ಹಾವೇರಿ:- 536ನೇ ಕನಕ ಜಯಂತ್ಯೋತ್ಸವ ಹಿನ್ನೆಲೆ ಇಂದು CM ಕಾಗಿನಲೆಗೆ ಭೇಟಿ ಹಿನ್ನೆಲೆ ಶ್ರೀಕ್ಷೇತ್ರ ಕಾಗಿನಲೆ ಗ್ರಾಮದಲ್ಲಿ ಫುಲ್ ಟೈಟ್ ಸೆಕ್ಯೂರಿಟಿ ನೀಡಲಾಗಿದೆ.
CM ಸಿದ್ದರಾಮಯ್ಯ ಅವರು, ಕನಕ ಜಯಂತ್ಯೋತ್ಸದ ಉದ್ಘಾಟನೆ ಮಾಡಲಿದ್ದಾರೆ. ಕನಕದಾಸರ ನೆಲದಲ್ಲಿ ಬೃಹತ್ ಕನಕ ವೇದಿಕೆ ಸಜ್ಜಾಗಿದೆ. ವೇದಿಕೆ ಮುಂಭಾಗದಲ್ಲಿ ಸಾವಿರಾರೂ ಜನರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಅದ್ದೂರಿ ಕನಕ ಜಯಂತ್ಯೋತ್ಸಕ್ಕೆ ಲಕ್ಷಾಂತರು ಭಕ್ತರು ಆಗಮಿಸೋ ಸಾಧ್ಯತೆ ಇದ್ದು, ಈ ಹಿನ್ನಲೆ ಅಹಿತಕರ ನಡೆಯದಂತೆ ಖಾಕಿ ಸರ್ಪಗಾವಲು ಮಾಡಲಾಗಿದೆ. ಜಿಲ್ಲಾಡಳಿತದಿಂದ 700 ಅಧೀಕ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.