ಬೆಂಗಳೂರು: ಪ್ರತಿಷ್ಠಿತ ಬ್ರಾಂಡ್ ಹೆಸರನ್ನ ನಕಲಿಸಿ ಬಟ್ಟೆ ಮಾರುತ್ತಿದ್ದ ಗೋಡೌನ್ ಮೇಲೆ ಬೆಳ್ಳಂ ಬೆಳಗ್ಗೆ ಸಿಸಿಬಿ ದಾಳಿ ನಡೆಸಿದೆ. ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ದಾಳಿ ವೇಳೆ ಬರೋಬ್ಬರಿ1.5ಕೋಟಿ ಮೌಲ್ಯದ ಬಟ್ಟೆಗಳು ಜಪ್ತಿ ಮಾಡಿರುವ ಸಿಸಿಬಿ ಟೀಂ.
ಅರ್ಮನಿ, ಬರ್ಬರಿ, ಗ್ಯಾಂಟ್ ಸೇರಿದಂತೆ ಪ್ರತಿಷ್ಠಿತ ಬ್ರಾಂಡ್ ಗಳ ಬಟ್ಟೆ ಎಂದು ಅಕ್ರಮ ಮಾರಾಟ ಮಾಡುತ್ತಿದ್ದ ಟೀಂ ಪಟೆಲ್ ಎಕ್ಸ್ಪೋರ್ಟ್ ಹಾಗೂ ಆರ್ ಬಿ ಫ್ಯಾಷನ್ ಗೋಡೌನ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ತನಿಖೆ ವೇಳೆ ಬೇರೆ ಬೇರೆ ಕಡೆಯೂ ಇದೇ ರೀತಿ ಫೇಕ್ ಬ್ರಾಂಡ್ ಗೋಡೌನ್ ಹೊಂದಿರೋದು ಬೆಳಕಿಗೆ ಬಂದಿದ್ದು ಎಸ್ ಆರ್ ನಗರ, ಮಾಗಡಿ ರೋಡ್, ಬೇಗೂರು ಸೇರಿದಂತೆಹಲವು ಠಾಣಾ ವ್ಯಾಪ್ತಿಯಲ್ಲಿ ನಕಲಿ ಬ್ರಾಂಡ್ ಬಟ್ಟೆಯ ಗೋಡೌನ್ ಇರೋದು ಬೆಳಕಿಗೆ..
ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿರೋ ಸಿಸಿಬಿ ಟೀಂ