ಬೆಂಗಳೂರು: ಸರ್ಕಾರದಿಂದ ಅರ್ಚಕರ ಕುಟುಂಬಗಳಿಗೆ ಸಿಹಿಸುದ್ದಿಯನ್ನು ನೀಡಿದೆ. ಮುಜರಾಯಿ ಇಲಾಖೆಯ ‘ಸಿ’ ಗ್ರೇಡ್ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವ ಅರ್ಚಕರು ಅನಾರೋಗ್ಯಪೀಡಿತರಾಗಿ ಸೇವೆ ಸಲ್ಲಿಸಲಾಗದಿದ್ದರೆ ಅವರ ಮಕ್ಕಳನ್ನೇ ಈ ಹುದ್ದೆಗೆ ನೇಮಕಾತಿ ಮಾಡಲು ಸರಕಾರ ಆದೇಶ ಹೊರಡಿಸಿದೆ. https://ainlivenews.com/262-new-ambulances-in-the-state-today/ ರಾಜ್ಯದಲ್ಲಿ 34 ಸಾವಿರಕ್ಕೂ ಅಧಿಕ ‘ಸಿ’ ಗ್ರೇಡ್ ದೇವಾಲಯಗಳಿವೆ. ಇಲ್ಲಿಈವರೆಗೆ ಪೂಜಾ ಕೈಂಕರ್ಯದಲ್ಲಿ ತೊಡಗಿದ್ದ ಅರ್ಚಕರು ನಿಧನರಾದರೆ ಮಾತ್ರ ಅಂಥವರ ಮಕ್ಕಳನ್ನು ಅನುಕಂಪದ ಆಧಾರದ ಮೇಲೆ ಅರ್ಚಕರ ಹುದ್ದೆಗೆ ನೇಮಕ ಮಾಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ನಿಧನರಾಗದಿದ್ದರೂ, ಅನಾರೋಗ್ಯಕ್ಕೆ ತುತ್ತಾದರೆ, ಇಲ್ಲವೇ ವಯೋಸಹಜ ಸಮಸ್ಯೆಗಳಿಂದ ಅರ್ಚಕ ವೃತ್ತಿ ಮಾಡಲಾಗದಿದ್ದರೆ ಅಂತಹವರ ಮಕ್ಕಳನ್ನು ದೇವಾಲಯಗಳಲ್ಲಿಅರ್ಚಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸರಕಾರ ಆದೇಶ ಹೊರಡಿಸಿದೆ.
Author: AIN Author
ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಎಸಿ ಕಚೇರಿ ಎಸ್‌ಡಿಸಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.ಪಹಣಿ ಪತ್ರ ಮಾಡಿಕೊಡಲು ಲಂಚಕ್ಕೆ ಕೈಯೊಡ್ದಿದ್ದ ಎಸ್ ಡಿಸಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ನಡೆದಿದೆ.ಮಂಜುನಾಥ್ ಅಂಗಡಿ ಲೋಕಾಯುಕ್ತ(Lokayukta) ಬಲೆಗೆ ಬಿದ್ದ ಬೈಲಹೊಂಗಲ ಉಪವಿಭಾಗ ಕಚೇರಿಯ ಎಸ್ ಡಿಸಿ(SDC),ರಾಮದುರ್ಗ ತಾಲೂಕಿನ ಚಿಕ್ಕೊಪ್ಪ ಎಸ್.ಕೆ. ಗ್ರಾಮದ ರವಿ ಅಜ್ಜಿ ಪಹಣಿ ಪತ್ರ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದರು. https://ainlivenews.com/residents-own-property-in-bangalore-heres-the-good-news/ ಪಹಣಿ ಪತ್ರದ ತಿದ್ದುಪಡಿಗೆ ಮಂಜುನಾಥ 60 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.ಈ ಸಂಬಂಧ ರವಿ ಅಜ್ಜಿ ಬೆಳಗಾವಿ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ,ಈ ವೇಳೆ ಮಂಜುನಾಥ್ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ SP ಹಣಮಂತರಾಯ, DYSP ಬಿ.ಎಸ್. ಪಾಟೀಲ ಮಾರ್ಗದರ್ಶನದಲ್ಲಿ PSI ಅನ್ನಪೂರ್ಣ ಹುಲಗೂರ ನೇತೃತ್ವದ ತಂಡ ದಾಳಿ ನಡೆಸಿತ್ತು.
