, ವಿನಯ್, ಸ್ನೇಹಿತ್, ಸಂಗೀತಾ, ಅವಿನಾಶ್ ಶೆಟ್ಟಿ ತಂಡವಾಗಿ ರೂಪುಗೊಂಡಿದ್ದಾರೆ. ಎರಡು ತಂಡ ಟಾಸ್ಕ್ವೊಂದರಲ್ಲಿ ಆಟ ಆಡುವಾಗ ತನಿಷಾ ಕಾಲಿಗೆ ಪೆಟ್ಟಾಗಿದ್ದು, ತುಂಬಾ ನೋವಿನಿಂದ ಒದ್ದಾಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ. ಬಿಗ್ ಬಾಸ್ ಟೀಮ್ ಕಡೆಯಿಂದ ಬಂದು ತನಿಷಾ ಅವರನ್ನು ಚಿಕಿತ್ಸೆಗಾಗಿ ಹೊರ ಕರೆದುಕೊಂಡು ಹೋಗಿದ್ದಾರೆ. ಸಣ್ಣ ಪುಟ್ಟ ಏಟಾಗಿದ್ದರೆ ಆದಷ್ಟು ಬೇಗ ಬಿಗ್ ಬಾಸ್‌ಗೆ ಬರಲಿದ್ದಾರೆ. ಹೆಚ್ಚಿನ ಚಿಕಿತ್ಸೆ ಬೇಕಿದ್ರೆ ಮತ್ತೆ ಬಿಗ್ ಬಾಸ್‌ಗೆ ಬರೋದು…

Read More

ಈ ಹಿಂದೆ ನಿಶ್ಚಾತಾರ್ಥ ಮುರಿದು ಬಿದ್ದ ಕಾರಣದಿಂದಾಗಿ ಮದುವೆಯನ್ನೇ (Wedding) ಮರೆತಿದ್ದ ಪೂಜಾ ಗಾಂಧಿ (Pooja Gandhi), ಇದೀಗ ಎಲ್ಲ ಕಹಿ ಘಟನೆಗಳನ್ನು ಮರೆತು ಮತ್ತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ರಂಗದಿಂದಲೂ ದೂರವಿರುವ ಪೂಜಾ, ಕನ್ನಡ ಕಲಿಕೆಯ ಕಾರಣದಿಂದಾಗಿ ಸಖತ್ ಸುದ್ದಿಯಾಗಿದ್ದರು. ಇದೀಗ ಮದುವೆ ವಿಚಾರದಲ್ಲಿ ಮತ್ತೆ ಸುದ್ದಿಗೆ ಬಂದಿದ್ದಾರೆ. ಮಳೆ ಹುಡುಗಿ ಎಂದೇ ಖ್ಯಾತಿಯ ಆಗಿರುವ ಪೂಜಾ ಗಾಂಧಿ ಇಂದು ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಅವರ ಆಪ್ತರು ಹೇಳುವಂತೆ ಇಂದು ಉದ್ಯಮಿ ಜೊತೆ ಅವರು ಮಂತ್ರ ಮಾಂಗಲ್ಯ (Mantra Mangalya)ಮಾದರಿಯಲ್ಲಿ ಮದುವೆ ಆಗುತ್ತಿದ್ದಾರೆ ಎನ್ನಲಾಗಿತ್ತು. ಅದೀಗ ಎಲ್ಲವೂ ನಿಜವಾಗಿದೆ. ಸ್ವತಃ ಪೂಜಾ ಗಾಂಧಿಯವರೆ ಮಾಧ್ಯಮಗಳಿಗೆ ತಮ್ಮ ಮದುವೆ ಕುರಿತಾಗಿ ಪತ್ರ ಬರೆದಿದ್ದಾರೆ ಬೆಂಗಳೂರಿನ ಯಲಹಂಕದಲ್ಲಿ ಈ ಮದುವೆ ನಡೆಯುತ್ತಿದ್ದು, ಉದ್ಯಮಿ ಹಾಗೂ ಅವರಿಗೆ ಕನ್ನಡ ಕಲಿಸಿರುವ ವಿಜಯ್ ಘೋರ್ಪಡೆ (Vijay Ghorpade) ಎನ್ನುವವರ ಜೊತೆ ಪೂಜಾ ಹೊಸ ಬದುಕಿಗೆ ಕಾಲಿಡುತ್ತಿದ್ದಾರೆ. ವಿಜಯ್…

Read More

ಬಳ್ಳಾರಿ:- ಜಿಲ್ಲೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಬರ ಪರಿಶೀಲನೆ ಮಾಡಿದ್ದಾರೆ. ಜಿಲ್ಲೆಯ ಸಂಡೂರು ತಾಲ್ಲೂಕಿನ ಕೋಡಾಲು ಹಾಗೂ ರಾಜಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಬರ ಪರಿಶೀಲನೆ ಮಾಡಿದ್ದಾರೆ. ಹತ್ತಿ, ನವಣೆ ಮತ್ತು ಸಜ್ಜೆ ಜಮೀನುಗಳಿಗೆ ಸಚಿವರು ಭೇಟಿ ನೀಡಿದ್ದು, ಮಳೆ ಇಲ್ಲದೆ ಅನಾವೃಷ್ಠಿಯಿಂದ ಹಾಳಾಗಿರುವ ಬೆಳೆ ಹಾನಿ ಪರಿಶೀಲನೆ ಮಾಡಿದ್ದಾರೆ. ಸಂಡೂರು ತಾಲ್ಲೂಕಿನ ಕೋಡಾಲು ಗ್ರಾಮ ವ್ಯಾಪ್ತಿಯ ರೈತ ಮಾರೆಪ್ಪನ ನವಣೆ, ಹತ್ತಿ ಬೆಳೆ ವೀಕ್ಷಣೆ ಮಾಡಿದ್ದಾರೆ. ಇದೇ ವೇಳೆ ಬೆಳೆ ಹಾನಿ ಕುರಿತು ಅಧಿಕಾರಿಗಳು ಹಾಗೂ ರೈತರಿಂದ ಸಚಿವರು ಮಾಹಿತಿ ಪಡೆದಿದ್ದಾರೆ. ಫೂಟ್ಸ್ ಐಡಿಯಲ್ಲಿ ರೈತರು ತಮ್ಮ ಹೆಸರಿನಲ್ಲಿರುವ ಎಲ್ಲಾ ಜಮೀನನ್ನು ನೋಂದಣಿ ಮಾಡಿಸಿಕೊಳ್ಳಲು ಸಲಹೆ ನೀಡಿದ್ದಾರೆ. ಇದರಿಂದ ಬರ ಪರಿಹಾರ ನೀಡಲು ಅನುಕೂಲವಾಗಲಿದೆ. ಈಗಾಗಲೇ ರಾಜ್ಯದ ಬರ ಪರಿಸ್ಥಿತಿಯ ಕುರಿತು ಕೇಂದ್ರದ ಕೃಷಿ ಸಚಿವರ ಜೊತೆ ಸಭೆ ನಡೆಸಲಾಗಿದೆ. ಕೇಂದ್ರ ಸರ್ಕಾರಕ್ಕೆ ಇಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಈ ತಿಂಗಳ ಅಂತ್ಯದಲ್ಲಿ ಕೇಂದ್ರ ಸರ್ಕಾರವು ಬರ…