ಬೆಂಗಳೂರು: ಲೋಕಾಯುಕ್ತರಿಗೆ ಆಸ್ತಿ ವಿವರ ಸಲ್ಲಿಸದ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ ಲೋಕಾಯುಕ್ತ ಜೂನ್ 30ರೊಳಗೆ ಪ್ರತಿ ವರ್ಷ ಎಲ್ಲ ಜನಪ್ರತಿನಿಧಿಗಳು ಆಸ್ತಿ ವಿವರ ಸಲ್ಲಿಸಬೇಕು 2022-23 ನೇ ಸಾಲಿನಲ್ಲಿ ಆಸ್ತಿ ವಿವರ ಸಲ್ಲಿಸದ ಶಾಸಕರ ಮಾಹಿತಿ ಪ್ರಕಟ ಪಡಿಸಿದ ಲೋಕಾಯುಕ್ತ ಕಳೆದ ಬಾರಿ ಸಚಿವರಾಗಿದ್ದ ಶ್ರೀರಾಮುಲು, ಕೆ.ಸಿ ನಾರಾಯಣಗೌಡ, ಎಸ್. ಅಂಗಾರ ಆಸ್ತಿ ವಿವರ ಸಲ್ಲಿಸದೇ ಲೋಪ ಈ ಬಾರಿ ರಹೀಂಖಾನ್, ಕೆ.ಎನ್ ರಾಜಣ್ಣ, ಜಮೀರ್ ಅಹಮ್ಮದ್ ಖಾನ್, ರಾಮಲಿಂಗ ರೆಡ್ಡಿ, ಕೆ.ಎಚ್ ಮುನಿಯಪ್ಪರಿಂದಲೂ ಆಸ್ತಿ ವಿವರ ಸಲ್ಲಿಸದೇ ಲೋಪ ಕಳೆದ ವಿಧಾನಸಭೆ ಅವಧಿಯ 81 ಮಂದಿ ಶಾಸಕರಿಂದ ಆಸ್ತಿ ವಿವರ ಸಲ್ಲಿಸದೇ ಲೋಪ ಈ ಬಾರಿಯ ವಿಧಾನಸಭೆ ಅವಧಿಯ 51 ಮಂದಿ ಶಾಸಕರಿಂದ ಆಸ್ತಿ ವಿವರ ಸಲ್ಲಿಕೆ ಆಗಿಲ್ಲ 21 ಮಂದಿ ವಿಧಾನ ಪರಿಷತ್ ಸದಸ್ಯರಿಂದಲೂ ಆಸ್ತಿ ವಿವರ ಸಲ್ಲಿಕೆ ಆಗಿಲ್ಲ ಜೂನ್ 30ರ ಬಳಿಕ ಆಸ್ತಿ ವಿವರ ಸಲ್ಲಿಕೆ ಮಾಡಿರುವ ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ…
ಬೆಂಗಳೂರು: ಹಸುಗೂಸುಗಳು ಮಾರಾಟ ಜಾಲದ ಬಂಧನ ಪ್ರಕರಣ ಸಿಸಿಬಿ ಪೊಲೀಸರಿಂದ ಎಂಟು ಆರೋಪಿಗಳ ತೀವ್ರ ವಿಚಾರಣೆ ನಡೆಯುತ್ತಿದ್ದು ಆರೋಪಿಗಳು ಭಯಾನಕ ಸ್ಪೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. ವಿಚಾರಣೆ ವೇಳೆ 6 ವರ್ಷಗಳಲ್ಲಿ 250ಕ್ಕೂ ಹೆಚ್ಚು ಮಕ್ಕಳ ಮಾರಾಟದ ಬಗ್ಗೆ ಬಾಯಿಬಿಟ್ಟಿರೋ ಆರೋಪಿಗಳು ಅದರಲ್ಲಿ ಕರ್ನಾಟಕದಲ್ಲಿ ಕೇವಲ 50-60 ಮಕ್ಕಳನ್ನು ಮಾರಾಟ ಮಾಡಿದ್ದು ಉಳಿದ ಮಕ್ಕಳನ್ನು ತಮಿಳುನಾಡಿನಲ್ಲಿ ಮಾರಾಟ https://ainlivenews.com/feticide-is-not-a-good-development-hd-kumaraswamy/ ಸದ್ಯ ಕರ್ನಾಟಕದಲ್ಲಿ ಮಾರಾಟ ಆಗಿರೋ ಮಕ್ಕಳ ಬಗ್ಗೆ ಮಾಹಿತಿ ಕಲೆಹಾಕ್ತಾ ಇರೋ ಸಿಸಿಬಿ ಹತ್ತು ಮಕ್ಕಳ ಬಗ್ಗೆ ಮಾತ್ರ ಸಿಸಿಬಿಗೆ ಮಾಹಿತಿ ಸಿಕ್ಕಿದ್ದು ಉಳಿದ ಮಕ್ಕಳನ್ನು ಯಾರಿಗೆ ಕೊಟ್ಟಿದ್ದಾರೆ ಅಂತ ತನಿಖೆ ಕರ್ನಾಟಕದ ಗ್ಯಾಂಗ್ ಲೀಡರ್ ಮಹಾಲಕ್ಷ್ಮೀ ಕಥೆಯೇ ಒಂದು ರೀತಿ ರೋಚಕವಾಗಿದ್ದು ಮನೆ ಕೆಲಸ ಮಾಡಿಕೊಂಡಿದ್ದಾಕೆ ಇವತ್ತು ಕೋಟ್ಯಾಧಿಪತಿ ಆಗಿದ್ದೇ ಆಶ್ಚರ್ಯ 2017 ರಿಂದಲೂ ಈ ದಂಧೆಯನ್ನು ಮಾಡ್ತಾ ಇರೋ ಮಹಾಲಕ್ಷ್ಮೀ ಬಾಡಿಗೆ ಮನೆಯಲ್ಲಿ ಇದ್ದಾಕೆ ಇವತ್ತು ಸ್ವಂತ ಮನೆ, ಕಾರು ಜೊತೆಗೆ ಮೈತುಂಬಾ ಚಿನ್ನಾಭರಣ ಮಾಡಿಸಿದ್ದಾಳೆ2015 ರಿಂದ 2017 ರವರೆಗೂ…
ಹಾಸನ: ಮದುವೆಯಾಗಲು ನಿರಾಕರಿಸಿದಳೆಂದು ದುರುಳರು ಶಾಲಾ ಶಿಕ್ಷಕಿಯನ್ನೇ ಅಪಹರಿಸಿರುವ ಘಟನೆ ಹಾಸನ ಜಿಲ್ಲೆಯ ಬಿಟ್ಟಗೌಡನಹಳ್ಳಿಯ ಬಳಿ ಇಂದು ಬೆಳಗ್ಗೆ ನಡೆದಿದೆ. ಅರ್ಪಿತಾ, ಅಪಹರಣಕ್ಕೊಳಗಾದ ಶಿಕ್ಷಕಿ. ಶಿಕ್ಷಕಿ ಕೆಲಸ ಮಾಡುತ್ತಿದ್ದ ಶಾಲೆ ಮುಂಭಾಗ ಅಪಹರಿಸಿರೋ ದುರುಳರು. ಇನ್ನೋವಾ ಕಾರಿನಲ್ಲಿ ಬಂದು ಅಪಹರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಿಕ್ಷಕಿ ಪ್ರತಿರೋಧ ತೋರಿದರೂ ಬಿಡದ ಕಿರಾತಕರು. ಕಳೆದ 15 ದಿನಗಳ ಹಿಂದೆ ಅರ್ಪಿತಾಳ ಮದುವೆ ಮಾಡಿಕೊಳ್ಳುವ ಪ್ರಸ್ತಾಪ ಮಾಡಲು ಮನೆಗೆ ಬಂದಿದ್ದ ರಾಮು ಎಂಬ ವ್ಯಕ್ತಿ ಮತ್ತವನ ಪೋಷಕರು. https://ainlivenews.com/residents-own-property-in-bangalore-heres-the-good-news/ ಇವರು ಅರ್ಪಿತಾ ಸಂಬಂಧಿ ಎಂದು ಹೇಳಲಾಗಿದೆ. ಮದುವೆ ಪ್ರಸ್ತಾಪ ಮಾಡಿದಾಗ, ಅರ್ಪಿತಾ ಹಾಗೂ ಮನೆಯವರು ಒಪ್ಪಿಗೆ ನೀಡಿಲ್ಲ. ಮದುವೆಗೆ ಒಪ್ಪಲಿಲ್ಲವೆಂದು ಅಪಹರಣಕ್ಕೆ ಸಂಚು ರೂಪಿಸಿದ್ದ ಕಿರಾತಕರು. ಇಂದು ಬೆಳಗ್ಗೆ ಎಂದಿನಂತೆ ಶಿಕ್ಷಕಿ ಅರ್ಪಿತಾ ಶಾಲೆಗೆ ಹೊರಟ ಸಂದರ್ಭದಲ್ಲಿ ಇನ್ನೋವಾ ಕಾರಿನಲ್ಲಿ ಬಂದ ದುರುಳರು. ಕಾರಿನಲ್ಲಿ ಅಪಹರಿಸಿದ್ದಾರೆ. ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು: ಪ್ರತಿಷ್ಠಿತ ಬ್ರಾಂಡ್ ಹೆಸರನ್ನ ನಕಲಿಸಿ ಬಟ್ಟೆ ಮಾರುತ್ತಿದ್ದ ಗೋಡೌನ್ ಮೇಲೆ ಬೆಳ್ಳಂ ಬೆಳಗ್ಗೆ ಸಿಸಿಬಿ ದಾಳಿ ನಡೆಸಿದೆ. ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ದಾಳಿ ವೇಳೆ ಬರೋಬ್ಬರಿ1.5ಕೋಟಿ ಮೌಲ್ಯದ ಬಟ್ಟೆಗಳು ಜಪ್ತಿ ಮಾಡಿರುವ ಸಿಸಿಬಿ ಟೀಂ. ಅರ್ಮನಿ, ಬರ್ಬರಿ, ಗ್ಯಾಂಟ್ ಸೇರಿದಂತೆ ಪ್ರತಿಷ್ಠಿತ ಬ್ರಾಂಡ್ ಗಳ ಬಟ್ಟೆ ಎಂದು ಅಕ್ರಮ ಮಾರಾಟ ಮಾಡುತ್ತಿದ್ದ ಟೀಂ ಪಟೆಲ್ ಎಕ್ಸ್ಪೋರ್ಟ್ ಹಾಗೂ ಆರ್ ಬಿ ಫ್ಯಾಷನ್ ಗೋಡೌನ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಬೇರೆ ಬೇರೆ ಕಡೆಯೂ ಇದೇ ರೀತಿ ಫೇಕ್ ಬ್ರಾಂಡ್ ಗೋಡೌನ್ ಹೊಂದಿರೋದು ಬೆಳಕಿಗೆ ಬಂದಿದ್ದು ಎಸ್ ಆರ್ ನಗರ, ಮಾಗಡಿ ರೋಡ್, ಬೇಗೂರು ಸೇರಿದಂತೆಹಲವು ಠಾಣಾ ವ್ಯಾಪ್ತಿಯಲ್ಲಿ ನಕಲಿ ಬ್ರಾಂಡ್ ಬಟ್ಟೆಯ ಗೋಡೌನ್ ಇರೋದು ಬೆಳಕಿಗೆ.. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿರೋ ಸಿಸಿಬಿ ಟೀಂ
ಬೆಂಗಳೂರು: ಅತ್ಯಾಧುನಿತ ತಂತ್ರ ಹೊಂದಿರೋ ಸುಮಾರು 262 ಹೊಸ ಆ್ಯಂಬುಲೆನ್ಸ್‌ಗಳು ಇಂದು ಆರೋಗ್ಯ ಇಲಾಖೆಗೆ ಸೇರ್ಪಡೆಯಾಗಲಿವೆ. https://ainlivenews.com/residents-own-property-in-bangalore-heres-the-good-news/ ಆಧುನಿಕ ತಂತ್ರಜ್ಞಾನ ಹೊಂದಿರುವ ಆ್ಯಂಬುಲೆನ್ಸ್‌ಗಳನ್ನ ಸಿಎಂ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಜೊತೆಗೆ 120 ಕೋಟಿ ವೆಚ್ಚದ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ಆರೋಗ್ಯ ಇಲಾಖೆ ಪಾಳಯ ಸೇರಿರುವ 157 ಬೇಸಿಕ್ ಲೈಫ್ ಸಪೋರ್ಟ್ 108 ಆಂಬ್ಯುಲೆನ್ಸ್‌ಗಳು. ಹೊಸ 262 ಆ್ಯಂಬುಲೆನ್ಸ್ ಸೇರ್ಪಡೆಯೊಂದಿಗೆ ರಾಜ್ಯದಲ್ಲಿ ಒಟ್ಟು 715 ಆ್ಯಂಬುಲೆನ್ಸ್‌ಗಳು ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಲಿವೆ. ಸದ್ಯ ಲೋಕಾರ್ಪಣೆ ಆಗಲು ವಿಧಾನಸೌಧದ ಮುಂಭಾಗದಲ್ಲಿ ಸಜ್ಜಾಗಿ ನಿಂತಿವೆ.