Read More

ಹಾವೇರಿ:- 536ನೇ ಕನಕ ಜಯಂತ್ಯೋತ್ಸವ ಹಿನ್ನೆಲೆ ಇಂದು CM ಕಾಗಿನಲೆಗೆ ಭೇಟಿ ಹಿನ್ನೆಲೆ ಶ್ರೀಕ್ಷೇತ್ರ ಕಾಗಿನಲೆ ಗ್ರಾಮದಲ್ಲಿ ಫುಲ್ ಟೈಟ್ ಸೆಕ್ಯೂರಿಟಿ ನೀಡಲಾಗಿದೆ. CM ಸಿದ್ದರಾಮಯ್ಯ ಅವರು, ಕನಕ ಜಯಂತ್ಯೋತ್ಸದ ಉದ್ಘಾಟನೆ ಮಾಡಲಿದ್ದಾರೆ. ಕನಕದಾಸರ ನೆಲದಲ್ಲಿ ಬೃಹತ್ ಕನಕ ವೇದಿಕೆ ಸಜ್ಜಾಗಿದೆ. ವೇದಿಕೆ ಮುಂಭಾಗದಲ್ಲಿ ಸಾವಿರಾರೂ ಜನರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಅದ್ದೂರಿ ಕನಕ ಜಯಂತ್ಯೋತ್ಸಕ್ಕೆ ಲಕ್ಷಾಂತರು ಭಕ್ತರು ಆಗಮಿಸೋ ಸಾಧ್ಯತೆ ಇದ್ದು, ಈ ಹಿನ್ನಲೆ ಅಹಿತಕರ ನಡೆಯದಂತೆ ಖಾಕಿ ಸರ್ಪಗಾವಲು ಮಾಡಲಾಗಿದೆ. ಜಿಲ್ಲಾಡಳಿತದಿಂದ 700 ಅಧೀಕ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.

Read More

ಮದ್ದೂರು:- ಆರ್.ಅಶೋಕ್ ಒಬ್ಬ ಬೋಗಸ್ ಮನುಷ್ಯ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ದ ಕೈ ಶಾಸಕ ಕದಲೂರು ಉದಯ್ ವಾಗ್ದಾಳಿ ಮಾಡಿದ್ದಾರೆ. ಮದ್ದೂರಿನಲ್ಲಿ ಮಾತನಾಡಿದ ಉದಯ್, ನಾನು ಹೊಸದಾಗಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ತಿಳಿದುಕೊಳ್ಳಬೇಕಾದದ್ದು ಬಹಳಷ್ಟು ಇದೆ. ಶಾಸಕನ ಕೆಲಸ ಏನೆಂದು ತಿಳಿದುಕೊಂಡು ಒಂದಷ್ಟು ಜನಗಳ ಸೇವೆ ಮಾಡೋಣಾ. ಆನಂತರ ಟಿಕಾಕಾರರಿಗೆ ಉತ್ತರಿಸೋಣ ಎಂದರು. ನಿಗಮ ಮಂಡಳಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಪೈಪೋಟಿ ವಿಚಾರವಾಗಿ ಮಾತನಾಡಿ, ನಮ್ಮಲ್ಲಿ ಯಾವುದೇ ರೀತಿಯಾದಂತಹ ಭಿನ್ನಾಭಿಪ್ರಾಯ ಇಲ್ಲ. ಡಿಕೆ ಶಿವಕುಮಾರ್ ಕೂಡ ನಮ್ಮ ನಾಯಕರೇ, ಸಿದ್ದರಾಮಯ್ಯ ಕೂಡ ನಮ್ಮ ಮುಖ್ಯಮಂತ್ರಿಗಳೇ. ಎಲ್ಲವನ್ನ ಸಮಾಧಾನವಾಗಿ ಸಮನಾಗಿ ಎಲ್ಲರಿಗೂ ಹಂಚುತ್ತಾರೆ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಹಿರಿಯತನ ಸೇವೆ ಆಧರಿಸಿ ನಿಗಮ ಮಂಡಳಿ ಸ್ಥಾನ ಕೊಡ್ತಾರೆ. ನಾನು ಯಾವುದೇ ನಿಗಮ ಮಂಡಳಿಯ ಆಕಾಂಕ್ಷಿಯಲ್ಲ. ನಾನು ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದರು. ಸಿಎಂ ಸಿದ್ದರಾಮಯ್ಯ ಜನತಾದರ್ಶನವನ್ನ ಆರ್.ಅಶೋಕ್ ಟೀಕಿಸಿದ ವಿಚಾರವಾಗಿ ಮಾತನಾಡಿ, ಅಶೋಕ್ ಒಬ್ಬ ಬೋಗಸ್…

Read More