ಧಾರವಾಡ: ಬೆಳಗಾವಿ ಸುವರ್ಣಸೌಧದ ಪಕ್ಕ ಶಾಸಕರ ಭವನ ಕಟ್ಟಿಸುವ ಬದಲಿಗೆ ತಾಜ್‌ನಂತಹ ಹೋಟೆಲ್‌ಗೆ ಒಪ್ಪಂದದ ಮೇರೆಗೆ ಅನುಮತಿ ನೀಡಿದರೆ ಸೂಕ್ತವಾಗುತ್ತದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಸುವರ್ಣಸೌಧದ ಪಕ್ಕ 20 ಎಕರೆ ಜಮೀನು ಇದೆ. ಶಾಸಕರ ಭವನವನ್ನು ಅಲ್ಲಿಯೇ ಮಾಡಬೇಕು ಎಂಬ ಚರ್ಚೆ ನಡೆದಿದೆ. ಅಲ್ಲಿ ಶಾಸಕರ ಭವನ ಮಾಡಿದರೆ ಅಧಿವೇಶನ ಸಮಯ ಹೊರುತುಪಡಿಸಿ ಉಳಿದ ಸಮಯದಲ್ಲಿ ಅದು ಖಾಲಿ ಉಳಿಯುತ್ತದೆ. ಅದಕ್ಕಾಗಿ ತಾಜ್‌ನಂತಹ ದೊಡ್ಡ ಹೋಟೆಲ್‌ವರನ್ನು ಮಾತನಾಡಿಸಿ ಒಪ್ಪಂದದ ಮೇಲೆ ಅವರಿಗೆ ಕೊಡಬಹುದು. ಶಾಸಕರಿಗಾಗಿ ಅಲ್ಲಿ 10 ರೂಮ್‌ಗಳನ್ನು ಕಾಯಂ ಆಗಿ ಇಡಬೇಕು. ಉಳಿದ ರೂಮ್ ಅವರು ಉಪಯೋಗಿಸಬಹುದು. https://ainlivenews.com/residents-own-property-in-bangalore-heres-the-good-news/ ಅಧಿವೇಶನದ ವೇಳೆ ಮಾತ್ರ ಎಲ್ಲ ರೂಮ್‌ಗಳನ್ನು ಶಾಸಕರಿಗೆ ನೀಡುವ ಚರ್ಚೆ ಮಾಡಬೇಕು ಎಂದರು. ಸರ್ಕಾರದ ಮುಂದೆ ಈ ಪ್ರಸ್ತಾವನೆ ಇಟ್ಟಿದ್ದೇವೆ. ಸರ್ಕಾರ ಆ ಬಗ್ಗೆ ಕ್ರಮ ಕೈಗೊಳ್ಳಲಿ. ಅದನ್ನು ಮಾಡಿದರೆ ಒಳ್ಳೆಯದಾಗುತ್ತದೆ. ಅಧಿವೇಶನದ ಸಮಯದಲ್ಲಿ ವಸತಿಗಾಗಿಯೇ 4 ಕೋಟಿ ಖರ್ಚಾಗುತ್ತಿದೆ. ತಾಜ್ ನಂತಹ…
ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಜನತಾ ದರ್ಶನವನ್ನು ಜನಸ್ಪಂದನಾ ಎಂದಿದ್ದಾರೆ. ಸಿಎಂ ಅವರ ಜನ ಸ್ಪಂದನವನ್ನು ಅಭಿನಂದಿಸುತ್ತೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ಬರಲು ಹೇಳಿ ನಾಡಿನ ಜನತೆಯ ಸಮಸ್ಯೆ ಆಲಿಸಿದ್ದಾರೆ. ಈಗಲಾದರೂ ಇವರಿಗೆ ರಾಜ್ಯದ ಜನತೆಯ ಗ್ರೌಂಡ್ ರಿಯಾಲಿಟಿ ಅರ್ಥವಾಗಿದೆ ಎಂದುಕೊಂಡಿದ್ದೇನೆ. ವಿವಿಧ ಸಮಸ್ಯೆಗಳು ಜನಸ್ಪಂದನದಲ್ಲಿ ಅರ್ಥವಾಗಿರಬಹುದು. https://ainlivenews.com/residents-own-property-in-bangalore-heres-the-good-news/ ಒಬ್ಬ ಸಿಎಂ ಜನಸ್ಪಂದನೆ ಮಾಡುವುದನ್ನು ನಾನು ಅಭಿನಂದಿಸುತ್ತೇನೆ. ಈ ವಿಷಯದಲ್ಲಿ ನಾನು ಎಲ್ಲವನ್ನು ಟೀಕಿಸುವುದಿಲ್ಲ ಎಂದಿದ್ದಾರೆ. ಮುಂದಿನ 3 ತಿಂಗಳಲ್ಲಿ ಮತ್ತೆ ಜನಸ್ಪಂದನಾ ಮಾಡುತ್ತೇನೆ ಎಂದಿದ್ದಾರೆ. ಅಧಿಕಾರಿಗಳಿಗೆ 3 ತಿಂಗಳ ಗಡುವು ನೀಡಿದ್ದಾರೆ. ಈಗ ಅವರಿಗೆ ಅರ್ಥ ಆಗಿರಬಹುದು. ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು. ನಾನು ಜನತಾ ದರ್ಶನ ಮಾಡಿದಾಗ ಬೆಳಗ್ಗೆ 9 ರಿಂದ ರಾತ್ರಿ 1 ಗಂಟೆವರೆಗೆ ಮಾಡಿದ್ದೆ. ಅಂದು ಇದ್ದ ಸಮಸ್ಯೆಗಳು ಈಗಲೂ ಮುಂದುವರಿದಿವೆ ಎಂದು ತಿಳಿಸಿದರು.
ಬೆಂಗಳೂರು: ಈಗಾಗಲೇ ಮದುವೆ ಸೀಜನ್ಸ್ ಆರಂಭವಾಗಿದ್ದು, ಸಾಕಷ್ಟು ಮದುವೆಗಳು ನಡೆಯುತ್ತಿವೆ. ಆದರೆ ಈ ಸಮಯದಲ್ಲೇ ಜನರಿಗೆ ಗೋಲ್ಡ್ ಶಾಕ್ ಎದುರಾಗಿದೆ. ಅದು ಸಹ ಇತಿಹಾಸದಲ್ಲೇ ಪ್ರಥಮ ಬಾರಿಗೆ ಗರಿಷ್ಠ ಬೆಲೆಗೆ ಚಿನ್ನ (Gold) ಏರಿಕೆಯಾಗಿದೆ. ಚಿನ್ನ ಕಷ್ಟಕಾಲದ ಆಪದ್ಬಾಂಧವ. ಮಹಿಳೆಯರ ಪಾಲಿಗೆ ಫೇವರೆಟ್. ಆದರೆ ಈ ಚಿನ್ನವನ್ನು ಕೊಳ್ಳುವ ಹಾಗಿಲ್ಲ, ಮುಟ್ಟುವ ಹಾಗಿಲ್ಲ ಎನ್ನುವಂತಾಗಿದೆ. ಬಡವರು ಹಾಗೂ ಮಧ್ಯಮ ವರ್ಗದ ಜನರ ಪಾಲಿಕೆ ಗಗನ ಕುಸುಮವಾಗಿದೆ. ಅದರಲ್ಲೂ ಬಂಗಾರ 65,000 ರೂ.ಗಳ ಗಡಿ ದಾಟಿದ್ದು, ಬೆಳ್ಳಿ 78,000 ರೂ. ದಾಟಿದೆ. ಬುಧವಾರದ ಚಿನ್ನ, ಬೆಳ್ಳಿಯ ದರವನ್ನು ನೋಡುವುದಾದರೆ, 10 ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆ 65,000 ರೂ., 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 58,500 ರೂ., ಒಂದು ಕೆಜಿ ಬೆಳ್ಳಿಗೆ 78,500 ಸಾವಿರ ರೂ. ಇತ್ತು. ಗುರುವಾರವೂ ಈ ದರ ಮುಂದುವರಿದಿದೆ. ಈಗ ಮದುವೆ ಸೀಜನ್ ಆಗಿರುವುದರಿಂದ ಚಿನ್ನಕ್ಕೆ ಬೇಡಿಕೆಯಿದೆ. ಮುಂದೆ ಕ್ರಿಸ್ಮಸ್, ಹೊಸ ವರ್ಷ ಪ್ರಾರಂಭವಾಗುವುದರಿಂದ…